ಅಪಘಾತ ಪ್ರಕರಣ :
ವಾಡಿ ಠಾಣೆ : ದಿನಾಂಕ
26-12-2015 ರಂದು ಗಾಯಾಳು ಛತ್ರು @ ಪಪ್ಪು ತಂದೆ ವಿಠಲ ರಾಠೋಡ ಈತನು ವಾಡಿ ಪಟ್ಟಣದ ತನ್ನ
ದೊಡ್ಡಮ್ಮ ಇವರ ಮನೆಯಿಂದ ಅವರ ಸಂಬಂದಿಯ ಮೋಟರ್ ಸೈಕಲ ನಂ ಕೆಎ-32 ಡಬ್ಲ್ಯೂ -7470 ನೇದ್ದರ ಮೇಲೆ
ನಾಲವಾರದಲ್ಲಿದ್ದ ತಮ್ಮ ಅಕ್ಕಳಿಗೆ ಕರೆದುಕೊಂಡು ಬರಲು ಹೊರಟಾಗ ಮುಂದೆ ಹಲಕಟ್ಟಾ ಆಚೆ ಮೋಟರ್
ಸೈಕಲ್ ಅತಿವೇಗಾ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ಮುಂದೆ ರೋಡಿಗೆ ಹೊರಟ ಯಾವುದೋ ಒಂದು
ಎತ್ತಿನ ಬಂಡಿಗೆ 7-00 ಪಿಎಮ್ ಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಆತನ ತಲೆಯ ಹಿಂದೆ
ಭಾರಿ ರಕ್ತಗಾಯವಾಗಿ ಎಡಗೈ ಮುಷ್ಠಿ ಹತ್ತಿರ ಸಹ ರಕ್ತಗಾಯವಾಗಿದ್ದು ಅಲ್ಲದೆ ಮೈಗೆ ಅಲ್ಲಲ್ಲಿ
ತರಚಿದ ರಕ್ತಗಾಯವಾಗಿರುತ್ತದೆ. ಶ್ರೀ ವಿಠಲ @ ಇಟ್ಟು ತಂದೆ ಧರ್ಮಾ ನಾಯಕ ಸಾ|| ಧರ್ಮಾಪೂರ
ಸದ್ಯ ಘಾಟಕೋಪರ ಮುಂಬಾಯಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಗಾಯಾಳು ಛತ್ರು ಈತನು ಉಪಚಾರ ಕುರಿತು ಸೋಲ್ಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ
ಸೇರಿಕೆಯಾಗಿದ್ದು ನಂತರ ಇಂದು ದಿನಾಂಕ 11-01-2016 ರಂದು 12-00 ಪಿಎಮ್ ಕ್ಕೆ ಧರ್ಮಾಪೂರ
ತಾಂಡಾದಿಂದ ವಿಠಲ್ ಈತನು ಪೋನ್ ಮಾಡಿ ತನ್ನ ಮಗ ಛತ್ರು ಈತನಿಗೆ ಸೋಲ್ಲಾಪೂರ ಗಂಗಾಮಯಿ
ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ತರುವ ಕಾಲಕ್ಕೆ 11-00 ಎಎಮ್ ಸುಮಾರು ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ
ವಿಜಯಲಕ್ಷ್ಮೀ ಗಂಡ ಮಲ್ಲಿಕಾರ್ಜುನ ಟಾಂಗ್ ಸಾ:
ಕೋರಿ ಮಠದ ಹತ್ತಿರ ಬ್ರಹ್ಮಪೂರ ಧನಗರ ಗಲ್ಲಿ ಕಲಬುರಗಿ ಇವರ ಮಗಳಾದ ಕುಮಾರಿ ಇವಳು 8ನೇ ತರಗತಿವರೆಗೆ ವಿದ್ಯಾಭ್ಯಾಸ
ಮಾಡಿ ಮನೆಯಲ್ಲಿಯೇ ಇರುತ್ತಿದ್ದು. ದಿನಾಂಕ 29-12-2015 ರಂದು ನಾನು ನನ್ನ ಖಾಸಗಿ
ಕೆಲಸದ ನಿಮಿತ್ಯ ಕಾಳನೂರ ಗ್ರಾಮಕ್ಕೆ ಹೋಗಿದ್ದು, ನಾನು ಕಾಳನೂರಿಯಲ್ಲಿದ್ದಾಗಲೇ ಮಧ್ಯಾಹ್ನ 2-00 ಗಂಟೆ
ಸುಮಾರಿಗೆ ನನ್ನ ನೆಗೇಣಿಯಾದ ಹೇಮಾವತಿ ಇವರು ನನಗೆ ಫೋನ ಮಾಡಿ ನಿನ್ನ ಮಗಳಾದ ಕಾವೇರಿ ಇವಳು
ಯಾವದೋ ವಿಷ ತೆಗೆದುಕೊಂಡಿರುತ್ತಾಳೆ ಅವಳಿಗೆ ಉಪಚಾರ ಕುರಿತು ಜೇವರ್ಗಿ ಕ್ರಾಸ ಹತ್ತಿರ ಇರುವ
ಸ್ಪರ್ಶ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದಳು. ನಾನೂ ಕೂಡಲೇ ಆಸ್ಪತ್ರೆಗೆ
ಬಂದು ನೋಡಲಾಗಿ ನನ್ನ ಮಗಳಾದ ಕಾವೇರಿ ಇವಳು ಮಾತನ್ನಾಡುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ನಾನು
ರಾಘವೇಂದ್ರ ನಗರ ಪೊಲೀಸರಿಗೆ ನನ್ನ ಮಗಳು ಮಾನಸಿಕ ಮಾಡಿಕೊಂಡು ಮನೆಯ ಬಾತರೂಮ ಕ್ಲೀನ ಮಾಡುವ
ಯಾಸಿಡ ಕುಡಿದು ಅಸ್ವಸ್ಥಳಾಗಿರುತ್ತಾಳೆ ಅಂತಾ ತಿಳಿಸಿರುತ್ತೇನೆ. ನನ್ನ ಮಗಳ ದೇಹ ತುಂಬಾ
ಕ್ಷೀಣಿಸುತ್ತಿರುವದರಿಂದ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ತೆಗೆದುಕೊಂಡು
ಹೋದಾಗ ಅಲ್ಲಿ 5,
6 ಲಕ್ಷ ರೂಪಾಯಿ ಖರ್ಚಾಗುತ್ತದೆ ಅಂತಾ ತಿಳಿಸಿದ್ದರಿಂದ ಮರಳಿ ನನ್ನ ಮಗಳಿಗೆ
ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇನೆ. ಈಗ ನನ್ನ
ಮಗಳು ಸ್ವಲ್ಪ ಸುಧಾರಿಸಿಕೊಂಡಿದ್ದು, ಅವಳು ವಿಚಾರಿಸಿದಾಗ ತಿಳಿಸಿದ್ದೇನೆಂದರೆ, ದಿನಾಂಕ
29-12-2015
ರಂದು 1-30
ಗಂಟೆ ಸುಮಾರಿಗೆ ಮಂಜುನಾಥ ಸೊಂತ ಎಂಬುವನು ನಮ್ಮ ಮನೆಗೆ ಬಂದು ನನಗೆ ಹೆದರಿಸಿ ಬಲತ್ಕಾರ ಮಾಡಲು
ಪ್ರಯತ್ನಿಸುತ್ತಿದ್ದನು. ಆಗ ನಾನು ಚಿರಾಡಿದಾಗ ನಮ್ಮ ಮನೆಯ ಅಕ್ಕ ಪಕ್ಕದವರು ಬಂದಿದ್ದು, ಅವರನ್ನು
ನೋಡಿ ಮಂಜುನಾಥ ಇತನು ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಓಡಿ
ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾಳೆ. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ ಇವಳಿಗೆ
ಹೆದರಿಸಿ ಬಲತ್ಕಾರ ಮಾಡಲು ಪ್ರಯತ್ನ ಪಟ್ಟ ಮಂಜುನಾಥ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment