ಅಫಜಲಪೊರ ಠಾಣೆ : ದಿನಾಂಕ
22-04-2016 ರಂದು 10:30 ಎ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿತನೊಂದಿಗೆ
ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೆನೆಂದರೆ ನಾನು ಸಿದರಾಯ ಭೋಸಗಿ
ಪಿ.ಎಸ್.ಐ ಅಫಜಲಪೂರ ಠಾಣೆ ಈ ಮೂಲಕ ವರದಿ ಕೊಡುವುದೇನೆಂದರೆ. ಇಂದು ದಿನಾಂಕ 22-04-2016 ರಂದು
08:00 ಎ ಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಸುರೇಶ ಪಿಸಿ-801, ಜಗನ್ನಾಥ ಪಿಸಿ-530, ವಿಠ್ಠಲ ಪಿಸಿ-820,ರವರೊಂದಿಗೆ ಅಫಜಲಪೂರ ಪಟ್ಟಣದಲ್ಲಿ
ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ತಹಸಿಲ ಕಾರ್ಯಾಲಯದ ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೇನೆಂದರೆ, ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ
ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1
ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ
ಚೀಟಿಗಳನ್ನು ಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ
ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ
2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಠಾಣೆಗೆ
ಬರಮಾಡಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ
ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರು ಹಾಗು ಪಂಚರೊಂದಿಗೆ
08:15 ಎ ಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು. 08:45 ಎ ಎಮ್ ಕ್ಕೆ ಘತ್ತರಗಾ
ಗ್ರಾಮದ ಅಂಬೇಡ್ಕರ ಸರ್ಕಲದಿಂದ ಸ್ವಲ್ಪ ದೂರು
ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೇಡ್ಕರ ಸರ್ಕಲ ಹತ್ತಿರ ಶ್ರೀ ಭಾಗ್ಯವಂತಿ ಧೇವಿಯ
ಗುಡಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು
ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾದಿಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ
ಸಂಖ್ಯೆ ಬರೆದುಕೊಟ್ಟು, ಮಟಕಾ
ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿ ಹಣ
ಕೇಳುತ್ತಿದ್ದರು, ಆಗ
ಸದರಿ ವ್ಯಕ್ತಿ ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ
ಮಾಡುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ
ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನೀಜಾಮ @ ನೀಜಾಮ ಪಟೇಲ ತಂದೆ ಖಾದರಸಾಬ ಅತ್ತರ ವ:
38 ವರ್ಷ ಜಾ: ಮುಸ್ಲೀಂ ಉ: ಕೂಲಿ ಸಾ: ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ
ಸಂಬಂಧ ಪಟ್ಟ 20,300/-
ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ
ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ 09:00 ಎ.ಎಮ್ ದಿಂದ
10:00 ಎ.ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ
ಠಾಣೆಗೆ 10:30 ಎ.ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ
ಸೂಚಿಸಿ ವರದಿ ನಿಡಿದ್ದು ಅದರ ಪ್ರಕಾರ ಗುನ್ನೆ ವರದಿಯಾಗಿರುತ್ತದೆ.
ಸೇಡಂ ಠಾಣೆ : ದಿನಾಂಕ : 22-04-2016 ರಂದು ಬೆಳಿಗ್ಗೆ 11 ಎ.ಎಂಕ್ಕೆ ಪಿರ್ಯಾದಿದಾರರು
ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶ ಏನೆಂದರೆ ದಿನಾಂಕ : 15-02-2016 ರಂದು ಬಾಗಲಕೊಟದಲ್ಲಿ ನಮ್ಮ ಕಾಕನ
ಮಗಳ ಮದುವೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಮದುವೆಗೆ ಹೊಗಿದ್ದೆವು
ನಂತರ ದಿನಾಂಕ : 17-02-2016 ರಂದು ನಮ್ಮ ಪಕ್ಕದ ಮನೆಯವರಾದ ಚಂದ್ರಯ್ಯ ಎಂಬುವವರು ನಮಗೆ ಪೊನ್ ಮಾಡಿ
ತಿಳಿಸಿದ್ದೆನೆಂದರೆ ನೀವು ವಾಸವಾಗಿರುವ ಮನೆಯ ಬಾಗಿಲು ಕೀಲಿಯ ಕೊಂಡಿ ಮುರಿದು ಬಾಗಿಲು
ತೆರೆದಿರುತ್ತದೆ ನೀವು ಬೆಗ ಬನ್ನಿರಿ ಅಂತಾ ತಿಳಿಸಿದರು ನಂತರ ನಾನು ಮತ್ತು ನನ್ನ ಹೆಂಡತಿ
ದಿನಾಂಕ : 18-02-2016 ರಂದು ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯಲ್ಲಿದ್ದ ಅಲಮಾರಿಯ
ಕೀಲಿಯ ಸಹ ಮುರಿದು ಅದ್ರೊಳಗೆ ಇದ್ದ ಮೂರು ತೊಲೆಯ ಬಂಗಾರದ ಬೆಂಡೊಳಿ, ಸಾಕಳಿ, ಜುಮಕಿ ಅಕಿ 75000/- ರೂ. ಅರ್ಧ ತೊಲೆಯುಳ್ಳ ಬಂಗಾರದ
ಎರಡು ಉಂಗುರಗಳು ಅಕಿ 25000/- ಅರ್ಧ ತೊಲೆಯ ಬಂಗಾರದ ಲಾಕೆಟ ಅ.ಕಿ 10,000/- ಹಾಗೂ 12 ತೊಲೆಯ ಬೆಳ್ಳಿಯ ಆರತಿ ತಟ್ಟೆ
ಅ.ಕಿ 3600/- 8 ತೊಲೆಯ ಬೆಳ್ಳಿಯ ಹಾಲಗಡಗ ಅ.ಕಿ 2400/- ಮತ್ತು ನಗದು ಹಣ 2000/- ರೂ. ಹೀಗೆ ಒಟ್ಟು 1,18,000/- ರೂ. ಬೆಲೆಬಾಳುವ ಬಂಗಾರ, ಬೆಳ್ಳಿಯ, ಸಾಮಾನುಗಳು ಹಾಗೂ ನಗದು ಹಣವನ್ನು
ಯಾರೊ ಕಳ್ಳ್ರರು ದಿನಾಂಕ : 16-02-2016 ರ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ
ಕಳ್ಳರನ್ನು ಪತ್ತೆಮಾಡಲು ವಿನಂತಿ ಅಂತಾ ಕೊಟ್ಟ ವಗೈರೆ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ವರದಿಯಾಗಿರುತ್ತದೆ.
ಅಫಜಲಪೊರ ಠಾಣೆ : ನಾನು
ಬಸವಂತಪ್ಪ ಮಲ್ಲಪ್ಪ ಹೂಗಾರ ಡಿ.ಜಿ.ಎಮ್ (ಎಸ್.ವಿ) ಶ್ರೀ ರೇಣುಕಾ ಶುಗರ್ಸ ಲಿಮಿಟೇಡ್ ಹವಳಗಾ ಘಟಕ
ಕಂಪನಿಯ ವತಿಯಿಂದ ಬರೆದುಕೊಡುವ ಪಿರ್ಯಾದಿ ಏನೆಂದರೆ, ನಮ್ಮ ಕಾರ್ಖಾನೆಯಲ್ಲಿ ಉಳಿದಂತಹ ಪ್ಲಾಸ್ಟಿಕ
ಚೀಲಗಳನ್ನು ನಾವು ಮಾರಾಟ ಮಾಡುತ್ತೇವೆ. ಅದರಂತೆ ಸದ್ಯ ಈಗ ಖಾಲಿ ಪ್ಲಾಸ್ಟಿಕ ಚಿಲಗಳನ್ನು
ನಿಜಾಮಪಾಶಾ ತಂದೆ ಮೈಹಿಬೂಬಪಾಶಾ ಮುಕಾಸಿ ಸಾ|| ದೇಸುಣಗಿ ತಾ|| ಜೇವರ್ಗಿ ಹಾ|| ವ|| ದಿನರ್ ಸ್ಟೀಲ್ ಪತ್ತೆ ನಗರ, ಪಿಪೇ ಲೈನ ರೋಡ್ ನನ್ನತ ನಗರ (ಐ.ಇ)
ಹೈದ್ರಾಬಾದ ಎನ್ನುವವರಿಗೆ ಟೆಂಡರ ಆಗಿದ್ದು ಇರುತ್ತದೆ. ಸದರಿ ಪ್ಲಾಸ್ಟಿಕ್ ಚೀಲಗಳು ನಮ್ಮ
ಕಾರ್ಖಾನೆಯ ಆವರಣದಲ್ಲಿ ಇಟ್ಟಿರುತ್ತೇವೆ. ಸದರಿ ಪ್ಲಾಸ್ಟಿಕ್ ಚೀಲಗಳ ಬಾಜು ಸಕ್ಕರೆ ಮಾಡಲು ಉಪಯೋಗಿಸವಂತಹ
ನಿಕ್ಕಿಲ್ ಸ್ಕ್ರೀನ್ ತಗಡಗಳನ್ನು ಇಟ್ಟಿರುತ್ತೇವೆ. ದಿನಾಂಕ
16-04-2016 ರಂದು ಬೆಳಿಗ್ಗೆ 9:30 ಗಂಟೆಗೆ ನಾನು ಕಾರ್ಖಾನೆಯಲ್ಲಿದ್ದಾಗ, ಸದರಿ ನಿಜಾಮಪಾಶಾ ಈತನು ನಮ್ಮ
ಕಾರ್ಖಾನೆಯಲ್ಲಿ ಸ್ಕ್ರ್ಯಾಪ ಸಾಮಾನುಗಳನ್ನು ತಗೆದುಕೊಂಡು ಹೊಗಲು ಕ್ಯಾಂಟರ ನಂಬರ ಎಪಿ-28
ಟಿಸಿ-8493 ನೇದ್ದು ತಗೆದುಕೊಂಡು ಹಸನಸಾಬ ತಂದೆ ಸೈಪನಸಾಬ ಸಾ|| ದೇಸುಣಗಿ ತಾ|| ಜೇವರ್ಗಿ ಈತನೊಂದಿಗೆ ಕಾರ್ಖಾನೆಗೆ
ಬಂದು ತಾನು ಟೆಂಡರ ಪಡೆದುಕೊಂಡಂತಹ ಪ್ಲಾಸ್ಟಿಕ್ ಚೀಲಗಳನ್ನು ಸದರಿ ವಾಹನದಲ್ಲಿ ನಿಜಾಮಪಾಶಾ
ಮುಕಾಸಿ ಮತ್ತು ಅವನ ಜೋತೆಗೆ ಬಂದಿದ್ದ ಹಸನಸಾಬ ಬತ್ತನಾಳ ಇಬ್ಬರು ತುಂಬುತ್ತಿರುತ್ತಾರೆ.
ಸದರಿಯವರು ಕ್ಯಾಂಟರ ವಾಹನದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತುಂಬುವಾಗ, ನಿಜಾಮಪಾಶಾ ಮುಕಾಸಿ ಹಾಗೂ ಹಸನಸಾಬ
ಬತ್ತನಾಳ ಇಬ್ಬರು ಅಲ್ಲೆ ಇಟ್ಟಿದ್ದ ಬೆಲೆ ಬಾಳುವ ನಿಕ್ಕಿಲ್ ಸ್ಕ್ರೀನ ತಗಡುಗಳನ್ನು ಕಳ್ಳತನ
ಮಾಡಿಕೊಂಡು ಹೋಗಬೆಕೆಂದು ಇಬ್ಬರು ಕೂಡಿ ಸದರಿ
ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಮಡಚಿ ಇಬ್ಬರು
ಒಂದೊಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಯಾರಿಗೂ ಗೊತ್ತಾಗದಂತೆ ಕ್ಯಾಂಟರ ವಾಹನದಲ್ಲಿ ಹಾಕಿ
ಕಳ್ಳತನ ಮಾಡುತ್ತಿದ್ದರು. ಆಗ ನಾನು ಮತ್ತು ನಮ್ಮ
ಸೆಕ್ಯೂರ್ಟಿ ಸಿಬ್ಬಂದಿಯವರಾದ ಪಕೀರಪ್ಪ ತಂದೆ ರೇವಪ್ಪ ಮುಕಾಸಿ ಹಾಗೂ ರೇವಣಸಿದ್ದ ತಂದೆ
ಮಲ್ಲಪ್ಪ ದೇಗಿಲ ಮೂರು ಜನರು ಕೂಡಿ ಅವರಿಗೆ ಹಿಡಿಯಲು ಹೋದಾಗ ಸದರಿಯವರು ಕಳ್ಳತನ ಮಾಡಿದ
ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಅಲ್ಲೆ ಬಿಸಾಕಿ ಕ್ಯಾಂಟರ ವಾಹನ ಅಲ್ಲೆ ಬಿಟ್ಟು ಓಡಿ
ಹೋಗಿರುತ್ತಾರೆ. ಸದರಿಯವರು ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳು ಅಂದಾಜು 30 ಕೆ.ಜಿ
ತೂಕವಿದ್ದು, ಅಂದಾಜು
15,000/- ರೂ
ಕಿಮ್ಮತ್ತಿನವುಗಳು ಇರುತ್ತವೆ. ಸದರಿಯವರು ಪ್ಲಾಸ್ಟಿಕ್ ಸಾಮಾನುಗಳನ್ನು ತಗೆದುಕೊಂಡು ಹೊಗಲು
ತಂದಂತಹ ಹಾಗೂ ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಹಾಕಿದ ಕ್ಯಾಂಟರ ನಂಬರ ಎಪಿ-28
ಟಿಸಿ-8493 ನೇದ್ದು ನಮ್ಮ ಕಾರ್ಖಾನೆಯಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾರೆ. ಇಂದು ಕಾರ್ಖಾನೆಯ
ಮುಖ್ಯೆಸ್ಥರ ಆದೇಶದ ಮೇಲೆ ನಾನು ಸದರಿಯವರು ಕಳ್ಳತನ ಮಾಡಿದ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು
ಹಾಗೂ ಕೃತ್ಯಕ್ಕೆ ಬಳಸಿದ ಕ್ಯಾಂಟರ ವಾಹನವನ್ನು ಕಾರ್ಖಾನೆಯ ಮುಖ್ಯಸ್ಥರು ಹಾಗೂ ಉನ್ನತ ಅದಿಕಾರಿಗಳ
ಸೂಚನೆ ಮೇರೆಗೆ ಇಂದು ತಡವಾಗಿ ಠಾಣೆಗೆ ತಂದು ತಮ್ಮ ಮುಂದೆ ಹಾಜರು ಪಡಿಸಿರುತ್ತೇನೆ. ಕಾರಣ ಸದರಿ
1) ನಿಜಾಮಪಾಶಾ ತಂದೆ ಮೈಹುಬೂಬ ಪಾಶಾ ಸಾ|| ದೇಸುಣಗಿ ತಾ|| ಜೇವರ್ಗಿ 2) ಹಸನಸಾಬ ತಂದೆ ಸೈಫನಸಾಬ
ಬತ್ತನಾಳ ಸಾ|| ದೇಸುಣಗಿ
ತಾ|| ಜೇವರ್ಗಿ
ಇವರು ಟೆಂಡರ ಮೂಲಕ ನಮ್ಮ ಕಾರ್ಖಾನೆಯಲ್ಲಿ ಉಳಿದ ಪ್ಲಾಸ್ಟಿಕ್ ಚೀಲಗಳನ್ನು ಖರಿದಿ ಮಾಡಿ, ಅವುಗಳನ್ನು ತಗೆದುಕೊಂಡು ಹೋಗಲು
ಟ್ಯಾಂಕರ ವಾಹನ ತಗೆದುಕೊಂಡು ಬಂದು, ಸದರಿ ಪ್ಲಾಸ್ಟಿಕ್ ಚೀಲಗಳನ್ನು ತಗೆದುಕೊಂಡು ಹೋಗದೆ
ನಮ್ಮ ಕಾರ್ಖಾನೆಯ ಬೆಲೆ ಬಾಳುವ ನಿಕ್ಕಿಲ್ ಸ್ಕ್ರೀನ್ ತಗಡುಗಳನ್ನು ಕಳ್ಳತನ ಮಾಡಿರುತ್ತಾರೆ.
ಕಾರಣ ಸದರಿ ಕಳ್ಳತನ ಮಾಡಿ ನಾವು ನೋಡಿದ ನಂತರ ಸದರಿ ಬೆಲೆ ಬಾಳುವ ತಗಡುಗಳನ್ನು ಅಲ್ಲೆ ಬಿಸಾಕಿ
ಓಡಿ ಹೊದವರ ಮೇಲೆ ಗುನ್ನೆ ವರದಿಯಾಗಿರುತ್ತದೆ.
No comments:
Post a Comment