Police Bhavan Kalaburagi

Police Bhavan Kalaburagi

Saturday, November 21, 2015

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಭೀಮರಾಯ ತಂದೆ ಶಿವಪ್ಪ ಭೋರಟ್ಟಿ ಸಾ|| ಕರಜಗಿ ಇವರ ಹೊಲ ಕರಜಗಿ ಸೀಮಾಂತರದಲ್ಲಿ ಸರ್ವೆ ನಂಬರ 484 ಇದ್ದು, 6 ಎಕರೆ 10 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಬೋರ ಹಾಕಿಸಿ ನೀರಾವರಿ ಮಾಡಿರುತ್ತೇನೆ. ನಮ್ಮ ಹೊಲದಲ್ಲಿ ಇದ್ದ ಬೋರಿಗೆ ಕರೆಂಟ ಸಲುವಾಗಿ ನಾನು ಮತ್ತು ನಮ್ಮ ಸುತ್ತ ಮುತ್ತಲಿನ ಹೊಲದವರಾದ ವಿದ್ಯಾಧರ ಕೋಣುರ, ಮೌಲಾಸಾಬ ಚೌದರಿ, ಬಾಬುರಾಯ ಅಳ್ಳಗಿ ಇನ್ನು ಕೆಲವು ಜನರು ಕೂಡಿಕೊಂಡು ಕರೆಂಟ ಸಂಭಂದ ಎಲ್ಲರು ಮದ್ಯದಲ್ಲಿ ಒಂದು ಹೊಸದಾಗಿ ಟಿಸಿ ಕೂಡಿಸಿರುತ್ತೇವೆ. ಎಲ್ಲರೂ ಸದರಿ ಟಿಸಿಗೆ ಒಂದೊಂದೆ ಕರೆಂಟ ಮೋಟಾರ ಕೂಡಿಸಬೇಕು ಅಂತಾ ಮಾತುಕತೆಯಾಗಿರುತ್ತದೆ. ಈಗ 2 ವರ್ಷಗಳ ಹಿಂದೆ ನಮ್ಮ ಎರಡನೆ ಅಣ್ಣ ತಮ್ಮಕಿಯ ಶ್ರೀಶಲ ತಂದೆ ಸಾಯಬಣ್ಣ ಬೋರಟ್ಟಿ ಈತನು ಸದರಿ ಟಿಸಿಯಿಂದ ನನಗೂ ಸಹ ಕರೆಂಟ ಕೊಡಿರಿ ಅಂತಾ ಕೇಳಿಕೊಂಡಿದ್ದರಿಂದ ನಾವೆಲ್ಲರೂ ಕೂಡಿ ಶ್ರೀಶೈಲನಿಗೆ ಒಂದೆ ಕರೆಂಟ ಮೋಟಾರ ಹಚ್ಚಬೇಕು ಅಂತಾ ಹೇಳಿ ಟಿಸಿಯಿಂದ ಕರೆಂಟ ಕೊಟ್ಟಿರುತ್ತೇವೆ. ಆದರೆ ಸದರಿ ಶ್ರೀಶೈಲನು ಈಗ ಕೆಲವು ತಿಂಗಳಿಂದ ಟಿಸಿಗೆ ಒಂದು ಕರೆಂಟ ಮೋಟರ ಹಚ್ಚದೆ 2 ಕರೆಂಟ ಮೋಟರ ಹಚ್ಚುತ್ತಿದ್ದರಿಂದ, ಉಳಿದ ನಮ್ಮೇಲ್ಲರ ಮೋಟರಗಳು ಬಂದ ಬೀಳುತ್ತಿರುತ್ತವೆ. ಅದೆ ವಿಷಯವಾಗಿ ನಾನು ಶ್ರೀಶೈಲನಿಗೆ ಒಂದೆ ಕರೆಂಟ ಮೋಟಾರ ಹಚ್ಚು ಅಂತಾ ಹೇಳಿದರು ಸಹ ನನ್ನ ಮಾತಿಗೆ ಕಿವಿಗೊಡದೆ 2 ಮೊಟರ ಹಚ್ಚುತ್ತಿದ್ದನು.   ಹಿಗಿದ್ದು ದಿನಾಂಕ 06-11-2015 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ನಾನು ಕರಜಗಿ ಸಿಮಾಂತರದ ಹೊಲ ಸರ್ವೆ ನಂಬರ 484 ರಲ್ಲಿ ಕೆಲಸ ಮಾಡುತ್ತಿದ್ದೇನು. ನಾನು ಕೆಲಸ ಮಾಡುತ್ತಾ ಬಾಂದಾರಿ ಹತ್ತಿರ ಹೋದಾಗ ನಮ್ಮ ಬಾಜು ಹೊಲದವನಾದ ಶ್ರೀಶೈಲ ಭೋರಟ್ಟಿ ಈತನ ಮಗ ಸಿದ್ದಪ್ಪ ಹಾಗೂ ಶ್ರೀಶೈಲನ ಹೆಂಡತಿ ಶಾಂತಾಬಾಯಿ ಇವರಲ್ಲೆರು ಇದ್ದರು, ಆಗ ನಾನು ಸದರಿ ಶ್ರೀಶೈಲನಿಗೆ ಏನೊ ಶ್ರೀಶೈಲ ಟಿಸಿಗಿ ಒಂದೆ ಕರೆಂಟ ಮೋಟರ ಹಚ್ಚು ಅಂತಾ ಹೇಳಿನಿ, ನೀನು ಎರಡು ಕರೆಂಟ ಮೋಟರ ಹಚ್ಚಿದರ ಉಳಿದವರ ಮೋಟರಗಳು ಜಗ್ಗೊದಿಲ್ಲ ಯಾಕ ಹಿಂಗ ಮಾಡ್ತಿ ಅಂತಾ ಕೇಳಿದೆನು. ಅದಕ್ಕೆ ಅಲ್ಲೆ ಇದ್ದ ಶ್ರೀಶೈಲನ ಮಗ ಸಿದ್ದಪ್ಪ ಈತನು ಏನೊ ಸೂಳೆ ಮಗನೆ ಎಲ್ಲಾರೊ ಸುಮ್ಮ ಕುತ್ತಾರ ನಿಂದೆ ತಿಂಡಿ ಜಾಸ್ತಿ ಆಗಿ ಕೇಳ್ತಾ ಇದಿ ಮಗನೆ ಅಂತಾ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನನ್ನ ಹತ್ತಿರ ಬಂದು ನನಗೆ ಏಕಾ ಏಕಿ ಕೊಡಲಿಯಿಂದ ನನ್ನ ಏಡಕಾಲು ಮೊಣಕಾಲಿನ ಮೇಲೆ ಹಾಗೂ ತೊಡೆಯ ಮೇಲೆ ಹೊಡೆದನು. ಶ್ರೀಶೈಲನು ಬಂದು ಕಲ್ಲಿನಿಂದ ನನಗೆ ಹೊಡೆದನು, ಶ್ರೀಶೈಲನ ಹೆಂಡತಿ ಶಾಂತಾಬಾಯಿ ಇವಳು ಈ ಹಾಟ್ಯಾನ ಮಗಂದು ಸೊಕ್ಕ ಜಾಸ್ತಿ ಆಗ್ಯಾದ ಅದಕ ಕಾಲ ಕೆದರಿ ಜಗಳ ತಗಿತಾನ ಅಂತಾ ನನಗೆ ಬೈಯುತ್ತಿದ್ದಳು, ಸಿದ್ದಪ್ಪ ಮತ್ತು ಶ್ರೀಶೈಲ ಇಬ್ಬರು ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುವುದು, ಸಿದ್ದಪ್ಪನು ಕೊಡಲಿಯಿಂದ ಹೊಡೆಯುತ್ತಿದ್ದನು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನಮ್ಮ ಹೊಲದಲ್ಲಿಯೆ ಇನ್ನೊಂದು ಕಡೆ ಕೆಲಸ ಮಾಡುತ್ತಿದ್ದ ನನ್ನ ಹೆಂಡತಿ ಸುಗಲಾಬಾಯಿ ಹಾಗೂ ನಮ್ಮ ಸಂಭಂದಿಕ ಸಂಗಪ್ಪ ಇವರು ಓಡಿ ಬಂದು ನನಗೆ ಹೊಡೆಯುದನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: