ಚೌಕ ಪೊಲೀಸ್ ಠಾಣೆಯ : ದಿನಾಂಕ 02.10.2015 ರಂದು 8-10 ಪಿ.ಎಂ.ಕ್ಕೆ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು) ಚೌಕ ಪೊಲೀಸ್ ಠಾಣೆ ಕಲಬುರಗಿ ಇವರು ಒಬ್ಬ
ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ ಸಾರಾಂಶ
ಏನೆಂದರೆ, ದಿನಾಂಕ: 02.10.2015 ರಂದು ಸಾಯಂಕಾಲ 1730 ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಫಿಲ್ಟರ
ಬೆಡ್ ಸುಭಾಷ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80
ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು
ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ಸದರಿ ವಿಷಯವನ್ನು ನಮ್ಮ
ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿ ಮತ್ತು ಅವರ
ಮಾರ್ಗದರ್ಶನದಂತೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಮೋಶಿನ ಪಿಸಿ 811, ಸಿದ್ರಾಮಯ್ಯಾ ಪಿಸಿ 1210 ಹಾಗೂ ಇಬ್ಬರೂ ಪಂಚರಾದ 1] ಶ್ರೀ ಜೈಭೀಮ ತಂದೆ ಬಾಬುರಾವ
ಶ್ರೀಚಂದ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಔರಾದ(ಬಿ) ಹಾ.ವ: ದ್ವಾರ ಹೊಟೇಲ ಹತ್ತಿರ
ಕಲಬುರಗಿ 2) ಶ್ರೀ ವಿರೇಶ ತಂದೆ ಶಿವಲಿಂಗಪ್ಪ
ಹೊಸಮನಿ ವ: 20 ಉ: ವೇಟರ ಕೆಲಸ ಜಾತಿ: ಪ.ಜಾತಿ ಸಾ: ಕಗ್ಗನಮಡಿ ಹಾ.ವ: ಪ್ರಕಾಶ ಟಾಕೀಜ
ಹತ್ತಿರ ಕಲಬುರಗಿ ಇವರಿಗೆ ಸಿಬ್ಬಂದಿಯವರ
ಸಹಾಯದಿಂದ ಠಾಣೆಗೆ 1745 ಗಂಟೆಗೆ ಬರವಾಡಿಕೊಂಡು ಈ ಮೇಲಿನ ವಿಷಯದ ಬಗ್ಗೆ ಅವರಿಗೆ ಮಾಹಿತಿ
ತಿಳಿಸಿ ನಾವು ಮಾಡುವ ದಾಳಿಗೆ
ಸಹಕರಿಸಿ ಪಂಚನಾಮೆ ಬರೆಯಿಸಿಕೊಡಲು ವಿನಂತಿಸಿಕೊಂಡು ಅವರು ಒಪ್ಪಿಕೊಂಡ ನಂತರ ನಾವು ಠಾಣೆಯಿಂದ
1800 ಗಂಟೆಗೆ ದ್ವಿಚಕ್ರವಾಹನದ ಮೇಲೆ ಹೊರಟು
1815 ಗಂಟೆಗೆ ಫಿಲ್ಟರ
ಬೆಡ್ ಸುಭಾಷ ಹೊಟೇಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ
ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು
ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ
ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು
ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂದೆ ಲಕ್ಷ್ಮಣ ಗದವಾಲ ವ: 32 ಉ: ಮಟಕಾ
ಬರೆದುಕೊಳ್ಳುವುದು ಜಾತಿ: ವಡ್ಡರ ಸಾ: ಆಶ್ರಯ ಕಾಲೋನಿ ಫಿಲ್ಟರ ಬೆಡ್ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ
ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 4070/-ರೂಪಾಯಿ, ನಾಲ್ಕು ಮಟಕಾ ಚೀಟಿ , ಒಂದು ಬಾಲಪೆನ್ , ಒಂದು ಮೋಬಾಯಿಲ್ ಅ.ಕಿ. 500/- ರೂ ಮಟಕಾ, ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು ಸಿಕ್ಕಿದ್ದು
ಅವುಗಳನ್ನು ಪಂಚರ ಸಮಕ್ಷಮ 18:30 ರಿಂದ 19:30 ಪಿ.ಎಂ.ದ ವರೆಗೆ ಗುನ್ನೆ ಸ್ಥಳದ ರಸ್ತೆಯ ಲೈಟಿನ
ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಸದರಿ ಆರೋಪಿತನಿಗೆ ವಿಚಾರಣೆಗೆ ಒಳಪಡಿಸಿ ಈ ಮಟಕಾ
ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ
ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಹಾದೇವ ನಗರ ಶೇಖ ರೋಜಾ ಕಲಬುರಗಿ
ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ
ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ವಿಜಯಕುಮಾರ ಇತನು ಅಲ್ಲಿಂದ ಓಡಿ ಹೋಗಿರುವ
ಬಗ್ಗೆ ಬಾತ್ಮಿದಾರರಿಂದ ತಿಳಿದು ಬಂದಿದ್ದು ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿ
ರಮೇಶ ಇತನೊಂದಿಗೆ ಮರಳಿ ಠಾಣೆಗೆ 2000 ಗಂಟೆಗೆ ಠಾಣೆಗೆ ಬಂದು ಸದರಿ ಆರೋಪಿ ಮತ್ತು
ಮುದ್ದೆಮಾಲಿನೊಂದಿಗೆ ವರದಿ ಸಲ್ಲಿಸಿದ್ದು ಸದರಿ ಇಬ್ಬರೂ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 02/10/2015 ರಂದು
05:00 ಪಿ.ಎಂ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ,
ಇಂದು ದಿನಾಂಕ 02/10/2015 ರಂದು 04:30 ಪಿ.ಎಂ. ಸುಮಾರಿಗೆ ಫಿರ್ಯಾದಿದಾರರು ವಿರೇಂದ್ರ ಪಾಟೀಲ
ಬಡಾವಣೆಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಕುರಿತು
ಜಿ.ಡಿ.ಎ ಕಾಲೋನಿಯಲ್ಲಿರುವ ಹನುಮಾನ ಮಂದಿರ ಎದುರುಗಡೆ ರಸ್ತೆಯ ಮೇಲೆ ಹೋಗುತ್ತಿರುವಾಗ ಎದರುನಿಂದ
ಒಂದು ಮೋಟಾರ ಸೈಕಲ ಮೇಲೆ ಇಬ್ಬರೂ ಬಂದವರೇ ಒಬ್ಬನು ಮೋಟಾರ ಸೈಕಲ ಚಲಾಯಿಸುತ್ತಿದ್ದ ಹಿಂದೆ
ಕುಳಿತವನು ಒಮ್ಮೇಲೆ ಫಿರ್ಯಾದಿದಾರಳ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 55 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 1,37,500/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ
ಕಿತ್ತುಕೊಂಡು ಹೋಗಿರುತ್ತಾರೆ. ಗಾಬರಿಗೊಂಡು ಸದರಿ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲಾ.
ಸದರಿಯವರು ಅಂದಾಜು 20-25 ವರ್ಷದವರಿದ್ದು ತಳ್ಳನೆಯ ಮೈಕಟ್ಟು ಹೊಂದಿದ್ದು, ಸದರಿ ಮೋಟಾರ ಸೈಕಲ
ಕಪ್ಪು ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಇರಬಹುದು, ಕಾರಣ ಜಭರದಸ್ತಿಯಿಂದ ಕಿತ್ತುಕೊಂಡು ಹೋದ ಬಂಗಾರದ ಮಂಗಳಸೂತ್ರವನ್ನು
ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಅಪರಿಚಿತ ಮೋಟಾರ ಸೈಕಲ ಸವಾರರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment