ಅತ್ಯಾಚಾರ ಪ್ರಕರಣ :
ಜೇವರಗಿ ಠಾಣೆ
: ಕುಮಾರಿ ಇವರು ಸುಮಾರು 2-3 ವರ್ಷಗಳಿಂದ ನಮ್ಮೂರ ಫಿರೋಜಖಾನ ತಂದೆ ಗುಡುಸಾಬ ನಾಟಿಕಾರ
ಇತನು ನನಗೆ, ನಾನು ಶಾಲೆಗೆ
ಹೋಗುತ್ತಿದಾಗ ಮತ್ತು ಊರಲ್ಲಿದ್ದಾಗ ನಾನು ನಿನಗೆ ಪ್ರೀತಿ ಮಾಡುತ್ತೇನೆ ಅಲ್ಲದೇ ನಾವು ಇಬ್ಬರು
ಒಂದೆ ಜಾತಿಯವರು ಇದ್ದೇವು. ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದಾಗ ನಾನು ಇಲ್ಲಾ ನಾನು
ಚಿಕ್ಕವಳಿದ್ದೆನೆ ಮತ್ತು ನಮ್ಮ ಮನೆಯಲ್ಲಿ
ಬೈಯುತ್ತಾರೆ ಅಂತ ಹೇಳಿದರು ಕೂಡಾ ಅವನು ನನಗೆ ದಿನ ನಿತ್ಯ ನನ್ನ ಹಿಂದೆ ತಿರುಗಾಡುತ್ತಿದ್ದನು.
ಅದಕ್ಕೆ ನಾನು ಅವನಿಗೆ ನಂಬಿ ಪ್ರೀತಿ ಮಾಡುತ್ತಾ ಇದ್ದಾಗ ಅವನು ಪುಸಲಾಯಿಸಿ ನಾನು ನಿನಗೆ ಮುಂದೆ
ಮುದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಅವನ ಮನೆ ಹಿಂದೆ ನನ್ನ ಸಂಗಡ 4-5 ಸಲ ಸಂಬೋಗ
ಮಾಡಿರುತ್ತಾನೆ. ನಾನು ಮರೆಯಾದಿಗೆ ಅಂಜಿ ಮನೆಯಲ್ಲಿ ವಿಷಯ ತಿಳಿಸಿರುವದಿಲ್ಲಾ. ಅಲ್ಲದೇ
ಈಗ 3 ತಿಂಗಳ ಹಿಂದೆ ಸದರಿ ಫಿರೋಜಖಾನ ಇತನು
ನನ್ನ ಹತ್ತಿರ ಬಂದು, ನಾನು ನಮ್ಮ ಮನೆಯವರ ಮುಂದೆ ನಿನ್ನ ಸಂಗಡ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದರಿಂದ ನಮ್ಮ
ಮನೆಯಲ್ಲಿ ಒಪ್ಪಿರುತ್ತಾರೆ ಅದಕ್ಕೆ ನೀನು ಕೂಡಾ ನಿಮ್ಮ ಮನೆಯಲ್ಲಿ ತಿಳಿಸು ಅಂತ ನಂಬಿಸಿ
ಪುಸಲಾಯಿಸಿ ನನಗೆ ಅವನ ಮನೆ ಹಿಂದೆ ಕರೆದುಕೊಂಡು ಹೋಗಿ ನಾನು ಬ್ಯಾಡ ಅಂತ ಹೇಳಿದರು ಕೂಡಾ ಅಂದು
ಮದ್ಯಾಹ್ನ ನನಗೆ ಜಬರದಸ್ತಿಯಿಂದ ಕೆಳಗೆ ಕೆಡುವಿ ನನ್ನ ಬಟ್ಟೆ ಬಿಚ್ಚಿ ಸಂಬೋಗ ಮಾಡಿರುತ್ತಾನೆ
ಅಲ್ಲದೇ ಈ ವಿಷಯ ನೀನು ಯಾರಿಗಾದರು ಹೇಳಿದರೆ ನಾನು ನಿನಗೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತ
ಹೇಳಿದರಿಂದ ಅವನಿಗೆ ಅಂಜಿ ನಾನು ಮನೆಯಲ್ಲಿ ಹೇಳಿರುವದಿಲ್ಲಾ. ಈಗ ನಾನು ಅವನಿಗೆ ಮದುವೆ ಮಾಡಿಕೋ
ಅಂತ ಕೇಳಿದಾಗ ನೀನು ಯಾರ ಸಂಗಡ ಬೇಕಾದರು ಮದುವೆ ಮಾಡಿಕೋ ನಾನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ
ಹೇಳಿದ್ದರಿಂದ ನಾನು ಈ ವಿಷಯ ನಮ್ಮ ಮನೆಯಲ್ಲಿ ತಿಳಿಸಿದಾಗ ನಮ್ಮ ತಂದೆ-ತಾಯಿಯವರು ಮತ್ತು ನಮ್ಮೂರ
ಹಿರಿಯರು ಊರಲ್ಲಿ ಪಂಚಾಯತಿ ಮಾಡಿದಾಗ ಅವನು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದನ್ನು. ಈಗ
ಮದುವೆ ಮಾಡಿಕೊಳ್ಳು ಅಂತ ಹೇಳಿದಾಗ ಅವನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳುತ್ತಿದ್ದಾನೆ.
ಸದರ ಫಿರೋಜಖಾನ ತಂದೆ ಗುಡುಸಾಬ ನಾಟಿಕಾರ ಸಾ: ಗಂವಾರ ಇತನು ಅಪ್ರಾಪ್ತಳಾದ ನನಗೆ ಮದುವೆ
ಮಾಡಿಕೊಳ್ಳುತ್ತೇನೆ ಅಂತ ಪುಸಲಾಯಿಸಿ ನಂಬಿಸಿ ಜಬರದಸ್ತಿಯಿಂದ ಸಂಬೋಗ ಮಾಡಿ ಈಗ ಮದುವೆಯಾಗಲು
ಒಪ್ಪುತ್ತಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ
: ಶ್ರೀಮತಿ ಬಿಪಾಶ್ಯಾ ಗಂಡ ಸೈಯ್ಯದ ಮಹಿಬೂಬ ಪಟೇಲ ಸಾ: ಮುದಬಾಳ
(ಬಿ) ತಾ; ಜೇವರಗಿ ಇವರು ಸುಮಾರು 25 ವರ್ಷಗಳಿಂದ ನಾನು ಮತ್ತು ನನ್ನ ಗಂಡ ಮತ್ತು ಮಕ್ಕಳಾದ ಸೈಯ್ಯದ
ಮಶಾಕ ಪಟೇಲ, ಸೈಯ್ಯದ ಕಾಸಿಂ ಪಟೇಲ, ಸೈಯ್ಯದ ಇಸ್ಮಾಯಿಲ ಪಟೇಲ, ಪರಿವಿನ ಅವರೊಂದಿಗೆ
ಬಾಂಬೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ದಿನಾಂಕ 19.12.2001 ರಲ್ಲಿ ನಾನು
ಜೇವರಗಿ ಪಟ್ಟಣದ ಖಾಜಾ ಕಾಲೋನಿಯಲ್ಲಿ ಪ್ಲಾಟ ನಂ 44 ನೇದ್ದು ಖರದಿ
ಮಾಡಿದ್ದು ದಿನಾಂಕ 09-05-2016 ರಂದು ಸಾಯಂಕಾಲ 04:00 ಗಂಟೆಯ ಸುಮಾರಿಗೆ ನಾನು
ಮತ್ತು ನನ್ನ ಗಂಡ ಇಬ್ಬರು ಕೂಡಿಕೊಂಡು ಜೇವರಗಿ ಪಟ್ಟಣದ ಖಾಜಾ ಕಾಲೋನಿಯಲ್ಲಿರುವ ನಮ್ಮ
ಪ್ಲಾಟನಲ್ಲಿ ಮನೆ ಕಟ್ಟಲು ಹೋಗಿ ನಾವು ನಮ್ಮ ಜಾಗೆಯನ್ನು ಅಳತೆ ಮಾಡಿದಾಗ 30ಥ40 ಜಾಗೆ ಇರಲಿಲ್ಲಾ
ಆದ್ದರಿಂದ ನಮ್ಮ ಪ್ಲಾಟಿನ ಪಕ್ಕದಲ್ಲಿ ಇರುವ ರಹಿಮಾನ ಬಿ ಗಂಡ ಹುಸೇನ ಸಾ: ಬಿರಾಳ (ಕೆ) ಇವರು
ನಮ್ಮ ಪ್ಲಾಟಿನಲ್ಲಿ 3.1/2 ಪೀಟ ಜಾಗ ಅತೀಕ್ರಮಣ ಮಾಡಿ ತಮ್ಮ ಮನೆ ಕಟ್ಟಡ
ಕಟ್ಟುತ್ತಿದ್ದರು. ಆಗ ನಾನು ಅವರಿಗೆ ಯಾಕೆ ನಮ್ಮ ಜಾಗದಲ್ಲಿ 3.1/2 ಪೀಟ ತೀಕ್ರಮಣ
ಮಾಡಿದ್ದಿರಿ, ನಮ್ಮ ಜಾಗೆಯನ್ನು ನಮಗೆ ಬಿಟ್ಟು ಕೊಡಿರಿ ಅಂತಾ ಹೇಳಿದಾಗ
ರಹಿಮಾನ ಬಿ ಗಂಡ ಹುಸೇನ ಸಾ: ಬಿರಾಳ (ಕೆ) ಇವಳು ಏ ರಂಡಿ ನಾನು ನಿಮ್ಮ ಜಾಗದಲ್ಲಿ ನನ್ನ ಮನೆ
ಕಟ್ಟಿದಿನಿ ನೀನು ಏನು ಮಾಡಕೊಳ್ಳುತ್ತಿ ಮಾಡಕೋ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ
ಸುಮ್ಮನೆ ನನಗೆ ಬೈಯುತ್ತಿದ್ದಿ ಅಂತಾ ಅಂದಾಗ ರಹಿಮಾನ ಬೀ ಇವಳು ಏ ರಂಡಿ ನನಗೆ ಎದುರು
ಮಾತನಾಡುತ್ತಿ ಅಂತಾ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದಳು ಆಗ ನಾನು ಅಂಜಿ ಓಡುತ್ತಿದ್ದಾಗ
ಅವಳು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿದಳು. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಹುಸೇನ
ತಂದೆ ಕಾಸಿಂ ಸಾ: ಬಿರಾಳ (ಕೆ) ಇವರು ಏ ರಂಡಿ ಮಗನೇ ನಿನ್ನ ಹೆಂಡತಿಗೆ ಹೇಳು ಇಲ್ಲವಾದರೆ ಹೇಗೆ ಈ
ಪ್ಲಾಟಿನಲ್ಲಿ ನೀನು ಮನೆ ಕಟ್ಟುತ್ತಿ, ಒಂದು ವೇಳೆ ಈ ಪ್ಲಾಟಿನಲ್ಲಿ ನೀವು ಮನೆ ಕಟ್ಟಲು ಬಂದ್ರೆ
ನಿಮಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕುತ್ತಿದ್ದಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ
ಮಹೀಬೂಬ ಜಮಾದಾರ, ಶರಮೋದ್ದಿನ್ ದುಬೈ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಅಂಥಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಯಡ್ರಾಮಿ
ಠಾಣೆ : ದಿನಾಂಕ 10-05-2016 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ
ನಾನು ಊರಲ್ಲಿ ಇದ್ದಾಗ ನನ್ನ ಅಳಿಯ ಮಲ್ಲಿಕಾರ್ಜುನ ಇತನು ಕರಕಿಹಳ್ಳಿ ಗ್ರಾಮಕ್ಕೆ ಹೋಗುವದಾಗಿ
ಹೇಳಿ ತನ್ನ ಮೋಟರ್ ಸೈಕಲ್ ನಂ ಕೆ ಎ 32 ಇಜಿ 1443 ನೆದ್ದರ ಮೇಲೆ ಹೋದನು. ರಾತ್ರಿ 10 ಗಂಟೆಯ
ಸುಮಾರಿಗೆ ನನ್ನ ಮೊಬೈಲ್ ಗೆ ನನ್ನ ಅಳಿಯ ಮಲ್ಲಿಕಾರ್ಜುನನ ಮೊಬೈಲ್ ನಿಂದ ಯಾರೋ ಫೊನ್ ಮಾಡಿ
ಹೇಳಿದ್ದೆನೆಂದರೆ ನಿಮ್ಮ ಅಳಿಯ ಮಲ್ಲಿಕಾರ್ಜುನ ಇತನು ತನ್ನ ಮೊಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ
ನಾನು ಕೂಡ ಜೇವರ್ಗಿಯಿಂದ ಯಡ್ರಾಮಿಯ ಕಡೆಗೆ ಹೋಗುತ್ತಿದ್ದೆನು. ಜವಗಾ ಕ್ರಾಸ್ನಿಂದ ತನ್ನ ಮೋಟರ್
ಸೈಕಲ್ ಆಲೂರು ದಿಬ್ಬಿಯಲ್ಲಿ ಇಳಿಜಾರಿನಲ್ಲಿ ಹೋಗುತ್ತಿದ್ದಾಗ ನನಗೆ ಮಾರುತಿ ಕಾರ್ ಸೈಡ್ ಹೋಡೆದು
ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿದಾಗ ಮೋಟರ್ ಸೈಕಲ್ ಮೇಲಿಂದ
ಕೇಳಗೆ ಬಿದ್ದನು ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸುತ್ತಿದ್ದಂತೆ ನಾನು ಅಲ್ಲಿಗೆ ಹೋಗಿ
ನೊಡಲಾಗಿ ಅವನ ಬಲ ಹಣೆಗೆ ಭಾರಿ ಪೆಟ್ಟಾಗಿದ್ದು ರಕ್ತ ಸೊರ ಹತ್ತಿತ್ತು ಕಾರ್ ನೋಡಲಾಗಿ ಮಾರುತಿ
ಶಿಫ್ಟ್ ಕಾರ್ ನಂ ಕೆ ಎ 32 ಎಂ 7402 ಇದ್ದು ಚಾಲಕನಿಗೆ ನೋಡಿದರೆ ಗುರುತಿಸುತ್ತೆನೆ. ಭಾರಿ
ಪೆಟ್ಟಾಗಿ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಚಾಲಕನು ತನ್ನ ವಾಹನವನ್ನು
ತೆಗೆದುಕೊಂಡು ಹೋಗಿರುತ್ತಾನೆ. ಘಟನೆ ಜರುಗಿದಾಗ ರಾತ್ರಿ 9-30 ಗಂಟೆಯಾಗಿತ್ತು. ಅಂತಾ ಹೇಳಿದ
ಕೂಡಲೆ ನಾನು ನಮ್ಮೂರಿನ ನಿಂಗಪ್ಪ ತಂದೆ ಹಣಮಂತ ನಾಯ್ಕೊಡಿ, ಈಶ್ವರಗೌಡ ತಂದೆ
ಚಂದ್ರಶೇಖರಗೌಡ ಮಾಲಿ ಪಾಟೀಲ್ ಹಿಗೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೊಡಲಾಗಿ ನನ್ನ ಅಳಿಯ
ಫೊನ್ ನಿಂದ ಫೋನ್ ಮಾಡಿದ ಅಪ್ಪು ಪಾಟೀಲ್ ಯಡ್ರಾಮಿ ಇವರಿದ್ದು ನನ್ನೊಂದಿಗೆ ಫೊನಿನಲ್ಲಿ ಹೇಳಿದ
ವಿಷಯವನ್ನು ಹೇಳಿದರು ನನ್ನ ಅಳಿಯ ಮಲ್ಲಿಕಾರ್ಜುನಿಗೆ ನೋಡಲಾಗಿ ಅವನ ಬಲ ಹಣೆಗೆ ಬಾರಿ
ರಕ್ತಗಾಯವಾಗಿ ಕಿವಿಯಿಂದ ಮೂಗಿನಿಂದ ರಕ್ತ ಸೋರಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ನಾಗಣ್ಣ ತಂದೆ ಮಲ್ಲಪ್ಪ ಅಲ್ಲುರ ಸಾ : ಜೈನಾಪೂರ
ತಾ : ಜೇವರ್ಗಿ ಇವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment