ಆಕ್ರಮವಾಗಿ
ಮರಳು ತುಂಉತ್ತಿದ್ದ ವಾಹನಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಕೋಳಕೂರ ಗ್ರಾಮದ ಸೀಮಾಂತರದ ಬೀಮಾ ನದಿಯ ದಂಡೆಯಿಂದ ಟ್ರ್ಯಾಕ್ಟರ ಮತ್ತು
ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು (ಉಸುಕ) ನ್ನು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳದೆ
ಕಳ್ಳತನದಿಂದ ತುಂಬುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರ್ಗಿ
ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ದಾಳಿ ಮಾಡಲಾಗಿ ಸದರಿ ವಾಹನ ಚಾಲಕರು ಕತ್ತಲೆಯಲ್ಲಿ ಓಡಿ
ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಸ್ಥಳದಲ್ಲಿದ್ದ 1] ಟಿಪ್ಪರ ನಂ
ಕೆಎ 32—ಸಿ- 4415 ಇದ್ದು
ಅದರಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ
ಅ.ಕಿ 100000/ ರೂ 2) ಟಿಪ್ಪರ ನಂ
ಓಆರ್-14-ಓ-6077 ಒಂದು
ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ
ಅ.ಕಿ 100000/ ರೂ 3] ಟ್ರ್ಯಾಕ್ಟರ
ನಂ ಕೆಎ 32-ಟಿ-7059 ಇದ್ದು ಅದರ ಟ್ರಾಲಿಯಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅ.ಕಿ 500/- ಟ್ರ್ಯಾಕ್ಟರ
ಅ.ಕಿ. 50,000=00 ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಜೇವರಗಿ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಗೆ ನರಿಬೊಳ ಗ್ರಾಮದ
ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು
ಪಡೆದುಕೊಳ್ಳದೆ ಟ್ರ್ಯಾಕ್ಟರ್ ನಂ ಕೆ.ಎ32ಟಿ8988-89 ನೇದ್ದರಲ್ಲಿ ಕಳ್ಳತನದಿಂದ ಮರಳು
ತುಂಬುತ್ತಿದ್ದಾಗ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ರವರು ಮತ್ತು ಸಿಬ್ಬಂದಿ ಜನರು
ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಅದರಲ್ಲಿದ್ದ ಒಂದು ಬ್ರಾಸ್ ಅಂ.ಕಿ 500
ನೇದ್ದವುಗಳನ್ನು ಜಪ್ತಿ ಮಾಡಿದ್ದು ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು ಸದರ ಟ್ರ್ಯಾಕ್ಟರದೊಂದಿಗೆ ಜೇವರಗಿ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
No comments:
Post a Comment