ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 24-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ
ನಮ್ಮ ಅಣ್ಣ ಪರಶುರಾಮನ ಹೆಂಡತಿ ಜಗದೇವಿಬಾಯಿ
ಇವರು ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಅವರ ಮೈ ಸುಟ್ಟಿದ್ದು, ನನ್ನ ಅಣ್ಣ
ಪರಶುರಾಮ ಇವರು ನಮ್ಮ ಅತ್ತಿಗೆ ಉಪಚಾರ ಕುರಿತು ಜಿಲ್ಲಾ
ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು, ನಮ್ಮ ಅತ್ತಿಗೆ ಆರೈಕೆ ಕುರಿತು ನಮ್ಮ
ಅತ್ತಿಗೆ ತಾಯಿ ಸೀನುಬಾಯಿ ಗಂಡ ಪ್ರಭು ರಾಠೋಡ ಇವರು ಸರಕಾರಿ ಆಸ್ಪತ್ರೆಯಲ್ಲಿ ಇರುತ್ತಾರೆ. ಹೀಗಿದ್ದು ಇಂದು ದಿನಾಂಕ 25/03/16 ರಂದು ಸಂಜೆ 5-00 ಗಂಟೆ ಸುಮಾರಿಗೆ
ನಾನು ಮತ್ತು ತಂದೆ, ಜೀವಲಾ, ತಾಯಿ ಶಾಂತಾಬಾಯಿ ಮೂವರು ಮನೆಯಲ್ಲಿ ಇದ್ದಾಗ ನಮ್ಮ ಅಣ್ಣ ಪರಶುರಾಮ ಇತನು
ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ
ಹೊಂದುತ್ತಿರುವ ನಮ್ಮ ಅತ್ತಿಗೆ ಜಗದೇವಿ ಮತ್ತು ಅತ್ತಿಗೆ ತಾಯಿ ಸೀನುಬಾಯಿ ಇವರಿಗೆ ಊಟ ಕಟ್ಟಿಕೊಂಡು
ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಊಟ ಕೊಟ್ಟು ಬರುತ್ತೇನೆಂದು ಹೇಳಿ ಮನೆಯಿಂದ ತನ್ನ ಹೊಂಡಾ
ಯೂನಿಕ್ರಾನ್ ಎಂಹೆಚ್-04 ಸಿಎಲ್ 3439 ನೇದ್ದರ ಮೇಲೆ
ಒಬ್ಬನೇ ಕುಳಿತುಕೊಂಡು ಹೋದನು. ರಾತ್ರಿ 8-00 ಗಂಟೆ ಸುಮಾರಿಗೆ ಮನೆಯುಲ್ಲಿ ಇದ್ದಾಗ ನನಗೆ ಪರಿಚಯದ
ಬೆಡಶೂರ ಗ್ರಾಮದ ದಶರಥ ತಂದೆ ಭೀಮರಾಯ ಒಡೆಯರ ಇವರು ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ,
ನಿಮ್ಮ ಅಣ್ಣ ಪರಶುರಾಮ ಇತನು ತನ್ನ ಹೊಂಡಾ ಯೂನಿಕ್ರಾನ್ ಎಂಹೆಚ್-04 ಸಿಎಲ್ 3439 ಮೇಲೆ ಒಬ್ಬನೇ ಕುಳಿತುಕೊಂಡು ಆಲಗೂಡ
ಕ್ರಾಸ ದಾಟಿ ಇರುವ ಒಂದು ಬ್ರೀಡ್ಜ ಹತ್ತಿರ ಬಂದಾಗ
ಕಲಬುರಗಿ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ಅತಿವೇಗದಿಂದ ನಡೆಸುತ್ತಾ ಬಂದು ನಿನ್ನ ಅಣ್ಣ
ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದರಿಂದ, ಪರಶುರಾಮನಿಗೆ
ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಅವನ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಗ್ರಾಮೀಣ
ಠಾಣೆ ಕಲಬುರಗಿ ಪೊಲೀಸರು ಸಾಗಿಸುತ್ತಿದ್ದಾರೆ ಅಂತಾ ಯಾರೋ ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿಸಿದ್ದು
ನಾವು ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಣ್ಣನು ಅಪಘಾತದಿದಂದ ಮೃತಪಟ್ಟಿರುತ್ತಾನೆ ಅಂತಾ ಶ್ರೀ
ನಕಲು ತಂದೆ ಜೀವಲಾ ಚವ್ಹಾಣ ಸಾ:
ಅಣಕಲ ಖಿಂಡಿ ತಾಂಡಾ ತಾ: ಚಿತ್ತಾಪೂರ ಜಿಲ್ಲಾ ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ
ಜ್ಯೋತಿ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ವಿಳಾಸ ;ಪ್ಲಾಟ ನಂ. 213 ರೇವಣಸಿದ್ದಶ್ವರ ಕಾಲೂನಿ ಕಲಬುರಗಿ, ಇವರನ್ನು
ರೇವಣಸಿದ್ದಪ್ಪಾ ತಂದೆ ಕರಬಸ್ಸಪ್ಪಾ ಕಲ್ಯಾಣಿ ಸಾ;ರೇವಣಸಿದ್ದೇಶ್ವರ ಕಾಲೂನಿ ಕಲಬುರಗಿ ಇತನೊಂದಿಗೆ
ದಿನಾಂಕ.18-4-2009 ರಂದು ಗುರು ಹಿರಿಯರ ಸಮಕ್ಷಮಾದಲ್ಲಿ ಕಲಬುರಗಿಯ ವೀರೆಂದ್ರ ಪಾಟೀಲ್ ಕಲ್ಯಾಣ
ಮಂಟಪದಲ್ಲಿ ವರೋಪಚಾರ ಕುರಿತು 21 ತೊಲೆ ಬಂಗಾರ, ಹಿಡಿದಂತಹಾ
ಬಟ್ಟೆ ,ಹಾಂಡೆಬಾಂಡೆ ಹಾಗೂ ಗೃಹ ಬಳಕೆಯ ಸಾವಾನುಗಳು ಹೀಗೆ ಒಟ್ಟು
9 ರಿಂದ 10 ಲಕ್ಷದವರೆಗೆ ಹಣ ಖರ್ಚು ಮಾಡಿ ನಮ್ಮ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ.
ಮದುವೆಯಾದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಇವರು ಎಂ.ಬಿ.ಬಿ.ಎಸ್. ಮುಗಿದ ನಂತರ ಹೆಚ್ಚಿನ
ವಿದ್ಯಾಬ್ಯಾಕೆಂದು ಅಂದರೆ ಡಿ.ಎನ್.ಬಿ. ರೆಡಿಯಾಲೋಜಿ ಓದಲು ಒಂದು ವರ್ಷದ ಮಟ್ಟಿಗೆ ಬೆಂಗಳೂರಿಗೆ
ಹೋಗಿದ್ದು ನಾನು ನನ್ನ ತವರು ಮನೆಯಲ್ಲಿ ಇದ್ದೇನು. ಹೆಚ್ಚಿನ ಓದು ಮುಗಿಸಿಕೊಂಡು ಕಲಬುರಗಿಗೆ
ಬಂದು ನೆಲಸಿದರು ನಾನು ನಡೆಯಲು ಗಂಡನ ಮನೆಗೆ ಅಂದರೆ ಆರ್.ಎಸ್.ಕಾಲೂನಿಗೆ ಬಂದಿದ್ದು ಅಲ್ಲಿ 3-4
ದಿವಸ ಅಷ್ಟೆ ಚನ್ನಾಗಿ ನೋಡಿಕೊಂಡಿದ್ದು ನಮ್ಮ ಅತ್ತೆ ನಾಗಮ್ಮ ನನಗೆ ನೀನು ಮದುವೆಯಲ್ಲಿ ಹುಂಡ, ಬಂಗಾರ
ತಂದಿಲ್ಲಾ , ನಿಮ್ಮ ತಾಯಿ ತಂದೆಯ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ
ನನ್ನ ಮಗ ಡಾಕ್ಟರ ಇದ್ದಾನೆ ಎಂದು ಹಿಯಾಳಿಸಿ ಬೈಯುವದು ಅಲ್ಲದೆ ಅಡಿಗೆ ಸರಿಯಾಗಿ ಮಾಡಲು
ಬರುವದಿಲ್ಲಾ ಎಂದು ಮಾನಸಿಕವಾಗಿ ತೊಂದರೆ ಕೋಡುತ್ತಾ ಬಂದಿರುತ್ತಾರೆ. ಈ ವಿಷಯವನ್ನು ನನ್ನ ಗಂಡ
ರೇವಣಸಿದ್ದಪ್ಪಾ ಇವರಿಗೆ ತಿಳಿಸಿದರು ಕೂಡಾ ಅವರು ಕೂಡಾ ನಮ್ಮ ಅತ್ತೆಯವರ ಮಾತುಕೇಳಿ ರಂಡಿ ನಾನು
ಎಂ.ಡಿ.ಮಾಡಿ ಬಹಳ ಹಣ ಖರ್ಚ ಆಗಿದ್ದು ನಿಮ್ಮ ತಂದೆ ತಾಯಿಯವರಿಂದ 20 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವದು , ಬೆಡ
ರೂಮಿನಲ್ಲಿ ನನಗೆ ಕೈಯಿಂದ ಹೊಡೆಬಡಿ ಮಾಡಿ ದೈಹಿಕವಾಗಿ ಹಿಂಸೆ ಕೊಟ್ಟಿರುತ್ತಾರೆ. ನನಗೆ ತೊಂದರೆ ಕೋಡುತ್ತಿದ್ದ ಬಗ್ಗೆ ನನ್ನ ತಂದೆ
ತಾಯಿಯವರಿಗೆ ವಿಷಯ ತಿಳಿಸಿದಾಗ ನಮ್ಮ ತಂದೆ ಡಾ;ಚಂದ್ರಶೇಖರ ಪಾಟೀಲ್ ಮತ್ತು ನನ್ನ ತಾಯಿ ಸರೋಜಾ .ಸಿ.ಪಾಟೀಲ್ ಇವರುಗಳು
ಮಹಾಗಾಂವ ಗ್ರಾಮದ ಹಿರಿಯರಾದ 1)ಶಿವಕುಮಾರ ತಡಕಲ್ ,2)ಶಿವಪ್ರಭು ಪಾಟೀಲ್. 3) ಶರಣಪ್ಪಾ ಹತ್ತಿ 4) ಸನೀಲ್
ಹತ್ತಿ , 5)ಶಿತಿಕಂಠ ತಡಕಲ್ 7)ಶಂಕರೆಪ್ಪಾ ಹತ್ತಿ 8) ಸುಭಾಶ
ಪಾಟೀಲ್ ಕೆಸರಟಗಿ ಇವರುಗಳೆಲ್ಲರೂ ನನ್ನ ಗಂಡ
ಅತ್ತೆ ಯವರಿಗೆ ಸುಮಾರು ಬಾರಿ ಬುದ್ದಿಮಾತು ಹೇಳಿದ್ದು ಅಲ್ಲದೆ ಪಂಚಾಯತ ಮಾಡಿದರೂ ಕೂಡಾ ನನಗೆ ತೊಂದರೆ ಕೊಡುವದು ಬಿಟ್ಟಿರುವದಿಲ್ಲಾ . ದಿನಾಂಕ 23-3-2013 ನೇ ಸಾಲಿನಲ್ಲಿ ನನ್ನ ಗಂಡ ರೇವಣಸಿದ್ದಪ್ಪಾ ಬೀದರದಿಂದ ಕಲಬುರಗಿಗೆ
ಬಂದು ಕೆ.ಬಿ.ಎನ್. ಆಸ್ಪತ್ರೆಯಲ್ಲಿ ನೌಕರಿ
ಮಾಡಿಕೊಂಡಿದ್ದು ನಾವು ಕಲಬುರಗಿಗೆ ಬಂದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಹಾಗೂ ನನ್ನ ಅತ್ತೆ
ನಾಗಮ್ಮಾ ಹಾಗೂ ನಮ್ಮ ಭಾವ ಶಿವಶರಣಪ್ಪಾ ಕಲ್ಯಾಣಿ ಹಾಗೂ ನೆಗೆಣಿ ಸ್ವಾತಿ ಇವರೆಲ್ಲರೂ
ಕೂಡಿಕೊಂಡು ರಂಡಿ ನಿಮ್ಮ ತಂದೆ ತಾಯಿ
ಆಸ್ತಿವಂತರಿರುತ್ತಾರೆ ನಿನ್ನ ತವರು ಮನೆಯಿಂದ
ಇನ್ನೂ 20 ಲಕ್ಷ ರೂಪಾಯಿ ಹಾಗೂ ನಿಮ್ಮ ತಂದೆ ತಾಯಿ ಕಟ್ಟಿಸಿದ ಹೊಸಮನೆಯನ್ನು ನನ್ನ ಹೆಸರಿಗೆ
ಮಾಡಿಕೊಂಡು ಬಂದರೆ ನಮ್ಮ ಮನೆಯಲ್ಲಿ ನಿನಗೆ ಜಾಗ
ಇಲ್ಲದಿದ್ದರೆ ನಿನ್ನ ಮಗು ತೆಗೆದುಕೊಂಡು ನಿನ್ನ ತವರು ಮನೆಗೆ ಹೋಗು ಅಂತಾ ನಾಲ್ಕು ಜನರು ನನಗೆ
ಹೊಡೆಬಡಿ ಮಾಡಿ ಮನೆಯಿಂದ ಹೊರೆಗೆ ಹಾಕಿದಾಗ ನಾನು ಕಿರಕುಳ ತಾಳಲಾರದೆ ನನ್ನ ತಂದೆ ತಾಯಿಯವರ ಮನೆಗೆ
ಬಂದು ಉಳಿದುಕೊಂಡಿದ್ದು ದಿನಾಂಕ. 15-3-2016
ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ನನ್ನ ತಂದೆ ಚಂದ್ರಶೇಖರ ಪಾಟೀಲ್ , ತಾಯಿ
ಶ್ರೀಮತಿ ಸರೋಜಾ ಇಬ್ಬರು ಕೂಡಿಕೊಂಡು ನನಗೆ ನನ್ನ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ಇವರ ಹತ್ತಿರ
ಕರೆದುಕೊಂಡು ವಿಚಾರ ಮಾಡೋಣ ನಡೆಯಿರಿ ಅಂತಾ ಹೋದಾಗ ರೇವಣಸಿದ್ದೇಶ್ವರ ಕಾಲೂನಿ ರವಿ ಮಾಸ್ತರ ಇವರ ಮನೆಯ ಹತ್ತಿರ ಹೋಗುತ್ತಿರುವಾಗ ಅದೇ
ವೇಳಗೆ ನನ್ನ ಗಂಡ ಎದರುಗಡೆ ಬಂದನು ಆಗ ನನ್ನ ತಂದೆ ತಾಯಿಯವರು ನಿಂತು ಮಾತಾಡಿಸಿ ನನ್ನ ಮಗಳನ್ನು
ಕರೆದುಕೊಂಡು ಹೋಗಿ ಸರಿಯಾಗಿ ಜೀವನ ಮಾಡಿರಿ ಅಂತಾ ಕೇಳಿದಕ್ಕೆ ಆಗ ನನ್ನ ಗಂಡ ರೇವಣಸಿದ್ದಪ್ಪಾ
ಕಲ್ಯಾಣಿ ಇವರು ನನಗೆ ತಲೆಯ ಮೇಲಿನ ಕೂದಲು
ಹಿಡಿದು ಎಳೆದಾಡಿ ಏನೆ ರಂಡಿ ನಿಮ್ಮ ತಾಯಿ ತಂದೆಯವರನ್ನು ಕರೆದುಕೊಂಡು ಬಂದು ನನಗೆ
ಮರ್ಯಾದೆ ತೆಗೆಯುತ್ತಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಕೈಯಿಂದ ಕಪಾಳಕ್ಕೆ ಹೋಡೆದನು , ಅಷ್ಟರಲ್ಲಿ
ಈ ವಿಷಯವನ್ನು ಕೇಳಿ ಅವನ ತಾಯಿ ನಾಗಮ್ಮ , ಅಣ್ಣ ಶಿವಶರಣಪ್ಪಾ , ಅತ್ತಿ ಸ್ವಾತಿ ಇವರು
ಕೂಡಾ ಅಲ್ಲಿಗೆ ಬಂದು ರಂಡಿ ನಾವು ಹೇಳಿದಂತೆ 20 ಲಕ್ಷ ರೂಪಾಯಿ , ನಿಮ್ಮ
ತಂದೆ ತಾಯಿ ಕಟ್ಟಿಸಿದ ಮನೆಗೆ ತೆಗೆದುಕೊಂಡ ಬಂದರೆ ನಿನಗೆ ಮನೆಯಲ್ಲಿ ಜಾಗ ಇದೆ ಇಲ್ಲದಿದ್ದರೆ
ಮನೆಗೆ ಬಂದರೆ ನಿನಗೆ ಉಳಿಸುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ಆಗ ನನ್ನ ತಂದೆ ತಾಯಿ
ಹಾಗೂ ರವಿ ಮಾಸ್ತರ ಇವರು ನನಗೆವಾಪಾಸ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅಂಥಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment