ಸಿಡಿಲು ಬಡಿದು ಸಾವು ಪ್ರಕರಣ :
ಫರತಾಬಾದ
ಠಾಣೆ : ದಿನಾಂಕ: 03/04/2016
ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದ
ಹೊಲ ಸರ್ವೇ ನಂ 3 ರಲ್ಲಿ ಬೇವಿನ ಗಿಡದ ಕೆಳೆಗೆ ಹಾಕಿರುವ ಉಳ್ಳಾಗಡ್ಡಿಯ ಮೇಲೆ ತಾಡಪತ್ರಿ
ಹಾಕಲು ಹೋದಾಗ ಅದೇ ವೇಳೆಗೆ ಒಮ್ಮೇಲೆ ಅಕಾಲಿಕವಾಗಿ ಮಳೇ ಗಾಳಿ ಗುಡುಗು ಸಿಡಿಲು ಬಂದು. ಅಲ್ಲಿ ಕೆಲಸ ಮಾಡುತ್ತಿದ್ದ
ಸದರಿ ಮೃತ ಭೀಮ್ಮಪ್ಪಾ ತಂದೆ ಶರಣಪ್ಪ ನಾಯ್ಕೋಡಿ ಇವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶರಣಪ್ಪಾ ತಂದೆ ಮರೇಣ್ಣಾ ನಾಯ್ಕೋಡಿ ಸಾ:ಕದ್ದರಗಿ ತಾ:ಚಿತ್ತಾಪೂರ ಹಾ:ವ:ಸೀತನೂರ
ತಾ: ಜಿ: ಕಲಬುರಗಿ
ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರಗಿ
ಠಾಣೆ : ದಿನಾಂಕ 22.03.2016 ರಂದು 10:30 ಗಂಟೆಯಿಂದ 16:00 ಗಂಟೆಯ ಮಧ್ಯದ ಅವಧಿಯಲ್ಲಿ 1) ಸೋಮಲಿಂಗಪ್ಪ ತಂದೆ ಬಸವಂತರಾಯ ಹೇರೂರ
2) ಹುಲಕಂಠರಾಯ ತಂದೆ ಬಸವಂತರಾಯ ಹೇರೂರ 3) ಚಂದ್ರಾಮಪ್ಪ ತಂದೆ ರಾವುತಪ್ಪ ಚೀರಲದಿನ್ನಿ ಸಾ|| ಮೂರು ಜನರು ಮುರಗಾನುರ 4) ಪ್ರೇಮನಗೌಡ ತಂದೆ ಕುಪ್ಪನಗೌಡ ಸಾ|| ನೆಲೋಗಿ ಎಲ್ಲರು ಕೂಡಿಕೊಂಡು ಜೇವರಗಿ ಪಟ್ಟಣದ ಉಪ
ನೊಂದವಣಾಧೀಕಾರಿ ಕಾರ್ಯಾಲಯದಲ್ಲಿ ವಂಚನೆಯಿಂದ ಮತ್ತು ನಂಬಿಕೆ ದ್ರೋಹ ಮಾಡಿ ಬೇರೆಯವರಂತೆ ನಟನೆ
ಮಾಡಿ ನನಗೆ ಮೋಸ ಮಾಡಿ ನನ್ನ ಹೆಸರಿನಲ್ಲಿ ಇದ್ದ ಮುರಗಾನೂರ ಸೀಮಾಂತರದ ಹೊಲದ ಸರ್ವೇ ನಂ 3/4
ನೇದ್ದರಲ್ಲಿನ 3 ಎಕರೆ 3 ಗುಂಟೆ ಜಮಿನನ್ನು ತಮ್ಮ ಹೆಸರಿಗೆ ನೊಂದಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ
ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಮಾದರ್ ಸಾ : ಮುರಗಾನೂರ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಪ್ರಭುಲಿಂಗ ತಂದೆ ಮಲ್ಲಪ್ಪ
ದೊಡ್ಡಮನಿ ಸಾ:ಜಂಬಗಾ(ಜೆ) ತಾ: ಆಳಂದ ರವರ ಚಿಕ್ಕ ಮಗಳಾದ
ಕಾಂಚನಾ ವಯ: 19 ವರ್ಷ ಇವಳು 10ನೇ ತರಗತಿಯಲ್ಲಿ ಅನುತಿರ್ಣ ವಾಗಿದ್ದರಿಂದ ಶಾಲೆ ಬಿಡಿಸಿ
ನಮ್ಮೂಂದಿಗೆ ಕೂಲಿ ಕೆಲಸ ಮಾಡುತ್ತಾ ಬಂದಿದ್ದು ದಿನಾಂಕ:30/03/2016 ರಂದು ಬುಧುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಮಗಳು
ಕಾಂಚನಾ ಇವಳು ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ನನ್ನ ಹೆಂಡತಿ ನಂದಾಬಾಯಿಗೆ ತಿಳಿಸಿ
ಹೋದಳು ಆಕೆಯ ಹೋಗಿ 2 ಗಂಟೆ ಆದರೂ ಮನೆಗೆ
ಬರದಿದ್ದರಿಂದ ನಾನು ನಮ್ಮ ಊರಲ್ಲಿ ಆಕೆಯ ಗೆಳತಿಯ ಮನೆಗೆ ಹೋಗಿ ವಿಚಾರಿಸಿದ್ದು ಬಂದಿರುವುದಿಲ್ಲ
ಅಂತಾ ತಿಳಿಸಿರುತ್ತಾರೆ. ನಾನು ಹಾಗೂ ನನ್ನ ಹೆಂಡತಿ ಕೂಡಿ ಸಂಬಂಧಿಕರಿಗೆ ಪೋನ ಮುಖಾಂತರ
ವಿಚಾರಿಸಿದ್ದು ಬಂದಿರುವುದಿಲ್ಲಾ. ಅಂತಾ ತಿಳಿಸಿರುತ್ತಾರೆ. ನಾವು ಎಲ್ಲಾ ಕಡೆಗೆ ಹುಡುಕಾಡಿದರು
ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment