ಕೊಲೆ ಪ್ರಕರಣ :
ಮುಧೋಳ
ಠಾಣೆ : ಶ್ರೀ ಸಾಬಣ್ಣ ತಂದೆ
ಹಣಮಂತ ತಳವಾರ ಸಾ|| ಹಂದರಕಿ ಗ್ರಾಮ ಇವರು ಹಾಗೂ
ನಮ್ಮ ತಮ್ಮನಾದ ವಾಸುದೇವ ತಂದೆ ಹಣಮಂತ ಇಬ್ಬರೂ ಅಣ್ಣ ತಮ್ಮಂದಿರು ಇದ್ದು, ನಾವಿಬ್ಬರೂ ಬೇರೆ
ಬೇರೆಯಾಗಿದ್ದು ನಮ್ಮ ತಮ್ಮ ವಾಸುದೇವ ಇತನಿಗೆ ನಾಗಮ್ಮ ಅಂತಾ ಹೆಂಡತಿ ಇದ್ದು ಇವರಿಗೆ ಇಬ್ಬರೂ
ಹೆಣ್ಣು ಮಕ್ಕಳು ಒಬ್ಬ ಗಂಡಸು ಮಗ ಇರುತ್ತಾನೆ. ದಿನಾಂಕ: 18-03-2016 ರಂದು ಬೆಳಿಗ್ಗೆ ನಮ್ಮ
ತಮ್ಮ ವಾಸುದೇವ ಹಾಗೂ ಅವರ ಹೆಂಡತಿ ನಾಗಮ್ಮ ಮತ್ತು ನಮ್ಮೂರ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ
ಹಾಗೂ ಯಲ್ಲಪ್ಪನ ಭಾಮೈದುನನಾದ ರಾಂಪೂರ ಗ್ರಾಮದ ಮಲ್ಲಪ್ಪ ಹೀಗೆ ನಾಲ್ಕು ಜನರು ಕೂಡಿಕೊಂಡು ಮದನಾ
ಗ್ರಾಮದ ನಾಗಮ್ಮನ ತವರು ಮನೆಗೆ ಕೂಲಿ ಕೆಲಸಕ್ಕಾಗಿ ಬಂದು ಅಂದು ಸದರಿ ಯಲ್ಲಪ್ಪನ ತಮ್ಮನಾದ
ಶರಣಪ್ಪ ಮದನಾ ಇವರ ಮನೆಯನ್ನು ರೀಪೆರಿ ಮಾಡಿದ್ದು ನಂತರ ಎರಡು ದಿವಸ ಬಿಟ್ಟು ದಿನಾಂಕ
20-03-2016ರಂದು ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ತವರು ಮನೆಯಲ್ಲಿ ಬಿಟ್ಟು
ವಾಪಸ್ಸು ನಮ್ಮೂರಿಗೆ ಬಂದಿದ್ದಳು ನಮ್ಮ ತಮ್ಮ ವಾಸುದೇವ ಹಾಗೂ ನಮ್ಮೂರ ಯಲ್ಲಪ್ಪ ಮತ್ತು ಅವರ
ಬಾಮೈದುನನಾದ ಮಲ್ಲಪ್ಪ ರಾಂಪೂರ ಮದನಾದಲ್ಲಿ ಕೆಲಸಮಾಡಿಕೊಂಡು ಇದ್ದರು. ನಿನ್ನೆ ದಿನಾಂಕ:
22-03-2016 ರಂದು ಮದ್ಯಾಹ್ನ ನಮ್ಮ ತಮ್ಮನ ಹೆಂಡತಿ ನಾಗಮ್ಮ ಇವಳು ತನ್ನ ಗಂಡನಿಗೆ ಪೋನ ಮಾಡಿ
ಮಾತನಾಡಿದ್ದು ನಮ್ಮ ತಮ್ಮನು ಇಂದು ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿದನು. ರಾತ್ರಿ 10
ಗಂಟೆ ಸುಮಾರಿಗೆ ಮತ್ತೆ ನಮ್ಮ ತಮ್ಮನ ಹೆಂಡತಿ ನನ್ನ ಗಂಡ ಇನ್ನೂ ಮನೆಗೆ ಬಂದಿಲ್ಲ ಅಂತಾ ನಮ್ಮ
ತಮ್ಮನಿಗೆ ಪೋನ ಕರೆ ಮಾಡಿದಾಗ ಪೋನ ಸ್ವೀಚ್ಚ ಆಫ್ ಅಂತಾ ಹೇಳಿದ್ದು ಇರುತ್ತದೆ. ನಮ್ಮ ತಮ್ಮನ ಪೋನ
ನಂಬರ 9611037407 ಅಂತಾ ಇರುತ್ತದೆ. ರಾತ್ರಿ ಕೂಡ ನಮ್ಮ ತಮ್ಮನು ಮನೆಗೆ ಬಂದಿರುವುದಿಲ್ಲ. ದಿನಾಂಕ
23-03-2016 ರಂದು ಬೆಳಿಗ್ಗೆ 7:30-8 ಗಂಟೆ ಸುಮಾರಿಗೆ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ
ತಂದೆ ಸಿದ್ರಾಮಪ್ಪ ಕಾನಾಗಡ್ಡ ಸಾ|| ಮದನಾ ಇವರು ನನಗೆ ಹಾಗೂ ನಮ್ಮ ತಮ್ಮನ ಹೆಂಡತಿ ನಾಗಮ್ಮ
ಇವಳಿಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ತಮ್ಮನಾದ ವಾಸುದೇವ ಇತನಿಗೆ ಕೊಲಕುಂದಾ ಗ್ರಾಮದ
ಹತ್ತಿರ ಹೊಲದಲ್ಲಿ ಹೊಡೆದು ಕೊಲೆ ಮಾಡಿ ಹಾಕಿರುತ್ತಾರೆ ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗೂ
ನಮ್ಮ ತಮ್ಮನ ಹೆಂಡತಿ ನಾಗಮ್ಮ ಹಾಗೂ ನಮ್ಮ ಅಣ್ಣತಮ್ಮಕಿಯಾದ ಮೈಪಾಲ ತಂದೆ ರಾಮಣ್ಣ ಸಣ್ಣಿಂಗಿ
ಇತರರೂ ಕೂಡಿ ಇಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಕೊಲಕುಂದಾ ಗ್ರಾಮದ ಕಮಾನ ದ್ವಾರ ಬಾಗಿಲಿನ
ಎದುರುಗಡೆ ಇರುವ ಹೊಲದಲ್ಲಿ ನಮ್ಮ ತಮ್ಮನಿಗೆ ಬಂದು ನೊಡಲಾಗಿ ನಮ್ಮ ತಮ್ಮನ ಹೆಣ ಹೊಲದಲ್ಲಿ ಒಂದು
ಬಿಳಿ ಬಣ್ಣದ ಟವೇಲದ ಮೇಲೆ ಬಲ ಮಗ್ಗಿಲಾಗಿ ಬಿದ್ದಿದ್ದು ಬಾಯಿಯಿಂದ ಮುಗಿನಿಂದ ರಕ್ತ ಬಂದಿದ್ದು
ಇರುತ್ತದೆ. ಮತ್ತು ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ
ಅಲ್ಲಿದ್ದ ನಮ್ಮ ತಮ್ಮನ ಅತ್ತೆಯಾದ ನಾಗಮ್ಮ ಗಂಡ ಸಿದ್ರಾಮಪ್ಪ ಮತ್ತು ಮಾವನಾದ ಸಿದ್ರಾಮಪ್ಪ ತಂದೆ
ಭೀಮಪ್ಪ ಕಾನಾಗಡ್ಡ ಹಾಗೂ ನಮ್ಮ ತಮ್ಮನ ಬಾಮೈದುನನಾದ ಭೀಮಶಪ್ಪ ಇವರಿಗೆ ವಿಚಾರಿಸಲಾಗಿ ಅವರು
ತಿಳಿಸಿದ್ದೇನೆಂದರೆ, ನಿನ್ನೆ ಸಾಯಂಕಾಲ ನಿಮ್ಮ ತಮ್ಮ ವಾಸುದೇವ ಇತನು ಹಂದರಕಿ ಊರಿಗೆ
ಹೋಗುತ್ತೇನೆ ಅಂತಾ ಹೇಳಿದ್ದರಿಂದ ನಾವು ಯಲ್ಲಪ್ಪ ಹಾಗೂ ಹಾಗೂ ನಿಮ್ಮ ತಮ್ಮ ವಾಸುದೇವ ಇವರಿಗೆ
ನಮ್ಮ ಮನೆ ಕೆಲಸ ಮಾಡಿದ್ದರ ಕೂಲಿಹಣ ಒಟ್ಟು 10,000/- ರೂ ಕೊಟ್ಟಿದ್ದು ಇವರಿಬ್ಬರೂ ಕೂಡಿ
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇವರಿಬ್ಬರೂ ಕೂಡಿ ನಮ್ಮ ಮನೆಯಿಂದ ಹಂದರಕಿಗೆ ಹೊಗುತ್ತೇವೆ
ಅಂತಾ ಹೇಳಿದ್ದು ನಾವು ಅವರಿಗೆ ರಾತ್ರಿ ಆಗಿದೆ ಈಗ ಹೊಗಬೇಡಿರಿ ನಾಳೆ ಮುಂಜಾನೆ ಹೋಗಿರಿ ಅಂತಾ
ಹೇಳಿದ್ದಕ್ಕೆ ನಾವು ಇಗಲೆ ಹೋಗುತ್ತೇವೆ ಅಂತಾ ನಮ್ಮ ಮನೆಯಿಂದ ಹೋಗಿದ್ದು ಇವರಿಬ್ಬರೂ ಕೆಲಸ
ಮಾಡಿದ ಹಣವನ್ನು ಹಂಚಿಕೊಳ್ಳುವ ಸಂಬಂಧವಾಗಿ ಒಬ್ಬರಿಗೊಬ್ಬರು ತಕರಾರು ಮಾಡುತ್ತಾ ಮನೆಯಿಂದ
ಹೋಗಿರುತ್ತಾರೆ. ಇಂದು ಮುಂಜಾನೆ ಕೊಲಕುಂದಾ ಗ್ರಾಮದವರು ನಿಮ್ಮ ತಮ್ಮನ ಮೃತ ದೇಹವನ್ನು ನೋಡಿ
ನಮಗೆ ಪೋನ ಮಾಡಿ ತಿಳಿಸಿದ್ದು, ನಾವು ಬಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದು
ನೊಡಿದ್ದು ನಿಮಗೆ ಈ ವಿಷಯವನ್ನು ಪೋನ ಮಾಡಿ
ತಿಳಿಸಿರುತ್ತೇವೆ ಅಂತಾ ತಿಳಿಸಿದರು. ನಮ್ಮ ತಮ್ಮನಾದ ವಾಸುದೇವ ಇತನಿಗೆ ನಿನ್ನೆ ದಿನಾಂಕ:
22-03-2016 ರಂದು ರಾತ್ರಿ 10 ಗಂಟೆಗೆ ಯಲ್ಲಪ್ಪ ತಂದೆ ದುರ್ಗಪ್ಪ ಸಣ್ಣಿಂಗಿ ಸಾ|| ಹಂದರಕಿ ಇತನು
ಕೂಲಿ ಕೆಲಸ ಮಾಡಿದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಊರಿಗೆ ಹೋಗುತ್ತೇನೆ ಅಂತಾ
ನನ್ನ ತಮ್ಮನಿಗೆ ಮದನಾದ ಅತ್ತೆ ಮಾವನ ಮನೆಯಿಂದ ಕರೆದುಕೊಂಡು ಬಂದು ದಾರಿಯಲ್ಲಿ ಕೊಲಕುಂದಾ
ಗ್ರಾಮದ ಹತ್ತಿರ ನಾಗಮ್ಮ ಅಗಸರ ಇವರ ಹೊಲದಲ್ಲಿ ರಾತ್ರಿ ವೇಳೆ ನಮ್ಮ ತಮ್ಮನ ತಲೆಗೆ ಬಲವಾಗಿ
ಯಾವುದೊ ಒಂದು ಗಟ್ಟಿ ವಸ್ತುವಿನಿಂದ ಹೊಡೆದು ಭಾರಿ ಗುಪ್ತಗಾಯಪಡಿಸಿದ್ದು ಇದರಿಂದ ನನ್ನ ತಮ್ಮನ
ಮೂಗಿನಿಂದ. ಕಿವಿಯಿಂದ, ಬಾಯಿಯಿಂದ ರಕ್ತಬಂದಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ
ಠಾಣೆ : ಶ್ರೀ ಲೋಕೇಶ ತಂದೆ ಕಾಶಪ್ಪ ಬಂದೂರ ಸಾ:ಹಂದರಕಿ ಗ್ರಾಮ ಇವರ ಸಂಗಡ ನಮ್ಮೂರ ಭೀಮರಾಯ
ಘಂಟೇರ, ಕಾಶಪ್ಪ ಗಡದೊರ, ರಾಮು ಗಡದೊರ, ಭೀಮರಾಯ ತಂದೆ ಹಣಮಂತ ಎಲ್ಲರೂ ಕೂಡಿ ಟ್ರಾಕ್ಟರ್ ನಂ-KA33 T9919 ನೇದ್ದನ್ನು ತೆಗೆದುಕೊಂಡು ಈರಪ್ಪ ತಂದೆ ತಿಪ್ಪಣ್ಣ ಗಡದೊರ ಇವರ ಹೊಲದಿಂದ ಕಣಿಕೆ ತರುವ ಕುರಿತು ಹಂದರಕಿಯಿಂದ ಹುಳಗೋಳ
ಕಡೆಗೆ ಹೊರಟಾಗ, ಹೊಸದಾಗಿರುವ ಟ್ರಾಕ್ಟರ್ ಚಾಲಕ ಆತನ ಹೆಸರು ನನಗೆ ಗೊತ್ತಿರುವದಿಲ್ಲ, ಚಾಲಕ ತನ್ನ ವಶದಲ್ಲಿದ್ದ ಟ್ರಾಕ್ಟರ್ ಅತೀವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದಾಗ ನಿಧಾನವಾಗಿ ಚಲಾಯಿಸಲು ನಾವು ಹೇಳಿದರೂ ಆತ ಹಾಗೇಯೆ ಚಲಾಯಿಸುತ್ತಿದ್ದನು ಮದ್ಯಾಹ್ನ 01-30 ಪಿ.ಎಮ್.ಕ್ಕೆ ಯಾದಗೀರ-ಸೇಡಂ ರೋಡಿನ ಮೇಲೆ ಮುಸ್ಲಿಂ ಸ್ಮಶಾನದ
ಹತ್ತಿರ ಒಮ್ಮೆಲೆ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಆಗ ನಾವೆಲ್ಲರೂ ತಗ್ಗಿನಲ್ಲಿ ಬಿದ್ದೇವು. ನನಗೆ, ಕಾಲಿಗೆ, ಪಾದಕ್ಕೆ ಮತ್ತು ಕೈಗಳಿಗೆ ರಕ್ತಗಾಯವಾಗಿದ್ದು, ಕಾಶಪ್ಪ ಗಡದೊರ ಇತನಿಗೆ ಟೊಂಕಕ್ಕೆ ಗುಪ್ತಗಾಯವಾಗಿತ್ತು, ಭೀಮರಾಯ ಘಂಟೇರ ಇತನ ಮೇಲೆ ಟ್ರಾಕ್ಟರ್ ಬಿದ್ದು ತಲೆಯ ಹಿಂದಿನ ಭಾಗ ಬಿಚ್ಚಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಉಳಿದವರಿಗೆ ಯಾವುದೇ ಗಾಯ
ಆಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಿಖಿನ ತಂದೆ
ಚಿದಂಬರಾಯ ಈತನು ಮಾತನಾಡುವ ಸ್ಥೀತಿಯಲ್ಲಿರದ ಕಾರಣ ಆತನ ತಂದೆಯಾದ ಚಿತಂಬರಾಯ ತಂದೆ ಮಲ್ಕಪ್ಪಾ
ಜಾಲೇಕಾರ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ಇವರ ಹಿರಿಯ ಮಗನಾದ ನಿಖಿನ ಈತನು ಕಲಬುರಗಿ ಸರ್ಕಾರಿ
ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ದಿನಾಂಕ: 08/03/2016 ರಂದು ಬೆಳಿಗ್ಗೆ
ಎಂದಿನಂತೆ ಮಗ ನಿಖಿನ ಈತನು ಕಾಲೇಜಿಗೆ ಹೋಗಿ ಮರಳಿ ಸಾಯಂಕಾಲ 4-00 ಗಂಟೆ ಸುಮಾರಿಗೆ ಮನೆಗೆ ಬಂದು
ನಾನು ಮಹಾಗಾಂವ ಕ್ರಾಸದಲ್ಲಿ ಗೆಳೆಯರಿಗೆ ಮಾತಾಡಿ ಬರುತ್ತೇನೆ ಅಂತಾ ಹೇಳಿ ಹೊರಟು ಹೋದನು ನನಗೆ
ಬೆಳಿಗ್ಗೆಯಿಂದ ಆರಾಮವಿಲ್ಲದ ಕಾರಣ ನಾನು ಉಪಚಾರ ಪಡೆದುಕೊಳ್ಳಲು ಮಹಾಗಾಂವ ಕ್ರಾಸಿನಲ್ಲಿರುವ
ಕಂಠಿಕಾರ ಆಸ್ಪತ್ರೆ ಹೋಗಿ ಕುಳಿತುಕೊಂಡೆನು ಸಾಯಂಕಾಲ 5-00 ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ
ಮೇಲೆ ನನ್ನ ಮಗನ ಗೆಳೆಯ ಗುಂಡಪ್ಪಾ ತಂದೆ ಭೀಮಶ್ಯಾ ಲಿಂಗನವಾಡಿ ಸಾ: ಮಹಾಗಾಂವ ಕ್ರಾಸ ಈತನು
ನಡೆಸುತ್ತಾ ಹಿಂದೆ ನನ್ನ ಮಗ ಕುಳಿತ್ತಿದ್ದು ಚಿಂಚೋಳಿ ರಸ್ತೆಯಿಂದ ಮಹಾಗಾಂವ ಕ್ರಾಸ ಕಡೆಗೆ
ಬರುತ್ತಿರುವಾಗ ಹಿಂದಿನಿಂದ ಒಬ್ಬ ಕ್ರೋಜರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು
ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದ ನನ್ನ ಮಗ ಕುಳಿತು ಹೊರಟ ಮೋ.ಸೈಕಲಕ್ಕೆ ಡಿಕ್ಕಿ
ಹೊಡೆದು ಅಪಘಾತ ಪಡಿಸಿದ್ದರಿಂದ ಇಬ್ಬರು ಮೋ.ಸೈಕಲ
ಸಮೇತ ರೋಡಿನ ಮೇಲೆ ಬಿದ್ದರು. ನಾನು ಗಾಬರಿಗೊಂಡಿ ಓಡಿ ಹೋಗಿ ಎಬ್ಬಿಸಿ ನೋಡಲಾಗಿ ನನ್ನ ಮಗನ ಬಲ
ತಲೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ ಎದೆ ಕೈಕಾಲುಗಳಿಗೆ ತರಚಿದ ರಕ್ತಗಾಯ ಹಾಗು ಮರ್ಮಾಂಗದ
ಚರ್ಮ ಕಿತ್ತಿ ರಕ್ತ ಬರುತ್ತಿದ್ದು. ಗುಂಡಪ್ಪಾ
ಈತನಿಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಕ್ರೂಜರ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ
ಹಾಗೆ ಮಾಡಿ ತನ್ನ ವಾಹನ ಸಮೇತ ಓಡಿ ಹೋದನು ಆಗ ಕ್ರೋಜರ ಜೀಪ ನಂಬರ ನೋಡಲಾಗಿ ಕೆಎ:33,ಎಂ:775
ಅಂತಾ ಇದ್ದು ಮತ್ತು ಮೋ.ಸೈಕಲ ನಂಬರ ನೋಡಲಾಗಿ ಕೆಎ:05 ಇಕೆ: 4920 ಅಂತಾ ಇದ್ದು ನಂತರ ನನ್ನ ಮಗನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ
ಹಾಕಿಕೊಂಡು ಇಲ್ಲಿ ಗಂಗಾ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತೇನೆ., ದಿನಾಂಕ: 08/03/2016
ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮಗ
ನೀಖಿನ ಮತ್ತು ಗುಂಡಪ್ಪಾ ಲಿಂಗನವಾಡಿ ಇವರಿಗೆ ರಸ್ತೆ ಅಪಘಾತವಾದ ಬಗ್ಗೆ ಈಗಾಗಲೇ ಫಿರ್ಯಾದಿ
ಕೊಟ್ಟಿರುತ್ತೇನೆ. ನನ್ನ ಮಗ ನಿಖಿನ ಈತನಿಗೆ ರಸ್ತೆ
ಅಪಘಾತವಾದ ನಂತರ ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಗೆ ದಿನಾಂಕ: 08/03/2016
ರಂದು ಸೇರಿಕೆ ಮಾಡಿ, ದಿನಾಂಕ: 10/03/16 ರವರೆಗೆ ಉಪಚಾರ ಪಡಿಸಿದ್ದು. ನಂತರ ರಾತ್ರಿ ಹೆಚ್ಚಿನ
ಉಪಚಾರ ಕುರಿತು ಕಲಬುರಗಿಯಿಂದ ಸೋಲಾಪೂರ ಯಶೋಧರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ:
11/03/2016 ರಂದು ಬೆಳಿಗ್ಗೆ ಸೇರಿಕೆ ಮಾಡಿರುತ್ತೇವೆ. ನನ್ನ ಮಗ ನಿಖಿನ ಇತನಿಗೆ ದಿನಾಂಕ:
11/03/2016 ರಿಂದ 21/03/2016 ರವರೆಗೆ ಉಪಚಾರ ಕೊಡಿಸಿದರು. ಸಹ ಸಂಪೂರ್ಣ ಗುಣ ಮುಖವಾಗಿರುವುದಿಲ್ಲಾ. ಹಣಕಾಸಿನ
ತೊಂದರೆಯಿಂದಾಗಿ ದಿನಾಂಕ:21/03/2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಸೋಲಾಪೂರದಿಂದ
ಬಿಡುಗಡೆ ಮಾಡಿಕೊಂಡು ಕಲಬುರಗಿಗೆ ಅಂಬುಲೇನ್ಸದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ ಅಕ್ಕಲಕೋಟಾ
ಹತ್ತಿರ ಸಾಯಂಕಾಲ 7-20 ಗಂಟೆಯ ಸುಮಾರಿಗೆ ನನ್ನ ಮಗ ನಿಖಿನ ಈತನು ರಸ್ತೆ ಅಪಘಾತದಿಂದಾದ
ಗಾಯಗಳಿಂದಾಗಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾಶರಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಯಶ್ವಂತ ತಂದೆ
ಅರ್ಜುನ ಶಿಲ್ಲ್ ಮೂರ್ತಿ ವಿಳಾಸ; ಜಲಸಂಗಿ ತಾ;ಹುಮನಾಬಾದ ಜಿಲ್ಲಾ ಬೀದರ ಸದ್ಯ ಓಂ.ನಗರ
ಗೇಟ ಹತ್ತಿರ ಓಕಳಿಕ್ಯಾಂಪ ಕಲಬುರಗಿ ಇವರ ಅಕ್ಕ ಅನ್ನಪೂರ್ಣ ಗಂಡ
ರಾಜಕುಮಾರ ಹೊಸಮನಿ ವ;31 ವರ್ಷ ಇವಳು ಇ.ಎಸ್.ಐ. ಆಸ್ಪತ್ರೆಗೆ ಕೆಲಸ ಮಾಡಿದ ಸಂಬಳತೆಗೆದುಕೊಂಡು
ಬರುತ್ತೇನೆ ಅಂತಾ ದಿನಾಂಕ 09-03-2016 ರಂದು ಬೆಳಗ್ಗೆ 8 ಗಂಟೆಗೆ ತನ್ನ ಮನೆಯಿಂದ ಹೋದವಳು ಮರಳಿ
ಮನಗೆ ಬಂದಿರುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment