ಸೇಡಂ ಠಾಣೆ : ದಿನಾಂಕ:10-10-2015
ರಂದು 1800 ಗಂಟೆಗೆ ಫಿರ್ಯಾದಿ, ಶ್ರೀಮತಿ. ರೇಖಾ ಗಂಡ ರಾಘವೇಂದ್ರ ನಾಟಿಕರ್, ವಯ:26 ವರ್ಷ,
ಜಾತಿ:ಮಾದಿಗ, ಉ:ಮನೆಗೆಲಸ, ಸಾ:ಬಸವನಗರ, ಸೇಡಂ. ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು
ಅರ್ಜಿ ಸಲ್ಲಿಸಿದ್ದು ಸಾರಂಶವೇನೆಂದರೆ, ನನಗೆ ಸೇಡಂ ಪಟ್ಟಣದ ನಾಗೇಂದ್ರಪ್ಪ ತಂದೆ ಶಿವಪ್ಪ
ನಾಟಿಕರ್ ಇವರ ಮಗನಾದ ರಾಘವೇಂದ್ರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ ಮೂರು
ತೊಲೆ ಬಂಗಾರ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣ ವರದಕ್ಷಿಣೆ ನೀಡಿದ್ದು ಇತ್ತು. ಮದುವೆಯಾದ
ಸ್ವಲ್ಪ ದಿನ ನನಗೆ ಸರಿಯಾಗಿ ನೋಡಿಕೊಂಡು ಬಂದು ನಂತರ ನನ್ನ ಗಂಡ ರಾಘವೇಂದ್ರ, ಮಾವ
ನಾಗೇಂದ್ರಪ್ಪ, ಅತ್ತೆ ಲಲಿತಾಬಾಯಿ ಮತ್ತು ನಾದನಿಯರಾದ, ಪರಿಮಳ @ ಮೀನಾ ಹಾಗೂ ಪ್ರೀಯದರ್ಶಿನಿ
ಇವರುಗಳು ನನಗೆ, ನೀನು ಸರಿಯಾಗಿ ಮನೆಕೆಲಸ ಮಾಡುವದಿಲ್ಲ, ಮದುವೆಯಲ್ಲಿ ಏನು ತಂದು ಕೊಟ್ಟಿಲ್ಲ,
ಇನ್ನೂ ಹೆಚ್ಚಿನ ಹಣ ತೆಗೆದುಕೊಂಡುಬಾ ಅಂತ ಮಾನಸೀಕ ಕಿರುಕುಳ ಕೊಟ್ಟು ನನಗೆ ನನ್ನ ತವರು ಮನೆಗೆ
ಕಳೂಹಿಸಿಕೊಟ್ಟಿರುತ್ತಾರೆ. ಹೀಗಿದ್ದು, ನಾನು ತವರು ಮನೆಯಲ್ಲಿ ಎಷ್ಟು ದಿನ ಅಂತ ಹೀಗೆ ಇರಲಿ
ಅಂದುಕೊಂಡು, ಇಂದು ದಿನಾಂಕ:10-10-2015 ರಂದು ಮುಂಜಾನೆ 10-00 ಗಂಟೆಗೆ ನಾನು ನನ್ನ ಗಂಡನ
ಮನೆಗೆ ಹೋದಾಗ ನನ್ನ ಗಂಡ, ಮಾವ ಹಾಗೂ ಅತ್ತೆ ಇವರುಗಳು “ ರಂಡಿ ನೀನು ವರದಕ್ಷಿಣೆ ತಂದರೆ ಮನೆಯಲ್ಲಿ ಬಾ ಇಲ್ಲಂದರೆ ಹೋಗು” ಅಂತ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ನೂಕಿ, ಹೊಡೆಬಡೆ ಮಾಡಿರುತ್ತಾರೆ. ಕಾರಣ
ನನಗೆ ವರದಕ್ಷಿಣೆ ತೆಗೆದುಕೊಂಡುಬಾ ಅಂತ, ಅವಾಚ್ಯ ಶಬ್ದಗಳಿಂದ ಬೈದು, ಮಾನಸೀಕ ಹಾಗೂ ದೈಹಿಕ
ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಪ್ರಕಾರ
ಪ್ರಕರಣ ದಾಖಲಾಗಿರುತ್ತದೆ.
ಅಫಜಲಪೂರ ಠಾಣೆ : ದಿನಾಂಕ 10-10-2015ರಂದು
ಶ್ರೀಮತಿ ನೀಲಮ್ಮ ಗಂಡ ಸಿದ್ದಪ್ಪ ನಾಗಣಸೂರ ಇವರ ಲಿಖೀತ ಅರ್ಜಿ ಸಾರಂಶವೆನೆಂದರೆ ನನ್ನ ಗಂಡನ
ಅಣ್ಣ ತಮ್ಮರು ಒಟ್ಟು 4 ಜನರಿದ್ದು 1) ಷಣ್ಮುಕಪ್ಪ 2) ಅಣ್ಣಪ್ಪ (ಮೃತಪಟ್ಟಿರುತ್ತಾನೆ) 3) ನನ್ನ
ಗಂಡ ಸಿದ್ದಪ್ಪ (ಮೃತ) 4) ಗುರಪ್ಪ ಈ ರೀತಿ ಇರುತ್ತಾರೆ, ಈಗ ಎಲ್ಲರು ಹೊಲ ಮನೆ
ಹಂಚಿಕೊಂಡು ಬೇರೆ ಬೇರೆಯಾಗಿರುತ್ತಾರೆ, ನನ್ನ ಗಂಡನ ಪಾಲಿಗೆ ಒಟ್ಟು 4 ಎಕರೆ ಒಣ ಬೇಸಾಯ ಜಮೀನು
ಬಂದಿರುತ್ತದೆ. ಎಲ್ಲರ ಹೊಲಗಳು ಒಂದಕ್ಕೊಂದು ಹೊಂದಿಕೊಂಡೆ ಇರುತ್ತವೆ. ನಮಗೆ ಶಾಂತಪ್ಪ ವಯಾ|| 22 ವರ್ಷ, ರಾಜಶೇಖರ ವಯಾ|| 18 ವರ್ಷ ಅಂತಾ ಎರಡು ಜನ ಗಂಡು
ಮಕ್ಕಳು ಇರುತ್ತಾರೆ, ನಾನು
ಮತ್ತು ನನ್ನ ಗಂಡ ಇಬ್ಬರು ನಮ್ಮ ಪಾಲಿಗೆ ಬಂದು 4 ಎಕರೆ ಜಮೀನಿನಲ್ಲೆ ಕೆಲಸ
ಮಾಡಿಕೊಂಡಿರುತ್ತೇವೆ. ನಮ್ಮ ಸಂಸಾರ ಮತ್ತು ನಮ್ಮ ಮಕ್ಕಳ ವಿದ್ಯಾಬ್ಯಾಸ ನಮ್ಮ ಪಾಲಿಗೆ ಬಂದ 4
ಎಕರೆ ಜಮೀನಿನ ಮೇಲೆ ನಡೆದಿರುತ್ತದೆ. ಹೀಗಿದ್ದು ನನ್ನ ಗಂಡ ಸಿದ್ದಪ್ಪ ಇವರು ಈಗ ಮುಂಗಾರು ಬೇಳೆಯ
ಸಲುವಾಗಿ ಊರಿನವರ ಹತ್ತಿರ 30,000/-
ಹಣವನ್ನು ಕೈಗಡವಾಗಿ ಪಡೆದುಕೊಂಡು ಹೊಲದ ಸಾಗುವಳಿ ಮಾಡಿ ಬಿತ್ತನೆ ಮಾಡಿರುತ್ತಾರೆ. ಈಗ ನನ್ನ ಗಂಡ
ಕೆಲವು ದಿನಗಳಿಂದ ಊರಿನ ಜನರ ಹತ್ತಿರ ಕೈಗಡವಾಗಿ ಹಣ ತಗೆದುಕೊಂಡಿದ್ದೇನೆ ಅದು ತಿರಿಸುವುದಕ್ಕೆ
ಆಗುತ್ತಿಲ್ಲ ಅಂತಾ ಚಿಂತೆ ಮಾಡುತ್ತಾ ನನಗೆ ಹೇಳಿರುತ್ತಾರೆ. ಆದರೆ ನನ್ನ ಗಂಡ ಯಾರ ಹತ್ತಿರ ಹಣ
ತಗೆದುಕೊಂಡಿದ್ದೆನೆ ಎಂಬ ಬಗ್ಗೆ ಹೇಳಿರುವುದಿಲ್ಲ. ಹೀಗಿದ್ದು ಇಂದು ದಿನಾಂಕ 10-10-2015 ರಂದು
ಬೆಳಿಗ್ಗೆಯಿಂದ ನನ್ನ ಗಂಡ ಅದೆ ಚಿಂತಿ ಮಾಡುತ್ತಾ ಮನೆಯಲ್ಲಿ ಕುಳಿತಿದ್ದಾಗ ನಾನು ನನ್ನ ಗಂಡನಿಗೆ
ಯಾಕ ಚಿಂತಿ ಮಾಡ್ತಿರಿ ಮಾಡ ಬ್ಯಾಡರಿ ಏನು ಆಗಲ್ಲಾ ಅಂತಾ ಹೇಳಿ ಬೆಳಿಗ್ಗೆ 10:00 ಗಂಟೆ
ಸುಮಾರಿಗೆ ರೇಷನ ತರುವುದಕ್ಕೆ ಮಣೂರ ಗ್ರಾಮಕ್ಕೆ ಹೋಗಿರುತ್ತೇನೆ. ನಾನು ರೇಷನ ತಗೆದುಕೊಂಡು ಮರಳಿ
ಮನೆಗೆ ಬಂದಾಗ ನನ್ನ ಗಂಡ ಮನೆಯಲ್ಲಿ ಇರಲಿಲ್ಲ. ನಂತರ ನಾನು ಮನೆಯಲ್ಲಿ ಕೆಲಸ ಮಾಡಿಕೊಂಡು ನಮ್ಮ
ಹೊಲದಲ್ಲಿ ಕಟ್ಟಿದ ಆಕಳಿಗೆ ನೀರು ಕುಡಿಸಿ ಮೇವು ಹಾಕಿ ಬರಬೇಕು ಅಂತ ಅಂದಾಜು ಮದ್ಯಾಹ್ನ 2:00
ಗಂಟೆ ಸುಮಾರಿಗೆ ಹೊಲಕ್ಕೆ ಹೋದಾಗ ನಮ್ಮ ಮೈದುನನಾದ ಗುರಪ್ಪ ಈತನ ಹೊಲದ ಬಾಂದಾರಿಯಲ್ಲಿದ್ದ ಬೇವಿನ
ಗಿಡಕ್ಕೆ ನನ್ನ ಗಂಡನು ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು. ಆಗ ನಾನು ಚಿರಾಡಿ
ಅಳುತ್ತಿದ್ದಾಗ ರೋಡಿಗೆ ಹೋಗುತ್ತಿದ್ದ ಹಾಲಯ್ಯ ಹಿರೇಮಠ, ಅಡಿವೆಪ್ಪ ಡೊಂಬರ ನಮ್ಮ ಭಾವ
ಷಣ್ಮುಕಪ್ಪ ಹಾಗೂ ಇನ್ನು ಕೆಲವು ಜನರು ಬಂದಿರುತ್ತಾರೆ, ಸದರಿ ನನ್ನ ಗಂಡನು ಇಂದು ದಿನಾಂಕ 10-10-2015 ರಂದು
ಬೆಳಿಗ್ಗೆ 10:30 ಗಂಟೆಯ ಮದ್ಯದ ಅವದಿಯಿಂದ ಮದ್ಯಾಹ್ನ 2:00 ಗಂಟೆಯ ಮದ್ಯದ ಅವದಿಯಲ್ಲಿ ಮಣುರ
ಸಿಮಾಂತರದ ನಮ್ಮ ಮೈದುನನಾದ ಗುರಪ್ಪ ನಾಗಣಸೂರ ಈತನ ಹೊಲದಲ್ಲಿ ಜಮೀನಿನ ಸಾಗುವಳಿಗಾಗಿ ಮಾಡಿದ
ಕೈಗಡ ಸಾಲದ ಹೊರೆಯಿಂದ, ಸಾಲವನ್ನು
ತೀರಿಸಲು ಆಗದೆ ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ನನ್ನ ಗಂಡನು ಒಬ್ಬ ರೈತನಾಗಿದ್ದು ಹೊಲದ ಸಾಗುವಳಿಗಾಗಿ
30,000/-
ರೂ ಕೈಗಡವಾಗಿ ಸಾಲಮಾಡಿಕೊಂಡಿದ್ದು, ಸಾಗುವಳಿಗಾಗಿ ಮಾಡಿದ ಕೈಗಡ ಸಾಲ ತಿರಿಸಲು ಆಗದೆ
ಮನಸ್ಸಿಗೆ ಹಚ್ಚಿಕೊಂಡು ನಮ್ಮ ಮೈದುನನ ಹೊಲದ ಬಾಂದಾರಿಯಲ್ಲಿದ್ದ ಬೇವಿನ ಗಿಡಕ್ಕೆ ನೇಣು
ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿ
ಸಂಶಯ ಇರುವುದಿಲ್ಲ, ನನ್ನ
ಗಂಡನ ಸಾವು ರೈತ ಆತ್ಮಹತ್ಯಯಾಗಿರುತ್ತದೆ ಆದ್ದರಿಂದ ಮಾನ್ಯ ರವರು ನನ್ನ ಗಂಡನು ಆತ್ಮಹತ್ಯ
ಮಾಡಿಕೊಂಡ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಎಂದು ವಿನಂತಿ ಇದೆ. ಅಂತ ಸಾರಂಶದ ಮೇಲಿಂದ ಪ್ರಕರಣ
ದಾಖಲಾಗಿರುತ್ತದೆ.
No comments:
Post a Comment