Police Bhavan Kalaburagi

Police Bhavan Kalaburagi

Tuesday, March 29, 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.03.2016 ರಂದು ಮುಂಜಾನೆ 04:00 ಗಂಟೆಯಿಂದ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಮುದಬಾಳ ಬಿ ಕೆನಾಲ್ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡಿನಲ್ಲಿ ಲಾರಿ ನಂ ಹೆಚ್‌ಆರ್‌74-6122 ನೇದ್ದರ ಚಾಲಕ ನಿಸಾರ ಈತನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದದ್ದರಿಂದ ಒಮ್ಮೆಲೆ ಆಯ ತಪ್ಪಿದ್ದರಿಂದ ರೋಡಿನ ಪಕ್ಕದಲ್ಲಿನ ಕೇನಾಲ್‌ ನಲ್ಲಿ ಲಾರಿ ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿನ ಮಮರೇಜ  ಈತನಿಗೆ ಹಾಗು ಲಾರಿ ಚಾಲಕನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುತ್ತಾರೆ ಅಂತಾ ಶ್ರೀ ಎಕ್ಬಾಲ್‌ ತಂದೆ ಶಮಸೋದ್ದಿನ್ ಸಾ : ರಹಾಡಿ ತಾ: ತೌಡ ಜಿ : ಮೇವಾಹತ್ ( ಹರಿಯಾಣ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಯಶ್ವಂತ ತಂದೆ ಶಿವಶರಣಪ್ಪಾ ಆರಮನ ಸಾ:ಹೇರೂರ(ಬಿ) ತಾ:ಜಿ: ಕಲಬುರಗಿ ಇವರು ದಿನಾಂಕ:24-03-2016 ರಂದು ಮದ್ಯಾಹ್ನ 3 ಗಂಟೆಯ ಸಮಯಕ್ಕೆ ನಮ್ಮ ಗ್ರಾಮದ ಅಗಸಿಯಿಂದ ನನ್ನ ಮನೆಯ ಕಡೆಗೆ ಹೊರಟಿದ್ದ  ಸಮಯಕ್ಕೆ ಏಕಾಎಕಿಯಾಗಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಮತ್ತು ಸೈಕಲ ಚೈನ ಹಿಡಿದುಕೊಂಡು ಬಂದು ನನ್ನ ಮೇಲೆ 1) ಹುಲ್ಲೇಪ್ಪಾ ತಂದೆ ಮಲ್ಕಪ್ಪಾ ಇಜೇರಿ 2) ಮಹೇಶ ತಂದೆ ಚಂದ್ರಾಮ ಕ್ಯಾಸ ಇವರಿಬ್ಬರೂ ನನಗೆ ನಡು ರಸ್ತೆಯಲ್ಲಿ ನನ್ನ ಕುತ್ತಿಗೆ ಹಿಡಿದು ನನಗೆ ಏಕೆ? ಹೊಡೆಯುತ್ತಿರಿ ಎಂದು ಕೇಳಿದ್ದರೆ ಹೇ ಹೊಲೆಯ ಸುಳಿಮಗನೇ ನಿನಗೆ ಸೊಕ್ಕು ಬಂದಿದೆ ನಿನ್ನ ಜೀವ ತೆಗೆಯುತ್ತೇವೆ ಎಂದು ಕುತ್ತಿಗೆ ಒತ್ತಿ ಹಿಡಿದು ನೆಲಕ್ಕೆ ಕೆಡವಿ ಎದೆಯ ಮೇಲೆ ಕುಳಿತು ಬಡಿಗೆ & ಸೈಕಲ ಚೈನನಿಂದ ಹೊಡೆದಿದ್ದಾರೆ. ಆಮೇಲೆ 3) ಹುಲ್ಲೆಪ್ಪಾ ತಂದೆ ಚಂದ್ರಾಮಪ್ಪಾ ಭಾಸಗಿ 4) ಬಸವರಾಜ ತಂದೆ ಶೇಖಪ್ಪಾ ಬಕಾರಿ 5) ಹಿರಗೇಪ್ಪಾ ತಂದೆ ಚಂದ್ರಾಮಪ್ಪಾ ಆಲೂರ 6) ಯಲ್ಲಪ್ಪಾ ತಂದೆ ಶಿವಶರಣಪ್ಪಾ ಭಾಸಗಿ ಇವರೆಲ್ಲರೂ ಓಡಿ ಬಂದು ಕಾಲಿ ನಿಂದ ನನ್ನ ಬಲಗಡೆ ಪಕ್ಕದ ಎಲುಬಿಗೆ ಹೊಟ್ಟೆಗೆ ಮುಷ್ಟಿಯಿಂದ ಬಲವಾಗಿ ಹೊಡೆದಿದ್ದಾರೆ. ಮತ್ತು 7) ಶ್ರೀಶೈಲ ತಂದೆ ಶಿವಶರಣಪ್ಪಾ ಸಿದ್ದಬೋ 8) ಬಸವರಾಜ ತಂದೆ ಶಿವಶರಣಪ್ಪಾ ಸಿದ್ದಬೋ 8) ಬಸವರಾಜ ತಂದೆ ಶಿವಶರಣಪ್ಪಾ ಸಿದ್ದಬೋ 9) ರಾಜು ತಂದೆ ಯಲ್ಲಪ್ಪಾ ಕ್ಯಾಸ 10) ಬಸವರಾಜ ತಂದೆ ಶಿವಶರಣಪ್ಪಾ ಭಾಸಗಿ 11) ಹುಲ್ಲೇಪ್ಪಾ ತಂದೆ ಹಿರಗೆಪ್ಪ ನಾರಾಯಣಪೂರ ಇವರೆಲ್ಲರೂ ಈ ಹೊಲೆ ಸುಳಿಮಗನಿಗೆ ಬಿಡಬೇಡರಿ ಇತನ ಜೀವ ತೆಗೆದು ಬಿಡೋಣ ಅಂತಾ ಹೊಲಸು ಶಬ್ದಗಳಿಂದ ಬೈದು ನನ್ನ ಎದೆಗೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ರವರು ದಿನಾಂಕ 28.03.2016 ರಂದು 04:00 ಗಂಟೆಯ ಸುಮಾರಿಗೆ ಯನಗುಂಟಿ ಗ್ರಾಮದ ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಸರಕಾರಕ್ಕೆ ಮತ್ತು ಸಂಭಂದಪಟ್ಟ ಇಲಾಖೆಗೆ ಮೋಸ ಮಾಡಿ ಟ್ರ್ಯಾಕ್ಟರ್ ನಂ ಕೆ.ಎ32ಟಿ.ಎ7064 ನೇದ್ದರಲ್ಲಿ ಕಳ್ಳತನದಿಂದ 1 ಬ್ರಾಸ್‌ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ನಾನು ಮತ್ತು ಸಿಬ್ಬಂದಿ ಜನರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರ್ಯಾಕ್ಟರ್‌ ಮತ್ತು ಅದರಲ್ಲಿದ್ದ ಒಂದು ಬ್ರಾಸ್ ಅಂ.ಕಿ 500 ನೇದ್ದವುಗಳನ್ನು ಜಪ್ತಿ ಮಾಡಿದ್ದು ಸದರಿ ಟ್ರ್ಯಾಕ್ಟರ್‌ ಚಾಲಕನ್ನು ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ಸಲ್ಲಿಸಿದ  ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶ್ರೀಶೈಲ್ ತಂದೆ ಸಾಬಣ್ಣ ಬಂದಳ್ಳಿ :ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಂದರಕಿಯಲ್ಲಿ ಕನ್ನಡ ಶಿಕ್ಷಕ ಸಾ:ಕೊಟಗೇರಾ ತಾ:ಜಿ:ಯಾದಗಿರಿ ಇವರು ಠಾಣೆಗೆ ದಿನಾಂಕ 19/03/2016 ಮಧ್ಯಾನ 12-00 ಗಂಟೆಯಿಂದ ದಿನಾಂಕ 21/03/2016 ಮುಂಜಾನೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಹಂದರಕಿ ಗ್ರಾಮದಲ್ಲಿರುವ ಸರಕಾರಿ ಉರ್ದು ಶಾಲೆಯ ಕ್ಲಾಸ ರೂಮಿನ, ಅಡುಗೆ ಕೋಣೆಯ, ಕಂಪ್ಯೂಟರ ಕೋಣೆಗಳ, ಮತ್ತು ಕಾರ್ಯಾಲಯದ  ಬಾಗಿಲುಗಳು ಕೀಲಿಗಳು ಯಾರೋ ಕಳ್ಳರು ಮುರಿದು ಶಾಲೆಯಲ್ಲಿ ಇದ್ದ ಒಂದು ಕಲರ ಟಿವಿ ಒಂದು ಗೋದ್ರೇಜ ಕಂಪನಿಯ ಡಿವಿಡಿ ಮತ್ತು ಪ್ರೌಢಶಾಲೆಯ ಕಂಪ್ಯೂಟರ ಕೋಣೆಯಲ್ಲಿ ಇಟ್ಟಿದ್ದ ಒಂದು ಏರ ಕೂಲರ ಹೀಗೆ ಒಟ್ಟು .ಕಿ 4100-00 ರೂಪಾಯಿಗಳ ಬೆಲೆಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: