Police Bhavan Kalaburagi

Police Bhavan Kalaburagi

Tuesday, November 24, 2015

Kalaburagi District Reported Crimes

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 22-11-15 ರಂದು ರಾತ್ರಿ ಶ್ರೀ ಶ್ರೀಶೈಲ ತಂದೆ ಶಿವಣ್ಣಾ ಬೈರಾಮಡವಿ ಸಾ : ಹೀರಾಪೂರ  ರವರು ಮತ್ತು ಅವನ ಗೆಳೆಯ ಗುರು ಮುರಬ ಇಬ್ಬರು ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ ಸಿದ್ರಾಮ ಮತ್ತು ರಾಜು ಇಬ್ಬರು ಒಂದು ಮೋಟಾರ ಸೈಕಲ ಮೇಲೆ  ಸಿದ್ರಾಮನ ಗೆಳೆಯರು ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನನ್ನ ಹತ್ತಿರ ಬಂದು ಸಿದ್ರಾಮ ಇತನು ಶ್ರೀಶೈಲನಿಗೆ ಭೋಸಡಿ ಮಗನಿಗೆ ಓಣಿಯಲ್ಲಿ ನಮ್ಮ ಅಣ್ಣನ ಮಗಳಾದ ಮಾಹಾನಂದ ಮಾನ ಕಳೆದಿದ್ದಾನೆ ಎಂಬ ದ್ವೇಷದಿಂದ  ಇವತ್ತು ಶ್ರೀಶೈಲನಿಗೆ  ಖಲಾಷ ಮಾಡಿಯೇ ಬಿಡೋಣಾ ಅಂತಾ ಅಂದಾಗ ರಾಜು ಮತ್ತು ಅವನ ಇನ್ನಿಬ್ಬರು ಗೆಳೆಯರು ಮೂರು ಜನರು ಶ್ರೀಶೈಲನಿಗೆ  ಒತ್ತಿಯಾಗಿ ಹಿಡಿದು ಕೈಯಿಂದ ಶ್ರೀಶೈಲನ ಮೈಮೇಲೆ ಹೊಡೆ ಬಡಿ ಮಾಡ ಹತ್ತಿದರು. ಸಿದ್ರಾಮ ಇತನು ತನ್ನ ಹತ್ತಿರವಿದ್ದ ಚಾಕು ತೆಗೆದು ಶ್ರೀಶೈಲನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಟ್ಟೆಗೆ ಚಾಕುದಿಂದ ಹೊಡೆಯಲು ಅವನು ಹೊಡೆಯುವ ಎಟುನ್ನು ತಪ್ಪಿಸಿಕೊಳ್ಳುವಗೋಸ್ಕರ ಶ್ರೀಶೈಲನು ತನ್ನ  ಎಡಗೈ ಅಡ್ಡ  ತಂದಾಗ ಚಾಕುವಿನ ಎಟು ಶ್ರೀಶೈಲನ   ಎಡಗೈ ಮೊಣಕೈ ಮೇಲೆ ಬಡಿದು ರಕ್ತಗಾಯವಾಯಿತು. ಅದೇ ಚಾಕುವಿನಿಂದ ಮತ್ತೆ ನನಗೆ ಕೊಲೆ ಮಾಡುವ ಉದ್ದೇಶದಿಂದ ಶ್ರೀಶೈಲನ ಬಲ ಟೊಂಕಕ್ಕೆ  ಚುಚ್ಚಿ,  ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಚಂದ್ರಶೇಖರ ಸಾ: ಸುಲ್ತಾನಪೂರ ಕಲಬುರಗಿ ರವರು ದಿನಾಂಕಃ 23.11.2015 ರಂದು ಬೆಳಿಗ್ಗೆ ಯಾಥ ಪ್ರಕಾರ ನಾನು ನನ್ನ ಅಂಗಡಿಗೆ ವ್ಯಾಪಾರ ಮಾಡುವ ಕುರಿತು ಅಂಗಡಿ ಹತ್ತಿರ ಬರುವಷ್ಟರಲ್ಲೆ ನಮ್ಮ ಅಂಗಡಿಯ ಎದುರಗಡೆ ಕೆಲವು ಜನರು ಜಮಾಯಿಸಿಕೊಂಡು ನಿಂತಿರುವದನ್ನು ಕಂಡು ಏನಾಗಿದೆ ಅಂತ ಹೋಗಿ ನೋಡಲಾಗಿ ನಾನು ರಾತ್ರಿ  ಮನೆಗೆ ಹೋಗುವ ಕಾಲಕ್ಕೆ ನೋಡಿದ ಅಪರಿಚಿತ ಅಂದಾಜು 40-45 ವರ್ಷದ ವಯಸಿನ ಗಂಡು ಮನುಷ್ಯನು ಮೃತಪಟ್ಟಿದ್ದು ಇರುತ್ತದೆ. ಅವನ ಹೆಸರು ವಿಳಾಸ ಏನು ಗೊತ್ತಾಗಿರುವದಿಲ್ಲ ಅವನ ಮೈ ಮೇಲೆ ಯಾವುದೇ ಗಾಯಗಳು ವೈಗೆರೆ ಇರುವದಿಲ್ಲ. ಅವನ ಹತ್ತಿರ ಯಾವುದೋ ರೋಗದ ಗುಳೆಗಳು ಪ್ಯಾಕೆಟ್ಟಗಳು ಇದ್ದು   ಇತನು ಯಾವುದೋ ರೋಗದಿಂದ  ಸತ್ತಿರಬಹುದು ಇತನ ಮೈಮೇಲೆ ಕೆಂಪು ಬಣ್ಣದ ಟೀ ಶರ್ಟ ಒಂದು ಬಿಳಿಯ ಬಣ್ಣದ ಟ್ಯಾವಲ್‌ ಬಿಳಿಯ ಬಣ್ಣದ ಅಂಡರವೇರ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ ಧರಿಸಿಕೊಂಡಿರುತ್ತಾನೆ ಅಂದಾಜು ಎತ್ತರ 5-6 ಅಂಡಿ ಇರಬಹುದ್ದು  ತೆಲೆಯಲ್ಲಿ ಸ್ವಲ್ಪ ಕರಿಯ ಬೀಳಿಯ ಮಿಶ್ರತ ಕೂದಲು ಸ್ವಲ್ಪ ದಾಡಿ ಬಿಟ್ಟಿರುತ್ತಾನೆ ಇತನು ಬೆಳಿಗೆ 9.00 ಎಎಮ್‌ದ ವರೆಗೆ ಜೀವಂತ ಇರುವ ಬಗ್ಗೆ ಕೆಲವು ಹಮಾಲರು ನೋಡಿರುತ್ತಾರೆ ಅಂದಾಜು 10.30 ಗಂಟೆಯಿಂ 1045 ಗಂಟೆಯ ಮದ್ಯದ ಅವದಿಯಲ್ಲಿ ಅವನು ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ, ಇಂದು ದಿನಾಂಕ: 23-11-2015 ರಂದು 3:30 ಎಎಮ್  ಸುಮಾರಿಗೆ ಸಂಗಡ ಸಿಪಿಸಿ-801 ಶ್ರೀ ಸುರೇಶ, ಸಿಪಿಸಿ-657 ಶ್ರೀ ಸಂತೋಷ, ಸುರೇಶ ಸಿಪಿಸಿ-905 ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಬಸವೇಶ್ವರ ಸರ್ಕಲ ಹತ್ತಿರ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ  ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ,
ಆಕ್ರಮವಾಗಿ ಮರಳು ತುಂಬುತ್ತಿದ್ದ ಹಿಟ್ಯಾಚ ಹಾಗು ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ: 23-11-2015 ರಂದು ಮಣೂರ ಗ್ರಾಮದ ಭೀಮಾನದಿಯಲ್ಲಿ ಸೊನ್ನ ಗ್ರಾಮದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಇವರು ಹಿಟಚಿ ಸಹಾಯದಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಸಿ ಸಾಗಣಿಕೆ ಮಾಡಿಸುತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದ್ದರಾಯ ಭೋಸಗೆ ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣೂರ ಗ್ರಾಮದ ಭೀಮಾ ನದಿಯ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ ನಿಂತು ನೋಡಲು ಭಿಮಾನದಿಯಲ್ಲಿ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ ತುಂಬುತ್ತಿದ್ದರು ಆಗ ನಾವು ಸದರಿಯವರು ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಯಂತ್ರ ಮತ್ತು ಟಿಪ್ಪರಗಳ ಮೇಲೆ ದಾಳಿ ಮಾಡಲು ಟಿಪ್ಪರ ಚಾಲಕರು ಮತ್ತು ಮರಳು ತುಂಬುತ್ತಿದ್ದ ಯಂತ್ರದ ಆಪರೇಟರ್ ಮುಂದೆ ನಿಂತು ಮರಳು ತುಂಬಿಸುತಿದ್ದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಸಾ||ಸೊನ್ನ ಎಲ್ಲರು  ಕತ್ತಲಲ್ಲಿ ಓಡಿ ಹೊದರು, ಸದರಿ ಶಿನಾನಂದನು ಓಡಿ ಹೋಗುವಾಗ ನಮ್ಮ ಸಿಬಂದ್ದಿ ಜನರು ಹಾಗೂ ಪಂಚರು ಗುರುತಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲು ಟಿಪ್ಪರ ನಂ ಕೆಎ-32 ಸಿ-1542, ಕೆಎ-28 ಸಿ-0073  ಅಂತ ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಮರಳು ತುಂಬುವ ಯಂತ್ರವನ್ನು(ಹಿಟಚಿ) ಪರಿಶೀಲಿಸಿ ನೊಡಲು Sany ಕಂಪನಿಯ ಚೈನ ಬೆಲ್ಟ ಇರುವ  ಭೃಹತ ಮರಳು ಎತ್ತುವ ಯಂತ್ರವಿದ್ದು ಅದರ ಮಾಡಲ್ ನಂಬರ SY2050 ಇಂಜಿನ ನಂ 13SVY020600508  ಅಂತಾ ಇದ್ದಿತ್ತು. ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಮಣುರ ಭಿಮಾನದಿಯಿಂದ ಭೃಹತ ಯಂತ್ರದಿಂದ(ಹಿಟಚಿ) ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಸದರಿ ಯಂತ್ರವನ್ನು ಹಾಗೂ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆನು.ಸದರಿ ಟಿಪ್ಪರಗಳಲ್ಲಿನ ಮರಳಿನ ಅಂದಾಜ ಕಿಮ್ಮತ್ತು 10,000/- ರೂ ಇರಬಹುದು ಹಾಗೂ ಭೃಹತ ಮರಳು ಎತ್ತುವ ಯಂತ್ರ (ಹಿಟಚಿ) ಅ.ಕಿ 5,00,000/- ರೂ ಇರಬಹುದು ನಂತರ ಸದರಿ ಟಿಪ್ಪರ  ಹಾಗೂ ಭೃಹತ ಮರಳು ಎತ್ತುವ ಯಂತ್ರವನ್ನು ನಮ್ಮ ಸಿಬ್ಬಂದಿಯವರ ಸಾಹಯದಿಂದ ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: