Police Bhavan Kalaburagi

Police Bhavan Kalaburagi

Tuesday, March 1, 2016

Kalaburagi District Reported Crimes

ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ ತಂದೆ ಸಿದ್ದಪ್ಪ ನೆಲೋಗಿ ಸಾ: ನಿಜಾಮ ಬಜಾರ ಗೊಳಾ (ಕೆ) ಇವರು ಅಕ್ಕಳಾದ ಭೀಮಬಾಯಿಗೆ ಈಗ 15 ವರ್ಷಗಳ ಹಿಂದೆ ಹೊನಗುಂಟಾದ ಮಂಜುನಾಥ ತಂದೆ ಶರಣಪ್ಪಾ ಮೇತ್ರೆ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಸಧ್ಯ ಅವರಿಗೆ ಈಗ 1 ಹೆಣ್ಣು,  ಮತ್ತು 2 ಗಂಡು ಮಕ್ಕಳಿರುತ್ತಾರೆ. ಹೀಗಿದ್ದು ನಮ್ಮ ಮಾವನಾದ ಮಂಜುನಾಥ  ಇತನು ಒಂದೆರಡು ವರ್ಷಗಳ ವರೆಗೆ ನನ್ನ ಅಕ್ಕಳಿಗೆ  ಚನ್ನಾಗಿ ನೋಡಿಕೊಂಡು ಮುಂದೆ ಅಕ್ಕಳಿಗೆ ನೀನು ನೋಡಲು ಚನ್ನಾಗಿಲ್ಲಾ. ಚನ್ನಾಗಿ ಅಡುಗೆ ಮಾಡಲು ಬರೋಲ್ಲಾ ಅಂತಾ  ಜಗಳಮಾಡುವದು  ಹೊಡೆ-ಬಡೆ ಮಾಡುವದು  ಮಾಡುತ್ತಿದ್ದನು ಈ ವಿಷಯ ನಮ್ಮ ಅಕ್ಕ ನಮ್ಮ ಮೆನೆಗೆ ಬಂದಾಗ ನಮಗೆ , ಮನೆಯಲ್ಲಿ  ವಿಷಯ ತಿಳಿಸುತ್ತಿದ್ದಳು. ಆದರೂ  ಕೂಡ ನಾನು ಮತ್ತು  ನಮ್ಮ ತಂದೆ ಸಿದ್ದಪ್ಪಾ,  ತಾಯಿ ಚಿನ್ನಮ್ಮಾ ಎಲ್ಲರು ನಿನ್ನಗಂಡನಿಗೆ ಬುದ್ದಿ ಹೇಳುತ್ತೇವೆ ಆದರೂ ನೀನು ಗಂಡನೊಂದಿಗೆ ತಾಳ್ಮೆಯಿಂದ  ಸಂಸಾರಮಾಡಿಕೊಂಡು ಹೋಗಬೇಕು ಅಂತಾ  ಬುದ್ದಿಮಾತು ಹೇಳಿ  ಕಳುಹಿಸುತ್ತಿದ್ದೇವು.  ಆದರೂ ಮಂಜುನಾಥ ಇತನು  ತನ್ನಹೆಂಡತಿಗೆ  ಯಾವಾಗಲು ಜಗಳ ತೆಗೆದು ಹೊಡೆ ಬಡೆ ಮಾಡುವದು  ಹೆಚ್ಚಿಗೆ  ಮಾಡುತ್ತಿದ್ದರಿಂದ ನಾವು 2-3 ಸಲ  ಹೊನಗುಂಟಾಕ್ಕೆ ಹೋಗಿ ಬುದ್ದಿಹೇಳಿ  ಬಂದಿರುತ್ತೇವೆ.  ಈಗ್ಗೆ  8 ತಿಂಗಳ ಹಿಂದೆ ನಮ್ಮ ಅಕ್ಕ  ತನ್ನ ಗಂಡ ಮಕ್ಕಳೊಂದಿಗೆ ಹೊನಗುಂಟಾಬಿಟ್ಟು ಶಹಾಬಾದದ ನಿಜಾಮಬಜಾರದಲ್ಲಿ ನಿಂಗಪ್ಪಾ  ಹಿರೆನೂರ  ಇವರ ಮನೆಯಲ್ಲಿ  ಕಿರಾಯಿ  ಮನೆಮಾಡಿಕೊಂಡು ಇದ್ದರು. ದಿನಾಂಕಃ 01.03.2016 ರಂದು ಮಧ್ಯ ರಾತ್ರಿ 1.00 ಎ.ಎಮ್. ಸುಮಾರಿಗೆ ನಮ್ಮ ಅಕ್ಕ ಭೀಮಬಾಯಿ ತಮ್ಮ ಮೆನೆಯಲ್ಲಿ ಬಾಯಿ ಬಾಡುವ ಸಪ್ಪಳ ಕೇಳಿ ನಾನು ನಮ್ಮ ತಂದೆ ಸಿದ್ದಪ್ಪಾ,  ತಾಯಿ ಚಿನ್ನಮ್ಮಾ ಹೋಗಿ  ನೋಡಲಾಗಿ ನಮ್ಮ ಅಕ್ಕಳ ಮೈತುಂಬಾ ರಕ್ತಗಾಯಾಗಿದ್ದು ವಿಚಾರಿಸಲಾಗಿ ಹೇಳಿದ್ದೆನೆಂದರೆ, ನನ್ನ ಗಂಡ ಮಂಜುನಾಥ ಇತನು ಈಗ ನಡುರಾತ್ರಿಯಲ್ಲಿ ನನಗೆ ನೀನುಸರಿಯಾಗಿಲ್ಲಾ, ನಿನ್ನ ನಡತೆ ಚನ್ನಾಗಿಲ್ಲಾ, ಸರಿಯಾಗಿ  ಅಡುಗೆಮಾಡಲು ಬರೋಲ್ಲಾ,  ನನಗೆ  ಚನ್ನಾಗಿ ನೋಡಿಕೊಳ್ಳಲ್ಲಾ, ಮನೆಯಲ್ಲಿರಬೇಡ ಎಲ್ಲಿಯಾದರೂ ಹೋಗು ರಂಡಿ ಅಂತಾ ಜಗಳ ತೆಗೆದು ಕೈಯಿಂದ ಹೊಡೆಯುತ್ತಿದ್ದನು, ಆಗ  ನಾನು ಯಾಕೆ ಹೊಡೆಯುತ್ತಿ ಈಗ ಮಲಗಿಕೊ ನಾಳೆ ನಮ್ಮ ಅಪ್ಪ-ಅಮ್ಮನಿಗೆ ಕರೆಸುತ್ತೇನೆ ಅವರೊಂದಿಗೆ ಮಾತನಾಡು ಅಂತಾ ಅಂದಿದ್ದಕ್ಕೆ, ಅವರೇನು ಬಂದು ಸೆಂಟಾಕಿತ್ತುತ್ತಾರೇನು ಸೂಳಿ ಅಂತಾ ಬೈಯ್ದು  ಇವತ್ತು  ನಿನಗೆ ಬಿಡುವದಿಲ್ಲಾ ಸಾಯಿಸುತ್ತೇನೆ ಅಂತಾ ಅಂದವನೆ ಮನೆಯಲ್ಲಿಯ ಚಾಕು ತೆಗೆದುಕೊಂಡು ಹೊಡೆಯಲು ಬಂದಾಗ  ನಾನು ತಪ್ಪಿಸಿಕೊಳ್ಳುವಾಗ ನನ್ನ ಕುತ್ತಿಗೆ ಭಾಗಕ್ಕೆ ಮತ್ತು ಎದೆಗೆ ಮತ್ತು ಹೊಟ್ಟೆಯ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಆಗ ನಾನು ಚೀರಾಡುವ ಸಪ್ಪಳಕೇಳಿ ಬಾಜು ಮನೆಯ ಮಲ್ಲಿಕಾರ್ಜುನ ಕಟ್ಟಿ,  ಹಾಗೂ ನಮ್ಮ ಮನೆಯ ಮಾಲೀಕ ನಿಂಗಪ್ಪಾ ಹಿರೆನೂರ, ಇವರು ಬಂದು ನಮ್ಮ ಮನೆಯ ಲೈಟಿನಬೆಳಕಿನಲ್ಲಿ ನೋಡಿ ಜಗಳ ಬಿಡಿಸಿರುತ್ತಾರೆ. ಆಗ ನನ್ನ ಗಂಡ ಮಂಜುನಾಥ ಇವರು ಬಂದು ಬಿಡಿಸ್ಯಾರ ಅಂತಾ ಉಳಿದೀದಿ ಇನ್ನೊಮ್ಮೆ ನಿನಗೆ ಖಲಾಸಮಾಡು ತ್ತೇನೆ ಅಂತಾ ಬೈಯ್ಯುತ್ತಾ ಹೊರಗೆಹೋದನು. ಅಷ್ಟರಲ್ಲಿ ನೀವು ಬಂದಿರುತ್ತೀರಿ ಅಂತಾ ತಿಳಿಸಿದಳು, ನೋಡಲಾಗಿ ನಮ್ಮ ಅಕ್ಕಳ ಕುತ್ತಿಗೆ,  ಎದೆ, ಮತ್ತು ಹೊಟ್ಟೆಮೇಲೆ  ರಕ್ತಗಾಯವಾಗಿದ್ದು, ಗಾಯಪೆಟ್ಟು ಹೊಂದಿದ  ಅವಳಿಗೆ ಉಪಚಾರ ಕುರಿತು ನಾನು  ಮತ್ತು ನನ್ನ ತಂದೆ ಕೂಡಿ ಶಹಾಬಾದ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೆಟೆಡ್ ಆಸ್ಪತ್ರೆಗೆ  ಕಲಬುರಗಿಯಲ್ಲಿ ಸೇರಿಕೆಮಾಡಿರುತ್ತೇವೆ, ನನ್ನ ಅಕ್ಕಳಿಗೆ ಮಾನಸಿಕ ಮತ್ತು ದೈಹೀಕ ಕಿರುಕುಳಕೊಟ್ಟು ಹೊಡೆಬಡೆ ಮಾಡಿ ಚಾಕುವಿನಿಂಥ ಹೊಡೆದು ರಕ್ತಗಾಯಮಾಡಿ, ಜೀವಬೆದರಿಕೆ ಹಾಕಿದವನ ಮೇಲೆ  ಕಾನೂನು  ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಪ್ರಬು ತಂದೆ ಮುನ್ನಾ ಪವಾರ ಸಾ; ಎಮ್.ಜಿ. ನಾಯಕ ತಾಂಡಾ ಇವರು ದಿನಾಂಕ 28.02.2016 ರಂದು ಕಮಲಾಪೂರ ಗ್ರಾಮದಲ್ಲಿ ವಾರದ ಸಂತೆ ಇದ್ದ ಪ್ರಯುಕ್ತ ನಾನು ನಮ್ಮ ಗ್ರಾಮದ ಅನೀಲ ತಂದೆ ಲೊಕೇಶ ರಾಠೋಡ ಇಬ್ಬರು ಕೂಡಿಕೊಂಡು ನಮ್ಮ ಮನೆಯ ಸಾಮಾಗಳನ್ನು ಖರಿದಿಸುವ ಸಂಬಂದ ಮಧ್ಯಾನ ಮೊಟಾರ ಸೈಕಲ ಮೇಲೆ ಕಮಲಾಪೂರಕ್ಕೆ ಹೊರಟಿದ್ದು, ನಮ್ಮಂತೆ ನಮ್ಮ ಅಣ್ಣತಮ್ಮಕಿಯ ನವೀನ ತಂದೆ ಪಾಂಡು ಪವಾರ ಇತನು ತನ್ನ ಬಜಾಜ ಪಲ್ಸರ ಮೋಟಾರ ಸೈಕಲ ನಂ ಎಮ್.ಹೆಚ್ 04 ಜಿಬಿ 6143 ನೇದ್ದರ ಮೇಲೆ ನಮ್ಮ ಅಣ್ಣತಮ್ಮಕಿಯ ರಾಹುಲ್ ತಂದೆ ಜೈರಾಮ ಪವಾರ ಇತನನ್ನು ಕೂಡಿಸಿಕೊಂಡು ಕಮಲಾಪೂರಕ್ಕೆ ಹೊರಟಿದ್ದು. ನಾವು ವರನಾಳ ದಿಂದ ಕಮಲಾಪೂರಕ್ಕೆ ರಸ್ತೆಯ ಮೇಲೆ ಮೊಟಾರ ಸೈಕಲ ನಡೆಯಿಸಿಕೊಂಡು ಹೊಗುತ್ತಿದ್ದು. ನವೀನ ಇತನು ನಮ್ಮಿಂದ ಅಂದಾಜ 50 ಮೀಟರ ಮುಂದೆ ತನ್ನ ಮೊಟಾರ ಸೈಕಲನ್ನು ನಡೆಯಿಸಿಕೊಂಡು ಹೊಗುತ್ತಿದ್ದು. ನಾವು ಅವರ ಹಿಂದೆ ಹೊಗುತ್ತಿದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ನವೀನ ಇತನು ಭಗವಾನ ತಾಂಡಾದ ಬಸ್ಸ ನಿಲ್ದಾಣ ಹತ್ತಿರ ಇರುವ ಇಳಿಜಾರಿಯಲ್ಲಿ ತನ್ನ ಮೊಟಾರ ಸೈಕಲನ್ನು ರಸ್ತೆಯ ಎಡಗಡೆಯಿಂದ ನಡೆಯಿಸಿಕೊಂಡು ಹೊಗುತ್ತಿದ್ದು ಅದೇ ವೇಳೆಗೆ ಕಮಲಾಪೂರ ಕಡೆಯಿಂದ ಒಂದು ಕ್ರೊಜರ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಸುತ್ತಾ ಒಮ್ಮಲೆ ಬಂದು ನವೀನ ಇತನ ಮೊಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು. ಅಪಘಾತ ಪಡಿಸಿದ ಪರಿಣಾಮ ನವೀನ ಮತ್ತು ರಾಹುಲ ಇಬ್ಬರು ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಸದರಿ ಅಪಘಾತನ್ನು ನೋಡಿ ನಾನು ಮತ್ತು ಅನೀಲ ಇಬ್ಬರು ಕೂಡಿಕೊಂಡು ಹೋಗಿ ನೋಡಲು ನವೀನ ಇತನು ಸ್ಥಳದಲ್ಲಿ ಮೃತ ಪಟ್ಟಿದ್ದು ಅವನ ಬಾಯಿಯಿಂದ, ಮೂಗಿನಿಂದ ರಕ್ತ ಬರುತ್ತಿದ್ದು, ಬಲಗೈ ಮುಂಗೈ ಹತ್ತಿರ ಮುರಿದಿದ್ದು,ಎದೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಎರಡು ಕಾಲಗಳ ಮಳಕಾಲ ಹತ್ತಿರ ರಕ್ತಗಾಯವಾಗಿದ್ದು, ಗುಪ್ತಾಂಗದ ಹತ್ತಿರ ರಕ್ತಗಾಯವಾಗಿದ್ದು, ಮತ್ತು ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ರಾಹುಲ್ ಇತನಿಗೆ ನೋಡಲು ಅವನ ತಲೆಗೆ ಭಾರಿ ಒಳಪೇಟ್ಟಾಗಿದ್ದು, ಬಲಗಾಲ ಮಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು ಎಡಗಾಲ ಮಳಕಾಲ ಮೇಲೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು ಇರುತ್ತದೆ. ಎಡಗೈ ಮುಂಗೈ ಮುಂದೆ ರಕ್ತಗಾಯವಾಗಿದ್ದು ಮತ್ತು ದೇಹದ ಮೇಲೆ ಅಲ್ಲಲ್ಲಿ ಗಾಯಗಳಾಗಿದ್ದು ಇರುತ್ತದೆ, ಸದರಿಯವನು ನರಳಾಡುತ್ತಿದ್ದು ಅವನಿಗೆ ನೀರು ಕುಡಿಸಿ ವಿಚಾರಿಸುವಷ್ಠರಲ್ಲಿ ಸದರಿಯನು ಸ್ಥಳದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಸದರಿಯವರ ಮೊಟಾರ ಸೈಕಲಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ ಕ್ರೋಜರ ಜೀಪ ನಂಬರ ನೋಡಲು ಅದು ಕೆಎ 38 ಎಮ್ 2104 ಅಂತ ಇದ್ದು ಅದರ ಚಾಲಕ ಜೀಪನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

No comments: