Police Bhavan Kalaburagi

Police Bhavan Kalaburagi

Wednesday, November 18, 2015

KALABURAGI DISTRICT REPORTED CRIMES

ನಕಲಿ ಫೇಸ್ ಬುಕ್ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿದ ಬಗ್ಗೆ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 17.11.2015 ರಂದು ಶ್ರೀಮತಿ ಅಶ್ವಿನಿ ಗಂಡ ಪ್ರಮೋದ ಕಣ್ಣಿ ಸಾ: ಅತ್ತರ ಕಂಪೌಂಡ ಗಾಜಿಪೂರ ಕಲಬುರಗಿ ರವರು ಠಾಣೆ ಹಾಜರಾಗಿ ತಾನು 2013 ನೇ ಸಾಲಿನಲ್ಲಿ ಕಲಬುರಗಿಯ ಅಪ್ಪಾ ಐ.ಇ.ಟಿ. ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೇಸರ ಅಂತಾ ನೇಮಕಾತಿ ಹೊಂದಿ ಅಲ್ಲಿ ಸುಮಾರು 2 ವರ್ಷಗಳ ಕಾಲ ಸೇವೆ ಸಲ್ಲಿಸಿ. 2015 ನೇ ಸಾಲಿನಲ್ಲಿ ನಾನು ಪ್ರೊಫೇಸರ ಹುದ್ದೆಗೆ ರಾಜೀನಾಮೆ ನೀಡಿ ಗಂಡನ ಜೊತೆಯಲ್ಲಿ  ಸಂಸಾರ ಮಾಡಿಕೊಂಡು ಉಳಿದಿರುತ್ತೇನೆ . ನನ್ನ ಮತ್ತು ನನ್ನ  ಗಂಡನ ಸಂಬಂಧ ದೂರ ಮಾಡುವ ಉದ್ದೇಶದಿಂದ ಮತ್ತು ಸಂಸಾರದಲ್ಲಿ ಬಿರುಕು ಉಂಟು ಮಾಡುವ ಒಂದು ಕೆಟ್ಟ ಉದ್ದೇಶದಿಂದ ನನಗೆ ಮತ್ತು ನನ್ನ ಗಂಡನಿಗೆ ಸಾರ್ವಜನಿಕವಾಗಿ ಮತ್ತು ಗೆಳಯರು ಮತ್ತು  ಬಂಧುಬಳಗದಲ್ಲಿ ಕೆಟ್ಟ ಅಭಿಪ್ರಾಯ ಮೂಡಿ ಬರುವಂತೆ ಯಾರೂ ಅಪರಿಚಿತರು ನನ್ನ ಹೆಸರಿನ ನಕಲಿ ಫೇಸಬುಕ ಅಕೌಂಟ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿ ಇವುಗಳ ಮುಖಾಂತರ ಜೀವ ಬೇದರಿಕೆ  ಮತ್ತು ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಮತ್ತು ನನ್ನ ಭಾವಚಿತ್ರಗಳನ್ನು ಅಪ್ಪಾ ಐ.ಇ.ಟಿ ಕಾಲೇಜಿನ ಟೀಚಿಂಗ್ ಸಿಬ್ಬಂದಿಯವರಾದ ಪ್ರವೀಣ ಹಿಪ್ಪರಗಿ, ಸಂಜೀವ, ವಿಲಾಸ ಇವರ ಭಾವಚಿತ್ರದೊಂದಿಗೆ ಜೋಡಿಸಿ ಮತ್ತು ಸುಳ್ಳು ಫೇಕ ಬುಕ ಖಾತೆಗಳನ್ನು ಸೃಷ್ಟಸಿ ಅಶ್ಲಿಲ ಶಬ್ದಗಳಿಂದ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇದರಿಂದ ನನ್ನ ಮತ್ತು ನನ್ನ ಗಂಡನವರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದಲ್ಲದೆ ನನ್ನ ಹೆಸರು ಮತ್ತು ನನ್ನ ಭಾವಚಿತ್ರವನ್ನು ಉಪಯೋಗಿಸಿ ಸೋಶಿಯಲ್ ವೇಬ್ ಸೈಟ್ಸಗಳಲ್ಲಿ ರಜಿಸ್ಟರ ಮಾಡಿದ್ದು. ಈ ಮೇಲಿನ ಕೃತ್ಯಗಳನ್ನು ದಿನಾಂಕ: 28.02.2015  ರಿಂದ 11.11.2015 ರ ವರೆಗೆ ಮಾಡಿದ್ದು. ಈ ರೀತಿ  ನನ್ನ ಖ್ಯಾತಿಗೆ ಕುಂದು ತರುವ ಉದ್ದೇಶದಿಂದ ಹಾಗೂ ತಮ್ಮ ಹೆಸರನ್ನು ಗುರುತಿಸಿಕೊಳ್ಳದೆ ತನ್ನ ವಿಳಾಸ ಇತ್ಯಾದಿ ತಿಳಿಸದೇ ಎಲೆಕ್ಟ್ರಾನಿಕ್ ಡಿವಾಇಸಗಳ ಸಹಾಯದಿಂದ ನನ್ನ ಹೆಸರಿಗೆ ಸುಳ್ಳು ಮಾಹಿತಿಯನ್ನು ರವಾನಿಸುತ್ತಾ ಮೇಲಿಂದ ಮೇಲೆ ಫೆಸ ಬುಕ ಮತ್ತು ಜಿ- ಮೇಲ್  ಮುಖಾಂತರ ಸಂದೇಶಗಳನ್ನು ಕಳುಹಿಸಿ ನನ್ನ ವೈಯಕ್ತಿಕ ಚರಿತ್ರೆ ಹಾಳುಮಾಡುತ್ತಾ  ಮತ್ತು ನನ್ನ ಸಂಸಾರದಲ್ಲಿ ಬಿರುಕು ಉಂಟು ಆಗುವ ರೀತಿ ವರ್ತಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ್ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆಯತ್ನ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 17/11/2015 ರಂದು ಶ್ರೀ ಧನರಾಜ ತಂದೆ ಬಸವರಾಜ ಹಿರಾಣಿ ಸಾ: ಸರಡಗಿ (ಬಿ) ಇವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತಮ್ಮ ಗ್ರಾಮದ  ನಿಖಿಲ ತಂದೆ ವಿಜಯಕುಮಾರ ಬುಳ್ಳಾ ಇತನು ಈಗ ಸುಮಾರು 2 ವರ್ಷಗಳಿಂದ ನಮ್ಮ ಊರಿನ ಪಕ್ಕಕ್ಕೆ ಹರೀಯುವ ಭೀಮಾ ನದಿ ದಡದಿಂದ ಕಳ್ಳತನದಿಂದ ಪೋಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಉಸುಕು(ಮರಳು) ಸಾಗಣೆ ಮಾಡುತ್ತಿದ್ದು ಇದಕ್ಕೆ ನಾನು ಈ ಹಿಂದೆ ನಿಖಿಲನಿಗೆ ಮರಳು ಸಾಗಣೆ ಮಾಡಲು ತಕರಾರು ಮಾಡಿದ್ದು ಅದಕ್ಕೆ ಅವನು ನನಗೆ ನಿನ್ಯಾರು ನನಗೆ ಕಕೇಳುವವ ಅಂತಾ ನನ್ನೋಂದಿಗೆ ತಕರಾರು ಮಾಡಿ ಮಗನೆ ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ದ್ವೇಷ ಬೆಳೆಯಿಸಿಕೋಂಡು ಬಂದಿರುತ್ತಾನೆ. ದಿನಾಂಕ 16/11/2015 ರಂದು ನಾನು ಕಲಬುರಗಿಯಿಂದ ನಮ್ಮೂರಿಗೆ ಹೋಗುವ ಕುರಿತು ಫರಹತಾಬಾದ ಗ್ರಾಮದ ಬಸ್ಸ ನಿಲ್ದಾಣದ ಹತ್ತೀರ ಇರುವ ಹುಸೇನ ಪಂಕ್ಚರ ಅಂಗಡಿಯ ಮುಂದಿನ ರೋಡಿನ ಮೇಲೆ ರಾತ್ರಿ 6-30 ಗಂಟೆಯ ಸುಮಾರಿಗೆ ನನ್ನ ಅತ್ತೇಯ ಮಗನಾದ ಸತೀಶ ಧನರಾಯ ಗೋಳ ಇತನೋಂದಿಗೆ ನಿಂತಾಗ ಸದರಿ ನಿಖಿಲನು ತನ್ನ ಸಂಬಂದಿಕರಾದ ಶಂಕರ ಬುಳ್ಳಾ ಮತ್ತು ಚಿನ್ನು ಬುಳ್ಳಾ ಇವರೋಂದಿಗೆ ಬಂದವನೆ ನನಗೆ ನಿಖಿಲ ಇತನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನೀನು ನಮಗೆ ನದಿಯಿಂದ ಮರಳು ಸಾಗಣೆ ಮಾಡಲು ಅಡೆತಡೆ ಮಾಡಿ ನಮಗೆ ದಂಧಾದಲ್ಲಿ ಲುಕ್ಸಾನ ಮಾಡುತ್ತೀದ್ದಿ ಮಗನೆ ಇದು ನಿನಗೆ ಜೀವ ಸಹಿತ ಬಿಡುವದಿಲ್ಲಾ ಎನ್ನುತ್ತಾ ನನ್ನನ್ನು ಕೋಲೆ ಮಾಡಬೆಕೆಂಬ ಉದ್ದೇಶದಿಂದ ಚಿನ್ನು ಈತನು ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ನಿಖಿಲ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬಲಗಡೆ ಮೆಲಕಿಗೆ,ಬಲಕಿವಿಗೆ ಹೋಡೆದು ರಕ್ತಗಾಯ ಮತ್ತು ಕುತ್ತೀಗೆಯ ಎಡ ಹಿಂಬದಿಗೆ ಹೋಡೆದು ಗುಪ್ತಗಾಯ ಮಾಡಿರುತ್ತಾನೆ, ಶಂಕರ ಇತನು ಕಲ್ಲಿನಿಂದ ನನ್ನ ಬಲಗಾಲಿನ ಪಾದದ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಆಗ ನಾನು ಚೀರಾಡುವದನ್ನು ಕೇಳಿ ಅಲ್ಲಿಯೇ ಇದ್ದ ನನ್ನ ಮಾವ ಸತೀಶ ಮತ್ತು ನಮ್ಮೂರಿನ ಶರಣು ತಿಬಶೇಟ್ಟಿ, ಹಾಗೂ ಅಪ್ಪಾಸಾಬ ಹಾಲಕಾಯಿ ಇವರು ಬಂದು ನನಗೆ ಹೋಡೆಬಡೆ ಮಾಡುತ್ತೀರುವದನ್ನು ಬಿಡಿಸಿ ನನಗೆ ಚಿಕಿತ್ಸೆಗಾಗಿ ಸತ್ಯಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು. ನನಗೆ ಕೋಲೆ ಮಾಡುವ ಉದ್ದೇಶದಿಂದ ಹೋಡಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿ ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: