¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-05-2016
zsÀ£ÀÆßgÀ ¥Éưøï oÁuÉ UÀÄ£Éß £ÀA. 193/2016, PÀ®A 279, 337, 338
L¦¹ :-
ದಿನಾಂಕ
05-05-2016 ರಂದು
ಫಿರ್ಯಾದಿ ಸಂಜು ತಂದೆ ರಮೇಶ ಸಾ: ಗಾಂಧಿನಗರ ಕಾಲೋನಿ ಬೀದರ ರವರು ಮತ್ತು ಫಿರ್ಯಾದಿಯವರ ಜೋತೆ
ಕೇಲಸ ಮಾಡುವ ರಾಜು ತಂದೆ ಪುಂಡಲಿಕ ಬಾವಿಕಟ್ಟಿ ಕೂಡಿಕೊಂಡು ಖಾಸಗಿ ಕೆಲಸದ ನಿಮಿತ್ಯ ಭಾಲ್ಕಿಗೆ
ರಾಜುವಿನ ಗೇಳೆಯನ ಮೋಟಾರ್ ಸೈಕಲ ಪಲ್ಸರ್ ನಂ. ಕೆಎ-38/ಆರ್-9087 ನೇದರ ಮೇಲೆ ಭಾಲ್ಕಿ ನಗರಕ್ಕೆ
ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಬೀದರಕ್ಕೆ ಬರುವಾಗ ಮೇಳಕುಂದಾ ಗ್ರಾಮ ದಾಟಿ ಹಲಬರ್ಗಾ ಕಡೆ
ಬರುವ ರಸ್ತೆಯ ಮೇಲೆ ಎದುರಿನಿಂದ ಒಬ್ಬ ಹಿರೋ ಹೊಂಡಾ ಸಿಡಿ ಡಿಲಕ್ಸ್ ಮೋಟಾರ್ ಸೈಕಲ ನಂ.
ಕೆಎ-38/ಜೆ-2124 ನೇದರ ಚಾಲಕನಾದ ಆರೋಪಿ ಧನರಾಜ ತಂದೆ ಶರಣಪ್ಪಾ ಸಾ: ಕೋನಮೆಳಕುಂದಾ ಇತನು ತನ್ನ
ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಸದರಿ ಮೋಟಾರ್ ಸೈಕಲ ತನ್ನ
ಹತೊಟಿಯಲ್ಲಿಟ್ಟುಕೊಳ್ಳಲಾಗದೇ ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ
ಅಪಘಾತದಿಂದ ಫಿರ್ಯಾದಿಯವರ ಹಣೆಗೆ ತರಚಿದ ರಕ್ತಗಾಯ, ಎಡಗೈ ಮೋಳಕೈಗೆ ತರಚಿದ ರಕ್ತಗಾಯ ಮತ್ತು
ಬಲಕಾಲಿನ ಮೋಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ರಾಜು ತಂದೆ ಪುಂಡಲಿಕ ಇವನಿಗೆ ಬಲಕಾಲು
ಮೋಳಕಾಲಿನ ಕೇಳಗೆ ಭಾರಿ ಗುಪ್ತ ಮತ್ತು ರಕ್ತಗಾಯವಾಗಿರುತ್ತದೆ, ಎಡಗೈ ಮುಂಗೈಗೆ ಗುಪ್ತಗಾಯವಾಗಿರುತ್ತದೆ,
ಆರೋಪಿಗೂ ಸಹ ಸಣ್ಣಪುಟ್ಟ ತರಚಿದ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment