Police Bhavan Kalaburagi

Police Bhavan Kalaburagi

Wednesday, December 2, 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 01/12/2015 ರಂದು ಬೆಳಿಗ್ಗೆ 10:30 ಗಂಟೆ ನಾನು ಶ್ರೀ ಮಹೇಶ ತಂದೆ ಶರಣಬಸಪ್ಪಾ ಹಡಪದ ಸಾ; ಕವಲಗಾ ತಾ: ಆಳಂದ ಮತ್ತು ಅವರ ಕಾಕನಾದ ಮಲ್ಲಿನಾಥ ಹಡಪದ ಇಬ್ಬರೂ ಮೋಟರ್ ಸೈಕಲ ನಂಬರ್  KA-34 S-684  ನೇದ್ದರ ಮೇಲೆ ಮದುವೆ ಲಗ್ನ ಪತ್ರ ಕೊಡಲು ಕೊಡಲ ಹಂಗರಗಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮೋಟರ್ ಸೈಕಲ ಚಲಾಯಿಸುತ್ತಿದ್ದು ಕೊಡಲ ಹಂಗರಗಾದಿಂದ ಆಳಂದ ಮುಖ್ಯ ರಸ್ತೆಯ ಮೂಲಕ ಬರುವಾಗ ರಾತ್ರಿ 08:30 ಗಂಟೆ ಸುಮಾರಿಗೆ ಸಂಗೋಳಗಿ ಹನುಮಾನ ಮಂದಿರ ಸಮೀಪ ಒಬ್ಬ ಟಾಟಾ ಸುಮೋ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಂದು ಓವರಟೇಕ್ ಮಾಡುವಾಗ ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ, ಎಡಗೈ ರಟ್ಟೆಗೆ ತರಚಿದ ಗಾಯವಾಗಿದ್ದು ನನ್ನ ಕಾಕನಾದ ಮಲ್ಲಿನಾಥನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. ನಮಗೆ ಡಿಕ್ಕಿಪಡಿಸಿದ ಟಾಟಾ ಸುಮೋ ನಂಬರ್ ನೋಡಲಾಗಿ MH-43 A-4952 ಇದ್ದು ಸದರಿ ಟಾಟಾ ಸುಮೋ ಚಾಲಕನು ಸ್ಥಳದಲ್ಲಿ ಜನ ಸೇರುವುದನ್ನು ನೋಡಿ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ಸದರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ:
ರೇವೂರ ಪೊಲಿಸ್ ಠಾಣೆ: ದಿನಾಂಕ:01-12-2015 ರಂದು ಶ್ರೀಮತಿ ಸುಮೀತ್ರಾ ಗಂಡ ಶರಣಬಸು ಕೋಳಕೂರ ಸಾ:ಕೋಗನೂರ ಈವರು ಠಾಣೆಗೆ ಹಾಜರಾಗಿ ತಾನು ತನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ನನ್ನ ಗಂಡನಿಗೆ 4 ಎಕರೆ  ಜಮೀನು ಇದ್ದು.  ವ್ಯವಸಾಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದು ಕಳೆದ ವರ್ಷ ಬ್ಯಾಂಕಿನ ಸಾಲ ಮುಟ್ಟಿಸುವ ಸಲುವಾಗಿ ನನ್ನ ಗಂಡ  ಕಳೆದ  ವರ್ಷ  ತನ್ನ4 ಎಕರೆ ಜಮೀನನ್ನು   ಮಾರಿ   ಸಾಲ  ತಿರಿಸಿದ್ದು. ಸಂಬಂದಿಕರಲ್ಲಿ  ಇನ್ನು 1  ಲಕ್ಷ್ಯ ಬಡ್ಡಿ ರಹಿತ ಸಾಲ ತೆಗೆದುಕೊಂಡಿದ್ದು ಮರಳಿ ಹಣ  ಕೋಡುವುದು ಬಾಕಿ ಇತ್ತು .ಅಲ್ಲದೆ  ಗ್ರಾಮದರವರಲ್ಲಿ 1 ಲಕ್ಷ್ಯ ರೂಪಾಯಿ ಹಣ ಕೈಗಡ ಮಾಡಿಕೊಂಡು ನಮ್ಮ ಗ್ರಾಮದ  ಮಹಾಂತೇಶ ಹೀರೇಮಠ  ರವರವ 5 ಎಕರೆ ಜಮೀನನ್ನು  ಮೂರು ವರ್ಷಕ್ಕಾಗಿ 1 ಲಕ್ಷ್ಯ ಕೊಟ್ಟು ಪಾಲಿಗೆ ಹಾಕಿಕೊಂಡಿರುತ್ತಾರೆ. ಅಲ್ಲದೆ ಈ ವರ್ಷ  ಕೃಪಿಗಾಗಿ  ಬೀಜ  ಗೋಬ್ಬರಕ್ಕಾಗಿ  ಮನೆಯಲ್ಲಿದ್ದ  ಬಂಗಾರ ಮಾರಿ 25  ಸಾವಿರ  ಖರ್ಚು ಮಾಡಿರುತ್ತಾನೆ. ಈ ವರ್ಷ ಸರಿಯಾಗಿ ಮಳೆ ಆಗದ ಕಾರಣ ಹೋಲದಲ್ಲಿ ಹಾಕಿದ ಕಬ್ಬು, ತೋಗರಿ ಸರಿಯಾಗಿ ಬೆಳೆಯದೆ ಒಣಗಿ  ಹೋಗಿದ್ದರಿಂದ ನನ್ನ ಗಂಡನು ತಾನು ಮಾಡಿದ ಕೈಗಡ ಸಾಲ ಮರುಪಾವತಿಸುವುದು ಹೇಗೆ ಎಂದು ಚಿಂತೆಗಿಡಾಗಿದ್ದು. ಅದಕ್ಕೆ ನಾನು ನನ್ನ ಗಂಡನಿಗೆ ಚಿಂತೆಮಾಡಬೇಡ ಮುಂದಿನ ವರ್ಷ ಮಳೆ ಚನ್ನಾಗಿ ಆಗಬಹುದು ಆಗ ಸಾಲ ತಿರಿಸಿದರೆ ಆಯಿತು ಅಂತಾ ದೈರ್ಯ ತುಂಬುತ್ತಾ  ಬಂದಿದ್ದು. ದಿನಾಂಕ:01/12/2015 ರಂದು ಮದ್ಯಾನ್ಹ 1 ಗಂಟೆ ಸುಮಾರಿಗೆ ಅಣ್ಣನ ಹೋಲಕ್ಕೆ ಹೋಗಿಬರುತ್ತೇನೆ ಅಂತಾ  ಹೇಳಿ  ಹೋಗಿ ಹೋಲದಲ್ಲಿ ಗುಡಿಸಲ ಪಕ್ಕದಲ್ಲಿರುವ   ಬೇವಿನ ಮರಕ್ಕೆ  ಹಗ್ಗದಿಂದ  ನೇಣು  ಹಾಕಿಕೊಂಡು  ಮೃತಪಟ್ಟಿದ್ದು. ನನ್ನ ಗಂಡನು ತಾನು ಮಾಡಿದ  ಕೈಗಡ ಸಾಲ ಮರು ಪಾವತಿಸುವುದು ಹೇಗೆ ಎಂದು ಚಿಂತೆ ಮಾಡಿ ಆತಂಕಕ್ಕೊಳಗಾಗಿ ಮನನೊಂದು  ಕೋಗನೂರ  ಸಿಮಾಂತರದಲ್ಲಿರುವ ಹೋಲದಲ್ಲಿ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೆವೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ

No comments: