Police Bhavan Kalaburagi

Police Bhavan Kalaburagi

Wednesday, October 28, 2015

BIDAR DISTRICT DAILY CRIME UPDATE 28-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-10-2015

alUÀÄ¥Áà ¥Éưøï oÁuÉ AiÀÄÄ.r.Dgï £ÀA. 18/2015, PÀ®A 174 ¹.Dgï.¦.¹ :-
ಫಿರ್ಯಾದಿ ನಿರ್ಮಲಾ ಗಂಡ ಓಂಕಾರ ಪಾಟೀಲ್ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಬೇಳಕೆರಾ ರವರಿಗೆ  ಹೊಲ ಸರ್ವೆ ನಂ. 19/3 ನೇದರಲ್ಲಿ 4 ಎಕರೆ 17 ಗುಂಟೆ, ಸರ್ವೆ ನಂ. 16/3 ನೇದರಲ್ಲಿ 2 ಎಕರೆ 20 ಗುಂಟೆ ಹಾಗೂ ಸರ್ವೆ ನಂ. 27/3 ನೇದರಲ್ಲಿ 3 ಎಕರೆ 20 ಗುಂಟೆ ಹಿಗೇ ಓಟ್ಟು 10 ಎಕರೆ 17 ಗುಂಟೆ ಜಮೀನು ಇದ್ದು ನೀರಾವರಿ ಇರುತ್ತದೆ, ಸದರಿ ಜಮೀನನಲ್ಲಿ ಕಬ್ಬು, ತೊಗರೆ ಸೊಯಾ, ಉದ್ದು ಮತ್ತು ಹೆಸರು ಬೆಳೆಗಳು ಬಿತ್ತನೆ ಮಾಡಿದ್ದು ಇರುತ್ತದೆ. ಸದರಿ ಬೆಳೆಗಳು ಈ ವರ್ಷ, ಮಳೆಯಾಗದ ಕಾರಣ ಬಾಡುತ್ತಿದ್ದವು, ಅದನ್ನು ಫಿರ್ಯಾದಿಯವರ ಗಂಡ ನೋಡಿ ಬ್ಯಾಂಕಿನ ಸಾಲ ಹೆಗೇ ತಿರಿಸುವು ಅಂತ ಚಿಂತೆ ಮಾಡುತ್ತಿದ್ದಾಗ ಫಿರ್ಯಾದಿಯು ಎಷ್ಟು ಸಾಲ ಇದೆ ಅಂತ ಕೇಳಿದಾಗ ಪಿ.ಕೆ.ಪಿ.ಎಸ್ ಬ್ಯಾಂಕ ಬೆಳಕೇರಾದಿಂದ ಮೂರು ಲಕ್ಷ ರೂಪಾಯಿ, ಸ್ಟೇಟ ಬ್ಯಾಂಕ ಆಫ್ ಇಂಡಿಯಾ ಚಿಟಗುಪ್ಪಾ ಶಾಖೆದಿಂದ ಆರು ಲಕ್ಷ ರೂಪಾಯಿ ಮತ್ತು ಕರ್ನಾಟಕ ಬ್ಯಾಂಕ ಚಿಟಗುಪ್ಪಾದಿಂದ ಸಾಲ ಪಡೆದಿದ್ದು ಇರುತ್ತದೆ ಅಂತ ತಿಳಿಸಿದ್ದು ಇರುತ್ತದೆ, ಗಂಡನಿಗೆ ಪೊಸ್ಟ ಮಾಸ್ಟರ ಕೆಲಸ ಇರುತ್ತದೆ ಮತ್ತು ಪಿ.ಕೆ.ಪಿ.ಎಸ್. ಬ್ಯಾಂಕ ಬೆಳಕೇರಾದ  ಅಧ್ಯಕ್ಷರು ಇರುತ್ತಾರೆ, ಹೀಗಿರುವಾಗ ದಿನಾಂಕ 27-10-2015 ರಂದು 2230 ಗಂಟೆಯ ಸುಮಾರಿಗೆ ಚಿಟಗುಪ್ಪಾದಲ್ಲಿ ಭವಾನಿ ಪಾಲಕಿ ಕಾರ್ಯಕ್ರಮಕ್ಕೆ ಫಿರ್ಯಾದಿಯವರ ಗಂಡ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ, ದಿನಾಂಕ 28-10-2015 ರಂದು 0600 ಗಂಟೆಯ ಸುಮಾರಿಗೆ ಸಂಬಂಧಿಕರಾದ ಭೀಮಶಾ ತಂದೆ ಶಿವಕುಮಾರ ಪಾಟೀಲ್ ಸಾ: ಬೆಳಕೇರಾ ರವರು ಬಂದು ಹೆಳಿದ್ದೆನೆಂದರೆ ಅಣ್ಣಾ ಓಂಕಾರ ತಂದೆ ಚೆನ್ನಶೇಟ್ಟಿ ಪಾಟೀಲ್ ವಯ: 48 ವರ್ಷ, ರವರು ಹೊಲದ ಕಟ್ಟೆಗೆ ಇರುವ ಮಾವಿನ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ನಂತರ ಫಿರ್ಯಾದಿ ಹಾಗು ಮಕ್ಕಳೊಂದಿಗೆ ಮತ್ತು ಶರಣಪ್ಪಾ ತಂದೆ ಮಾದಪ್ಪಾ ಪಾಟೀಲ್, ರವಿಕಾಂತ ತಂದೆ ಬಸವಣಪ್ಪಾ ಪೊಲೀಸ್ ಪಾಟೀಲ್ ರವರೊಂದಿಗೆ ನೋಡಲು ಫಿರ್ಯಾದಿಯವರ ಗಂಡ ಹೊಲದ ಕಟ್ಟೆಗೆ ಇರುವ ಮಾವಿನ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಶವ ಜೋತಾಡುತ್ತಿತ್ತು, ಸದರಿ ಫಿರ್ಯಾದಿಯವರ ಗಂಡ ಬ್ಯಾಂಕುಗಳಿಂದ ಸಾಲ ಪಡೆದಿದ್ದು ಹೇಗೆ ತಿರಿಸಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು, ಸಾಲದ ಬಾದೇ ತಾಳಲಾರದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

No comments: