ಕೊಲೆ ಪ್ರಕರಣ “
ಚೌಕ ಠಾಣೆ : ಶ್ರೀ ಚಂದ್ರಶ್ಯಾ ತಂದೆ ಹಿರಗಪ್ಪ
ಶಿರಿಮನೂರ ಸಾಃ ಕಲಗುರ್ತಿ ತಾಃ ಚಿತ್ತಾಪೂರ ಜಿಃ ಕಲಬುರಗಿ ಹಾಃವಃ ಅಂಬೇಡ್ಕರ ಆಶ್ರ ಯ ಕಾಲೋನಿ
ಕಲಬುರಗಿ ರವರು ಕಳೆದ 20 ವರ್ಷಗಳಿಂದ ಆಸ್ರಯ ಕಾಲೋನಿಯಲ್ಲಿ ಕುಟುಂಬದವರೊಂದಿಗೆ
ವಾಸವಾಗಿರುತ್ತೇನೆ, ನನ್ನಗೆ
ಒಟ್ಟು 6 ಜನ ಮಕ್ಕಳಿದ್ದು ಅದರಲ್ಲಿ ನಾಲ್ಕು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇದ್ದು
ಹಿರಿಯ ಮಗ ಪ್ರಕಾಶ ತಂದೆ ಚಂದ್ರಶ್ಯಾ ಶೀರಿಮನವರ್ ವಯಃ 45 ವರ್ಷ ಉಃ ಸೆಂಟ್ರಿಂಗ್ ಕೆಲಸ ಸಾಃ
ಅಂಬೇಡ್ಕರ ಆಶ್ರಯ ಕಾಲೋನಿ ಕಲಬುರಗಿ ಇವನು ತನ್ನ ಕುಟುಂಬದವರೊಂದಿಗೆ ನಮ್ಮ ಮನೆಯ ಪಕ್ಕದಲ್ಲೇ
ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ. ನಮ್ಮ ಬಡಾವಣೆಯಲ್ಲೇ ಇರುವ ಸೋಮಲಿಂಗ್ ಮತ್ತು ಅವರ
ಮಗ ಮುಖೇಶ @ ಪಿಂಟು, ಅರುಣ@ ನಾರಾಯಣ, ನರೇಶ, ಸತೀಶ, ಅಮೃತ, ರಾಕೇಶ, ಮತ್ತು ಇತರೆ ಜನರು ತಮ್ಮ
ಕುಟುಂಬದೊಂದಿಗೆ ವಾಸವಾಗಿದ್ದು ಇವರು ನನ್ನ ಮಗನೊಂದಿಗೆ ಅನಾವಶ್ಯಕವಾಗಿ ತಂಟೆ ತಕ್ಕರಾರು
ಮಾಡಿಕೊಂಡಿದ್ದು ನಮ್ಮ ಬಡಾವಣೆಯಲ್ಲಿ 4-5 ತಿಂಗಳ ಹಿಂದೆ ರಾಜು ಬೈಯಾ ಇತನ ಕೊಲೆಯಾಗಿದ್ದು ಆ
ವೇಳೆಯಲ್ಲಿ ನನ್ನ ಮಗ ಪ್ರಕಾಶ ರಾಜು ಇತನಿಗೆ ಹೊಡೆಯುತ್ತಿದ್ದಾಗ ಜಗಳ ಬಿಡಿಸಿದ್ದು ಇವನು ಅವನ
ಪರವಾಗಿ ಜಗಳ ಬಿಡಿಸಿರುತ್ತಾನೆ ಅಂತಾ ಅದೇ ವೈಮಸ್ಸಿನಿಂದ 8-10 ದಿವಸಗಳ ಹಿಂದೆ ನನ್ನ ಮಗ ಪ್ರಕಾಶ
ಇತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅನಾವಶ್ಯಕವಾಗಿ ಸರಾಯಿ ಕುಡಿದ್ದು ಬಂದು ನಮಗೆ ಹೆದರಿಸಿ
ಹೊಡೆಯುತ್ತೇನೆ ಅಂತಾ ಜೀವ ತೆಗೆಯುತ್ತೇನೆ ಅಂತಾ ಬೆದರಿಕೆ ಹಾಕುತ್ತಿದ್ದಾನೆ. ಅಂತಾ ಪೊಲೀಸ್
ಸ್ಟೇಷನದಲ್ಲಿ ಸೋಮಲಿಂಗ ಇತನು ಪೊಲೀಸರಿಗೆ ತಿಳಿಸಿದ್ದರಿಂದ ಪೊಲೀಸರು ಅವರೆಲ್ಲರಿಗೂ ಮತ್ತು ನನ್ನ
ಮಗ ಪ್ರಕಾಶನಿಗೂ ಠಾಣೆಗೆ ಕರೆಯಿಸಿ ತಂಟೆ ತಕರಾರು ಮಾಡದಂತೆ ಮುಚ್ಚಳಿಕೆ ಮಾಡಿದ್ದು ಅಲ್ಲದೆ
ಅವರೆಲ್ಲರೂ ಸೇರಿಕೊಂಡು ರಾಜಿ ಪಂಚಾಯತಿ ಮಾಡಿಕೊಂಡಿದ್ದರೂ ಸಹ ಅಂದಿನಿಂದ ಒಳಗಿನ ಒಳಗೆ ಸುಮಾರು 5-6 ದಿವಸಗಳಿಂದ ನನ್ನ
ಮಗನ ಮೇಲೆ ಸೋಮಲಿಂಗ ಮತ್ತು ಇತರೆ ಓಣಿಯ ಜನರು ಹಳೆಯ ವೈಶಮ್ಯದಿಂದ ಅವನ ಮೇಲೆ ದ್ವೇಶ ಸಾದಿಸುತ್ತಾ
ಬಂದು ದಿನಾಂಕ 14/10/2015 ರಂದು ಸಾಯಂಕಾಲ 6
ಗಂಟೆ ನನ್ನ ಮಗ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನಾನು ಸರಾಯಿ ಕುಡಿದುಕೊಂಡು ಬರುತ್ತೇನೆ. ಅಂತಾ
ಅಮೃತ ಇತನೊಂದಿಗೆ ಮನೆಯಿಂದ ಅಂದಾಜು 8 ಗಂಟೆ ಸುಮಾರಿಗೆ ಮನೆಯಿಂದ ಹೊಗಿದ್ದು ರಾತ್ರಿಯಾದರೂ ಮರಳಿ
ಮನೆಗೆ ಬಂದಿರುವುದಿಲ್ಲಾ. ನನ್ನ ಸೋಸೆ ಇವಳು 2-3 ತಿಂಗಳ ಹಿಂದೆ ಹೆರಿಗೆಯಾಗಿದ್ದರಿಂದ ದೇವಿ
ಕುಡಿಸಿದ್ದರಿಂದ ಅಲ್ಲಿಯೆ ಹೋಗಿರಬಹುದೆಂದು ತಿಳಿದು ಅವಳು ಸಹ ತನ್ನ ಗಂಡನ ಬಗ್ಗೆ ಯಾವುದೇ ರೀತಿಯಿಂದ ವಿಚಾರ ಮಾಡಿರುವುದಿಲ್ಲಾ.
ದಿನಾಂಕ 15/10/2015 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ನಾನು ಮನೆಯಿಂದ ಚಹಾ ಕುಡಿಯುವ
ಕುರಿತು ಸೈಯದ ಚಿಂಚೋಳಿ ರೋಡಿಗೆ ಇರುವ ಬೀರಪ್ಪನ
ಗುಡಿಯ ಹತ್ತಿರ ಚಹಾ ಕುಡಿಯುವ ಕುರಿತು ಬಂದಾಗ ನಮ್ಮ ಪರಿಚಯದ ಶಿವಶರಣಪ್ಪ ನಾಗೂರ ಇತನು ಇಲ್ಲಿ
ಒಂದು ಕೊಲೆಯಾಗಿರುವ ಬಗ್ಗೆ ಹೇಳಿದ್ದರಿಂದ ಅಲ್ಲದೆ ಜನರು ಸಹ ಮಾತನಾಡುತ್ತಿರುವುದ್ದರಿಂದ ನಾನು
ಹೋಗಿ ನೋಡಿದಾಗ ಕೊಲೆಯಾದ ವ್ಯಕ್ತಿ ಬೇರೆಯಾರು ಇರಲಿಲ್ಲಾ ನನ್ನ ಮಗ ಪ್ರಕಾಶ ಇತನೆ ಇದ್ದು ನಾನು
ಗಾಬರಿಯಾಗಿ ಅಲ್ಲಿಯೆ ಅಳುತ್ತಾ ಕುಳಿತುಕೊಂಡಿದ್ದು ನಂತರ ನನ್ನ ಸೋಸೆ ಮತ್ತು ಮಕ್ಕಳು ನನ್ನ
ಹೆಂಡತಿ ಸಂಬಂಧಿಕರಿಗೆ ತಿಳಿಸಿದ್ದು ಅವರೆಲ್ಲರೂ ಬಂದ ನಂತರ ಪೂರ್ತಿ ನನ್ನ ಮಗ ಪ್ರಕಾಶ ಇತನ ಮೃತ
ದೇಹವನ್ನು ನೋಡಿದಾಗ ನನ್ನ ಮಗನ ತಲೆಯ ಮೇಲೆ ಅಂದಾಜು 20-25 ಕೆ.ಜಿ ಭಾರವುಳ್ಳ ದೊಡ್ಡ ಕಲ್ಲಿನಿಂದ
ನನ್ನ ಮಗನ ತಲೆಯ ಮೇಲೆ ಎತ್ತಿಹಾಕಿದ್ದು ಪೂರ್ತಿ ತಲೆ ಒಡೆದು ಮೇದಳು ಸಹ ಸಿಡಿದಿರುತ್ತದೆ.
ಅಲ್ಲಿಯೆ ಇನ್ನೊಂದು ಸಣ್ಣ ಕಲ್ಲು ಸಹ ಬಿದ್ದಿದ್ದು ಈ ಕಲ್ಲುಗಳಿಂದಲೇ ನನ್ನ ಮಗನಿಗೆ ಕೊಲೆ
ಮಾಡಿರುತ್ತಾರೆ. ಸದರಿ ನನ್ನ ಮಗ ಪ್ರಕಾಶ ಇತನಿಗೆ ಹಳೆಯ ವೈಮಸ್ಸಿನಿಂದಲೇ ಸೋಮಲಿಂಗ್ ಮತ್ತು ಅವರ
ಮಗ ಮುಖೇಶ @ ಪಿಂಟು, ಅರುಣ@ ನಾರಾಯಣ, ನರೇಶ, ಸತೀಶ, ಅಮೃತ, ರಾಕೇಶ, ಮತ್ತು ಇತರೆ ಜನರು ಸೇರಿಕೊಂಡು
ಕೊಲೆ ಮಾಡಿ ಬಿಸಾಕಿರುವ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಸದರಿ ಕೊಲೆಯು ದಿನಾಂಕ 14/10/2015
ರಂದು ರಾತ್ರಿ 10 ಪಿ.ಎಂ.ದಿಂದ ದಿನಾಂಕ 15/10/2015 ರ ಬೆಳಗಿನ 6 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 14/10/2015 ರಂದು ಶ್ರೀ ಕಲ್ಲಾಣಿ ತಂದೆ ಬಸಣ್ಣ
ಸಿಂದಗೇರಿ ಸಾ: ಹಿಂಚಗೇರಾ ಇವರು ಹೇಳಿಕೆ ಫಿರ್ಯಾದಿ
ಸಲ್ಲಿಸಿದ್ದೇನೆಂದರೆ ದಿನಾಂಕ 14/10/2015 ರಂದು ತಾನು ತಮ್ಮ ಗ್ರಾಮದಿಂದ ಅಫಜಲಪೂರ ಕಡೆ ಹೋಗುವ
ಕೆಎಸ್ಆರ್ ಟಿಸಿ ಬಸ್ಸ ನಂ ಕೆಎ-32 ಎಫ್ 1437 ನೇದ್ದರಲ್ಲಿ ಅಫಜಲಪೂರಕ್ಕೆ ಹೋಗುವ ಬಸ್ಸಿನಲ್ಲಿ
ಪ್ರಯಾಣಿಸುತ್ತಿರುವಾಗ ಬಸ್ಸಿನ ಚಾಲಕ ಬಸ್ಸನ್ನು ಚಾಲು ಮಾಡಿಕೊಂಡು ಅಫಜಲಪೂರ ಕಡೆ ಹೊರಟನು ನಮ್ಮ
ಗ್ರಾಮ ದಾಟಿದ ಬಳಿಕ ಬಸ್ಸಿನ ಚಾಲಕನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯುಸುತಿದ್ದಾಗ
ಬಸ್ಸಿನಲ್ಲಿದ ಚಾಲಕನಿಗೆ ನಿಧಾನವಾಗಿ ಬಸ್ಸ ಓಡಿಸಿ ಅಂತ ಅಂದರು ಕೇಳದೆ ಹಾಗೇಯೆ ನಡೆಸಿ ಹಿಂಚಗೇರಾ
ಗ್ರಾಮದ ಮಠಕ್ಕೆ ಹೋಗುವ ಕಮಾನ ಹತ್ತಿರ ಮುಖ್ಯ ರಸ್ತೆಯ ರೋಡಿನ ಎಡಬಾಗದಲ್ಲಿ ಒಮ್ಮೆಲೆ ಕಟ್ಟ
ಮಾಡಿದಾಗ ಸದರಿ ಬಸ್ಸು ರೋಡಿನ ಏಡಬಾಗಕ್ಕೆ ಪಲ್ಟಿಯಾಗಿ ಬಿದ್ದು ಬಸ್ಸಿನಲ್ಲಿದ್ದ ನನಗೆ ಮತ್ತು
ಇತರ ಪ್ರಯಾಣಿಕರಿಗೆ ಸಹ ಸಣ್ಣ ಪುಟ್ಟ
ಗಾಯಗಳಾಗಿರುತ್ತದೆ ಚಾಲಕನ ಹೆಸರು ವಿಳಾಸ ವಿಚಾರಿಸಿದಾಗ ರಾಜಶೇಖರ ತಂದೆ ಸಿದ್ದಪ್ಪ ತಳಕೇರಿ
ಸಾ:ಗೌರ(ಕೆ) ಅಂತ ಗೊತ್ತಾಗಿರುತ್ತದೆ ಗಾಯ ಹೊಂದಿದ್ದ ನಾವೇಲ್ಲರು
ಒಂದು ಖಾಸಗಿ ವಾಹನದಲ್ಲಿ ಸರಿಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದು.
ಬಸ್ಸ ನಂ ಕೆಎ-32 ಎಫ್ 1437 ನೇದ್ದರ ಚಾಲಕನಾದ ರಾಜಶೇಖರ ತಂದೆ ಸಿದ್ದಪ್ಪ ತಳಕೇರಿ ಸಾ:ಗೌರ(ಕೆ) ಇತನು ಬಸ್ಸನ್ನು ಅತಿವೇಗ ಹಾಗೊ ನಿಸ್ಕಾಳಜಿತನದಿಂದ ನಡೆಸಿ
ಬಸ್ಸಿನಲಿದ್ದ ಪ್ರಯಾಣಿಕರಿಗೆ ಗುಪ್ತಗಾಯ ತರಚಿದಗಾಯ ಪಡಿಸಿದ್ದು ಸದರಿ ಚಾಲಕನ ಮೇಲೆ ಕಾನೂನಿನ
ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಶ್ರೀಶೈಲ ತಂದೆ ಬಸಣ್ಣ ಯಂಕಂಚಿ ಸಾ : ಸೋಮಜಾಳ ಇವರು
ತಮ್ಮ ನಮ್ಮೂರಲ್ಲಿ ನಮ್ಮ ಮನೆಯ ಶಾಂತಿ ಇದ್ದದ್ದರಿಂದ ಸದರಿ ಕಾರ್ಯಕ್ರಮಕ್ಕೆ ನಮ್ಮ ಸಂಬಂದಿಕರಿಗೆ
ಕಾರ್ಡ ಕೊಡಲು ನಾನು ಮತ್ತು ನಮ್ಮ ಸಂಬಂದಿಕನಾದ ವಿಠ್ಠಲ ತಂದೆ ಬೀಮರಾಯ ಮಂಗೋಡಿ ಸಾ: ಕನ್ನೋಳ್ಳಿ
ಗ್ರಾಮ ಇವರನ್ನು ಕರೆದುಕೊಂಡು ತನ್ನ ಮೊಟಾರ ಸೈಕಲ್ ನಂ KA-28 EB-6141 ನೇದ್ದರ
ಮೇಲೆ ದಿನಾಂಕ: 02-10-2015 ರಂದು ಇಜೇರಿ ಗ್ರಾಮಕ್ಕೆ ಹೋಗಿ ನಮ್ಮ ಸಂಬಂದಿಕರಿಗೆ ಕಾರ್ಡನ್ನು
ಕೊಟ್ಟು ಮುಂದೆ ಕೆಂಬಾವಿಗೆ ಹೋಗುತ್ತಿದ್ದಾಗ ಬಿಳವಾರ ಮತ್ತು ಶಿವಪೂರ ಕ್ರಾಸ ಮಧ್ಯ ಒಂದು
ತಿರುವಿನಲ್ಲಿ ಮೊಟಾರ ಸೈಕಲ್ ನಡೆಸುತ್ತಿದ್ದ ವಿಠ್ಠಲ ಇವನ ನಿಷ್ಕಾಳಜಿತನದಿಂದ ನಡೆಸಿ
ರಸ್ತೆಯಲ್ಲಿನ ತಗ್ಗು ತಪ್ಪಿಸಲು ಹೋಗಿ ನಮ್ಮ ಮೊಟಾರ ಸೈಕಲನ್ನು ಪೂಲಿಗೆ ಹೈಸಿದ್ದರಿಂದ ನವಿಬ್ಬರು
ಮೋಟಾರ ಸೈಕಲ ಸಮೇತ ಪೂಲ ಕೆಳಗೆ ಬಿದ್ದೇವು. ಸದರಿ ಅಪಘಾತದಲ್ಲಿ ನನಗೆ ಬಲಗೈಗೆ ರಕ್ತಗಾಯ ಮೂಖದ
ಮೇಲೆ ಹೊಟ್ಟೆಯ ಮೇಲೆ ತರಚಿದ ಗಾಯವಾಗಿದ್ದು, ವಿಠ್ಠಲ ಇತನಿಗೆ ತಲೆಗೆ ಭಾರಿ ರಕ್ತಗಾಯ
ಬಲಗೈಗೆ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ನಂತರ ಅಲ್ಲಿಂದ
ಹೋಗುತ್ತಿದ್ದ ಸಾರ್ವಜನಿಕರು 108 ಅಂಬ್ಯೂಲೆನ್ಸಗೆ ಕರೆ ಮಾಡಿದ್ದರಿಂದ ನಮಗೆ 108
ಅಂಬ್ಯೂಲೆನ್ಸನವರು ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಚಿರಾಯು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು
ಸದರಿ ವಿಠ್ಠಲ ಮಂಗೊಂಡೆ ಈತನಿಗೆ ಚಿರಾಯು ಆಸ್ಪತ್ರೆಯಲ್ಲಿ ಉಪಚಾರ ಪಡಿಸಿ ವಿಜಯಪೂರ ಸರಕಾರಿ
ಆಸ್ಪತ್ರೆಯಲ್ಲಿ ತೋರಿಸಿ ನಂತರ ಸೋಲಾಪೂರದ ಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಉಪಚಾರ
ಪಡಿಸಿ ಮರಳಿ ನಿನ್ನೆ ದಿನಾಂಕ 14-10-2015 ರಂದು
ಸಿಂದಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ
ಮಾಡಿರುತ್ತೇವೆ, ವಿಠ್ಠಲ
ಇತನು ಉಪಚಾರ ಪಡೆಯುತ್ತಾ ರಾತ್ರಿ 10;00 ಗಂಟೆಗೆ
ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ : ದಿನಾಂಕ 14/10/2015 ರಂದು ಶ್ರೀ. ಹರೀಶಶೆಟ್ಟಿ ತಂದೆ ಗಣಪು ಶೇಟ್ಟಿ ,
ಜನತಾ ಉಪಹಾರ ಹೊಟೇಲ ಜೇವರ್ಗಿ ಕ್ರಾಸ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು
ದಿನಾಂಕ 14/10/2015 ರಂದು ಸಂಜೆ 7 ಗಂಟೆ ಸುಮಾರಿಗೆ ತಾನು ತನ್ನ ಜನತಾ ಉಪಹಾರ ಹೊಟೇಲದಲ್ಲಿಯ
ಕೌಂಟರ ಮೇಲೆ ಕುಳಿತ್ತಿದ್ದಾಗ 6-7 ಜನ ಗ್ರಾಹಕರು ನಮ್ಮ ಹೊಟೇಲದಲ್ಲಿ ಬಂದು. 7 ಚಹ ಕುಡಿದು
ಚಹ ತಣ್ಣಗಿದ ಎಂದು ತಕರಾರು ಮಾಡಿ ಕೌಂಟರ ಹತ್ತಿರ ಬಂದು ಗದ್ದಲ ಮಾಡಿ. ಅವಾಚ್ಯ ಶಬ್ದಗೀಂದ ಬಯ್ದು
ಚಹ ಬಿಸಿಯಿಲ್ಲ ಬಿಲ್ಲ್ ಕೊಡಂಗಿಲ್ಲ ಏನ ಮಾಡತ್ತಿ” ಎಂದು ಬಾಯಿಗೆ ಬಂದಂತೆ
ಬೈದು ಕೌಂಟರ ಹತ್ತಿರ ಸಾಮಾನುಗಳು ಚಲ್ಲಾಪಿಲಿ ಮಾಡಿ ಎಲ್ಲರು ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಅದರಲ್ಲಿ ದಿಲದಾರ ಮತ್ತು ಮೊಹನ ಎನ್ನುವರು ನನ್ನ ಶರ್ಟ ಹಿಡಿದು ಎಳೆದಾಡಿ ನನ್ನ
ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾರೆ. ಮತ್ತು ಕೆಲವರು
ಕೈಯಿಂದ ಹೊಡೆದು ಕಾಲನಿಂದ ಒದ್ದಿರುತ್ತಾರೆ.
ಅದರಲ್ಲಿ ದಿಲದಾರ ಎನ್ನುವನು ಚಹ ಕಪ್‌ನಿಂದ
ನನ್ನ ಮುಖಕ್ಕೆ ಹೊಡೆದು ರಕ್ತಗಾಯಗೊಳಿಸಿದನು. ಆಗ ಜಗಳ ಬಿಡಿಸಲು ಬಂದಿದ್ದ ಹೊಟೇಲ ಸಿಬ್ಬಂಧಿ
ಸಂತೋಷ, ಮಂಜುನಾಥ ರವರಿಗೂ ಸಹ ಕೈಯಿಂದ ಚಾಹ ಕಪ್‌ದಿಂದ ಹೊಡೆದು ಗಾಯಗೊಳಿಸಿದ್ದಾರೆ.
ಜಗಳದಲ್ಲಿ ಸದರಿಯವರು ನಮ್ಮಗೆ ಭಯ ಹುಟ್ಟಿಸಿ
ಕೌಂಟರ ಗಲ್ಲದಲ್ಲಿ ಕೈ ಹಾಕಿ ಅಂದಾಜು 1500/- ರೂಪಾಯಿ ತೆಗೆದುಕೊಂಡು ಹೊಗಿರುತ್ತಾರೆ. ಮತ್ತು ಹೊಟೇಲದಲ್ಲಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ
ಅಂದಾಜು 2000/- ರೂಪಾಯಿ ಹಾನಿ ಮಾಡಿರುತ್ತಾರೆ.
ಆಗ ನಮ್ಮ ಹೊಟೇಲನ ಇತರೆ ಸಿಬ್ಬಂಧಿ ಮತ್ತು ಸಾರ್ವಜನಿಕರು ಜಮಾ ಆಗುತ್ತಿರುವುದನ್ನು ನೊಡಿ
ಓಡಿ ಹೋಗಿದ್ದು ಆ 7 ಜನರು ಮಾಂಗರವಾಡಿ ಜನರಿದ್ದು
ಅವರಲ್ಲಿ ಒಬ್ಬನ ಹೆಸರು ದಿಲದಾರ ಮತ್ತು
ಇನ್ನೊಬ್ಬನ ಹೆಸರು ಮೊಹನ ಎಂದು ಗೊತ್ತಾಗಿದೆ. ಉಳಿದವರ ಹೆಸರು ಗೊತ್ತಿಲ್ಲಾ ನೊಡಿದರೆ
ಗುರ್ತಿಸುತ್ತೆವೆ. ಕಾರಣ ನನ್ನ ಮೇಲೆ ಹಲ್ಲೆ
ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ:
ಅಶೋಕ ನಗರ ಠಾಣೆ: ದಿನಾಂಕ 14/10/2015 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು
ಶ್ರೀ ದಿಲದಾರ ತಂದೆ ರಾಮಾ ಉಪಾದ್ಯ ಸಾ: ಬಾಪು
ನಗರ ಕಲಬುರಗಿ ರವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನ್ನ ಅಣ್ಣ ಮೊಹನನ ಮಗನಿಗೆ
ಡೆಂಗ್ಯೂ ಜ್ವರ ಬಂದಿದ್ದರಿಂದ ಜೇವರ್ಗಿ ಕ್ರಾಸಿಗೆ ಇರುವ ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿಟ
ಮಾಡಿದ್ದು. ಇಂದು ದಿನಾಂಕ 14/10/2015 ರಂದು
ನಾನು ಮತ್ತು ನನ್ನ ಪತ್ನಿ ಸುನೀತಾ, ಅಕ್ಕ ಪುತಳಾಬಾಯಿ ಎಲ್ಲರೂ ಅಣ್ಣನ ಮಗನಿಗೆ ಮಾತಾಡಿಸಲು ಸ್ಪರ್ಶಾ ಆಸ್ಪತ್ರೆಗೆ ಹೊಗಿದ್ದಾಗ ಎಲ್ಲರೂ ಕೂಡಿ ಪಕ್ಕದಲ್ಲಿರುವ ಜನತಾ ಉಪಹಾರ ಹೊಟೇಲದಲ್ಲಿ
ಚಹಾ ಕುಡಿಯಲು ಹೊಗಿದ್ದು. ಹೊಟೇಲನಲ್ಲಿ ವೇಟರ ತಣ್ಣಗಿದ್ದ
ಚಾಹ ಕೊಟ್ಟಿದ್ದರಿಂದ ಬಿಸಿ ಚಾಹ ಕೊಡುವಂತೆ ಕೇಳಿದ್ದಕೆಕ ಕೌಂಟರನಲ್ಲಿದ್ದ ಮ್ಯಾನೆಜರ ಹಾಗೊ
2-3 ಜನ ವೇಟರಗಳು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ
ಮಾಂಗರವಾಡಿ ಹೊಲೆಯರದ್ದು ಬಹಳ ಆಯಿತು ಚಾಹ
ಕುಡಿಯುವದ್ದದ್ದರೆ ಕುಡಿಯಿರಿ ಇಲ್ಲಂದ್ರೆ ಹೊಗ್ರಿ
ಎಂದು ಜಾತಿ ಎತ್ತಿ ಬೈದವರೇ ಅಲ್ಲೆ ಇದ್ದ ಉಳ್ಳಗಡ್ಡಿ ಕೊಯ್ಯುವ ಸ್ಟೀಲ ಚಾಕು ತೆಗೆದು
ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದರಿಂದ
ಭಾರಿ ರಕ್ತ ಸ್ರಾವ ಆಗಿ ಬಿದ್ದಾಗ ನನ್ನ ಪತ್ನಿ ಸುನೀತಾ, ಅಕ್ಕ ಪುತಳಾಬಾಯಿ ರವರು ಅಟೊ
ರೀಕ್ಷಾದಲ್ಲಿ ಹಾಕಿಕೊಂಡು ಇಲ್ಲಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಕಾರಣ ಜನತ ಉಪಹಾರ
ಹೊಟೇಲ ಮ್ಯಾನೆಜರ ಮತ್ತು ವೇಟರಗಳು ನನಗೆ ತಣ್ಣಗೆ ಚಾಹ ಕೊಟ್ಟ ಬಗ್ಗೆ ಕೇಳಿದ್ದಕ್ಕೆ ನನಗೆ
ಮಾಂಗರವಾಡಿ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಹಲ್ಲೆ ಮಾಡಿ
ರಕ್ತಗಾಯಗೊಳಿಸಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment