ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ:29-12-2015 ರಂದು ಫಿರ್ಯಾಧಿ ರಾಜಪ್ಪ ತಂದೆ ಖತಲಪ್ಪ ಸಾ:ಭೂಂಯಾರ ಇವರು ತಮ್ಮ ಖಾಸಗಿ ಕೆಲಸ ಸಲುವಾಗಿ ತಮ್ಮ ಹಿರೊಹೊಂಡಾ ಮೋಟರ ಸೈಕಲ ನಂ- ಕೆ-33
ಕೆ 5628 ನೇದ್ದರ ಮೇಲೆ ಕಲ್ಮೂಡ ಗ್ರಾಮಕ್ಕೆ ಹೋಗಿ ವಾಪಸ್ಸ ಭೂಯಾಂರ ಗ್ರಾಮಕ್ಕೆ ಹೋಗುವ ಕುರಿತು ಬರುವಾಗ ಕಲ್ಮೂಡ ಕಮಲಾಪೂರ ರೋಡಿನ ತಿರುವಿನಲ್ಲಿ ಚಂದ್ರಶ್ಯಾ ಉಪ್ಪಿನ ಇವರ ಹೋಲದ ಹತ್ತೀರ ರೋಡಿನ ಎಡಭಾಗಕ್ಕೆ ತನ್ನ ಹೆಂಡತಿಯೊಂದಿಗೆ ಫೊನನಲ್ಲಿ ಮಾತನಾಡುವ ಸಲುವಾಗಿ ತಮ್ಮ ಮೋಟರ ಸೈಕಲನ್ನು ನಿಲ್ಲಿಸಿ ಕೆಳಗೆ ಇಳಿಯುವಾಗ ಎದುರಿನಿಂದ ಬರುತ್ತಿದ್ದ ಮೋಟರ ಸೈಕಲನಂ-ಎಮ.ಹೆಚ-02
ಡಿಟಿ-3295 ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬಂದು ರಾಜಪ್ಪ ಇವರ ಮೋಟರ ಸೈಕಲಕ್ಕೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ರಾಜಪ್ಪ ಇವರಿಗೆ ಭಾರಿ ಗುಪ್ತಗಾಯಗಳಾಗಿ ಬಲ ಕಾಲಿಗೆ ರಕ್ತಗಾಯವಾಗಿ ಗುಪ್ತಗಾಯಗಳಾಗಿದ್ದು ಸದರಿಯವನ ವಿರುದ್ದ ಕಾನೂನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರನ ಬಂಧನ:
ಅಶೋಕ ನಗರ ಠಾಣೆ :
ದಿನಾಂಕ
30/12/2015 ರಂದು ಶ್ರೀ. ಮಹಾದೇವಪ್ಪಾ ದಿಡ್ಡಿಮನಿ ಪಿ.ಎಸ್.ಐ ಸಿ.ಐ.ಬಿ ಕಾಲೋನಿ ಮಂಜುನಾಥ ಕಿರಾಣಿಸ್ಟೋರ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬುಕ್ಕಿಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವ ಮಾಹಿತಿ ಮೇರೆಗೆ ಇಬ್ಬರು ಪಂಚರಾದ
1) ಶ್ರೀ ಶಂಕರ ಸಾ: ಶಕ್ತಿನಗರ.
2) ಶ್ರೀ ದತ್ತು ಪಾಟೀಲ ಸಾ:
ಬಿದ್ದಾಪೂರ ಕಾಲೋನಿ ಹಾಗೂ ಸಿಬ್ಬಂದಿ ಅಶೋಕ ಪಿಸಿ-1045 ಮತ್ತು ಸಂತೋಷ ಪಿಸಿ-1026
ರವರನ್ನು ಕರೆದುಕೊಂಡು ಸಿಐಬಿ ಕಾಲೋನಿಯ ಮಂಜುನಾಥ ಕಿರಾಣಿ ಸ್ಟೋರದಿಂದ ಸ್ವಲ್ಪ ದೂರದಲ್ಲಿ ಒಬ್ಬನು ಮಟಕಾ ಬುಕ್ಕಿ 1 ರೂ ಗೆ
80 ರೂ ಸಿಗುತ್ತದೆ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಅಜಯ ತಂದೆ ಚಂದ್ರಕಾಂತ ಬೆಸೂರ ಸಾ: ಸಿ.ಐ.ಬಿ ಕಾಲೋನಿ ಎಂದು ತಿಳಿಸಿದ್ದು ಚಕ್ ಮಾಡಿದಾಗ ಆತನಲ್ಲಿ ಒಂದು ಕಾರ್ಬನ ಮೊಬೈಲ ಅ:ಕಿ
500/- ರೂ. , ಎರಡು ಮಟಕಾ ಚೀಟಿಗಳು , )ನಗದು ಹಣ 1100/- ರೂ , ಮತ್ತು ಒಂದು ಬಾಲ ಪೆನ್ನು ದೊರೆತಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment