Police Bhavan Kalaburagi

Police Bhavan Kalaburagi

Thursday, November 12, 2015

Kalaburagi District Reported Crimes

ಆಪರಿಚಿತ ಹೆಣ್ಣು ಮಗಳು ನೀರಿನಲ್ಲಿ ಮುಳುಗಿ ಸಾವು :
ಮಾಹಾಗಾಂವ ಠಾಣೆ : ಶ್ರೀ ಇಲಿಯಾಸ ಪಟೇಲ್ ತಂದೆ ಅಲ್ಲಾ ಪಟೇಲ್ ಮಾಲಿಪಾಟೀಲ ಸಾ:ಕುರಿಕೋಟಾ ತಾ:ಜಿ:ಕಲಬುರಗಿ ಇವರು ದಿನಾಂಕ: 11/11/2015 ರಂದು ಬೆಳಿಗ್ಗೆ 08-30 ಗಂಟೆಗೆ ನಾನು ಹಾಗೂ ನಮ್ಮ ಗ್ರಾಮದ ರಮೇಶ ತಂದೆ ಗುಂಡಪ್ಪಾ ಸಾಹು, ಮಹಿಬೂಬಶಾ ಫಕೀರ ಮೂರು ಜನರು ಕೂಡಿಕೊಂಡು ನಮ್ಮ ಗ್ರಾಮದ ಕ್ರಾಸ್ ಹತ್ತಿರ ಮಾತಾಡುತ್ತಾ ನಿಂತಿರುವಾಗ ಕ್ರಾಸದಲ್ಲಿ ಜನರು ನಮ್ಮೂರಿನ ಬ್ರಿಜದಲ್ಲಿ ಒಂದು ಶವ ತೇಲುತ್ತಿದೆ ಅಂತಾ ಮಾತಾಡುತ್ತಿರುವಾಗ ನಾವೆಲ್ಲರೂ ಬ್ರಿಜ್ ಹತ್ತಿರ ಹೋಗಿ ನೋಡಲಾಗಿ ನೀರಿನಲ್ಲಿ ಬೋರಲಾಗಿ ಒಂದು ಶವ ತೇಲುತ್ತಿದ್ದುದ್ದನ್ನು ನೋಡಿ ಹೊರಗೆ ತೆಗೆದು ನೀರಿನ ಬಾಜು ಖುಲ್ಲಾ ಜಾಗೆಯಲ್ಲಿ ಅಂಗಾತಾಗಿ ಮಲಗಿಸಿ ನೋಡಲಾಗಿ ಶವದ ಮೂಗು ಹಾಗೂ ಬಾಯಿಗೆ ಮೀನುಗಳು ತಿಂದು ರಕ್ತ ಬಂದಿರುತ್ತದೆ. ಮೃತಳ ಹೆಸರು ವಿಳಾಸ ಗೊತ್ತಿರುವುದಿಲ್ಲ. ಅಪರಿಚಿತ ಮೃತಳು ಯಾವುದೋ ವಿಷಯದ ಸಂಬಂಧ ನಮ್ಮೂರಿನ ಬ್ರಿಜದಲ್ಲಿ ನಿನ್ನೆ ರಾತ್ರಿ 7-8 ಗಂಟೆ ಸಮಯದಲ್ಲಿ ಹಾರಿ ಮೃತಪಟ್ಟಿರುತ್ತಾಳೆ. ಕಾರಣ ಅಪರಿಚಿತ ಮೃತ ಹೆಣ್ಣು ಮಗಳು ಸಾವಿನ ಬಗ್ಗೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಗುರುಲಿಂಗಪ್ಪಾ ಮಲ್ಕಪ್ಪನವರು ನಿನಾ ಕಂಪನಿ ಕಲಬುರಗಿ ಇವರು ದಿನಾಂಕ: 09-11-2015 ರ ರಾತ್ರಿ ವೆಳೆಯಲ್ಲಿ ಯಾರೋ ಕಳ್ಳರು ನಾಗೂರ ಗ್ರಾಮದಲ್ಲಿನ ಏರಟೈಲ್ ಟಾವರದ ಸೈಟ್ ಐಡಿ ನಂ:ನಾಗೂರ-1 ಇಂಡಸ್ಟ್ ನಂ:1076226 ನೇದ್ದಕ್ಕೆ ಅಳವಡಿಸಿದ ಎರಡು ಬ್ಯಾಟ್ರಿ ಬ್ಯಾಂಕಿನ ಒಟ್ಟು 48 ಬ್ಯಾಟ್ರಿಗಳು ಅಮರ ಕಂಪನಿಯದ್ದವುಗಳು ಅ.ಕಿ||23500 ಗಳನ್ನು ಸೈಟ್‌ದ ಸೆಲ್ಟರ್ ರೂಮಿನ ಕೀಲಿ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟರಿಗಳು ಸಿಕ್ಕಲ್ಲಿ ಇಂಡಸ್ ಕಂಪನಿಯ ತಾಂತ್ರಿಕ ಹಾಗೂ ಇತರರು ನೋಡಿದಲ್ಲಿ ಗುರುತಿಸುತ್ತಾರೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: