Police Bhavan Kalaburagi

Police Bhavan Kalaburagi

Saturday, January 9, 2016

KALABURAGI DIST REPORTED CRIMES

ಹಲ್ಲೆ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 08/01/2016 ರಂದು ಶ್ರೀ ಶ್ರೀನಿವಾಸ ತಂದೆ ಶ್ರಾವಣಕುಮಾರ ಮು: ನಿರಗುಡಿ ಇವರು ಠಾಣೆಗೆ ಹಾಜರಾಗಿ ತಾನು ದಿನಾಂಕ: 08/01/2016 ರಂದು ಸಾಯಂಕಾಲ 05:00 ಗಂಟೆಗೆ ನಮ್ಮೂರಿಗೆ ಹೋಗಿ-ಬರುವ ಬಸ್ ನಂಬರ್ ಕೆ.ಎ:32 ಎಫ್-1457 ರಲ್ಲಿ ನಿರ್ವಾಹಕನ ಹಿಂದಿನ ಶೀಟಿನಲ್ಲಿ ಕುಳಿತು ನಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಬಸ್ಸು ಮಟಕಿ ಗ್ರಾಮದ ಮೊದಲನೆ ಬಸ್ ನಿಲ್ದಾಣದಿಂದ  ಮಟಕಿ ಗ್ರಾಮದ ಮಡ್ಡಿ ಹತ್ತಿರ ಇರುವ ಬಸ್ ನಿಲ್ದಾಣ ಸಮೀಪಕ್ಕೆ ಹೋಗುತ್ತಿರುವಾಗ ಕೇಲವು ಹುಡುಗರು ಬಸ್ಸಿಗೆ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂಧ ನನಗೆ ಬಯ್ಯುತ್ತಾ ಮಗನೇ ಹೊರಗೆ ಬಾ ಎನ್ನುತ್ತಾ ಮಟಕಿ ಗ್ರಾಮದ ಸುನೀಲ ಗುತ್ತೆದಾರ, ಶರಣಬಸಪ್ಪಾ ಬಿರಾದಾರ, ವಿನೋದ ಪೂಜಾರಿ ಇವರು ಬಸ್ಸಿನಲ್ಲಿ ಬಂದು ನಮ್ಮ ಸಂಗಡ ವಿನಾಃಕಾರಣ ತಕರಾರು ಮಾಡುತ್ತಾ ಬೈದು ನನ್ನ ಅಂಗಿ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸುವಾಗ ಸದರಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಇವರು ಅವನಿಗೆ ಏಕೆ ಬೈಯುತ್ತಿರಿ ಹೊಡೆಯುತ್ತಿರಿ ಎಂದು ಕೇಳಿದ್ದಕ್ಕೆ ಅವಿಗೊ ಸಹ ಅವಾಚ್ಯ ಶಬ್ದಗಳಿಂದ ಬೈದು ಬಸ್ಸಿನ ಡ್ರೈವರ್ ಗ್ಲಾಸಿಗೆ ಕೈಯಿಂದ ಹೊಡೆದು ಹಾನಿ ಮಾಡಿ ನನಗೆ ಕೆಳಗೆ ಎಳೆದು ಆಕಾಶ ತಂದೆ ಬಾಬುಲಾಲ ಲಂಗಡೆ ಇತನು ತನ್ನ ಪ್ಯಾಂಟಿನ ಬೇಲ್ಟ್ ತಗೆದು ನನಗೆ ಹೊಡೆದು  ರಕ್ತಗಾಯಗೊಳಿಸಿರುತ್ತಾನೆ. ಪ್ರಶಾಂತ, ಶಾಂತೇಶ ಸಾಳುಂಕೆ ಹಾಗೂ ಮಾರುತಿ ಧಡಕೆ ಇತರರು ಕೂಡಿ ನನಗೆ ನೆಲಕ್ಕೆ ಹಾಕಿ ಜಾಡಿಸಿ ಒದ್ದು  ಹಾಗೂ ಕೈಯಿಂದ ಹೊಡೆಯುವಾಗ ಬಸ್ ಚಾಲಕ ಹಾಗೂ ನಿರ್ವಾಹಕ ನಮ್ಮ ಚಿಕ್ಕಪ್ಪನ ಮಗ ಪ್ರಕಾಶ, ಮುಖೇಶ ತಂದೆ ಭೀಮಾ ಮಟಕಿ ಹಾಗೂ ಇತರರು ಬಂದು ಜಗಳ ಬಿಡಿಸಿರುತ್ತಾರೆ ಆಗ ಸಹ ನನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ನರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಳಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 08/01/2016 ರಂದು ಶ್ರೀ ಅಂಬರೀಶ ತಂದೆ ಶಿವಪುತ್ರ ಹಳಿಮನಿ ಸಾ||ಅಫಜಲಪೂರ ಇವರು ಠಾಣೆಗೆ ಹಾಜರಾಗಿ ದಿನಾಂಕ 06-12-2015 ರಂದು 2;00 ಪಿ.ಎಂ ಸುಮಾರಿಗೆ ತಾನು ತಮ್ಮ ತಂದೆ ಶಿವಪುತ್ರ ಇಬ್ಬರು ನಮ್ಮ ಮೋಟಾರ ಸೈಕಲ್ ಮೇಲೆ ದುದನಿ ರೋಡಿಗೆ ಇರುವ ಬಸಪ್ಪ ಅವಟಿ ರವರ ಹೊಲಕ್ಕೆ ಹೋಗಿ ಅಲ್ಲಿಯೇ ರೋಡಿನ ಪಕ್ಕ ನಮ್ಮ ಮೋಟಾರ ಸೈಕಲ್ ಕೆಎ-32 ಇಹೆಚ್-2320 ನೇದ್ದು ನಿಲ್ಲಿಸಿ ನಾನು ನಮ್ಮ ತಂದೆಯವರು  ಬಸಪ್ಪ ಅವಟಿ ರವರ ಹೊಲಕ್ಕೆ ಹೋಗಿ ಕಬ್ಬಿನ ಟೋಲಿ ಜನರೊಂದಿಗೆ ಮಾತನಾಡಿ  ನಂತರ 3.30 ಪಿಎಮ್ ಸುಮಾರಿಗೆ ಮರಳಿ ಬಂದಾಗ ನನ್ನ ಮೋಟರ ಸೈಕಲ್ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ನನ್ನ ಮೋಟರ ಸೈಕಲ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ:ದಿನಾಂಕ 08.01.2016 ರಂದು ಶ್ರೀ ಮಲ್ಲಪ್ಪ ತಂದೆ ಸಾಯಬಣ್ಣ ತಳವಾರ ಸಾ|| ಜೈನಾಪುರ ಠಾಣೆಗೆ ಹಾಜರಾಗಿ ದಿನಾಂಕ 17.11.2015 ರಂದು ಸಾಯಂಕಾಲ 07:00 ಗಂಟೆಯ ಸುಮಾರಿಗೆ ನನ್ನ ತಮ್ಮ ನಾಗಪ್ಪ  ಈತನು ಕಟ್ಟಿ ಸಂಗಾವಿಗೆ ಹೋಗು ಕುರಿತು ಆಟೋ ನಂ ಕೆ.ಎ32ಸಿ4316 ನೇದ್ದನ್ನು ಚಲಾಯಿಸಿಕೊಂಡು ಗಡ್ಡಿ ಫೂಲ್ ಹತ್ತಿರ ಜೇವರಗಿ ಕಲಬುರಗಿ ಮೇನ್ ರೋಡ ಮೇಲೆ ಹೋಗುತ್ತಿದ್ದಾಗ ಅದೇ ವೇಳೇಗೆ ಹಿಂದಿನಿಂದ ಅಂದರೆ ಜೇವರಗಿ ಕಡೆಯಿಂದ ಒಂದು ಅಪರೀಚಿತ ಕ್ರೂಜರ್ ಜೀಪ್‌ ನ ಚಾಲಕನ ತನ್ನ ಜೀಪ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿಕೊಂಡು ಬಂದು ಹಿಂದಿನಿಂದ ಆಟೋ ಗೆ ಡಿಕ್ಕಿ ಪಡಿಸಿ ನನ್ನ ತಮ್ಮನಿಗೆ ಭಾರಿ ಗಾಯಗೊಳಿಸಿ ತನ್ನ ಕ್ರೂಜರ್ ಜೀಪ್‌ ನೊಂದಿಗೆ ಓಡಿ ಹೋಗಿದ್ದು ಆಫಘಾತನದ ನಂತರ ಗಾಯಾಳು ನನ್ನ ತಮ್ಮ ನಾಗಪ್ಪ ನಿಗೆ ಚಿಕಿತ್ಸೆ ಕೊಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಾರಣ ಸದರಿ ಜೀಪ್‌ ಮತ್ತು ಚಾಲಕನನ್ನು ಪತ್ತೆ ಹಚ್ಚಿ ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ :  

ಕಮಲಾಪೂರ ಪೊಲೀಸ  ಠಾಣೆ : ದಿನಾಂಕ 08/01/2016 ರಂದು ಶ್ರೀ ಅರ್ಜುನ  ತಂದೆ ಭೀರಪ್ಪ ನಾಗಣ್ಣೊರ ಸಾ: ಮೊಳಕೇರಾ ತಾ: ಹುಮನಾಬಾದ ಜಿ: ಬೀದರ ಇವರು ತನ್ನ ಮಗಳಾದ ರಂಜಿತಾಳಿಗೆ ಈಗ ಸುಮಾರು 4 ವರ್ಷಗಳ ಹಿಂದೆ ಭೊಯ್ಯಾರ ಗ್ರಾಮದ ಕುಪ್ಪಣ್ಣ ಕುನ್ನೂರ ಇತನೊಂದಿಗೆ ಮದುವೆ ಮಾಡುವೆ ಮಾಡಿದ್ದು.  ಮದುವೆ ನಂತರ ನನ್ನ ಅಳಿಯ ಶರಣಕುಮಾರ ಅವನ ತಾಯಿ ದ್ರೌಪತಿ ಅವನ ತಂಗಿಯಾದ ಹರುಶಾ ಎಲ್ಲರು ನನ್ನ ಮಗಳಿಗೆ ನೀನು ಸರಿಯಿಲ್ಲ ನಮಗೆ ಒಪ್ಪಿಗೆ ಇರುವದಿಲ್ಲ ನೀನಗೆ ಬಿಟ್ಟು ಬೇರೆ ಮದುವೆ ಮಾಡುತ್ತೇವೆ ಅಂತ ಪದೆ ಪದೆ ನನ್ನ ಮಗಳ ಸಂಗಡ ಜಗಳ ಮಾಡಿ ಅವಳಿಗೆ ಕಿರಿ ಕಿರಿ ಕೊಡುತ್ತಿದ್ದು ಈ ಬಗ್ಗೆ ನಮ್ಮ ಗ್ರಾಮದ ಕೆಲವು ಜನರನ್ನು ಬೊಯ್ಯಾರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಪಂಚಾಯತಿ ಮಾಡಿ ನನ್ನ ಅಳಿಯನಿಗೆ ಮತ್ತು ಅವರ ಮನೆಯವರೆಲ್ಲರಿಗೆ ತಿಳಿ ಹೇಳಿ ನನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ ಬಂದಿದ್ದರೊ ಸಹ ನನ್ನ ಅಳಿಯ ಅವನ ತಾಯಿ, ಅವನ ತಂಗಿ ಕೂಡಕೊಂಡು ನನ್ನ ಮಗಳ ಸಂಗಡ ಜಗಳ ಮಾಡಿ ಅವಳಿಗೆ ತೊಂದರೆ ಕೊಡುತ್ತಾ ಬಂದಿದ್ದು ಈ ಮಧ್ಯ ನನ್ನ ಮಗಳಿಗೆ ಸುಚಿತ್ರಾ ಅಂತ 3 ವರ್ಷದ ಮಗಳು ಕುಪ್ಪಣ್ಣ ಅಂತ 5 ತಿಂಗಳ ಗಂಡು ಮಗು ಇದ್ದು. ನನ್ನ ಮಗಳಿಗೆ ಮಕ್ಕಳಾದರೂ ಸಹ ನನ್ನ ಅಳಿಯ ಅವನ ತಾಯಿ ಅವನ ತಂಗಿ ನನ್ನ ಮಗಳಿಗೆ ತೊಂದರೆ ನೀಡುವುದನ್ನು ಅವರು ಕೂಡುವ ತೊಂದರೆ ತಾದೆ ನನ್ನ ಮಗಳು ತನ್ನ ಮಕ್ಕಳನ್ನು ಕರೆದುಕೊಂಡು 8 ದಿವಸಗಳ ಹಿಂದೆ ನಮ್ಮ ಗ್ರಾಮಕ್ಕೆ ಬಂದು ತನಗೆ ತನ್ನ ಗಂಡ, ಅತ್ತೆ, ನಾದಿನಿ, ಇವರು  ಪದೆ ಪದೆ ತೊಂದರೆ ಕೊಟ್ಟು ನನಗೆ ಹೊಡೆಬಡೆ ಮಾಡಿ ನೀನು ನಿನ್ನ ತವರು ಮನೆಗೆ ಹೋಗು ಬೇರೆ ಮದುವೆ ಮಾಡುತ್ತೇವೆ ಅಂತ ಜಗಳ ಮಾಡಿ ಳುಹಿಸಿರುತ್ತಾರೆ ಅಂತ ನನ್ನ ಮಗಳು ನನಗೆ ತಿಳಿಸಿದ್ದು. ದಿನಾಂಕ 06.1.2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನನ್ನ ಅಳಿಯ ಶರಣಕುಮಾರನು ನಮ್ಮ ಮನೆಗೆ ಬಂದು ನನ್ನ ಮಗಳಾದ ರಂಜಿತಾಳಿಗೆ ಬೊಯ್ಯಾರಕ್ಕೆ ಹೋಗೊಣ ನಡೆ ಅಂತ ಹೇಳಿ ನನ್ನ ಕರೆದುಕೊಂಡು ಹೋಗಿದ್ದು. ನಿನ್ನೆ ದಿನಾಂಕ 07.01.2016 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನನ್ನ ಮಗಳಾದ ರಂಜಿತಾಳು ನನಗೆ ಪೋನ ಮಾಡಿ ತನ್ನ ಗಂಡ, ಅತ್ತೆ, ನಾದಿನಿ ಇವರು ನನಗೆ ಬಹಳ ತೊಂದರೆ ಕೊಟ್ಟು ಹೊಡೆಬಡೆ ಮಾಡುತ್ತಿದ್ದಾರೆ ಅಂತ ತಿಳಿಸಿದಾಗ ನಾನು ಅವಳಿಗೆ ನಾಳೆ ಬಂದು ವಿಚಾರಿಸುತ್ತೇನೆ ಅಂತ ಹೇಳಿ ಸಮಾಧಾನ ಪಡಿಸಿದ್ದು. ನಂತರ ದಿನಾಂಕ 08.01.2016 ರಂದು ಬೆಳ್ಳಿಗ್ಗೆ 5 ಗಂಟೆಯ ಸುಮಾರಿಗೆ ನಮ್ಮ ಸಂಬಂದಿಕರಾದ ಕಮಲಾಕರ ಕುನ್ನೂರ ಇವರು ಪೋನ ಮಾಡಿ ರಂಜಿತಾಳು ವಿಷ ಸೇವನೆ ಮಾಡಿದ್ದು ಅವಳಿಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಲು ನಾನು ಗಾಬರಿಗೊಂಡು ಬಂದು ನೋಡಲು ನನ್ನ ಮಗಳು ಉಪಚಾರ ಪಡೆಯುತ್ತಿದ್ದು ನನ್ನ ಮಗಳು ಮಾತಾಡುವ ಸ್ಥಿತಿಯಲ್ಲಿ ಇರುವದಿಲ್ಲ. ನನ್ನ ಮಗಳಿಗೆ ತೊಂದರೆ ಕೊಟ್ಟು ಜಗಳ ಮಾಡಿ ಹೊಡಬಡೆ ಮಾಡಿ ಹಿಂಸೆ ಕೊಟ್ಟು ಅವಳು ವಿಷ ತೆಗೆದುಕೊಳ್ಳಲು ಕಾರಣರಾದ ಅವಳ ಗಂಡ ಅತ್ತೆ ಮತ್ತು ನಾದಿನಿ ವಿರುಧ್ದ ಕಾನೂನು ಕ್ರಮ  ಕೈಕೊಳ್ಳಬೇಕು ಅಂತ ಕೊಟ್ಟು ದೂರಿನ ಸಾರಾಂಶ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: