¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 07-04-2016
zsÀ£ÀÆßgÀ ¥Éưøï oÁuÉ UÀÄ£Éß £ÀA.
176/2016, PÀ®A 457, 380 L¦¹ :-
ಫಿರ್ಯಾದಿ ವಿಜಯಲಕ್ಷ್ಮಿ ಗಂಡ ಜೈಭಾರತ ಪಾವಡಶೆಟ್ಟಿ ವಯ: 30
ವರ್ಷ, ಜಾತಿ: ಲಿಂಗಾಯತ, ಉ: ಅಂಗನವಾಡಿ ಟೀಚರ, ಸಾ: ಹಾಲಹಳ್ಳಿ(ಕೆ) ರವರು ಪ್ರತಿ ದಿನದಂತೆ
ದಿನಾಂಕ 05-04-2016 ರಂದು 0900 ಗಂಟೆಗೆ ಅಂಗನಾವಾಡಿ ಶಾಲೆಗೆ ಬಂದು ಮಕ್ಕಳಿಗೆ ಬಿಸಿ ಊಟ
ಮಾಡಿಕೊಟ್ಟಿದ್ದು, ನಂತರ ಫಿರ್ಯಾದಿ ಮತ್ತು ತಮ್ಮ ಅಂಗನವಾಡಿ ಸಹಾಯಕಿ ಸುವರ್ಣಾ ಗಂಡ ಗೋಪಾಲ
ಇಬ್ಬರೂ ಅಂಗನವಾಡಿ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ದಿನಾಂಕ 06-04-2016 ರಂದು
0900 ಗಂಟೆಗೆ ಫಿರ್ಯಾದಿ ಮತ್ತು ಸುವರ್ಣಾ ಇಬ್ಬರೂ ಅಂಗನವಾಡಿ ಶಾಲೆಗೆ ಬಂದು ಬೀಗ ತಗೆಯಲು
ಬಾಗಿಲು ಬಳಿ ಹೋದಾಗ ಬಾಗಿಲಿನ ಕೀಲಿ ಮುರಿದಿದ್ದು ಗಾಬರಿಗೊಂಡು ಗ್ರಾಮ ಪಂಚಾಯತ ಅಧ್ಯಕ್ಷರಾದ
ಕಂಬಳಾಬಾಯಿ ಗಂಡ ಸಂಗಪ್ಪಾ ಸಧಾಶಿವ ಇವರಿಗೆ ಕರೆ ಮಾಡಿ ತಿಳಿಸಿದ್ದು ಅಧ್ಯಕ್ಷರು ಮತ್ತು
ಗ್ರಾಮಪಂಚಾಯತ ಸದಸ್ಯರು ವಿಜಯಕುಮಾರ ಪೂಜಾರಿ ಇವರು ಬಂದು ಅಂಗನವಾಡಿ ಶಾಲೆಯ ಬಾಗಿಲು ತೆಗೆದಿದ್ದು
ಒಳಗೆ ಹೊಗಿ ನೋಡಲು ಶಾಲೆಯ ಅಡಿಗೆ ಮಾಡುವ 4 ಸಾಮಾನುಗಳು ಅ.ಕಿ 2000/- ರೂ., 75 ಕೆ.ಜಿ ಅಕ್ಕಿ
ಅ.ಕಿ 750/- ರೂ., 50 ಕೆ.ಜಿ ಬೆಲ್ಲಾ ಅ.ಕಿ 1500/- ರೂ., 1 ಸ್ಟೀಲ್ ವಾಟರ ಫಿಲ್ಟರ ಅ.ಕಿ
2000/- ರೂ., ಆಮುಲೆಜ ರಿಚ್ ಫುಡ್ 25 ಕೆ.ಜಿಯ 2 ಪಾಕೇಟಗಳು ಅ.ಕಿ 1000/- ಹೀಗೆ ಒಟ್ಟು 7250/-
ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ದಿನಾಂಕ 05/06-04-2016 ರಂದು ರಾತ್ರಿ ವೇಳೆಯಲ್ಲಿ ಯಾರೋ
ಕಳ್ಳರು ಅಂಗನವಾಡಿ ಶಾಲೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಶಾಲೆಯ ಸಾಮಾನುಗಳನ್ನು
ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿಯವರು ಕೊಟ್ಟ ಲಿಖಿತ ದೂರು ಅರ್ಜಿಯ ಸಾರಾಂಶದ
ಮೇರೆಗೆ ಗುನ್ನೆ ದಾಖಲಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 63/2016, PÀ®A 307, 504, 506 L¦¹ :-
ಫಿರ್ಯಾದಿ ಮಹೇಶ ತಂದೆ ಅಶೋಕ ಕೆಂಭಾವಿ ವಯ: 36 ವರ್ಷ, ಜಾತಿ: ಲಿಂಗಾಯತ, ಉ: ವಿ.ಆರ್.ಎಲ್ ಬಸ್ ಚಾಲಕ, ಸಾ: ಬಿದ್ದಾಪೂರ ಕಾಲೋನಿ ಕಲಬುರಗಿ ರವರು ಹೈದ್ರಾಬಾದದಿಂದ ಮುಂಬೈ ಬಸ್ಸಿನ ಮೇಲೆ ಕರ್ತವ್ಯ ನಿರ್ವಹಿಸುತ್ತಾರೆ ಫಿರ್ಯಾದಿಯವರ ತಂದೆಗೆ 7 ಜನ ಅಣ್ಣ-ತಮ್ಮಂದಿರಿದ್ದು ತಂದೆ ಅಶೋಕ ರವರು ಹಿರಿಯರಾಗಿರುತ್ತಾರೆ, ಫಿರ್ಯಾದಿಯು ಅವರ ತಂದೆಗೆ ಒಬ್ಬ ಗಂಡು ಮಗು ಮತ್ತು 3 ಜನ ಹೆಣ್ಣು ಮಕ್ಕಳು ಇದ್ದು ತಂದೆಯವರು 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ಸದ್ಯ ಫಿರ್ಯಾದಿ ತನ್ನ ಹೆಂಡತಿ ಪಾರ್ವತಿ, ತಾಯಿ ನೀಲಮ್ಮಾ ಮಕ್ಕಳಾದ 1)ವಿರೇಶ, 2) ಆಕಾಶ ರವರೊಂದಿಗೆ ಬಿದ್ದಾಪೂರ ಕಾಲೋನಿ ಕಲಬುರಗಿದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ, ದಿನಾಲು ವಿ.ಆರ್.ಎಲ್ ಬಸ್ಸಿನ ಮೇಲೆ ಹೈದ್ರಾಬಾದದಿಂದ ಮುಂಬೈಗೆ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತಾನೆ, ಫಿರ್ಯಾದಿಯು ಈ ಹಿಂದೆ ಬಸ್ಸಿನ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಿಕ್ಕಪ್ಪನಾದ ಮಂಜುನಾಥ ಇವನು ವಿನಾಃ ಕಾರಣ ಸರಾಯಿ ಕುಡಿದು ಕರೆ ಮಾಡಿ ಬೈದಿರುತ್ತಾನೆ ಮತ್ತು ಕೊಲೆ ಮಾಡಿ ತೀರುತ್ತೇನೆ ಅಂತಾ ಬೆದರಿಕೆ ಹಾಕಿರುತ್ತಾನೆ, ಹೀಗಿರುವಲ್ಲಿ ದಿನಾಂಕ 04-04-2016 ರಂದು ಹೈದ್ರಾಬಾದನಲ್ಲಿ ವಿ.ಆರ್.ಎಲ್ ಬಸ್ ನಂ. ಕೆಎ-25/ಸಿ-8919 ನೇದರ ಮೇಲೆ ಫಿರ್ಯಾದಿ ಮತ್ತು ಇನ್ನೊಬ್ಬ ಚಾಲಕ ಶಿವಾನಂದ ಮತ್ತು ಬಸ್ ನಿರ್ವಾಹಕ ಸಂಗಮೇಶ ಮೂರು ಜನರು ಮುಂಬೈಗೆ ಕರ್ತವ್ಯಕ್ಕೆ ಹೋಗಲು ಮ್ಯಾನೆಂಜರ ತಿಳಿಸಿದ್ದು ಇವರುಗಳು ಹೈದ್ರಾಬಾದದಿಂದ ಬಸ್ ಬಿಡುವಾಗ ಫಿರ್ಯಾದಿ ಚಿಕ್ಕಪ್ಪನಾದ ಮಂಜುನಾಥ ಇವನು ನೀನು ಹುಮನಾಬಾದ ಮೇಲಿಂದ ಹೇಗೆ ಹೋಗುತ್ತಿ ನೋಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ, ಹೀಗಿರುವಲ್ಲಿ ದಿನಾಂಕ 05-04-2016 ರಂದು ಹುಮನಾಬಾದ ಆರ್.ಟಿ.ಓ ಚೆಕ್ ಪೊಸ್ಟ ಹತ್ತಿರದಲ್ಲಿ ಫಿರ್ಯಾದಿ ಜೊತೆಯಲ್ಲಿದ ಶಿವಾನಂದ ಈತನು ಬಸ್ ಚಲಾಯಿಸುತ್ತಿದ್ದಾಗ ಫಿರ್ಯಾದಿ ಮಲಗಿಕೊಂಡಿದ್ದು, ಆಗ
ಆರ್.ಟಿ.ಓ ಚೆಕ್ ಪೊಸ್ಟ ಹತ್ತಿರ ಬಸ್ ನಿಲ್ಲಿಸಿದಾಗ ಫಿರ್ಯಾದಿ ಎದ್ದು ನೋಡಲು ಬಸ್ಸಿನ ಮುಂದೆ ಫಿರ್ಯಾದಿಯ ಚಿಕ್ಕಪ್ಪಂದಿರಾದ ಆರೋಪಿತರು 1) ಮಂಜುನಾಥ ತಂದೆ
ಶಿವಪ್ಪಾ ಕೆಂಬಾವಿ ವಯ: 38 ವರ್ಷ, ಜಾತಿ:
ಲಿಂಗಾಯತ, ಸಾ: ಹೀರಾಪೂರ ಕಾಲೋನಿ ಕಲಬುರಗಿ, ಸದ್ಯ: ಕಲ್ಲೂರ
ರೋಡ ಹುಮನಾಬಾದ, 2) ಬಸವರಾಜ ತಂದೆ ಶಿವಪ್ಪಾ
ಕೆಂಬಾವಿ ವಯ: 43 ವರ್ಷ,
ಜಾತಿ: ಲಿಂಗಾಯತ, ಸಾ: ಕಡಗಂಚಿ, ತಾಃ: ಅಳಂದ, ಜಿ: ಕಲಬುರಗಿ ಹಾಘೂ
3) ಸಂಜು ತಂದೆ ಶಿವಪ್ಪಾ ಕೆಂಬಾವಿ ವಯ: 35 ವರ್ಷ, ಜಾತಿ: ಲಿಂಗಾಯತ,
ಸಾ: ಕಲಬುರಗಿ ಈ ಮೂರು ಜನರು ಬಂದು ಚಾಲಕ ಶಿವಾನಂದ ಈತನಿಗೆ ಮಹೇಶ ಎಲ್ಲಿ ಅಂತಾ ಚೀರುವಾಗ ಅವನು ಮಲಗಿಕೊಂಡಿದ್ದಾನೆ ಅಂತಾ ತಿಳಿಸಿದ್ದು ಸದರಿ ಆರೋಪಿತರು ಬಸ್ಸಿನಲ್ಲಿ ಬಂದು ಡ್ರೈವರ ಸ್ಲೀಪಿಂಗ ಶೀಟಿನ ಮೇಲೆ ಮಲಗಿಕೊಂಡಿರುವ ಫಿರ್ಯಾದಿಗೆ ಹೊರಗೆ ಎಳೆದು ನಿನಗೆ ಇಂದು ಖತಮ್ ಮಾಡುತ್ತೇವೆ ಅಂತಾ ಬೈದು ಮಂಜುನಾಥ ಈತನು ಅವನ ಹತ್ತಿರ ಇದ್ದ ಜಂಬ್ಯಾ ತೆಗೆದು ಹೊಡೆಯುವಾಗ ಇವನು ತಪ್ಪಿಸಿಕೊಂಡಿದ್ದು ಮತ್ತು ಬಸವರಾಜ ಇವನು ಮಂಜುನಾಥನ ಕೈಯಿಂದ ಜಂಬ್ಯಾ ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹತ್ತಿರ ಜೋರಾಗಿ ಹೊಡೆಯುವಾಗ ತಪ್ಪಿಸಿಕೊಂಡಿದ್ದು ಎಡಗೈ ತೋರ ಬೆರಳಿಗೆ ಜಂಬ್ಯಾ ತರಚಿರುತ್ತದೆ ಮತ್ತು ಸಂಜು ಈತನು ಅಂಗಿ ಹಿಡಿದು ಎಳೆದಾಡಿ ಬಿಡಬೇಡ ಖತಮ್ ಮಾಡು ಅಂತಾ ಅಂಗಿ ಹರಿದು ಹಾಕಿರುತ್ತಾನೆ, ಸದರಿ ಮೂರು ಜನ ಆರೋಪಿತರು ಹೊಡೆಯುವಾಗ ಬಸ್ಸಿನ ಚಾಲಕ ಶಿವಾನಂದ ಮತ್ತು ನಿರ್ವಾಹಕ ಸಂಗಮೇಶ ರವರು ಬಿಡಿಸಿಕೊಂಡಿರುತ್ತಾರೆ, ನಂತರ ಸದರಿ ಆರೋಪಿತರು
ಇಂದು ಬದುಕಿದ್ದೀ, ಬದುಕು, ಮುಂದೆ ನಿನಗೆ ಖತಮ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ್
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment