ಆತ್ಮ ಹತ್ಯೆ ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀಮತಿ ಮಹಾದೇವಿ ಗಂಡ
ಗೊಲ್ಲಾಳಪ್ಪ ಯಲಗೋಡ ಸಾ|| ಸುಂಬಡ ಗ್ರಾಮ ಇವರಿಗೆ 4 ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದು ನಮ್ಮೂರ
ಸೀಮೆಯಲ್ಲಿ ನಮಗೆ ಒಂದು ಎಕರೆ ಜಮೀನು ಇರುತ್ತದೆ. ನನ್ನ ಗಂಡ ಕೃಷಿ ಮತ್ತು ಕೂಲಿ ಕೆಲಸ
ಮಾಡಿಕೊಂಡು ವಾಸವಾಗಿದ್ದು, ನನ್ನ ಹಿರಿಯ ಮಗಳಾದ ಹೊನ್ನಮ್ಮ ಇವಳಿಗೆ ಕೊಣಸಿರಸಗಿ
ಗ್ರಾಮಕ್ಕೆ ಕೊಟ್ಟಿದ್ದು ಆ ಕಾಲಕ್ಕೆ ಅಲ್ಲಿ ಇಲ್ಲಿ ಅಂದಾಜ 2,00,000/- ರೂ
ಸಾಲ ಮಾಡಿಕೊಂಡಿರುತ್ತಾನೆ. ಆಗಾಗ ನನ್ನ ಗಂಡ ಸಾಲ ಜಾಸ್ತಿಯಾಯಿತು ಹೊಲವು ಬೆಳಯುತ್ತಿಲ್ಲ, ಕೂಲಿಯು
ಸಹ ಹತ್ತುತ್ತಿಲ್ಲ, ಮಕ್ಕಳು ಮತ್ತು ನಾವು ಹೇಗೆ ಬದುಕುವುದು, ನಾವು
ಸಾಲ ತೀರಿಸುವುದು ಆಗುವುದಿಲ್ಲ, ಇದರಲ್ಲಿ ಇರುವುದಕ್ಕಿಂತ ಸಾಯುವುದೆ ಮೇಲು ಅಂತಾ
ಅನ್ನುತ್ತಿದ್ದಾಗ ನಾನು ನನ್ನ ಗಂಡನಿಗೆ ಈ ರೀತಿ ಮಾತನಾಡುವುದು ಸರಿ ಅಲ್ಲಾ ಇಂದಿಲ್ಲ ನಾಳೆ ಸಾಲ
ತೀರಿಸಿದರಾಯಿತು ಅಂತಾ ಸಮಾದಾನ ಹೇಳುತ್ತಿದ್ದೇ. ದಿನಾಂಕ 15-10-2015
ರಂದು ನಾನು ಬೆಳಿಗ್ಗೆ ಕೂಲಿ ಕೆಲಸಕ್ಕೆಂದು
ನಮ್ಮೂರ ಬಸಯ್ಯಾ ಹಿರೆಮಠ ಎಂಬುವರ ಹೊಲಕ್ಕೆ ಹೊಗಿದೆನು. ಸಾಯಂಕಾಲ 5;00 ಗಂಟೆಗೆ ಕೆಲಸದಲ್ಲಿದ್ದಾಗ ನಮ್ಮ ಭಾವ ನಿಂಗಪ್ಪ ಈತನು
ನಾನು ಇದ್ದಲಿಗೆ ಬಂದು ತಮ್ಮ ಗೊಲ್ಲಾಳ್ಳಪ್ಪ ಈತನು ನಮ್ಮೂರ ಶರಣಪ್ಪ ಚಟ್ನಳ್ಳಿ ರವರ ಹೊಲದಲ್ಲಿ
ಬೇವಿನ ಗಿಡದ ಟೊಂಗೆಗೆ ಪ್ಲಾಸ್ಟಿಕ ಹಗ್ಗದಿಂದ ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ಹೇಳಿದನು, ಆಗ
ನಾನು ಗಾಬಿರಯಾಗಿ ಉರಿಗೆ ಬಂದು ನಾನು ಮತ್ತು ನನ್ನ ಮಗ ಪರಶುರಾಮ, ಹಾಗು
ನಮ್ಮ ಭಾವಂದಿರಾದ ಸಿದ್ರಾಮ, ಶರಣಪ್ಪ, ನಿಂಗಪ್ಪ ರವರು ಕೂಡಿ
ನಮ್ಮೂರ ಶರಣಪ್ಪ ಚಟ್ನಳ್ಳಿ ರವರ ಹೊಲಕ್ಕೆ ಹೋಗಿ ನೋಡಲು ನನ್ನ ಗಂಡ ಗೊಲ್ಲಾಳಪ್ಪ ಈತನು ಬೇವಿನ
ಗಿಡದ ಟೊಂಗೆಗೆ ಪ್ಲಾಸ್ಟಿಕ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ನನ್ನ ಗಂಡ ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದು, ಈ
ವರ್ಷ ಮಳೆ ಬರದೆ ಇದ್ದುದರಿಂದ ಹೊಲದಲ್ಲಿ ಯಾವುದೆ ಬೆಳೆ ಬೆಳೆದಿರುವುದಿಲ್ಲ, ಆದ್ದರಿಂದ
ಖಾಸಗಿ ಸಾಲ ಹೇಗೆ ತೀರಿಸಬೇಕು ಅಂತಾ ಅದೇ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 15-10-2015 ರಂದು
ಸಾಯಂಕಾಲ ಸುಮಾರಿಗೆ ನಮ್ಮೂರ ಶರಣಪ್ಪ ಚಟ್ನಳ್ಳಿ
ರವರ ಹೊಲದಲ್ಲಿ ಬೇವಿನ ಗಿಡದ ಟೊಂಗೆಗೆ ಪ್ಲಾಸ್ಟಿಕ ಹಗ್ಗದಿಂದ ನೆಣು ಹಾಕಿಕೊಂಡು ಮೃತ
ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಆಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment