ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ದೊಡ್ಡಪ್ಪ ಹೇಬಳೆ ಅಬಕಾರಿ ನಿರೀಕ್ಷಕರು
ಉಪ-ವಿಭಾಗ ಚಿತ್ತಾಪೂರ ಇವರು ಹಾಗು ಪ್ರಭಾರಿ
ಅಧೀಕಾರಿ ಅಬಕಾರಿ ಉಪಾಧೀಕ್ಷಕರು ಚಿತ್ತಾಪೂರ ಇವರ ನೇತೃತ್ವದಲ್ಲಿ ಗಸ್ತು ಕಾರ್ಯಾ ಮಾಡುತ್ತಾ
ಸೇಡಂ ತಾಲೂಕಿಗೆ ಭೇಟಿ ನೀಡಿದಾಗ, ಸಾಯಂಕಾಲ 1630 ಗಂಟೆಗೆ ರಿಬ್ಬನಪಲ್ಲಿ ಚಕ್ಕಪೊಸ್ಟ ಹತ್ತಿರ ಮುಧೋಳ
ಗ್ರಾಮದಲ್ಲಿ ಈ ಹಿಂದೆ ಸುಮಾರು 4-5 ಅಬಕಾರಿ
ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಾದ 1] ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ 2] ಬಾಲರಾಜ ತಂದೆ
ಕಿಷ್ಟಯ್ಯ ಕಲಾಲ 3] ಸತ್ಯಾವಾನ 4] ನಾರಾಯಣ
ಮುಂತಾದವರು ಅಕ್ರಮವಾಗಿ ಸಿಹೆಚ್ ಪೌಢರ ಮಿಶ್ರೀತ ಕಲಬೇರಿಕೆ ಸೇಂದಿ ತಯಾರಿಸುವ
ಕೆಲಸವನ್ನು ಮತ್ತೆ ಆರಂಭಿಸಿರುತ್ತಾರೆ ಎಂಬಾ ಖಚಿತ ಮಾಹಿತಿ ಮೇರೆಗೆ ಉಪಾಧೀಕ್ಷಕರು ಇವರ
ನೇತೃತ್ವದಲ್ಲಿ ಮುಧೋಳಕ್ಕೆ ಪಂಚರ ಜೋತೆಗೆ ಭೇಟಿ ನೀಡಿ ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ ಇವರ
ಮನೆಯನ್ನು ಶೋಧನೆ ಮಾಡಲು ಮನೆಯ ಹತ್ತಿರ ಹೊದಾಗ ಮನೆಯ ಮುಂದೆ ನಿಂತಿದ್ದ ಬಸವರಾಜ ತಂದೆ
ಕಿಷ್ಟಯ್ಯಾ ಕಲಾಲ ಎಂಬುವವರಿಗೆ ನಿಮ್ಮ ಮನೆಯಲ್ಲಿ ಅಕ್ರಮವಾಗಿ ಕಲಬೇರಿಕೆ ಸೇಂದಿ ತಯಾರಿಸಿ
ಮಾರಾಟಾ ಮಾಡುವ ಖಚಿತ ಮಾಹಿತಿ ಇದ್ದು, ಮನೆ ಶೋಧನೆ ಮಾಡುವದಿದೆ ಎಂದಾಗ ಸದರಿ ಬಸವರಾಜನು &
ಪತ್ನಿ ನಮ್ಮ ಅಧೀಕಾರಿ ಸಿಬ್ಬಂದಿ ಹಾಗು ನನಗೆ ಬೋಸಡಿ ಮಕ್ಕಳೆ ಊರಲ್ಲಿ 5-6 ಮನೆಯಲ್ಲಿ ಸೇಂದಿ
ತಯಾರಿಸುತ್ತಾರೆ. ನಾನು ತಯಾರಿಸಿ ಮಾರಾಟಾ ಮಾಡುತ್ತೇನೆ ನನ್ನದೇನು ಸೇಂಟಾ
ಕಿತ್ತಿಕೊಳ್ಳಲಿಕ್ಕಾಗಲ್ಲಾ ನೀವು ನನ್ನ ಮನೆ ಶೋಧನೆ ಹೇಗೆ ಮಾಡುತ್ತಿರಿ ನೋಡುತ್ತೇನೆ ಎಂದು ನನ್ನ
ಕೋರಳ ಪಟ್ಟಿ ಹಿಡಿದು ಏಳೆದಾಡಿದನು. ನಿಮಗೆ ಯಾರನ್ನು ಇವತ್ತು ಬಿಡುವದಿಲ್ಲಾ. ನಿಮ್ಮ ಜೀಪನ್ನು
ನಿಮ್ಮನ್ನು ಸುಡುತ್ತೇನೆ ಎಂದು ಬೇದರಿಕೆ ಹಾಕಿ. ಸುಳ್ಯಾ ಮಕ್ಕಳೆ ನಮ್ಮ ಮನೆ ಹೇಗೆ ಶೋಧನೆ ಮಾಡುತ್ತಿರಿ ನೋಡುತ್ತೇನೆ ನನ್ನ
ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಿರಿ ಎಂದು ನಿಮ್ಮ ಮೇಲೆ ಪೊಲೀಸ ಠಾಣೆಗೆ ದೂರು ಕೊಟ್ಟು
ನಿಮ್ಮನ್ನು ಸಸ್ಪೆಂಡ ಮಾಡಿಸುತ್ತೇನೆ ಎಂದು ಬೇದರಿಕೆ ಹಾಕಿದನು. ನಾವು ನಮ್ಮ ಸಿಬ್ಬಂದಿಯವರಾದ
ಪ್ರೋಬೇಷನರಿ ಅಬಕಾರಿ ಉಪ-ನಿರೀಕ್ಷಕ ಧನರಾಜ, ಚಾಲಕ & ಮಲ್ಲಿಕಾರ್ಜುನ ಅಬಕಾರಿ ರಕ್ಷಕ ಹಾಗು
ಉಪಾಧೀಕ್ಷಕರು ಹಿರಿಯ ಅಧಿಕಾರಿಗಳೊಂದಿಗೆ ಮೊಬಾಯಿಲ ಮುಲಕ ಸಮಾಲೋಚನೆ ಮಾಡಿದೇವು. ಹಿರಿಯ
ಅಧೀಕಾರಿಗಳಿಗೆ ವಿಷಯ ತಿಳಿಸಲಾಯಿತು. ಈ ರೀತಿಯಾಗಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ
ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಜೀವದ ಬೇದರಿಕೆ ಹಾಕಿ ಸುಳ್ಳು ದೂರು ದಾಖಲಿಸುವ
ಬೇದರಿಕೆ ಹಾಕಿ ಸುಳ್ಳುದೂರು ದಾಖಲಿಸುವ ಬೇದರಿಕೆ ಒಡ್ಡಿರುವ ಬಸವರಾಜ ತಂದೆ ಕಿಷ್ಟಯ್ಯಾ ಕಲಾಲ
ಹಾಗು ಆತನ ಪತ್ನಿಯ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ
:
ಅಫಜಲಪೂರ ಠಾಣೆ : ಶ್ರೀಮತಿ ಎಸುಬಾಯಿ ಗಂಡ
ಅಂಬಾರಾಯ ನಿಂಬಾಳ ಸಾ|| ಅಳ್ಳಗಿ (ಬಿ) ಇವರ ಗಂಡನಾದ ಅಂಬಾರಾಯ ತಂದೆ ಶರಣಪ್ಪ ನಿಂಬಾಳ ರವರು ನಮ್ಮ 3
ಎಕರೆ ಹೊಲದಲ್ಲಿ ಕಬ್ಬಿನ ಬೇಳೆ ಬೆಳೆದಿದ್ದು . ಸದರಿ ಹೊಲದ ಸಾಗುವಳಿಗಾಗಿ ಹಾಗೂ ಸುಮಾರು 4-5
ವರ್ಷಗಳಿಂದ ಹೊಲಗಳು ಸರಿಯಾಗಿ ಬೇಳೆಯದೆ ಕಾರಣದಿಂದ ಹೊಲದ ಸಾಗುವಳಿಗಾಗಿ ಅಫಜಲಪೂರದ ಕೆ.ಜಿ.ಬಿ
ಬ್ಯಾಂಕಿನಲ್ಲಿ ಮತ್ತು ಊರು ಮನೆಯಲ್ಲಿ ಕೈಗಡವಾಗಿ ಸುಮಾರು 4-5 ಲಕ್ಷ ರೂಪಾಯಿ ಸಾಲ
ಮಾಡಿಕೊಂಡಿರುತ್ತಾನೆ. ನನ್ನ ಗಂಡ ಯಾರ ಯಾರ ಹತ್ತಿರ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ನನಗೆ
ತಿಳಿಸಿರುವುದಿಲ್ಲ, ಆದರೆ 4-5 ಲಕ್ಷ ರೂಪಾಯಿ
ಸಾಲ ಇದೆ ಎಂದು ನನಗೆ ಹೇಳಿ, ಸಾಲ ತಿರಿಸುವುದು ಹೇಗೆ
ಎಂದು ಚಿಂತೆ ಮಾಡುತ್ತಿರುತ್ತಾನೆ. ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಇದ್ದ ಕಾರಣ ಕಬ್ಬು ಸಹ
ಒಣಗಿದ್ದು ನಾನು ಸಾಲ ಹೇಗೆ ತಿರಿಸಲಿ ಎಂದು ಆಗಾಗ ಒಂಟಿಯಾಗಿ ಕುಳಿತು ಬಿಡುತ್ತಿದ್ದನು. ಆಗ ನಾನು
ನನ್ನ ಗಂಡನಿಗೆ ಏನು ಆಗಲ್ಲ ಮುಂದೆ ಹೊಲ ಬೇಳೆದಾವು ಅಂತಾ ಹೇಳಿರುತ್ತೇನೆ. ಇಂದು ದಿನಾಂಕ
05-02-2016 ರಂದು ಬೆಳಿಗ್ಗೆ ಅಂದಾಜು 09:00
ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಲಕ್ಷ್ಮೀ ಮತ್ತು ಶರಣು ಇವರೊಂದಿಗೆ ಮನೆಯಲ್ಲಿದ್ದಾಗ
ನನ್ನ ಗಂಡ ನನಗೆ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ಬೆಳಿಗ್ಗೆ
11:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನ ಅಣ್ಣ ಬಸವಂತ್ರಾಯ ಇವರು ಮನೆಗೆ ಬಂದು
ಹೊಲದಲ್ಲಿ ನಿನ್ನ ಗಂಡ ನೇಣೂ ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಮಕ್ಕಳು ಹೊಲಕ್ಕೆ ಹೋಗಿ ನೋಡಲು ನನ್ನ ಗಂಡ
ನನ್ನ ಗಂಡನ ಅಣ್ಣ ತಮ್ಮಕಿಯ ಭಿಮರಾಯ ಹಾವಪ್ಪ ನಿಂಬಾಳ ಇವರ ಹೊಲದಲ್ಲಿರುವ ಧನಗಳು ಕಟ್ಟಲು ಮಾಡಿ
ಕೊಟಗಿಯಲ್ಲಿ ಪತ್ರಾಸ ಸೇಡ್ಡಿಗೆ ಇದ್ದ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದನು. ಆಗ
ನಮ್ಮ ಅಣ್ಣ ತಮ್ಮಕಿಯ ಗುಂಡಪ್ಪ ನಿಂಬಾಳ ಈತನು ಬಂದು ನಾನು ಈಗ ಬೆಳಿಗ್ಗೆ 11:00 ಗಂಟೆ ಸುಮಾರಿಗೆ
ಕೋಟಗಿಯಲ್ಲಿ ಮೇವು ತರಲು ಹೋದಾಗ ನೇಣು ಹಾಕಿಕೊಂಡಿದ್ದನ್ನು ನೋಡಿ ವಿಷಯ ತಿಳಿಸಿರುತ್ತೇನೆ ಎಂದು
ಮಾತಾಡುತ್ತಿದ್ದನು. ನಂತರ ನನ್ನ ಗಂಡನ ಶವವನ್ನು ನನ್ನ ಗಂಡನ ಅಣ್ಣ ಬಸವಂತ್ರಾಯ ಹಾಗೂ ಊರಿನ
ಇನ್ನು ಕೆಲವು ಜನರು ಕೂಡಿ ನೇಣಿನಿಂದ ಬಿಡಿಸಿರುತ್ತಾರೆ, ನನ್ನ ಗಂಡನು ಒಬ್ಬ ರೈತನಾಗಿದ್ದು, ಹೊಲದ ಸಾಗುವಳಿಯ ಸಂಬಂದ ಕೆ.ಜಿ.ಬಿ ಬ್ಯಾಂಕ ಅಫಜಲಪೂರ ಮತ್ತು
ಊರು ಮನೆಯಲ್ಲಿ ಅಂದಾಜು 4 ರಿಂದ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಈ ವರ್ಷ ಸರಿಯಾಗಿ ಬೇಳೆ ಬರದೆ ಇದ್ದ ಕಾರಣ ಸಾಲ ಹೇಗೆ
ತಿರಿಸೊದು ಅಂತಾ ಮನಸ್ಸಿಗೆ ಹಚ್ಚಿಕೊಂಡು ನಮ್ಮ ಹೊಲದ ಪಕ್ಕದಲ್ಲಿರುವ ಭೀಮರಾಯ ನಿಂಬಾಳ ಇವರ
ಹೊಲದಲ್ಲಿರುವ ಧನಗಳು ಕಟ್ಟುವ ಕೋಟಗಿಯಲ್ಲಿ
ಇಂದು ದಿನಾಂಕ 05-02-2016 ರಂದು
ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಯ ಮದ್ಯದ ಅವದಿಯಲ್ಲಿ ನೇಣು ಹಾಕಿಕೊಂಡು
ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment