ಸುಲಿಗೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 05.01.2016 ರಂದು ನಾನು ಮತ್ತು ನದೀಮ್ ಇಬ್ಬರು ಕೂಡಿಕೊಂಡು ನಮ್ಮ ಬುಲೇರೋ ಪಿಕ್
ಅಪ್ ವಾಹನ ನಂ ಎಮ್.ಹೆಚ್-10 ಎಕ್ಯೂ-5930 ನೇದ್ದರಲ್ಲಿ ಬೀಳೂರ ಗ್ರಾಮದಲ್ಲಿ ದ್ರಾಕ್ಷಿ ಹಣ್ಣು
ಲೋಡ್ ಮಾಡಿಕೊಂಡು ಬೀದರ್ ಕ್ಕೆ ಹೋರಟಿದ್ದೆವು. ದಿನಾಂಕ 06.01.2016 ರಂದು ೦೦:30 ಎ.ಎಮ್
ಕ್ಕೆ ನಾವು ಜೇವರಗಿ ಸಮೀಪದ ಮಾವನೂರು ಕ್ರಾಸ್ ಹತ್ತಿರ ಬರುತ್ತಿರುವಾಗ ಸ್ಕಾರ್ಪಿಯೋ ವಾಹನ ನಂ
ಎಮ್.ಹೆಚ್-04 ಸಿಇ-2800 ನೇದ್ದರಲ್ಲಿ ಬಂದ ಅಂದಾಜು 25 ರಿಂದ 30 ವರ್ಷ ವಯಸ್ಸಿನ 3 ಜನರು ನಮ್ಮ
ವಾಹನ ನಿಲ್ಲಿಸಿ ನಮಗೆ ಪಿಸ್ತೂಲ ತೋರಿಸಿ ಹೆದರಿಸಿ ಕೈಯಿಂದ ಹೊಡೆದು ನನ್ನ ಹತ್ತಿರ ಇದ್ದ ನಗದು ಹಣ 3.500/- ರೂ 1
ಸ್ಯಾಮ್ಸಂಗ ಮೋಬಾಯಿಲ್ ಹಾಗು ನದೀಮ್ ಈತನ ಹತ್ತಿ ಇರುವ ನಗದು ಹಣ 2.900/- ರೂ ಮತ್ತು ಒಂದು
ಸ್ಯಾಮ್ಸಂಗ್ ಮೋಬಾಯಿಲ್ ಹೀಗೆ ಒಟ್ಟು 17.900/- ರೂ ಕಿಮ್ಮತ್ತಿನವುಗಳನ್ನು ಜಬರದಸ್ತಿಯಿಂದ
ಕಸಿದುಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment