ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ
ರಮೇಶ ಆಳಂದ ಇವರನ್ನು ಸುಮಾರು 6 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಕಲಬುರಗಿಯ ಸಂತೋಷ
ಕಾಲೋನಿಯ ಹಣಮಂತರಾಯ ಇವರ ಮಗನಾದ ರಮೇಶ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ
ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ಮಾತನ್ನಾಡಿದ ಪ್ರಕಾರ ವರನಿಗೆ ವರದಕ್ಷಣೆ ಅಂತಾ 1 ಲಕ್ಷ
ರೂಪಾಯಿ, 6 ತೊಲೆ ಬಂಗಾರ ಹಾಗೂ ಗೃಹ
ಬಳಕೆಯ ಸಾಮಾನುಗಳು ಕೊಟ್ಟಿದ್ದು, ಇರುತ್ತದೆ. ಮದುವೆಯಾದ
ನಂತರ ಎರಡು-ಮೂರು ತಿಂಗಳವರೆಗೆ ನನ್ನ ಗಂಡ ಹಾಗೂ ಅವರ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ಮನೆಯ ಸಣ್ಣ ಪುಟ್ಟ
ವಿಷಯಗಳಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು
ಪ್ರಾರಂಭಿಸಿ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡಲು ಪ್ರಾರಂಭಿಸಿದರು. ನಾನು ಅವರು ಕೊಡುವ
ಹಿಂಸೆಯನ್ನು ತಾಳಲಾರದೇ ನನ್ನ ತಂದೆ ತಾಯಿಗೆ
ವಿಷಯ ತಿಳಿಸಿದಾಗ ಅವರು ಹಿರಿಯರೊಂದಿಗೆ ಬುದ್ದಿವಾದ ಹೇಳಿದ್ದು ಇರುತ್ತದೆ. ನನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ.
ಇಷ್ಟಾದರೂ ಸಹ ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ಹಿಂಸೆ ಕೊಡುವುದನ್ನು ಬಿಡಲಿಲ್ಲ. ನನ್ನ
ಮೈದುನ ಉಮೇಶ ಇತನು ಇವಳು ನಮ್ಮ ಮನೆಯ ವಿಷಯವೆಲ್ಲಾ ಬೇರೆಯವರ ಮುಂದೆ ಹೇಳುತ್ತಾಳೆ ಇವಳಿಗೆ ಖಲಾಸ
ಮಾಡಿ ಬಿಡು ಅಂತಾ ನನ್ನ ಗಂಡನಿಗೆ ಹೇಳುತ್ತಿದ್ದನು. ನನ್ನ ಗಂಡ ರಮೇಶ ಇತನು ನನಗೆ ಸಾಲವಾಗಿದೆ
ನಿನ್ನ ತವರು ಮನೆಯಿಂದ ಹಣ ತರಿಸು ಅಂತಾ ಹೇಳಿದಾಗ ನಾನು ನನ್ನ ಗಂಡ ಕೊಡುವ ಕಿರುಕುಳ ತಾಳಲಾರದೇ
ನನ್ನ ಸಹೋದರ ಮಾವನಾದ ರೇವಣಸಿದ್ದ ಇವರಿಗೆ ತಿಳಿಸಿದಾಗ
ಅವರು ಆಗಾಗ ಸ್ವಲ್ಪ ಸ್ವಲ್ಪ 2 ಲಕ್ಷ ರೂಪಾಯಿ ಕೊಟ್ಟಿರುತ್ತಾರೆ. ಮತ್ತೆ ನನ್ನ ಗಂಡ
ನನ್ನ ಬಂಗಾರ ಎಲ್ಲಾ ಮಾರಿರುತ್ತಾನೆ. ದಿನಾಂಕ 20-01-2016 ರಂದು
10-00 ಎ.ಎಮ್ ಕ್ಕೆ ನನ್ನ ಭಾವ ಪ್ರಕಾಶ, ನಾದಿನಿ ಸುಮಂಗಲಾ, ಅತ್ತೆ ನಾಗಮ್ಮ , ಮಾವ ಹಣಮಂತ ಇವರೆಲ್ಲರೂ ಸೇರಿ ರಂಡಿ ನಿನಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂದರೆ
ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಹಣ ತರುವವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ
ಮಾಡಿರುತ್ತಾರೆ. ದಿನಾಂಕ 21-01-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನನ್ನ ಗಂಡನಾದ
ರಮೇಶ ಇತನು ನನಗೆ ನಾನು ವೈನ್ ಶಾಪ್ ವ್ಯಾಪಾರ ಮಾಡುತ್ತೇನೆ ನಿನ್ನ ತವರು ಮನೆಯಿಂದ 2 ಲಕ್ಷ
ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡಿ ನಾನು ಸಂಜೆ ಮನೆಗೆ ಬರುವಷ್ಟರಲ್ಲಿ ನಿಮ್ಮ
ತಂದೆಗೆ ಹೇಳಿ ಹಣ ತರಿಸು ಇಲ್ಲವಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಹೊರಗೆ
ಹೋದನು. ಸಂಜೆ 7-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಅಡಿಗೆ ಮಾಡುತ್ತಿದ್ದಾಗ ನನ್ನ ಗಂಡ ರಮೇಶ
ಇತನು ನಿನ್ನ ತವರು ಮನೆಯವರು ಹಣ ತಂದು ಕೊಟ್ಟಿದ್ದಾರಾ ಅಂತಾ ಕೇಳಿದನು ಆಗ ನಾನು ಅವರ ಹತ್ತಿರ ಹಣ
ಇರುವುದಿಲ್ಲ ನಾನು ಅವರಿಂದ ಹಣ ತೆಗೆದುಕೊಂಡು ಬರುವುದಿಲ್ಲ ಅಂತಾ ಹೇಳಿದಾಗ ರಂಡಿ ನೀನು ನನಗೆ
ಎದುರುವಾದಿಸುತ್ತಿಯಾ? ನಿನಗೆ ಬಹಳ ಸೊಕ್ಕು ಬಂದಿದೆ ನಿನಗೆ ಖಲಾಸ ಮಾಡಿಯೇ
ಬಿಡುತ್ತೇನೆ ಅಂತಾ ಕಾಯ್ದ ಕಡಚಿಯನ್ನು ನನ್ನ ಎಡಗೈಗೆ ಹಚ್ಚಿ ಕೈ ಸುಟ್ಟನು. ಮತ್ತೆ ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡಿ ನನಗೆ ಕುತ್ತಿಗೆ
ಒತ್ತಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನನ್ನ ಗಂಡ ನನಗೆ ಕೊಲೆ ಮಾಡಲು ಪ್ರಯತ್ನ ಪಟ್ಟಿ
ಕುತ್ತಿಗೆ ಒತ್ತಿರುವದರಿಂದ ನಾನು ಬೇಹುಷ ಆಗಿ ಬಿದ್ದಿದ್ದು, ಸುಮಾರು ಎರಡು ಮೂರು ಗಂಟೆಗಳು ಕಳೆದ ನಂತರ ನನಗೆ ಪ್ರಜ್ಞೆ ಬಂದಾಗ
ನನ್ನ ಅಣ್ಣ ಲಕ್ಷ್ಮೀಕಾಂತ ಇತನಿಗೆ ಫೋನ ಮಾಡಿ ವಿಷಯ ತಿಳಿಸಿದೆನು. ಇಂದು ಬೆಳಿಗ್ಗೆ ನನ್ನ ತಾಯಿ
ಸರೋಜನಿ, ನನ್ನ ಅಣ್ಣ ಲಕ್ಷ್ಮೀಕಾಂತ ಇವರು
ನಮ್ಮ ಮನೆಗೆ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ
ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಸುಲಿಗೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ
ನಿಂಗಪ್ಪ ಮಾಳೇನಹಳ್ಳಿ ಸಾಃ ಸದಾಶಿವ ನಗರ ಕಲಬುರಗಿ ಇವರು ದಿನಾಂಕ 20/01/2016 ರಂದು 7.10 ಪಿಎಂ
ದಿಂದ 7.15 ಪಿಎಂ ಅವಧಿಯಲ್ಲಿ ಮನೆಗೆ ಹೋಗಲು ತಮ್ಮ ಕಾರ್ ನಂ. ಕೆಎ.32 ಎನ್.5968 ನೇದ್ದರಲ್ಲಿ
ಕುಳಿತಿದ್ದಾಗ ಒಂದು ಬೈಕ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ವಿಳಾಸ ಕೇಳುವ ನೆಪದಲ್ಲಿ
ಕಣ್ಣಿಗೆ ಖಾರದ ಪುಡಿ ಎರಚಿ ಫಿರ್ಯಾದಿದಾರನು ತನ್ನ ಕಾರಿನಲ್ಲಿಟ್ಟಿದ್ದ ಕಪ್ಪು ಬಣ್ಣದ
ಬ್ಯಾಗನ್ನು ದೋಚಿಕೊಳ್ಳುತ್ತಿರುವಾಗ ಫಿರ್ಯಾದಿದಾರನು ಸದರಿ ಬ್ಯಾಗನ್ನು ಹಿಡಿದುಕೊಂಡಾಗ ಅವರು
ಅದನ್ನು ಕಿತ್ತುಕೊಂಡು ದೋಚಿಕೊಂಡು ಹೋಗಿರುತ್ತಾರೆ. ಸದರಿ ಬ್ಯಾಗಿನಲ್ಲಿ 1) ನಗದು ಹಣ 1,16,650/- ರೂ. 2) ಕೆನರಾ ಬ್ಯಾಂಕಿನ 04 ಚೆಕಬುಕ್ ಗಳು 3)
ಎಚ್.ಡಿ.ಎಫ್.ಸಿ ಬ್ಯಾಂಕಿನ ಒಂದು ಬೆಕ್ ಬುಕ್ 4) ಕೆನರಾ ಬ್ಯಾಂಕಿನ ಕ್ರೆಡಿಟ್ ಕಾರ್ಡ 5) ವಾಹನ
ನಂ ಕೆಎ.32 ಬಿ1247 ನೇದ್ದರ ಆರ್.ಸಿ ಬುಕ್ 6) ಡಿಎಲ್ & ಪ್ಯಾನ್ ಕಾರ್ಢ ಇತ್ಯಾದಿ ಕಾಗದ
ಪತ್ರಗಳು ಇದ್ದವು ದೋಚಿಕೊಂಡು ಹೋದ ಹಣ ಹಾಗೂ ದಾಖಲಾತಿಗಳನ್ನು ಪತ್ತೆ ಮಾಡಿ, ದೋಚಿಕೊಂಡು ಹೋದ
ಅಪರಿಚಿತ ಮೋಟಾರ್ ಸೈಕಲ ಸವರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 14/01/2016 ರಂದು
ಮದ್ಯಾಹ್ನ 1.30 ಗಂಟೆ ಸುಮಾರಿಗೆ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ರಾಯಲ್ ಎನಫೀಲ್ಡ ಮೋಟಾರ ಸೈಕಲ
ನಂ. ಕೆಎ.32 ಇಬಿ. 8222 ನೇದ್ದನ್ನು ನಿಲ್ಲಿಸಿ ಕೆಲಸ ಮುಗಿಸಿಕೊಂಡು 2.30 ಪಿಎಂ ಕ್ಕೆ ಬಂದು
ನೋಡಲಾಗಿ ಮೊಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಳುವಾದ
ನನ್ನ ರಾಯಲ್ ಎನಫೀಲ್ಡ ಮೋಟಾರ ಸೈಕಲ ನಂ. ಕೆ.32 ಇಬಿ 8222 ಅ.ಕಿ. 1,50,000/- ನೇದ್ದನ್ನು
ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಅಂತಾ ಶ್ರೀ ಸೈಯದ್ ಗೌಸ್ ಮೋಹಿಯುದ್ದೀನ್ ತಂದೆ ಸೈಯದ್ ಫರೀದ್ ಸಾಃ ಗಣೇಶ ನಗರ
ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment