Police Bhavan Kalaburagi

Police Bhavan Kalaburagi

Monday, November 9, 2015

KALABURAGI DISTRICT REPORTED CRIMES

ಆತ್ಮ ಹತ್ಯೆ ಪ್ರಕರಣ :
ಜೇವರ್ಗಿ ಠಾಣೆ : ನನ್ನ ಹಿರಿಯ ಮಗನಾದ ಚೆನ್ನಪ್ಪ ತಂದೆ ರಾಯಪ್ಪ ಅಣಬಿ ಈತನು ಹೊಲ-ಮನೆ ಕಾರುಬಾರಿ ನೋಡಿಕೊಂಡು ಬಂದಿರುತ್ತಾನೆ. ಹೊಲದಲ್ಲಿ ಬಿತ್ತನೆ ಮಾಡಲು ಬೀಜ, ರಸಗೊಬ್ಬರ, ಮತ್ತು ಕ್ರಿಮಿನಾಶಕ ಔಷಧಿಗಳನ್ನು ಸಾಲ ಮಾಡಿ ಖರಿದಿ ಮಾಡಿಕೊಂಡು ಬಂದಿದ್ದು ಅಲ್ಲದೆ ಕಲಬುರಗಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ಒಕ್ಕಲುತನ ಕುರಿತು ಹೀಗೆ ಒಟ್ಟು 5 ಲಕ್ಷ ರೂ ಸಾಲ ಮಾಡಿದ್ದು ಇರುತ್ತದೆ. ಈ ವರ್ಷ ಹಾಗು ಹೋದ ವರ್ಷ ಸರಿಯಾಗಿ ಮಳೆ-ಬೆಳೆ ಆಗದೆ ಬೆಳೆ ಸರಿಯಾಗಿ ಬಾರದ ಸಾಲವನ್ನು ಹೇಗೆ ತಿರಿಸುವದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 09.11.2015 ರಂದು ಮುಂಜಾನೆ 09:00 ಗಂಟೆಗೆ ಮನೆಯಲ್ಲಿ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಅವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಗೆ ತರುವಾಗ ಮಾರ್ಗದ ಮಧ್ಯ ಗುಡುರ ಎಸ್.ಎ ಗ್ರಾಮದ ಹತ್ತಿರ ಮುಂಜಾನೆ 09:30 ಗಂಟೆಗೆ ಮೃತಟ್ಟಿರುತ್ತಾನೆ. ಅಂತಾ ಶ್ರೀಮತಿ ಮಾಹಾದೇವಿ ಗಂಡ ರಾಯಪ್ಪ ಅಣಬಿ ಸಾ: ನರಿಬೋಳ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಕೊಲೆ ಯತ್ನ ಪ್ರಕರಣ :
ರೇವೂರ ಠಾಣೆ :  ಶ್ರೀಮತಿ ಮಹಾದೇವಿ ಗಂಡ ಭೂತಾಳಿ ಹಿರೊಳ್ಳಿ ಸಾ:ರುದ್ದೆವಾಡಿ ತಾ:ಅಕ್ಕಲಕೋಟ ರವರು ದಿನಾಂಕ:08/11/2015 ರಂದು ರಾತ್ರಿ ತನ್ನ ಮಗಳು ಐಶ್ವರ್ಯಳೊಂದಿಗೆ ಬಹಿರ್ದೆಶೆಗೆ ಹೋಗಿ ಬರುತಿರುವಾಗ ತನ್ನ ಗಂಡ ಭೊತಾಳಿ ಕೈಯಲ್ಲಿ ,ಕಬ್ಬು ಕಡಿಯುವ ಕೊಯ್ತಾ ಹಿಡಿದುಕೊಂಡು ಬಂದು ತನ್ನ ಕೈತಲ್ಲಿದ ಕಬ್ಬು ಕಡಿಯುವ ಕೊಯ್ತಾದಿಂದ ತನ್ನ ಎಡ ಕುತ್ತಿಗೆಗೆ ಹೊಡೆಯುತ್ತಿದ್ದಾಗ ನಾನು ಕೊಯ್ತಾಗೆ ಬಲಕೈಯಿಂದ ಹಿಡಿದಿರುತ್ತೇನೆ ನಾನು ಕೊಯ್ತಾಗೆ ಕೈಯಿಂದ ಹಿಡಿಯದಿದ್ದರೆ,ಸದರಿ ಹೊಡೆತ ನನ್ನ ಕುತ್ತಿಗೆಗೆ ಬಿದ್ದು ನನ್ನ ಕೊಲೆಯಾಗುತಿತ್ತು ಕೊಯ್ತಾದ ಹೊಡೆತ ನನ್ನ ಬಲಕೈ ಬೆರಳುಗಳಿಗೆ ತಾಗಿ ಭಾರಿ ರಕ್ತ ಗಾಯವಾಗಿ ಕೆಳಗೆ ಬಿದ್ದಾಗ ಮತ್ತೆ ಬಲ ಭುಜದ ಹಿಂಭಾಗದಲ್ಲಿ ತಲೆಯ ಮೇಲೆ ಎರಡುಕಡೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ. ನಾನು ಚೀರಾಡುವದನ್ನು ಕೇಳಿ ಬಂದ ನನ್ನ ಅಣ್ಣನ ಮಗ ಸತೀಶನಿಗು ಅದೆ ಕೊಯ್ತಾದಿಂದ ಎಡಕೈ ಮೊಳಕೈ ಹಿಂಭಾಗದಲ್ಲಿ ಎರಡೇಟು ಮತ್ತು ಬಲಕೈ ಬೆರಳುಗಳಿಗೂ ಹೊಡೆದು ಭಾರಿ ರಕ್ತ ಗಾಯಗಳು ಪಡಿಸಿರುತ್ತಾನೆ,ಆಗ ನಮ್ಮ ಓಣಿಯ ವಿಜಯಕುಮಾರ ದೊಡ್ಡಮನಿ ನನ್ನ ಅಣ್ಣ ಶಂಕರ ದುಬಲೆ ನನ್ನ ತಂದೆ ನಾಗಪ್ಪ ತಾಯಿ ಅವ್ವಮ್ಮ ಹಾಗೂ ಹಣಮಂತ ದುಬಲೆ ಮತ್ತಿತರರು ಬಂದಾಗ ನಮಗೆ ಹೊಡೆಯುವುದನ್ನು ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು. ಮದುವೆಯಾದಾಗಿನಿಂದ ನನ್ನ ಶೀಲದ ಮೇಲೆ ಸಂಶಯ ವ್ಯಕ್ತ ಪಡಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರಕುಳ ಕೊಡುತ್ತ ನನ್ನ ಕೊಲೆ ಮಾಡಿ ಮತ್ತೊಂದು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ನನ್ನ ಕೊಲೆಗೈಯ್ಯಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ಜೇವರ್ಗಿ ಠಾಣೆ : ದಿನಾಂಕ 09.11.2015 ರಂದು 01:00 ಗಂಟೆಯಿಂದ 05:00 ಗಂಟೆಯ ಮಧ್ಯದ ಯಾರೋ ಕಳ್ಳರು ಚಿಗರಳ್ಳೀ ಕ್ರಾಸ್ ಹತ್ತಿರದ ರೇಣುಕಾ ಬಾರ್ & ರೆಸ್ಟೋರೆಂಟ್ ನ ರೂಮ್‌ ನಂ 202 ನೇದ್ದರ ಬಾಗಿಲ ಕೀಲಿ ತೆಗೆದು ಒಳಗೆ ಪ್ರವೇಶ ಮಾಡಿ ರೂಮಿನಲ್ಲಿ ಇಟ್ಟಿದ್ದ 3.70.000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: