Police Bhavan Kalaburagi

Police Bhavan Kalaburagi

Monday, March 7, 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ರುಕ್ಕಮ್ಮಾ ಗಂಡ  ಶಿವಶರಣಪ್ಪ ಡಾಂಗೆ ಮು:ಕಪನೂರ  ತಾ:ಜಿ: ಕಲಬುರಗಿ ರವರ ಗಂಡನಾದ ಶಿವಶರಣಪ್ಪ ಇವರು ಪಿ.ಡಬ್ಲ್ಯೂ.ಡಿ. ಇಲಾಖೆಯಲ್ಲಿ ನಿವೃತ್ತ ನೌಕರರು ಇದ್ದು  ದಿನಾಂಕ 05/03/16ರಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಶಿವಶರಣಪ್ಪ ಇಬ್ಬರು ಕೂಡಿ ಕಲಬುರಗಿ ನಗರದ ಸಂಗಮೇಶ್ವ ಕಾಲೋನಿಯಲ್ಲಿ ಇರುವ ಎಸ್.ಬಿ.ಎಚ. ಬ್ಯಾಂಕಿ ಹೋಗಿ ನನ್ನ ಗಂಡನು ನಿವೃತ್ತಿ ಪಿಂಚನಿ ಹಣವನ್ನು ತೆಗೆದುಕೊಂಡು ಮನೆಗೆ ಮರಳಿ ಬರುವ ಕುರಿತು ಸುಪರ ಮಾರ್ಕೆಟ ವರೆಗೂ ಆಟೋದಲ್ಲಿ ಬಂದು ಅಲ್ಲಿಂದ ಸುಪರ ಮಾರ್ಕೆಟನಿಂದ  ನಗರ ಸಾರಿಗೆ ಬಸನಲ್ಲಿ ಕುಳಿತುಕೊಂಡಿದ್ದು, ಸದರ ಬಸನಲ್ಲಿ ನನ್ನ ಮೈದನನ ಮಗನಾದ ಮಲ್ಲಿಕಾರ್ಜುನ ಇವರು ಸಹ ಕುಳಿತುಕೊಂಡಿದ್ದರು.ನಾವೆಲ್ಲರೂ  ಹುಮನಾಬಾದ ರಿಂಗ ರೋಡನಲ್ಲಿ  ರೋಡಿನ ಬದಿಯಿಂದ ನಡೆದುಕೊಂಡು ನನ್ನ ಗಂಡ ಸ್ವಲ್ಪ ಮುಂದೆ ಹೊರಟಿದ್ದು, ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಸ್ವಲ್ಪ ಹಿಂದೆ ಹೊರಟಿದ್ದೇವು. ಆಗ ಅದೇ ವೇಳೆಗೆ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು  ಬಂದವನೇ ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಇದರಿಂದ ನನ್ನ ಗಂಡನು ರೋಡಿನ ಮೇಲೆ ಬಿದ್ದನು. ಟಿಪ್ಪರ ಚಾಲಕನು ಅದೇ ವೇಗದಲ್ಲಿ ಹೋಗಿ ಅಲ್ಲಿಯೇ ಹೊರಟಿದ್ದ ಕೆ.ಎಸ್.ಅರ್.ಟಿ.ಸಿ.ಬ ಸ್ಸ ನಂಬರ ಕೆಎ 32 ಎಫ 1662 ನೇದ್ದಕ್ಕೆ  ಹಿಂದೆಡಿಕ್ಕಿ ಕೊಟ್ಟು ಅದೇ ವೇಗದಲ್ಲಿ ಎದುರುಗಡೆ  ಬರುತ್ತಿದ್ದ ಆಟೋ ನಂಬರ ಕೆಎ 32 ಬಿ 8841 ನೇದ್ದಕ್ಕೆ ಅಪಘಾತಪಡಿಸಿ ಟಿಪ್ಪರನ್ನು ಸ್ವಲ್ಪ ಮುಂದೆ ನಿಲ್ಲಿಸಿ ಚಾಲಕನು ಅಲ್ಲಿಂದ ಓಡಿ ಹೋದನು. ಈ ಅಪಘಾತದಿಂದ ನನ್ನ ಗಂಡ ಶಿವಶರಣಪ್ಪ ಇವರಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಬಾಯಿಂದ ರಕ್ತ ಸ್ರಾವವಾಗಿದ್ದು,. ಎಡಗೈ ರಟ್ಟಿಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಆಗಿದ್ದು ಎಡ ಮೆಲಕಿನ ಹತ್ತಿರ ಗುಪ್ತಗಾಯವಾಗಿರುತ್ತದೆ.  ಬಸ್ಸನಲ್ಲಿ ಕುಳಿತವರಿಗೆ ಕೂಡಾ ಗಾಯಗಳು ಆಗಿದ್ದು, ಗಾಯಾಳುದಾರರು ಅವರ ಹೆಸರು ವಿಳಾಸ ಗೊತ್ತಿಲ್ಲಾ ಆಟೋ ಚಾಲಕನಿಗೆ ಯಾವುದೇ ರೀತಿಯ ಗಾಯಗಳು ಆಗಿರಲಿಲ್ಲಾ ಅಪಘಾತಪಡಿಸಿದ ಟಿಪ್ಪರ ನಂಬರ ಕೇಳಿ ತಿಳಿದುಕೊಳ್ಳಲಾಗಿ  ಅದರ ನಂಬರ ಜಿಎ 03 ಕೆ 6344 ಅಂತಾ  ಇರುತ್ತದೆ. ಚಾಲಕನ ಹೆಸರು ವಗೈರೇ  ಗೊತ್ತಿರುವುದಿಲ್ಲಾ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡ ಶಿವಶರಣಪ್ಪ ಇವರಿಗೆ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ನನ್ನ ಗಂಡನಿಗೆ ಆಟೋದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ  ಅಂದರೆ ಕಲಬುರಗಿ ನಗರದ ಮಿಜಗುರಿ ಹತ್ತಿರ ಇಂದು ದಿನಾಂಕ 05-03-16 ರಂದು 4-00  ಪಿ.ಎಂ. ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ 06.03.2016 ರಂದು ಬೆಳ್ಳಿಗ್ಗೆ 8 ಗಂಟೆಯ ಸುಮಾರಿಗೆ ನಮ್ಮ ತಂದೆ ಹೊಲಕ್ಕೆ ಹೋಗಿ ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ತಿರುಗಾಡುತ್ತಾ ನಮ್ಮ ಗ್ರಾಮದ ಮುಂದೆ ಇರುವ ಬಸ್ಸ ನಿಲ್ದಾಣ ಹತ್ತಿರ ಹೊಗಿದ್ದು ಅಲ್ಲಿ ನಮ್ಮ ಗ್ರಾಮದ ಮಹಾದೇವ ಹತ್ತಿ, ಸಂಗಮೇಶ ಕಿಣಗಿ ಮತ್ತು ಮಲ್ಲಿಕಾರ್ಜುನ ಹಲಚೇರಿ ಕೂಡಿಕೊಂಡು ಮಾತನಾಡುತ್ತಾ ನಿಂತಿದ್ದು ನಾನು ಹೋಗಿ ಸದರಿಯವರ ಸಂಗಡ ಮಾತನಾಡುತ್ತಾ ಬಸ್ಸ ನಿಲ್ದಾಣ ಹತ್ತಿರ ನಿಂತ್ತಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ನಮ್ಮ ತಂದೆಯಾದ ಅಂಬಾರಾವ ಇವರು ಮಲ ವಿಸರ್ಜನೆ ಕುರಿತು ನಾವು ನಿಂತ ಸ್ಥಳದಿಂದ ಸೊಂತ ಗ್ರಾಮದ ಕಡೆಗೆ ಹೋಗುವ ರಸ್ತೆಯ ಕಡೆಗೆ ಅಂದಾಜ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಮಲ ವಿಸರ್ಜನೆ ಮಾಡಲು ಕೂಡಬೇಕು ಎನ್ನುವಷ್ಠರಲ್ಲಿ ಮರಗುತ್ತಿ ಕ್ರಾಸ ದಿಂದ ಬರುವ ರಸ್ತೆಯಿಂದ ಒಂದು ಬುಲೇರೊ ಜೀಪ ಚಾಲಕನು ತನ್ನ ಜೀಪವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ನಮ್ಮ ಮುಂದಿನಿಂದ ಹೋಗಿ ಮಲ ವಿಸರ್ಜನೆ ಕುರಿತು ಹೊದ ನಮ್ಮ ತಂದೆಗೆ ಅದೇ ವೇಗದಲ್ಲಿ ಗುದ್ದಿ ಅಪಘಾತ ಪಡಿಸಿ ಸ್ವಲ್ಪ ದೂರ ನಮ್ಮ ತಂದೆಗೆ ಎಳೆದುಕೊಂಡು ಹೋಗಿ ಮುಂದೆ ರಸ್ತೆ ತಗ್ಗಿನಲ್ಲಿ ಜೀಪ ಪಲ್ಟಿ ಮಾಡಿದ್ದು ಸದರಿ ಅಪಘಾತವನ್ನು ನೋಡಿ ನಾನು, ಮಹಾದೇವ, ಸಂಗಮೇಶ ಹಾಗೂ ಮಲ್ಲಿಕಾರ್ಜುನ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನಮ್ಮ ತಂದೆ ಸ್ಥಳದಲ್ಲಿ ಮೃತ ಪಟ್ಟಿದ್ದು ನಾನು ನಮ್ಮ ತಂದೆಯ ಎಡಗಾಲ ಪಾದದ ಮೇಲೆ ಮಳಕಾಲ ಕೇಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು ಎಡಭಾಗದ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಎಡಗಲ್ಲದ ಮೇಲೆ, ಎಡಗಣ್ಣಿನ ಹತ್ತಿರ ಎಡಭಾಗದ ತಲೆಗೆ ರಕ್ತಗಾಯ, ಗುಪ್ತಗಾಯವಾಗಿದ್ದು ಎಡಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಮತ್ತು ನಮ್ಮ ತಂದೆಯ ಗುಪ್ತಾಂಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮ್ಮ ತಂದೆಗೆ ಅಪಘಾತ ಪಡಿಸಿದ ಬುಲೇರೊ ಜೀಪ ನಂಬರ ನೋಡಲು ಅದರ ನಂ ಕೆಎ 32 ಎನ್ 7823 ಅಂತಾ ಇದ್ದು ಅದರ ಚಾಲಕನಿಗೆ ನೋಡಲು  ಸದರಿ ಜೀಪ ಚಾಲಕ ಸೊಂತ ಗ್ರಾಮದ ವೀರಶಟ್ಟಿ ತಂದೆ ರಂಗರಾವ ಪಾಟೀಲ ಇರುತ್ತಾರೆ ಅಂತಾ ಶ್ರೀ ಗುಂಡಪ್ಪ ತಂದೆ ಅಂಬರಾಯ ಚಿಂದೆ ಸಾ: ಮರಗುತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ನೆಲೋಗಿ ಠಾಣೆ : ಶ್ರೀಮತಿ ಕಾಶಿಬಾಯಿ ಗಂಡ ಸಿದ್ದಪ್ಪ ಶಂಬೇವಾಡ ಸಾ: ದೇವರನಾದಗಿ ತಾ: ಸಿಂದಗಿ ಇವರು ಮಗ ಬಸವರಾಜನು ನಮ್ಮೂರ ಗೊಪಾಲ ದೊಡ್ಡಮನಿ ಇವರ ಮಗನ ಮದುವೇ ನಿಶ್ಚಯ ಕಾರಣ ನಿಮಿತ್ಯ ಸೋನ್ನ ಗ್ರಾಮಕ್ಕೆ ಹೊಗಿ ಬರುತ್ತೇನೆ ಅಂತ ಅಮೊಗಿ ತಳಕೇರಿ ಇತನ ಸೈಕಲ ಮೊಟರ ಮೇಲೆ ಹೊದರು ಮದ್ಯಾನ್ಹ 1-30 ಗಂಟೆ ಸುಮಾರಿಗೆ ನಮ್ಮೂರಿನ ಪಕ್ಕದ ಗ್ರಾಮದ ಸಿದ್ದಪ್ಪ ದಾನೆನವರ ನಮಗೆ ಫೊನ ಮಾಡಿ ತಿಳಿಸಿದೆನಂದರೆ ನಾನು ಸಂತೋಷ ಲಂಬಾಣಿ ಇಬ್ಬರು ಕೂಡಿ ಒಂದು ಸೈಕಲ ಮೊಟರ ಮೇಲೆ ಸೊನ್ನ ಗ್ರಾಮಕ್ಕೆ ಹೊಗುತ್ತಿದ್ದೇವು ನಮ್ಮಂತೆ ಬಸವರಾಜ ಮತ್ತು ಅಮೊಗಿ ತಳಕೇರಿ ಇಬ್ಬರು ಕೂಡಿ ಸೈಕಲ ಮೊಟರ ಇಂಜಿನ ನಂ JEZWFL16002 ನೇದ್ದರ ಮೇಲೆ ಸೊನ್ನ ಕಡೆಗೆ ಹಿಪ್ಪರಗಿ ಎಸ್.ಎನ್  ಕ್ರಾಸ್ ದಾಟಿ ಹೊಗುತ್ತಿರುವಾಗ ಅದೆ ಸಮಯಕ್ಕೆ ಜೇವರ್ಗಿ ಕಡೆಯಿಂದ ಒಂದು ಲಾರಿ ನಂಬರ  AP-16 TY-0159 ನೇದ್ದರ ಚಾಲಕನು ತನ್ನ ಲಾರಿಯನ್ನು ಅತವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೊರಟಿದ್ದ ಅಮೊಗಿ ನಡೆಸಿಕೊಂಡು ಹೊರಟಿದ್ದ ಸೈಕಲ್ ಮೊಟರಕ್ಕೆ ಡಿಕ್ಕಿ ಪಡೆಸಿದ್ದರಿಂದ ನಿನ್ನ ಮಗ ಬಸವರಾಜನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲಲ್ಲಿಯೆ ಮೃತ ಪಟ್ಟಿದ್ದು ಸೈಕಲ ಮೊಟರ ನಡೆಸುತ್ತಿದ್ದ ಅಮೊಗಿ ಇವನ ಬಲಗೈಗೆ ಭಾರಿ ರಕ್ತಗಾಯವಾಗಿದೆ ಅಂತ ತಿಳಿಸಿದ್ದಾಗ ನಾನು ಹಾಗೂ ಇತರರು ಸ್ಥಳಕ್ಕೆ ಬಂದು ನೊಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೆ ಮೃತಪಟ್ಟಿದು ಲಾರಿ ಚಾಲಕನು ಲಾರಿ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: