ಅತ್ಯಾಚಾರ ಮಾಡಿದ
ಪ್ರಕರಣ;
ನಿಂಬರ್ಗಾ ಠಾಣೆ : ಶ್ರೀಮತಿ ಇವರಿಗೆ ಮದುವೆಯಾಗಿ 6-7 ವರ್ಷಗಳಾದರೂ ಮಕ್ಕಳಾಗದ ಕಾರಣ ನನ್ನ
ಗಂಡ ಇನ್ನೊಂದು ಮದುವೆಯಾಗಿರುತ್ತಾನೆ, ಸಧ್ಯ ಆತ ತನ್ನ ಎರಡನೆಯ
ಹೆಂಡತಿಯಾದ ಗುಂಡಮ್ಮ ಇವಳೊಂದಿಗೆ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಹೋಗಿ ದುಡಿದು ಜೀವನ
ಸಾಗಿಸುತ್ತಿದ್ದಾನೆ, ನಾನು ಮನೆಯಲ್ಲಿ ಒಬ್ಬಳೆ
ಕೂಲಿಕೆಲಸ ಮಾಡಿಕೊಂಡು ಊರಲ್ಲಿ ಜೀವನ ಸಾಗಿಸುತ್ತಿದ್ದೆನೆ. ಇತ್ತಿಚೆಗೆ ಸ್ವಲ್ಪ ದಿವಸಗಳ ಹಿಂದೆ
ನಮ್ಮೂರಿನ ಲಕ್ಷ್ಮಣ ತಂದೆ ಲಕ್ಕಪ್ಪಾ ಪೂಜಾರಿ ಇತನು ನನಗೆ ನೀರಿಗೆ ಹೋಗುವಾಗ ಬರುವಾಗ, ಹೊಲಕ್ಕೆ ಹೋಗುವಾಗ ಬರುವಾಗ ಹಿಂಬಾಲಿಸುವದು ನನಗೆ ಕೆಟ್ಟ ದೃಷ್ಟಿಯಿಂದ
ನೋಡುವದು ಮಾಡುತ್ತಾ ಬಂದಿರುತ್ತಾನೆ. ದಿನಾಂಕ 16/01/2016 ರಂದು ರಾತ್ರಿ 0900 ಗಂಟೆಗೆ ನಾನು
ಮನೆಯಲ್ಲಿ ಒಬ್ಬಳೆ ಊಟ ಮಾಡಿಕೊಂಡು ನನ್ನ ಮನೆಯ ಛಪ್ಪರದ ಬಾಗಿಲಿನ ಒಳಕೊಂಡಿ ಹಾಕಿಕೊಂಡು
ಮಲಗಿಕೊಂಡಿದ್ದೇನು. ನಾನು ನಿದ್ದೆ ಹತ್ತಿ ಮಲಗಿಕೊಂಡಾಗ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲು
ಬಡೆಯುವ ಸಪ್ಪಳ ಕೇಳಿ ನಾನು ತೆರೆದು ನೋಡಲಾಗಿ ಹೊರಗೆ ನಮ್ಮೂರಿನ ಲಕ್ಷ್ಮಣ ತಂದೆ ಲಕ್ಕಪ್ಪಾ
ಪೂಜಾರಿ ನಿಂತಿದ್ದು ನಾನು ಗಾಬರಿಯಿಂದ ಯಾಕೆ ಅಂತ ಕೇಳಿದ್ದು ಅದಕ್ಕೆ ಅವನು ನೀನು ನನ್ನ ಜೊತೆ
ಮಲಗು ಒಂದು ವೇಳೆ ನೀ ಒಲ್ಲ ಅಂದರೆ ನಿನಗೆ ಇಡಂಗಿಲ್ಲ ರಂಡಿ ಅಂತ ಅಂಜಿಸುತ್ತಾ ಮೈ ಮೇಲೆ ಬಂದು
ನನಗೆ ತನ್ನ ಕೈಯಲ್ಲಿದ್ದ ಯಾವುದೊ ಒಂದು ಬಟ್ಟೆಯನ್ನು ನನ್ನ ಬಾಯಿಯಲ್ಲಿ ತುರುಕಿ ಜಬರದಸ್ತಿಯಿಂದ
ತನ್ನ ಎರಡು ಕೈಗಳಿಂದ ನನ್ನ ಎರಡು ರಟ್ಟೆಗಳನ್ನು ಗಟ್ಟಿಯಾಗಿ ಹಿಡಿದು ನನಗೆ ನಮ್ಮ ಮನೆ ಒಳಕ್ಕೆ
ಒಯ್ದು ನೆಲಕ್ಕೆ ಹಾಕಿ ನನ್ನ ಸೀರೆಯನ್ನು ಮೇಲಕ್ಕೆತ್ತಿ ನೀನು ಒದ್ದಾಡಬೇಡ, ಗಲಾಟೆ ಮಾಡಬೇಡ ಇಲ್ಲ ಅಂದರೆ ನಿನಗೆ ಇಲ್ಲೆ ಖಲಾಸ ಮಾಡುತ್ತೇನೆ ಅಂತ
ಅಂಜಿಸಿ ಬಲವಂತವಾಗಿ ಜಬರಿ ಸಂಭೋಗ ಮಾಡಿ ಹೋದನು. ನಾನು ಎಷ್ಟೆ ಒಲ್ಲೆ ಅಂದರು ನನಗೆ ಬಿಟ್ಟಿರುವದಿಲ್ಲ ಅವನು ಹೋದ ನಂತರ ನಾನು ನನ್ನ
ಬಾಯಿಯಲ್ಲಿರುವ ಬಟ್ಟೆ ತೆಗೆದಿದ್ದು ಆತನು ನನಗೆ ಜಬರಿ ಸಂಭೋಗ ಮಾಡಿದ್ದರಿಂದ ನನಗೆ ಹೊಟ್ಟೆ ನೋವು
ಆಗಿದ್ದು ನಾನು ನೋವು ಹೆಚ್ಚಾಗಿ ತಾಳಲಾರದೆ ನರಳಾಡುತ್ತಾ ನಮ್ಮ ಮನೆಯಲ್ಲಿ ಒದ್ದಾಡುತ್ತಿದ್ದಾಗ
ನನ್ನ ನಗೇಣಿಯಾದ ಸಿದಮ್ಮ ಗಂಡ ಶಿವಲಿಂಗಪ್ಪಾ ಶಿರೂರ, ನನ್ನ ಕೇರಿಯವರಾದ ಶರಣಮ್ಮ ಗಂಡ ಕಲ್ಲಪ್ಪ ಚಿಂಚೂರ ಇಬ್ಬರೂ ಓಡಿ ಬಂದು ನನಗೆ ವಿಚಾರಿಸಿದ್ದು
ನಾನು ಅವರಿಗೆ ನಡೆದ ವಿಷಯ ತಿಳಿಸಿರುತ್ತೇನೆ. ನನಗೆ ಲಕ್ಷ್ಮಣನು ದಿನಾಂಕ 17/01/2016 ರಂದು ನಸುಕಿನ 0300 ಗಂಟೆಯಿಂದ 0330 ಗಂಟೆಯ ಮಧ್ಯದ
ಅವಧಿಯಲ್ಲಿ ಜಬರಿ ಸಂಭೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶೀಮತಿ ಇವರನ್ನು ಅವರ ತಂದೆ ತಾಯಿಯವರು 2008 ರಲ್ಲಿ ಸೋಲಾಪೂರ ಈರಣ್ಣ
ವಸ್ತಿ ಏರಿಯಾದ ಚಿದಾನಂದ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ.
ಮದುವೆಯಾದ ನಂತರ ಎರಡು ಮೂರು ತಿಂಗಳವರೆಗೆ ನನ್ನ ಗಂಡ ಹಾಗೂ ಅವರ ಮನೆಯವರು ನನ್ನೊಂದಿಗೆ
ಚೆನ್ನಾಗಿದ್ದರು. ನಂತರ ನನ್ನ ಗಂಡನ ಅಣ್ಣನಾದ ನಾಗನಾಥ ಇತನು ನನ್ನ ಮೇಲೆ ಕೆಟ್ಟ ದ್ರುಷ್ಟಿಯಿಂದ
ನೋಡುತ್ತಿದ್ದರಿಂದ ನಾನು ನನ್ನ ಗಂಡನಿಗೆ ಹೇಳಿ ಅಲ್ಲೇ ಪಕ್ಕದಲ್ಲೆ ಬೇರೆ ಮನೆ ಮಾಡಿಕೊಂಡು ಸಂಸಾರ
ನಡೆಸುತ್ತಿದ್ದೆ. ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ. ಆದರೂ ಕೂಡ ನನ್ನ ಭಾವ
ನಾಗನಾಥ ಇತನು ನನ್ನ ಗಂಡ ಇಲ್ಲದ ಸಮಯದಲ್ಲಿ ಮನೆಗೆ ಬಂದು ನನ್ನ ಜೊತೆ ಬಾ ಅಂತಾ
ಪೀಡಿಸುತ್ತಿದ್ದನು. ನೀನು ನನಗೆ ಸಿಗಬೇಕು ನಾನು ನಿನಗೆ ತುಂಬಾ ಇಷ್ಟ ಪಡುತ್ತೇನೆ. ಅಂತಾ
ಅನ್ನುತ್ತಿದ್ದನು. ಈಗ ಸುಮಾರು ಎರಡು ತಿಂಗಳ ಹಿಂದೆ ನನ್ನ ಗಂಡ ಇಲ್ಲದ ಸಮಯ ನೋಡಿ ನಮ್ಮ ಭಾವ
ನಾಗನಾಥ ಇತನು ನಮ್ಮ ಮನೆಗೆ ಬಂದು ನೀನು ನನ್ನ ಜೊತೆಗೆ ಸಹಕರಿಸು ಇಲ್ಲವಾದರೆ ನಿನಗೆ ಬೆಂಕಿ
ಹಚ್ಚಿ ಸಾಯುತ್ತೇನೆ ಅಂತಾ ಹೇಳಿ ನನನಗೆ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟನು. ಆದರೆ ನಾನು
ಅವನಿಗೆ ತಳ್ಳಿ ಬಿಡಿಸಿಕೊಂಡಿರುತ್ತೇನೆ. ಈ ವಿಷಯ ಯಾರಿಗಾದರೂ ಗೊತ್ತಾದರೆ ನನ್ನ ಮರ್ಯಾದೆ ಹೋಗುತ್ತದೆ
ಅಂತಾ ಸುಮ್ಮನ್ನಿದ್ದ, ಇಷ್ಟಕೆ ಭಾವ ಸುಮ್ಮನಿರದೆ
ಬೆಳಿಗ್ಗೆ 11-30 ಗಂಟೆಗೆ ನಾನು ನೈಟಿ ಹಾಗೂ ಸೀರೆ ತರುವ ಸಲುವಾಗಿ ಮಾರ್ಕೆಟಿಗೆ ಹೋಗದ್ದೆ, ಬರುವದು ಸ್ವಲ್ಪ
ತಡವಾಗಿದ್ದಕ್ಕೆ ನನ್ನ ಭಾವ ನನ್ನ ಗಂಡನ್ನನ್ನು ಕರೆಯಿಸಿ ಇವಳೂ ಇಷ್ಟು ತನಕ ಎಲ್ಲಿಗೆ
ಹೋಗಿದ್ದಾಳೆ ಯಾರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತಾ ನನ್ನ ಭಾವ ನಾಗನಾಥ ಇತನು
ನನಗೆ ಕೂದಲು ಹಿಡಿದು ಜಗ್ಗಾಡಿ ಗುಪ್ತಾಂಗದ ಹತ್ತಿರ ಕಾಲಿನಿಂದ ಬದ್ದು, ಮೈ ತುಂಬಾ ಗುಪ್ತ ಗಾಯ
ಮಾಡಿದ್ದು, ನನಗೆ ಬಾಯಿಂದ ಹಾಗೂ ಮೂಗಿನಿಂದ
ರಕ್ತ ಬರುತ್ತಿದ್ದರೂ ಬಿಡಲಿಲ್ಲ ಕಡೆಗೆ ನಮ್ಮ ಸೋದರತ್ತೆ ನಿರ್ಮಲಾ ಗಂಡ ಷಣ್ಮುಖ ಇವಳು ಬಂದು
ಬಿಡಿಸಿದರೂ ಈ ಸಮಯದಲ್ಲಿ ನನ್ನ ಗಂಡ ಹೊರಗೆ ಹೋಗಿದ್ದ. ಮರುದಿವಸ
ದಿನಾಂಕ 08-01-2016 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನನ್ನ ಭಾವ ಮತ್ತೆ ನನ್ನ ಮನೆಗೆ
ಬಂದು ಇನ್ನೂ ಮುಂದೆ ನಿನ್ನ ಮಿಂಡಗಾರ ನಾನು ಇದ್ದೇನೆ ಮನೆ ಬಿಟ್ಟು ಆಚೆ ಕಾಲಿಡಬೇಡ ಅಂದವನೆ ನನಗೆ
ಸಿಕ್ಕಾ ಪಟ್ಟೆ ಹೊಡೆದು ಮೈಮೇಲೆ ಎಲ್ಲಾ ಗಾಯಗಳನ್ನು ಮಾಡಿ ಹೋಗಿರುತ್ತಾನೆ. ನಂತರ ನಾನು ನನ್ನ
ತಾಯಿಗೆ ಫೋನ ಮಾಡಿ ವಿಷಯ ತಿಳಿಸಿದಾಗ ನನ್ನ ತಾಯಿ ಮತ್ತು ರಾಜು ಇಬ್ಬರೂ ಬಂದು ನನಗೆ ಕಲಬುರಗಿ
ಹಾರ್ಟ ಪೌಂಡೇಶನ (ಬಾಬಾ ಹೌಸ) ನಲ್ಲಿ ಒಂದು ದಿನ ಚಿಕಿತ್ಸೆ ತೆಗೆದುಕೊಂಡಿದ್ದು, ಇರುತ್ತದೆ.ದಿನಾಂಕ
16-01-2016 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನನ್ನ ಮಕ್ಕಳು ನನಗೆ ಕೊಡುವುದಿಲ್ಲ
ಸೋಲಾಪೂರಕ್ಕೆ ಹೋದರೆ ನನ್ನ ಭಾವ ಅತ್ಯಾಚಾರ ಮಾಡುತ್ತೇನೆ ಅಂತಾ ಹೇಳಿ ಅವರು ಕೊಡುವ ಹಿಂಸೆ
ನೆನೆಸಿಕೊಂಡು ಮನೆಯಲ್ಲಿದ್ದ ಬಾತರೂಮ ಕ್ಲೀನ ಮಾಡುವ ಡೊಮ್ಯಾಕ್ಸ ವಿಷ ತೆಗೆದುಕೊಂಡಿರುತ್ತೇನೆ.
ನಂತರ ನನ್ನ ತಾಯಿ ಮತ್ತು ಅಣ್ಣ ರಾಜು ಇವರು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಇರುತ್ತದೆ.ನನಗೆ
ಮದುವೆಯಾದಾಗಿನಿಂದಲೂ ನನ್ನ ಮೇಲೆ ಕೆಟ್ಟ ದ್ರುಷ್ಠಿ ಹಾಕಿ 2 ಸಲ ಅತ್ಯಾಚಾರ ಪ್ರತಯ್ನ ಪಟ್ಟು
ಕೈಯಿಂದ ಹೊಡೆದು ಕಾಲಿನಿಂದ ಒದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ನನ್ನ
ಭಾವನಾದ ನಾಗನಾಥ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ
: ಮಹಾರುದ್ರಪ್ಪಾ ತಂದೆ ಕಲ್ಯಾಣಪ್ಪಾ ಬಿರಾದರ ಮು: ಜಮಗಾ
(ಆರ್) ತಾ:ಆಳಂದ ಇವರು ಕಿರಿ ಮಗ ಸಂಜೀವಕುಮಾರ ಇವನು ಮನೆ ಆಗು ಹೋಗುಗಳನ್ನು ಹಾಗೂ ಒಕ್ಕಲುತನದ
ಕೆಲಸ ನೋಡಿಕೊಳ್ಳಲು ಆಗಾಗ ನಮ್ಮೂರಿಗೆ ತನ್ನ ಮೋ ಸೈ ನಂ ಕೆಎ 32 ಇಜೆ 3721 ಇದರ ಮೇಲೆ ಬಂದು
ಹೋಗುವುದು ಮಾಡುತ್ತಿದ್ದು ದಿನಾಂಕ 16-01-2016 ರಂದು ಮಧ್ಯಾಹ್ನ ನಮ್ಮೂರಿನಿಂದ ಗುಲಬರ್ಗಾಕ್ಕೆ
ಹೋಗುತ್ತೇನೆ ಎಂದು ಮನೆಯಿಂದ ತನ್ನ ಮೋಟರ ಸೈಕಲ ಮೇಲೆ ಹೋದನು ಸಾಯಂಕಾಲ 05.30 ಪಿಎಮ್ ಸುಮಾರಿಗೆ
ನನ್ನ ಮಗನ ಮೋಬೈಲ್ದಿಂದ ಯಾರೋ ಫೋನ್ ಮಾಡಿ ತಿಳಿಸಿದ್ದೆನೆಂದರೆ ಆಳಂದದ ಬಸ್ ಡಿಪೋ ಕ್ರಾಸ್
ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ 36 ಎಫ್ 1077 ರ ಅಫಘಾತದಿಂದ ಸಂಜುಕುಮಾರನಿಗೆ ತಲೆಗೆ
ಭಾರಿ ಪಟ್ಟಾಗಿ ಸರಕಾರಿ ಆಸ್ಪತ್ರೆ ಆಳಂದಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ
ಸಂಜುಕುಮಾರನು ಮೃತ ಪಟ್ಟಿರುತ್ತಾನೆ. ಕೂಡಲೆ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬಂದು ನೋಡಲು ನನ್ನ
ಮಗನ ಎಡ ಹಣೆಯ ಮೇಲ್ಬಾಗದಲ್ಲಿ ಹಣೆ ಸೀಳಿ ಭಾರಿ ರಕ್ತ ಗಾಯವಾಗಿ ಮೃತ ಪಟ್ಟಿದ್ದು ಈ ಘಟನೆ
05.00ಪಿಎಮ್ ಕ್ಕೆ ಆಗಿದ್ದು ಇದೆ ಅಂತಾ ಗೊತ್ತಾಗಿರುತ್ತದೆ. ಅಪಘಾತ ಪಡಿಸಿದ ಬಸ್ ಚಾಲಕನ ಹೆಸರು ಬಸಣ್ಣ ತಂದೆ
ಗಂಟೆಪ್ಪ ಕದರಗಿ ಸಾ: ಜಳಕಿ (ಕೆ) ಅಂತಾ ಗೊತ್ತಾಗಿರುತ್ತದೆ. ಕಾರಣ ಅತೀವೆಗದಿಂದ ಹಾಗೂ
ಅಲಕ್ಷತನದಿಂದ ಬಸ್ ಚಾಲಕನು ತನ್ನ ವಾಹನ ಓಡಿಸಿ ನನ್ನ ಮಗನ ಮೋ ಸೈ ಗೆ ಡಿಕ್ಕಿ ಪಡಿಸಿ ನನ್ನ ಮಗನ
ಸಾವಿಗೆ ಕಾರಣನಾದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ
ಠಾಣೆ : ದಿನಾಂಕ 16/01/2016 ರಂದು ನಿಂಬರ್ಗಾ
ಗ್ರಾಮದ ಶ್ರೀ ಗುರು ಪೆಟ್ರೊಲ ಪಂಪ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ
ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ನಿಂಬರ್ಗಾ ಗ್ರಾಮದ ಪೆಟ್ರೋಲ ಪಂಪ ಹತ್ತಿರ ಹೋಗಿ ಮರೆಯಲ್ಲಿ
ನಿಂತು ನೋಡಲಾಗಿ ಪೆಟ್ರೊಲ ಪಂಪ ಎದುರು ಮುಖ್ಯ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ
ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1
ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು
ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಆತನು ತನ್ನ
ಹೆಸರು ಮಲ್ಲು ತಂದೆ ಸೈಬಣ್ಣಾ ಭುಯಿನ ಸಾ|| ನಿಂಬರ್ಗಾ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 190/-
ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು
ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
No comments:
Post a Comment