Police Bhavan Kalaburagi

Police Bhavan Kalaburagi

Sunday, November 1, 2015

KALABURAGI DISTRICT REPORTED CRIMES

ಕರ್ತವ್ಯ ನಿರತ ಪೊಲೀಸ್ ರ ಮೇಲೆ ಕೊಲೆ ಯತ್ನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ 31/10/2015 ರಂದು  ಸಾಯಂಕಾಲ ಪ್ರತಿ ದಿನದಂತೆ ಪಿ.ಎಸ್.ಐ ಅಫಜಲಪೂರ ಠಾಣೆಯ ಸಿಬ್ಬಂದಿಯವರಾದ ಆನಂದ ಸಿಪಿಸಿ 1258 ಹಾಗೂ ಠಾಣೆಯ ಜೀಪ ಚಾಲಕ ಜಗನ್ನಾಥ ಸಿಪಿಸಿ-530 ರವರೊಂದಿಗೆ ಜೀಪ ನಂ ಕೆಎ-32 ಜಿ-640 ನೇದ್ದರಲ್ಲಿ ಗಸ್ತು ತಿರುಗಾಡುತ್ತಾ  ಬಸವೇಶ್ವರ ವೃತ್ತದಿಂದ ದುದನಿ ಕಡೆ ಹೋಗುವ ರಸ್ತೆಯಲ್ಲಿ ಹೋಗುತಿರುವಾಗ ಸುಮಾರು 8 ಪಿಎಮ್ ಕ್ಕೆ ರೋಡಿನ ಬಲಬದಿಯಲ್ಲಿ ಅಫಜಲಪೂರ ಠಾಣೆಯ ರೌಡಿ ಶೀಟರ್ ಪ್ರಕಾಶ ತಂದೆ ಕುಪ್ಪಣ್ಣ ಭೂತಿ ಈತನು ತನ್ನ ಮೋಟಾರ ಸೈಕಲ್ ನಿಲ್ಲಿಸಿಕೊಂಡು ನಿಂತಿರುಚುದನ್ನು ನೋಡಿ ಅವನ ಹತ್ತಿರ ನಮ್ಮ ಜೀಪನ್ನು ನಿಲ್ಲಿಸಿ ಅವನನ್ನು ಇಲ್ಲೇಕೆ ನಿಂತಿರುವೇ ಎಂದು ವಿಚಾರಿಸುತ್ತಾ ಪಿ.ಎಸ್.ಐ ರವರು ಜೀಪಿನಿಂದ ಇಳಿಯುತ್ತಿರುವಾಗ ರೌಡಿ ಶೀಟರ್ ಪ್ರಕಾಶನ ತನ್ನ ಹತ್ತಿರ ಇದ್ದ ಪಿಸ್ತೂಲ್ ನಿಂದ ನಮಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಗುಂಡು ಹಾರಿಸಿದಾಗ ಸದರಿ ಗುಂಡು ನಮ್ಮ ಜೀಪಿನ ಮುಂದಿನ ಗ್ಲಾಸಿಗೆ ತಾಗಿತು. ಆಗ ನಾನು ಮತ್ತು ಸಿಬ್ಬಂದಿಯವರು ಕೂಡಲೇ ಕೆಳಗೆ ಇಳಿದು ಗುಂಡು ಹಾರಿಸಬೇಡ ನಿನಗೆ ಏನು ಮಾಡುವದಿಲ್ಲ ಎಂದು ಹೇಳಿದರೊ ಕೇಳದೆ ಈಗ ನಿಮಗೆ ಮುಗಿಸಿಯೇ ಬಿಡುತ್ತೇನೆ ಎಂದು ಚೀರಾಡುತ್ತಾ  ಮತ್ತೊಮ್ಮೆ ಗುಂಡು ಹಾರಿಸಿದ್ದು ಅದು  ನಮ್ಮ ಸಿಬ್ಬಂದಿ ಜಗನ್ನಾಥ ಪಿಸಿ 530 ಇವರ ಏಡಗೈಗೆ ತಾಗಿ  ಭಾರಿ ರಕ್ತಗಾಯವಾಗಿ ನೆಲಕ್ಕೆ ಕುಸಿದನು. ಆಗ ನಾವು ಅವನಿಗೆ ಗುಂಡು ಹಾರಿಸಬೇಡ ಎಂದು ಕೂಗಿದರು ಕೇಳದೆ ಅವನು ತನ್ನ ಕೈಯಲ್ಲಿದ್ದ ಪಿಸ್ತೂಲಿನೊಂದಿಗೆ ನಮ್ಮ ಹತ್ತಿರ ಬರುತ್ತಿರುವುದನ್ನು ಕಂಡು ಅವನು ನಮ್ಮನ್ನು ಕೊಲೆ ಮಾಡಿಯೇ ಬಿಡುತ್ತಾನೆ ಅಂತ ಖಚಿತ ಪಡಿಸಿಕೊಂಡು ಪಿ.ಎಸ್.ಐ ರವರು ತಮಗೆ ಒದಗಿಸಿದ ಸರಕಾರಿ ಪಿಸ್ತೂಲಿನಿಂದ ಒಂದು ಸುತ್ತು ಗುಂಡು ಅವನ ಕಡೆಗೆ ಹಾರಿಸಿದೆನು. ಆದರೂ ಪ್ರಕಾಶನು ನಮ್ಮ ಮಾತನ್ನು ಕೇಳದೆ ಅವನು ನಮಗೆ ಕೊಲೆ ಮಾಡಲು ಮುಂದೆ ಬರುತ್ತಿದ್ದಾಗ ನನ್ನ ಹಾಗೂ ಸಿಬ್ಬಂದಿಯವರ ಆತ್ಮ ರಕ್ಷಣೆಗೋಸ್ಕರ ಅವನ ಕಡೆಗೆ  ಏರಡು ಸುತ್ತು ಗುಂಡು ಹಾರಿಸಿದಾಗ ಅವು ಪ್ರಕಾಶರ ಮುಖದ ಭಾಗಕ್ಕೆ ತಾಗಿ ಅವನು  ನೆಲಕ್ಕೆ ಬಿದ್ದನು. ಅವನು ಮತ್ತೆ ನಮ್ಮ ಮೇಲೆ ಗುಂಡು ಹಾರಿಸಬಹುದು ಅಂತ ಭಯದಿಂದ ನಮ್ಮ ಜೀಪಿನ ಮರೆಯಲ್ಲಿ ಸ್ವಲ್ಪ ಸಮಯ ನಿಂತು ನಂತರ ಅವನು ನೆಲಕ್ಕೆ ಬಿದ್ದವನು ಮೇಲೆಳದೆ ಇರುವುದರಿಂದ ನಿಧಾನವಾಗಿ ಅವನ ಹತ್ತಿರ ಹೋಗಿ ನೋಡಲಾಗಿ ಮುಖದ ಭಾಗದಲ್ಲಿ ಗಾಯಗಳಾಗಿ ರಕ್ತ ಸೋರುತಿತ್ತು  ಪ್ರಕಾಶ ಅಂತ ಕೂಗಿದಕ್ಕೆ ಅವನು ಮಾತನಾಡಲಿಲ್ಲಾ. ನಂತರ ನಾನು  ಜಗನ್ನಾಥ ಸಿಪಿಸಿ 530 ರವರ ಏಡಗೈಯಿಂದ ರಕ್ತ ಬರುತಿದ್ದರಿಂದ ರಕ್ತ ತಡೆಯಲು ಬಟ್ಟೆ ಸುತ್ತಿ ಈ ಘಟನೆಯನ್ನು  ಕೂಡಲೇ ನಿಸ್ತಂತು ಮೂಲಕ ನಮ್ಮ ಅಫಜಲಪೂರ ಪೊಲೀಸ್ ಠಾಣೆಗೆ ತಿಳಿಸಿ ಸಿಬ್ಬಂದಿಯವರನ್ನು ಸ್ಥಳಕ್ಕೆ ಬರಲು ಸೂಚಿಸಿದೆನು. ನಂತರ  ನಮ್ಮ ಮೇಲಾಧೀಕಾರಿಯವರಿಗೆ ದೂರವಾಣಿ ಮೂಲಕ ನಡೆದ ಘಟನೆಯನ್ನು ತಿಳಿಸಿರುತ್ತೇನೆ. ನಂತರ ಜಗನ್ನಾಥ ಸಿಪಿಸಿ ರವರಿಗೆ ಸ್ಥಳಕ್ಕೆ ಬಂದ ನಮ್ಮ ಠಾಣೆಯ ಸಿಬ್ಬಂದಿ ಪಾಂಡುರಂಗ ಸಿಪಿಸಿ 1071 ರವರೊಂದಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕಳಿಸಿರುತ್ತೇನೆ. ಪ್ರಕಾಶನು ರಕ್ತಗಾಯದಿಂದ ನೆಲಕ್ಕೆ ಬಿದ್ದಿದ್ದರಿಂದ ಆತನ  ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಯಿಸಲು ಸರಕಾರಿ ಅಂಬ್ಯೂಲೆನ್ಸನ್ನು ಕರೆಯಿಸಿಕೊಂಡು ಸಿಬ್ಬಂದಿಯವರ ಮುಖಾಂತರ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕಳುಹಿಸಿದೆನು. ಸಿಬ್ಬಂದಿಯವರಿಗೆ ಸ್ಥಳದಲ್ಲಿ ನಿಯೋಜಿಸಿ ನಂತರ ಸರಕಾರಿ ಆಸ್ಪತ್ರೆಗೆ ಬಂದು ವಿಚಾರಿಸಲು ಅಲ್ಲಿಯೇ ಇದ್ದ ವೈದ್ಯರು  ಪ್ರಕಾಶನು ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದರು. ಪ್ರಕಾಶನು ಮೃತಪಟ್ಟ ಬಗ್ಗೆ ನಮ್ಮ ಮೇಲಧೀಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿ ಠಾಣೆಗೆ ಬಂದು ಸದರಿ ಪ್ರಕಾಶನು ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಮಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇರುವ ಕಂಟ್ರಿ ಪಿಸ್ತೂಲಿನಿಂದ ನಮ್ಮ ಮೇಲೆ  ಗುಂಡುಗಳನ್ನು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿ ನಮ್ಮ ಸಿಬ್ಬಂದಿ ಜಗನ್ನಾಥ ಸಿಪಿಸಿ ಇವರಿಗೆ ಭಾರಿ ಗಾಯ ಪಡಿಸಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂಥೆ ಪಿ.ಎಸ್.ಐ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ
ಜೇವರಗಿ ಠಾಣೆ:  ದಿನಾಂಕ: 31.10.2015 ರಂದು ಕಟ್ಟಿ ಸಂಗಾವಿ ಬ್ರೀಡ್ಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂಧ ಮೇರೆಗೆ  ಶ್ರೀ. ಲಕ್ಷ್ಮಣ ಬಿರಾದಾರ ಎ.ಎಸ್.ಐ ಜೇವರಗಿ ಠಾಣೆ ರವರು ಸಿಬ್ಬಂದಿ ಜನರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳಿತ್ತಿದ್ದ  ಮರೆಪ್ಪ ತಂದೆ ಜಾನಪ್ಪ ಹುಗ್ಗಿ ಸಾ: ಮದರಿ ಈತನಿಗೆ ವಶಕ್ಕೆ ತೆಗೆದುಕೊಂಡು ಆತನಿಂದ ನಗದು ರೂ 350/- ರೂ ಮತ್ತು 1 ಬಾಲ್‌ ಪೆನ್ ಮತ್ತು ಒಂದು ಮಟಕಾ ಚೀಟಿ ಮತ್ತು ಒಂದು ನೋಕಿಯಾ ಮೋಬಾಯಿಲ್ ಅಂ.ಕಿ 300/- ರೂ ಗಳನ್ನು ಜಪ್ತಿ ಮಾಡಿಕೊಂಡು ಆತನ ವಿರುದ್ದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 31-10-2015 ರಂದು ಶ್ರೀ  ವಸಂತ ತಂದೆ ಶಂಕರ ಚವ್ಹಾಣ ಸಾ: ಭೂಸನೂರ ತಾಂಡಾ ಇವರು ಠಾಣೆಗೆ ಹಾಜರಾಗಿ ದಿನಾಂಕ 30/10/2015 ರಂದು ರಾತ್ರಿ 0900 ಗಂಟೆಗೆ ಭೂಸನೂರ ತಾಂಡಾದ ತನ್ನ ಮನೆಯಲ್ಲಿರುವಾಗ ಕನ್ನು ನಾಯಕ ತಾಂಡಾದ 01) ಶಂಕರ ತಂದೆ ಕನ್ನು ರಾಠೋಡ, 02) ವಿಜಯಕುಮಾರ ತಂದೆ ಶಂಕರ ರಾಠೋಡ, 03) ಅನೀಲ ತಂದೆ ಶಂಕರ ರಾಠೋಡ, 04) ಸುನೀಲ ತಂದೆ ಶಂಕರ ರಾಠೋಡ, 05) ಲಾಲಾಬಾಯಿ ಗಂಡ ಶಂಕರ ರಾಠೋಡ ಹಾಗೂ ಅವರ ಸಂಗಡ ಇನ್ನು 7-8 ಜನರು ಮೋಟಾರ ಸೈಕಲಗಳ ಮೇಲೆ ಬಂದವರೆ ನಮ್ಮ ಮನೆಗೆ ನುಗ್ಗಿ ನನಗೆ ಶಂಕರನು ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಮಗನೆ ಇನ್ನೊಮ್ಮೆ ನಮಗೆ ಹೊಲ ಕೇಳಿದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವಭಯಪಡಿಸಿ. ವಿಜಯಕುಮಾರನು ನನಗೆ ಎತ್ತಿ ನೆಲಕ್ಕೆ ಹೊಡೆದಿರುತ್ತಾನೆ, ಅನೀಲನು ಈ ಮಕ್ಕಳಿಗೆ ಬಿಡಬೇಡರಿ ಅಂತ ತನ್ನ ಕೈಯಲ್ಲಿದ್ದ ಚಾಕು ತೋರಿಸಿದನು, ಸುನೀಲ, ಲಾಲಾಬಾಯಿ ಹಾಗೂ ಇತರರು ಕೂಡಿ ನೀವು ನಮ್ಮ ತಂಟೆಗೆ ಬಂದರೆ ನಿಮ್ಮ ಕುಟುಂಬ ಸಮೇತ ಮುಗಿಸಿ ಬಿಡುತ್ತೇವೆ ಅಂತ ಜೀವ ಭಯಪಡಿಸಿದರು ಅಷ್ಟರಲ್ಲಿ ನಾವೇಲ್ಲರೂ ಚೀರಾಡುತ್ತಿದ್ದಾಗ ನಮ್ಮ ಬಾಜು ಮನೆಯವರು ಬಂದು ಬಿಡಿಸಿರುತ್ತಾರೆ. ನಮಗೆ ಹೊಡೆ ಬಡೆ ಮಾಡಿ ಜೀವ ಭಯ ಹಾಕಿದವರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: