ಮುಧೋಳ ಠಾಣೆ : ದಿನಾಂಕ: 30.01.2016 ರಂದು ಮಧ್ಯಾಹ್ನ 1230 ಗಂಟೆಗೆ ಸರಕಾರಿ ಆಸ್ಪತ್ರೆ
ಕಲಬುರಗಿಯಲ್ಲಿ ಫೀರ್ಯಾದಿ ಬಸ್ಸಮ್ಮ ಗಂಡ ಬಿಚ್ಚಪ್ಪಾ ವ: 58 ಜಾ: ಮಾದಿಗ ಸಾ: ಪಾಕಲ ಗ್ರಾಮ ಇವಳು
ಕನ್ನಡದಲ್ಲಿ ಬರೆದ ಫೀರ್ಯಾದಿ ಅರ್ಜಿ ಸಾರಂಶವೆನೆಂದರೆ, ನನ್ನ ಗಂಡ ಬಿಚ್ಚಪ್ಪ ತಂದೆ ದೇವಪ್ಪ ವ:
60 ಇದ್ದು, ಪಿಕೆಜಿಬಿ ಬ್ಯಾಂಕ ಯಾನಾಗುಂದಿ ಯಲ್ಲಿ 53 ಸಾವಿರ ರೂಪಾಯಿ ಬೆಳೆ ಸಾಲ
ತೆಗೆದುಕೊಂಡಿದ್ದು ಮತ್ತು ನಮ್ಮ ಪಾಕಲ ಊರಿನ ಗುರುನಾಥ ರೆಡ್ಡಿ ಪಾಟೀಲ ಇವರ ಹತ್ತಿರ ಸಾಲವನ್ನು
ತೆಗೆದುಕೊಂಡಿರುತ್ತಾರೆ. ಗುರುನಾಥ ರೆಡ್ಡಿ ಇವರು ದಿನನಿತ್ಯಾ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ
ಮಾನಸಿಕ ಹಿಂಸೆ ಕೊಡುತ್ತಿದ್ದರು. ಅಲ್ಲದೆ ಗುರುನಾಥ ರೆಡ್ಡಿ ಇವರು ದಿನಾಂಕ: 28.01.2016 ರಂದು
ಬೆಳಗ್ಗೆ 0830 ಗಂಟೆಗೆ ನಮ್ಮ ಮನೆಗೆ ಬಂದು ನನ್ನ ಗಂಡನಾದ ಬಿಚ್ಚಪ್ಪ ಇತನಿಗೆ ಮಾದಿಗ ಸೂಳ್ಯಾ
ಮಗನೆ ನನ್ನ ಹತ್ತಿರ ತೆಗೆದುಕೊಂಡಿರುವ ಸಾಲವನ್ನು ನೀಡಿದ್ದರೆ, ನಿನಗೆ ಕೊಲೆ ಮಾಡುತ್ತೇನೆ ಎಂದು
ಜಾತಿನಿಂದನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ. ದಿನಾಂಕ: 29-01-2016 ರಂದು ನನ್ನ ಗಂಡ
ದಿನ ನಿತ್ಯ ಹೊಲಕ್ಕೆ ಹೊಗುವಂತೆ ಈ ಸದರಿ ದಿನಾಂಕದಂದ್ದು, ಬೆಳಗ್ಗೆ ಹೊಲಕ್ಕೆ ಹೊಗಿರುತ್ತಾನೆ.
ಹೊಲದಿಂದ ಬರಲು ತಡವಾದ ಕಾರಣ ನನ್ನ ಮಗನಾದ ತಿಪ್ಪಣ್ಣ ತಂದೆ ಬಿಚ್ಚಪ್ಪ ಇತನು ನಿನ್ನೆ ಮುಂಜಾನೆ
1040 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ನನ್ನ ಗಂಡ ವಿಷ ಸೇವಿಸಿ ನೇಲಕ್ಕೆ
ಬಿದಿದ್ದು ಕಂಡು ಬಂದು ನನ್ನ ಮಗನು ಓಡಿ ಹೋಗಿ ನನ್ನ ಗಂಡನಿಗೆ ಉಪಚಾರ ಕುರಿತು ಮುಧೋಳ
ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಸರಕಾರಿ
ಆಸ್ಪತ್ರೆಗೆ ತರಲಾಯಿತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 29-01-2016 ರಂದು
1030 ಗಂಟೆಗೆ ನನ್ನ ಗಂಡನು ಮೃತ ಪಟ್ಟಿದ್ದು, ಇದ್ದಕ್ಕೆ ಮೂಲ ಕಾರಣ ಗುರುನಾಥ ರೆಡ್ಡಿ ಯವರು
ಜಾತಿನಿಂದನೆ ಹಾಗು ಮಾನಸಿಕ ಕಿರುಕುಳ ನೀಡಿದ್ದರಿಂದ ನನ್ನ ಗಂಡ ವಿಷ ಸೇವಿಸಿ
ಸಾವನ್ನಪ್ಪಿರುತ್ತಾನೆ. ಆದ ಕಾರಣ ಇವರ ಮೇಲೆ ಕಾನೂನಿನ
ಕ್ರಮ ಕೈಕೊಂಡು ನಮಗೆ ನ್ಯಾಯ ದೋರಕಿಸಿಕೊಡಬೇಕು ಅಂತಾ ಫೀರ್ಯಾದಿ ಅರ್ಜಿ ಕೊಟ್ಟಿದ್ದನ್ನು
ಲಕ್ಷ್ಮಿಕಾಂತ ಎ.ಎಸ್.ಐ ಮುದೋಳ ಠಾಣೆ ರವರು ಸರಕಾರಿ ಆಸ್ಪತ್ರೆ ಕಲಬರಗಿ ರವರಲ್ಲಿ ಪಡೆದುಕೊಂಡು
ಪಿಸಿ 340 ಅಂಬಾರಾಯ ಇವರ ಮುಖಾಂತರ ಠಾಣೆಗೆ ಕಳುಹಿಸಿದ್ದು, ಸದರಿ ಪಿಸಿ ರವರು ಇಂದು 02:30
ಗಂಟೆಗೆ ಕಲಬುರಗಿ ಆಸ್ಪತ್ರೆಯಿಂದ ಸದರಿ ಫಿರ್ಯಾದಿ ಅರ್ಜಿಯನ್ನು ಠಾಣೆಗೆ ತಂದು ಹಾಜರ ಪಡಿಸಿದ್ದರ
ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮುಧೋಳ ಠಾಣೆ : ದಿನಾಂಕ:
30.01.2016 ರಂದು ಸಾಯಂಕಾಲ 1600 ಗಂಟೆಗೆ ಫೀರ್ಯಾದಿ ಶ್ರಿಮತಿ ವೆಂಕಟಮ್ಮ ಗಂಡ ವೆಂಕಟಪ್ಪ
ಸಿವಾಪ್ಪೋಳ ಸಾ: ಬುರುಗಪಲ್ಲಿ ತಾ: ಸೇಡಂ. ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಫೀರ್ಯಾದಿ ಕೊಟ್ಟ
ಸಾರಂಶವೆನೆಂದರೆ, ನನಗೆ ಇಬ್ಬರು ಗಂಡಸು ಮಕ್ಕಳು ಹಾಗು
ಒಬ್ಬಳು ಹೆಣ್ಣು ಮಗಳು ಇರುತ್ತಾಳೆ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರ ಹೆಸರಿನಿಂದ
ಒಂದುವರೆ ಎಕರೆ ಹೊಲವಿದ್ದು ಈ ಹೊಲದ ಮೇಲೆ ಇಗ 5-6 ವರ್ಷಗಳ ಹಿಂದೆ ಪಿ.ಕೆ.ಜೇ.ಬಿ ಬ್ಯಾಂಕ
ಯಾನಾಗುಂದಿ ಶಾಖೆಯಲ್ಲಿ 15000/- ರೂ ಸಾಲ ಮಾಡಿದ್ದು ಮಳೆ ಸರಿಯಾಗಿ ಆಗದೆ ಬೇಳೆ ಆಗದಿದ್ದರಿಂದ
ಇದುವರೆಗೆ ಬ್ಯಾಂಕಿನ ಸಾಲಾ ತಿರಿಸಿರುವದಿಲ್ಲಾ ಸಾಲಾ ಹಾಗು ಬಡ್ಡಿ ಹಾಗೆ ಇರುತ್ತದೆ ನನ್ನ ಮಗಳು ಕವೀತಾ 8 ವರ್ಷ ಇವಳಿಗೆ ಇಗ 6 ತಿಂಗಳ
ಹಿಂದೆ ಮೈಯಲ್ಲಿ ಆರಾಮ ಇಲ್ಲದ್ದರಿಂದ ಇವಳಿಗೆ ಹೈದ್ರಾಬಾದನಲ್ಲಿ ದವಖಾನೆಗೆ ತೊರಿಸಿದ್ದು ಇವಳ
ದವಖಾನೆಖರ್ಚು ಸುಮಾರು 2 ಲಕ್ಷ ರೂ ಆಗಿದ್ದು ಈ 2 ಲಕ್ಷ ರೂ ಯನ್ನು ನಮ್ಮ ಅಣ್ಣನಾದ ಮೊಗಲಪ್ಪಾ
ತಂದೆ ಕಾಶಪ್ಪಾ ಗುಂಡನೋಳ ಸಾ|| ಮೊಗಲಮಡಕಾ ಇವರ ಹತ್ತಿರ ತಂದು ದವಖಾನೆಯ ಬಿಲ್ ಕಟ್ಟಿದ್ದು ಇರುತ್ತದೆ.ನನ್ನ ಗಂಡನು ಒಕ್ಕಲುತನ ಹಾಗು ಕೂಲಿ ಕೆಲಸ
ಮಾಡಿಕೊಂಡು ಊರಲ್ಲಿ ಇರುತಿದ್ದು ಇಗ 2-3 ತಿಂಗಳಿಂದ ನನ್ನ ಗಂಡನು ನಮಗೆ ಬಾಕಿ ಜಾಸ್ತಿಯಾಗಿದೆ
ನಾವು ಸಾಲ ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಲು ಚಿಂತೆ ಮಾಡುತಿದ್ದನು ಇಗ 8
ದಿನಗಳಿಂದ ನನ್ನ ಗಂಡ ಕೆಲಸಕ್ಕೆ ಹೊಗದೆ ಮನೆಯಲ್ಲಿ ಮಲಗಿಕೊಂಡಿದ್ದನು ನಾನು ನನ್ನ ಗಂಡನಿಗೆ
ಯಾಕೆ? ಚಿಂತೆ ಮಾಡುತ್ತಾ ಮಲಗಿದ್ದಿ ಎನು ಚಿಂತೆ ಮಾಡಬೇಡ ಕೂಲಿ ನಾಲಿ ಮಾಡಿ ಬಾಕಿ ಕಟ್ಟೋಣ ಅಂತಾ
ದೈರ್ಯ ಹೇಳುತಿದ್ದೆನು. ದಿನಾಂಕ 30-01-2016 ರಂದು ಬೇಳಗ್ಗೆ 11-30 ಗಂಟೆ ಸುಮಾರಿಗೆ ನನ್ನ ಗಂಡ
ವೆಂಕಟಪ್ಪಾ ತಂದೆ ಕಾಶಪ್ಪಾ ಶಿವಪ್ಪೋಳ ಇವರು ನಮ್ಮ ಅಡುಗೆ ಮನೆಯಲ್ಲಿ ಮಲಗಿಕೊಂಡಿದ್ದರು.ನಮ್ಮುರಲ್ಲಿ
ಇಂದು ನಮ್ಮ ಕುಲದವರು ಸತ್ತಿದ್ದರಿಂದ ನಾನು ಸತ್ತವರ ಮನೆಗೆ ಹೊಗಿದ್ದೆನು ಇಂದು ಮದ್ಯಾನ 1-30
ಗಂಟೆ ಸುಮಾರಿಗೆ ನಾನು ತಿರುಗಿ ಮನೆಗೆ ಬಂದಾಗ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರು ನಮ್ಮ
ಅಡುಗೆ ಮನೆಯಲ್ಲಿ ಮೇಲೀನ ತೊಲೆಗೆ ಇದ್ದ ಕಬ್ಬಿಣದ
ಕೊಂಡಿಗೆ ಸೆಲ್ಲಾ[ ಟಾವಲದಿಂದ] ಕುತ್ತಿಗೆಗೆ ಊರುಲು ಹಾಕಿಕೊಂಡು ಜೊತುಬಿದ್ದಿದ್ದು
ಇದನ್ನು ನೋಡಿ ನಾನು ಚಿರುತ್ತಾ ಹೊರಗೆ ಬಂದಾಗ ಅಲ್ಲೆ ಇದ್ದು ನಮ್ಮ ಮನೆಯ ಅಕ್ಕಪಕ್ಕದವರಾದ
ಪೆಂಟಪ್ಪಾ ತಂದೆ ಮೊಗಲಪ್ಪಾ ದೊಡ್ಡಬುಗ್ಗೋಳ, ಮತ್ತು ಬುಗ್ಗಪ್ಪಾ ತಂದೆ ಸಾಬಣ್ಣಾ ದೊಡ್ಡಬುಗ್ಗೋಳ,
ಮೊಗಲಪ್ಪಾ ತಂದೆ ಕಾಶಪ್ಪಾ ಪಿಲ್ಲಿಗುಂಡ್ಲಾ, ಹಾಗು ವೆಂಕಟಪ್ಪಾ ತಂದೆ ರಾಮಪ್ಪಾ ಗಿದ್ದಬಾವಿ
ಇವರುಗಳು ಓಡಿ ಬಂದು ನನ್ನ ಗಂಡ ಜೀವಂತ ಇರಬಹುದು ಅಂತಾ ಉರುಲು ಹಾಕಿಕೊಂಡಿದ್ದನ್ನು
ಕುಡುಗೊಲುದಿಂದ ಕೊಯ್ದು ಕೇಳಗೆ ಹಾಕಿ ನೊಡಲಾಗಿ
ನನ್ನ ಗಂಡನು ಮೃತ ಪಟ್ಟಿದ್ದನು .ನನ್ನ ಗಂಡ ವೆಂಕಟಪ್ಪಾ ತಂದೆ
ಕಾಶಪ್ಪಾ ಇವರು ಬ್ಯಾಂಕಿನಲ್ಲಿ ಹಾಗು ಖಾಸಗಿ ಸಾಲಾ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡಿ ಮಾನಸಿಕ
ಮಾಡಿಕೊಂಡು ಅದೆ ಕೊರಗಿನಲ್ಲಿ ಇಂದು ದಿನಾಂಕ
30-01-2016 ರಂದು ಮದ್ಯಾನ 1-30 ಗಂಟೆ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಮೃತಟ್ಟಿದ್ದು
ನಾನು ನಮ್ಮೂರ ಹಿರಿಯರಾದ ಸತ್ಯಾನಾರಾಯಣರೆಡ್ಡಿ ಪಾಟೀಲ ಇವರ ಜೊತೆಯಲ್ಲಿ ಇಂದು ಠಾಣೆಗೆ ಬಂದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಹೇಳಿಕೆ
ಫೀರ್ಯಾದಿ ಕೊಟ್ಟ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment