Police Bhavan Kalaburagi

Police Bhavan Kalaburagi

Thursday, May 26, 2016

Bidar district daily crime update 26-05-2016


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 26-05-2016

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 203/16 ಕಲಂ 323,504,143,147, ಜೊತೆ 149 ಐಪಿಸಿ ಹಾಗು ಕಲಂ:3(1) (10)  ಎಸ್.ಸಿ ಎಸ್.ಟಿ (ಪಿ.ಎ ಆಕ್ಟ) , 1989, :-

ದಿನಾಂಕ:25/05/2016 ರಂದು 1600 ಗಂಟೆಗೆ ಫಿರ್ಯಾದಿ ಶ್ರೀ ದಿಲೀಪಕುಮಾರ ತಂದೆ ರಾಮಣ್ಣಾ ಜೀವದಾರ ವಯ:37 ಜಾ;ಎಸ್.ಸಿ (ದಲಿತ) ಉ:ಗ್ರಾಮ ಪಂಚಾಯಾತ ಸದಸ್ಯರು ಸಾ:ಕೋನಮೆಳಕುಂದಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಫಿರ್ಯಾದಿಯು ಬೇಳಿಗ್ಗೆ 1130 ಗಂಟೆಗೆ ಕುಡಿಯುವ ನೀರಿಗಾಗಿ ಕೋನಮೇಳಕುಂದಾ ಗ್ರಾಮ ಪಂಚಾಯಾತಿನಲ್ಲಿ  ಗ್ರಾಮಸ್ಥರು ಸೇರಿದರು  ಸುಮಾರು ದಿನಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಿವ್ರವಾಗಿದ್ದು , ಇದಕ್ಕೆ ಗ್ರಾಮ ಪಂಚಾಯಾತ ಅದ್ಯಕ್ಷರು, ಪಿ.ಡಿ.ಓ ಸೇರಿ ಅವರ ಪರವಾಗಿ ಕೆಲ ಹಿಂಭಾಲಕರಾದ . 1) ಮಲ್ಲಿಕಾರ್ಜುನ ತಂದೆ  ವೀರಶೇಟ್ಟಿ ವಾಲೆ , 2) ಚಂದ್ರಕಾಂತ ತಂದೆ ಸಂಗಶೇಟ್ಟಿ ಕೊಸಂಭೆ, 3) ಮಹೇಶ ತಂದೆ ರಾಚಪ್ಪಾ ವಾಲೆ, 4) ಸೋಮನಾಥ ತಂದೆ ಕಾಶಪ್ಪಾ  ಧನ್ನೆ , 5) ಬಸಪ್ಪಾ ತಂದೆ ಮಾಣಿಕ ಮಾನಕರ ಇವರೆಲ್ಲರೂ ಸೇರಿ ಗ್ರಾಮ ಪಂಚಾಯತ ಸದಸ್ಯೆನಾದ ನಾನು ಗ್ರಾಮದ ಸಮಸ್ತ ಜನರ ಮುಂದೆ ಅಧಿಕಾರಿಗಳು ಬರುತಿದ್ದಾರೆ.  ಅವರು ಸಮಸ್ಯಗಳು ಬಗೆ ಹರಿಸುತ್ತಾರೆ.  ದಯವಿಟ್ಟು ಸಹಕರಿಸಿ  ಅಂದಾಗ  ಏ ನೀನ್  ಎನ್ ಹೇಳುತ್ತಿಯಾ!  ಕೆಳಜ್ಯಾತ್ಯಾವನಾಗಿ ನೀನ ಅವಖಾತ್  ಏನು ಅಂತ ನನಗೆ ಗೋತ್ತು ಎಂದು ಮೇಲೆ ಬಿದ್ದು ಮನಬಂದಂತೆ ಎಳೆದಾಡಿ ನಿಂದಿಸಿದ್ದಾರೆ.  ಅಲ್ಲದೆ ಸಾರ್ವಜನಿಕರ ಎದುರಲ್ಲಿ ಮನಬಂದಂತೆ ಥಳಿಸಿದ್ದಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ  ಪೊಲೀಸ್ ಠಾಣೆ ಗುನ್ನೆ ನಂ. 204/16 ಕಲಂ 143,147,323,324,504 ಜೊತೆ 149 ಐಪಿಸಿ:-

ದಿನಾಂಕ:25/05/2016 ರಂದು 1700 ಗಂಟೆಗೆ ಫಿರ್ಯಾದಿ ಶ್ರೀ ಮಲ್ಲಿಕಾರ್ಜುನ ತಂದೆ ವೇರಶೆಟ್ಟಿ ವಾಲೆ ವಯ:33 ವರ್ಷ , ಜಾತಿ:ಲಿಂಗಾಯತ , ಉ:ಖಾಸಗಿ ಶಿಕ್ಷಕ , ಸಾ:ಕೋನಮೇಳಕುಂದಾ ತಾ:ಭಾಲ್ಕಿ ಇವರು ಧನ್ನೂರಾ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮೌಖಿಕ ದೂರು ಹೇಳಿಕೆ ನೀಡಿದರ ಸಾರಾಂಶವೆನೆಂದರೆ,  ಈಗ ಸುಮಾರು ದಿಸಸಗಳಿಂದ ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿರುತ್ತದೆ. ಈಗ ಸುಮಾರು ದಿವಸಗಳಿಂದ ನಮ್ಮೂರ ಗ್ರಾಮ ಪಂಚಾಯತ ವತಿಯಿಂದ  ಟ್ಯಾಂಕರ್ ಮೂಲಕ ಗ್ರಾಮದ ಜನರಿಗೆ ನೀರಿನ ಸರಬರಾಜು ಆಗುತ್ತಿದೆ.    ಹೀಗಿರುವಲ್ಲಿ ದಿನಾಂಕ : 25/05/2016 ರಂದು ಮುಂಜಾನೆ ನಮ್ಮೂರ ಗ್ರಾಮ ಪಂಚಾಯತ ಎದುರುಗಡೆ ರಸ್ತೆ  ಮೇಲೆ ಒಂದು ನೀರಿನ ಟ್ಯಾಂಕರ್  ಬಂದಿದ್ದು , ನಾನು ನೀರಿಗೆ ಹೋಗಿರುತ್ತೇನೆ. ಮುಂಜಾನೆ ಅಂದಾಜು 1130 ಗಂಟೆ ಸುಮಾರಿಗೆ ನಮ್ಮ ಗ್ರಾಮದ ದೀಲಿಪ ತಂದೆ ರಾಮಣ್ಣಾ ಜೀವದಾರ,  ಕಲ್ಲಪ್ಪಾ ತಂದೆ ತುಕಾರಾಮ ಮೊಳಕೆರೆ,  ಕೀರ್ತಿಕುಮಾರ ಬಿರಾದರ,  ದತ್ತಾತ್ರಿ ತಂದೆ ದೇವೆಂದ್ರಪ್ಪ ಹಂಪಾ , ಮತ್ತು ರಘುನಾಥ ತಂದೆ ಶಂಕರ ಮೇತ್ರೆ ಇವರೆಲ್ಲರೂ ಸಮಾನ  ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಗ್ರಾಮ ಪಂಚಾಯತ ಎದುರಿಗೆ ನಿಂತ ಟ್ಯಾಂಕರ ಎಸ್.ಸಿ ಓಣಿಗೆ ಹೋಗಬೇಕು ಅಂತ ಅಂದಿದ್ದು ಅವರಿಗೆ ನಾನು ನಮಗೂ ನೀರಿನ ಸಮಸ್ಯೆ ಇದೆ . ಇನ್ನೊಂದು ನೀರಿನ ಟ್ಯಾಂಕರ್ ಬಂದಾಗ ಅದು ಎಸ್.ಸಿ ಓಣಿಗೆ ತೆಗೆದುಕೊಂಡು ಹೋಗಿ ಅಂದಿದಕ್ಕೆ  ಅವರು ಅವಾಚ್ಯವಾಗಿ ಬೈದು ದಿಲೀಪ ಜೀವದಾರ ಇವನು ಅಲ್ಲಿಯೇ ಬಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ದತ್ತಾತ್ರಿ ಹಂಪಾ ಮತ್ತು ರಘುನಾಥ ಮೇತ್ರೆ ಇವರು ಕೈಯಿಂದ ಬೆನ್ನ ಮೇಲೆ ಹೋಡೆದಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 96/16 ಕಲಂ 420 ಐಪಿಸಿ ಜೊತೆ 78(3) ಕೆ.ಪಿ. ಆಕ್ಟ್ :-

ದಿ : 25-05-2016 ರಂದು 1130 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಚಿಟಗುಪ್ಪಾ ಪಟ್ಟಣದ ಶಿವಾಜಿ ಚೌಕ್ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80 ರೂ ನೀಡುತ್ತೇನೆ ಅಂತ ಹೇಳಿ ಸರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿ ಅವರಿಗೆ ಮಟಕಾ ಚಿಟಿ ಬರೆದುಕೋಡುತ್ತಿದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಆರೋಪಿತನಾದ ರಾಮಣ್ಣಾ ತಂದೆ ಶಿವಪ್ಪಾ ಮೊಟ್ಟೆ ವಯ 42 ವರ್ಷ ಇತನನ್ನು ಬಂದಿಸಿ ಅವನ ವಶದಿಂದ   ಒಂದು ಬಾಲ ಪೇನ. ಮೂರು ನಂಬರ ಬರೆದ ಮಟಕಾ ಚಿಟಗಳು. ನಗದು ಹಣ 780/-ರೂ ಒಂದು  ಮೊಬೈಲ್ || ಕಿ|| 500/-ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

No comments: