ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ
14.12.2015 ರಂದು 01:೦0 ಗಂಟೆಯಿಂದ ೦2:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ಬಸವೇಶ್ವರ
ಕಾಲೋನಿಯಲ್ಲಿನ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಒಂದು
ಸ್ಯಾಮ್ಸಂಗ್ ಎಲ್.ಇ.ಡಿ ಟಿ.ವಿ ಮತ್ತು ಒಂದು ಡಿಟಿಎಚ್ ಬಾಕ್ಸ್ ಅಂ.ಕಿ 15.000/- ರೂ.
ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಶಿವಲಿಂಗಪ್ಪ ತಂದೆ ಕಲ್ಲಪ್ಪ
ಚೆಟ್ಟಿ ಸಾ|| ಬಸವೇಶ್ವರ ನಗರ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ರಮೇಶ ತಂದೆ ಭಿಮಣ್ಣಾ ನಡಗಟ್ಟಿ ಸಾ|| ಹಾಗರಗುಂಡಗಿ ಹಾ||ವ|| ಪ್ಲಾಟ ನಂ. 02 ಗೋದುತಾಯಿ ಕಾಲೋನಿ ಕಲಬುರಗಿ ಇವರು ತನ್ನ ಹಿರೋ
ಸ್ಟ್ಲೆಂಡರ್ ಪ್ಲಸ್ ಮೊಟರ್ ಸೈಕಲ್ ನಂ.
ಕೆಎ 32 ಇಹೆಚ್-6844 ನೇದ್ದು ಅ:ಕಿ:30000/- (ಚಾಸಿಸ್ ನಂ. MBLHA10AMEHM71612.
ಇಂಜಿನ್ ನಂ. HA10EJEHM13392) ಖರಿದಿಸಿರುತ್ತೆನೆ. ದಿನಾಲು ಸದರಿ ವಾಹನದ ಮೇಲೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ
ಬರುತ್ತಿದ್ದೆನು. ದಿನಾಂಕ:04/11/2015 ರಂದು ಬೆಳಗ್ಗೆ ನನ್ನ ಕಾಕಾನಾದ ಚಂದ್ರಕಾಂತ ನಡಗಟ್ಟಿ
ಇವರು ಬಂದು ನನಗೆ ನಗರದಲ್ಲಿ ಕೆಲಸವಿದೆ ಮೋಟರ್ ಸೈಕಲ್‌ನ್ನು ಬಿಟ್ಟು ಹೋಗಲು ಹೇಳಿದ್ದರಿಂದ
ನಾನು ಸದರಿ ಮೋಟರ್ ಸೈಕಲ್‌ನ್ನು ಮನೆಯ ಮುಂದೆ ನಿಲ್ಲಿಸಿ ಅದರ ಚಾವಿಯನ್ನು ಕೊಟ್ಟು ಕೆಲಸಕ್ಕೆ
ಹೋಗಿದ್ದು ದಿನಾಂಕ:04/11/2015 ರಂದೆ 12 ಪಿಎಮ್ ಸುಮಾರಿಗೆ ನಮ್ಮ ಕಾಕಾ ಚಂದ್ರಕಾಂತ ನನಗೆ
ಫೊನ್ ಮಾಡಿ ತಿಳಿಸಿದ್ದೆನಂದರೆ, ಮೋಟರ್ ಸೈಕಲ್ ಎಲ್ಲಿ ನಿಲ್ಲಿಸಿದ್ದಿ ಕಾಣುತಿಲ್ಲ ಅಂತ ಹೇಳಿದ್ದರಿಂದ ನಾನು ಮನೆಯ ಮುಂದೆ
ನಿಲ್ಲಿಸಿ ಬಂದಿರುತ್ತೆನೆ ಅಂತ ಹೇಳಿದ್ದು, ಸದರಿಯವರು ಮೊಟರ್ ಸೈಕಲ್ ಕಾಣುತ್ತಿಲ್ಲ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ ನಾನು ಮನೆಗೆ ಬಂದು ನೋಡಲಾಗಿ ವಾಹನ ಇರಲಿಲ್ಲ.
ನಂತರ ನಾನು ಮತ್ತು ನಮ್ಮ ಕಾಕಾ ಅದೇ ದಿವಸ ಪೊಲಿಸ್ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದು ಇರುತ್ತದೆ.
ನಂತರ ಇಲ್ಲಿಯವರೆಗೆ ಎಲ್ಲಾ ಕಡೆಯಲ್ಲಿ ಹುಡಕಾಡಿ ನೋಡಲಾಗಿ ಎಲ್ಲಿಯು ಸಿಕ್ಕಿರುವದಿಲ್ಲ. ಕಾರಣ
ಕಳುವಾದ ನನ್ನ ಮೊಟರ್ ಸೈಕಲ್ ನಂ ಕೆಎ 32 ಇಹೆಚ್-6844 ಅ:ಕಿ:30,000/-
ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ
ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 12/12/2015 ರಂದು ನಾನು ಕಲಬುರಗಿಯಲ್ಲಿದ್ದಾಗ ನನ್ನ ತಾಯಿಯಾದ ಮುಸರತ್ ಜಹಾನ ಇವರು ನನಗೆ ಪೋನ ಮಾಡಿ
ತಿಳಿಸಿದೇನೆಂದರೆ ನಿನ್ನ ಹೆಂಡತಿ ಆಯಿಶಾ ಇವಳು ಮುಂಜಾನೆ 10-30 ಗಂಟೆಗೆ ಸಣ್ಣ ಮಗನಾದ ಮಹಮ್ಮದ ಖುರ್ಖಾನ ಇತನಿಗೆ ಎತ್ತಿಕೊಂಡು ಮನೆಯಿಂದ ಹೊರಗಡೆ ಹೋದವಳು
ಇಲ್ಲಿಯವರೆಗೂ ವಾಪಸ ಮನೆಗೆ ಬಮದಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ
ಕಲಬುರಗಿಯ ರೈಲ್ವೆ ಸ್ಟೇಷನ , ಬಸ ನಿಲ್ದಾಣ , ಬಂದೆನವಾಜ ದರ್ಗಾ ಕಡೆ ಮತ್ತು ಇತರೆ ಕಡೆಗಳಲ್ಲಿ ರಾತ್ರಿ ವರೆಗು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಮತ್ತು
ಶಹಾಬಾದದಲ್ಲಿ ನನ್ನ ತಂದೆ ಮಹ್ಮದ ಅನ್ವರ ಪಾಶಾ , ನನ್ನ ತಾಯಿ ನುಸರತ ಜಹಾನ ಮತ್ತು ನನ್ನ ತಮ್ಮನಾದ ಮಹ್ಮದ ಅಕ್ಬರ ಎಲ್ಲಾರೂ ಕೂಡಿ ಶಹಾಬಾದದ ರೈಲ್ವೆ ಸ್ಟೇಷನ , ಬಸ್ ನಿಲ್ದಾಣದ ಮಾರ್ಕೆಟ ಏರಿಯಾ, ಇತರೆ ಕಡೆಗಳಲ್ಲಿ ಮತ್ತು ಇಲ್ಲಿಯವರೆಗೆ ಇಲ್ಲಾ ಬೀಗರು
ನೆಂಟರ ಕಡೆಗಳಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ . ನನ್ನ ಹೆಂಡತಿ ಮತ್ತು ನನ್ನ ಮಗ ಮಹ್ಮದ
ಖುರ್ಖಾನ ಇಬ್ಬರು ನಿನ್ನೆಯಿಂದ ಇಲ್ಲಿವರೆಗೆ ಬಂದಿರುವುದಿಲ್ಲಾ ಅಂತಾ ಶ್ರೀ ಮಹ್ಮದ ಅಮ್ಜದ್ ತಂದೆ ಅನ್ವರ ಪಾಶಾ ಸಾ:
ವೀರಸಾವರಕರ ಮಾರ್ಗ ಸ್ಟೇಷನ ರೋಡ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment