ಮಟಕಾ ಜೂಜುಕೋರರ ಬಂಧನ:
ನಿಂಬರ್ಗಾ ಪೊಲೀಸ ಠಾಣೆ:- ದಿನಾಂಕ 27/04/2016 ರಂದು ಶ್ರೀ
ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ಡಿ.ಸಿ.ಬಿ ಘಟಕದ ಸಿಬ್ಬಂಧಿಯವರಾದ ಶ್ರೀ
ಮುಜುಬುದ್ದೀನ ಹೆಚ್.ಸಿ 410, ಶ್ರೀ ನಾಗರಾಜ ಸಿಪಿಸಿ 386, ಶ್ರೀ ಸಂತೋಷ ಸಿಪಿಸಿ 900 ರವರೊಂದಿಗೆ ಕಲಬುರಗಿಯಿಂದ ಆಳಂದ ಕಡೆಗೆ ಹೋಗುವ ರಸ್ತೆಯ ಮೇಲೆ ಟೋಲ ನಾಕಾ ಹತ್ತಿರ ಪೆಟ್ರೊಲಿಂಗ
ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಅಂತ ಮಾಹಿತಿ ತಿಳಿದು ಪಂಚರಾದ 01] ಶ್ರೀ ಅರ್ಜುನ ತಂದೆ
ಅಪ್ಪಣ್ಣ ನ್ಯಾಮನ 02] ಶ್ರೀ ಶ್ರೀಮಂತ ತಂದೆ ಶಿವಲಿಂಗಪ್ಪ ನೈಕೋಡಿ ಸಾ|| ಇಬ್ಬರೂ ಸುಂಟನೂರ ಗ್ರಾಮ ಇವರೊಂದಿಗೆ ಸುಂಟನೂರ ಗ್ರಾಮದ ಯಲ್ಲಾಲಿಂಗ ಗುಂಪಾದ ಹತ್ತಿರ ಹೋಗಿ
ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಮೋಟಾರ ಸೈಕಲ ಮೇಲೆ ಕುಳಿತು
ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು
ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ
ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಿಚಾರಿಸಲು
ತನ್ನ ಹೆಸರು ಅಪ್ಪಾರಾವ
ತಂದೆ ಶಾಂತಪ್ಪ
ಮೇಲಿನಕೇರಿ ಸಾ|| ಸುಂಟನೂರ ಅಂತ ತಿಳಿಸಿದ್ದು ಆತನಿಗೆ ಚಕ್ ಮಾಡಲಾಗಿ ಆತನ ಹತ್ತಿರ ನಗದು ಹಣ
7010/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ, ಒಂದು ಮೋಬೈಲ, ಆಪಾದಿತನು ಕುಳಿತುಕೊಂಡ ಮೋಟಾರ ಸೈಕಲ ನಂ.ಕೆ.ಎ 32, ಇಜೆ 2075 ಇದ್ದು ಇವುಗಳನ್ನು ಜಪ್ತಿಪಡಿಸಿಕೊಂಡು ಆರೋಪಿತರ ಮೇಲೆ ನಿಂಬಗಾ್ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 26/04/2016 ರಂದು ಶ್ರೀ
ಶ್ರೀಕಾಂತ ತಂದೆ ಪ್ರಭು ಹೊಸಳಿ, ಸಾ|| ವಿಧ್ಯಾನಗರ ಕಲಬುರಗಿ ರವರು ಮತ್ತು
ಸುನೀಲ ತಂದೆ ಸಿದ್ರಾಮಪ್ಪ ಸಿರಗಾನೂರ ಸಾ|| ಬಸವ ನಗರ ಕಲಬುರಗಿ ಇಬ್ಬರೊ ಕಲಬುರಗಿಯಿಂದ ಜವಳಿ (ಡಿ) ಗ್ರಾಮಕ್ಕೆ ಮೋಟರ
ಸೈಕಲ ನಂ. ಕೆ.ಎ 32, ಇಡಿ 9212 ನೇದ್ದರ ಮೇಲೆ ಹೋಗುವಾಗ ಸುನೀಲ ತಂದೆ ಸಿದ್ರಾಮಪ್ಪ
ಸಿರಗಾನೂರ ಈತನು ತಾನು ಚಲಾಯಿಸುತ್ತಿರುವ ಮೋಟರ ಸೈಕಲ ನಂ. ಕೆ.ಎ 32, ಇಡಿ 9212 ನ್ನು ಬಾಬಾ ಫಕ್ರೂದ್ದೀನ ದರ್ಗಾ ದಾಟಿ 1 ಕೀಮಿಟರ ದಾಟಿ ಸ್ಟೇಶನ ಗಾಣಗಾಪೂರ
ಕಡೆಗೆಬರುವ ರೋಡಿನ ಮೇಲೆ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿದ್ದರಿಂದ ಮೋಟರ ಸೈಕಲ ಸ್ಕೀಡ
ಆಗಿ ಶ್ರೀಕಾಂತ ಮತ್ತು ಸುನೀಲ ಮೈ ಕೈಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಠಾಣೆ : ದಿನಾಂಕ: 27/04/2016
ರಂದು ಶ್ರೀಮತಿ, ಲಕ್ಷ್ಮಿ ಗಂಡ ಚನನ್ಬಸವ
ಬುದಿಹಾಳ ಹಾ:ವ: ಡಿ.ಎ.ಆರ್.ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 13/04/16 ರಂದು
ಮದ್ಯಾನ್ಹ 1-00 ಗಂಟೆಯಿಂದ 1-15 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಜೇವರ್ಗಿ ಪಟ್ಟದ ಬಸ್
ನಿಲ್ದಾಣದ ಬಸ್ಸಿನಲ್ಲಿದ್ದ ತನ್ನ ವ್ವ್ಯಾನಿಟಿ ಬ್ಯಾಗಿನಲ್ಲಿದ್ದ 1) ಬಂಗಾರದ ತಾಳಿ ಅರ್ದ ತೊಲಿ
ಅ.ಕಿ. 14.000/- ರೂ 2) ಬಂಗಾರದ ಚಪ್ಲಾರ 3 ತೊಲಿ ಅ.ಕಿ.75.000/- 3) ಬಂಗಾರದ ನೆಕ್ಲೆಸ್ 1
ತೋಲಿ 25.000/- 4) ಬಂಗಾರದ ಲಾಕೇಟ 1 ತೋಲಿ ಅ.ಕಿ. 25.000/- 5) ಬಂಗಾರದ2 ಉಂಗುರಗಳು 4
ಗ್ರಾಮ.ಅ.ಕಿ. 10.000/-ರೂ.ಹಾಗೂ ನಗದು ಹಣ 3000/- ರೂ. ಹಿಗೆ ಒಟ್ಟು 1.52.000/- ರೂ
ಕಿಮ್ಮತ್ತಿನದು ವ್ಯಾನೇಟಿ ಬ್ಯಾಗ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಜೇವರ್ಗಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment