¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-01-2016
ಬಸವಕಲ್ಯಾಣ
ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 15/2016, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ
ಕಾಯ್ದೆ :-
ಫಿರ್ಯಾದಿ ಕಮಳಾಬಾಯಿ
ಗಂಡ ಪಾಂಡುರಂಗ ವಾಡೆಕರ ವಯ: 43 ವರ್ಷ, ಜಾತಿ: ಬೇಡರ, ಸಾ: ಚಂಡಕಾಪುರ ರವರ ತಂದೆಯವರಾದ ರಾಮಲಿಂಗ
ತಂದೆ ವೆಂಕಪ್ಪಾ ಜಮಾದಾರ ವಯ: 65 ವರ್ಷ, ಜಾತಿ: ಬೇಡರ, ಸಾ: ಗುಂಡೂರ, ಸದ್ಯ: ಚಂಡಕಾಪುರ ರವರು ಸುಮಾರು 20 ವರ್ಷದಿಂದ ಫಿರ್ಯಾದಿಯವರ
ಗ್ರಾಮದಲ್ಲಿ ಫಿರ್ಯಾದಿಯ ಮನೆಯಲ್ಲಿಯೆ ಇರುತ್ತಾರೆ, ಹಿಗಿರುವಲ್ಲಿ ದಿನಾಂಕ 27-01-2016 ರಂದು ಫಿರ್ಯಾದಿಯ
ತಂದೆ ಹೊಲಕ್ಕೆ ಹೋಸದಾಗಿ ನಿರ್ಮಿಸುತ್ತಿರುವ ರಾ.ಹೆ ನಂ. 09 ರ ಮೇಲೆ ಇರುವ ರೊಡಿನ ಮೇಲಿಂದ
ಹೊಲಕ್ಕೆ ಹೊಗುತ್ತಿರುವಾಗ ಲಾರಿ ನಂ. ಕೆಎ-39/5421 ನೇದರ ಚಾಲಕನಾದ ಆರೋಪಿ ರಾಮಕೃಷ್ಣಾ ತಂದೆ
ಯಶವಂತರಾವ ಜಾಧವ ವಯ: 38 ವರ್ಷ, ಜಾತಿ: ಮರಾಠಾ, ಸಾ: ಚಂಡಕಾಪೂರ ಇತನು ತನ್ನ ಲಾರಿಯನ್ನು ಒಮ್ಮಲೇ ರಿವರ್ಸ ತೆಗೆದುಕೊಂಡಿದ್ದರಿಂದ ಹಿಂದೆ
ಹೋಗುತ್ತಿರುವ ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿರುತ್ತಾನೆ, ಸದಿರ ಡಿಕ್ಕಿಯಿಂದ ಫಿರ್ಯಾದಿಯ ತಂದೆಯ
ಬಲಗಾಲ ತೊಡೆಯಿಂದ ಪಾದದವರೆಗೆ ಕಾಲು ಪೂರ್ತಿ ಮುರಿದು ಭಾರಿ ರಕ್ತಗಾಯವಾಗಿ ಮಾಂಸಖಂಡ
ಹೊರಬಂದಿರುತ್ತದೆ ಹಾಗೂ ಕೆಳಗಡೆಯ ಹೊಟ್ಟೆ ಹರಿದು ಮಾಂಸಖಂಡ ಹೊರಬಂದು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,
ಸದರಿ ಆರೋಪಿಯು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment