ಮಣ್ಣು ಕುಸಿದು ಬಿದ್ದು ಕುಲಿ ಕಾರ್ಮಿಕರಿಗೆ ಗಾಯವಾದ
ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಶರಣಬಸಪ್ಪ ಜೋಗುರು ಸಾ : ಅವರಳ್ಳಿ ಇವರು ಬಂದರವಾಡ ಗ್ರಾಮದ ಓಗಪ್ಪ ತಂದೆ ಮಲ್ಲಪ್ಪ
ಹಿರೇಪೂಜಾರಿ ಇವರ ಹೊಲದಲ್ಲಿ ಹಾಳು ಬಾವಿಯಲ್ಲಿ ತೋಡುವ ಸಲುವಾಗಿ ನನ್ನ ತಾಯಿ ಷಣ್ಮುಕಮ್ಮ ಮತ್ತು
ದುಂಡಪ್ಪ ತಂದೆ ಮಲಪ್ಪ ಬಂದರವಾಡ, ಶರಣಪ್ಪ ಜೋಗುರ, ಗುರುಪ್ಪ ತಂದೆ ಜೆಟ್ಟೆಪ್ಪ ಜೋಗುರು ಭಾಗಪ್ಪ ತಂದೆ ಮಲಕಪ್ಪ ಶ್ಯಾದಿಪೂರ, ಬಸಪ್ಪ ತಂದೆ ಮಲಕಪ್ಪ ಶ್ಯಾದಿಪೂರ ಎಲ್ಲರೂ ಕೂಡಿ ಹೋಗಿದ್ದು ದಿನಾಂಕ:12-05-2016 ರಂದು
ಸಾಯಂಕಾಲ 4:00 ಗಂಟೆ ಸುಮಾರಿಗೆ ಓಗಪ್ಪ ಇವರ ಹೊಲದಲ್ಲಿಯ ಬಾವಿ ತೋಡುವ ಕೆಲಸ ಮಾಡುತ್ತಿರುವಾಗ
ಬಾವಿಯ ಮಣ್ಣು ಮತ್ತು ಕಟಗು ಮೇಲಿಂದ ಕಡಿದು ಬಿದ್ದ ಪ್ರಯುಕ್ತ ನನಗೆ ಎಡಗಾಲು ಮುರಿದಿರುತ್ತದೆ.
ಮೊಲಕಾಲಿಗೆ ಬಾರಿ ಗಾಯವಾಗಿರುತ್ತದೆ. ಅಲ್ಲದೆ ದುಂಡಪ್ಪ ತಂದೆ ಮಲಕಪ್ಪ ಬಂದರವಾಡ ಸಾ||ಅವರಳ್ಳಿ ಈತನಿಗೆ ಎರಡು ಕಾಲು ಮುರಿದಿದ್ದು ಕಿವಿಗೆ ಭಾರಿ ಗಾಯವಾಗಿ ರಕ್ತ ಬರುತ್ತಿತ್ತು
ಬಲಗಡೆ ಟೊಂಕಕ್ಕೆ ಬಾರಿ ಗಾಯವಾಗಿರುತ್ತದೆ. ಮಾತನಾಡುವ ಸ್ತೀತಿಯಲ್ಲಿ ಇರಲ್ಲಿಲ್ಲ. ಮತ್ತು
ಶರಣಪ್ಪ ತಂದೆ ಜೆಟ್ಟೆಪ್ಪ ಇವನಿಗೂ ಸ್ವಲ್ಪ ಗಾಯವಾಗಿರುತ್ತದೆ. ಆಸ್ಪತ್ರೆಗೆ ಬಂದಿರುವುದಿಲ್ಲ.
ನಂತರ ನಮಗೆ ಓಗಪ್ಪ ಹಾಗೂ ಗಂಗಪ್ಪ ಭೂತಾಳಿ, ಹಾಗೂ ನಮ್ಮ ಜೊತೆ ಕೆಲಸಕ್ಕೆ ಬಂದ ಗುರಪ್ ಇವರ ಮಣ್ಣಿನಿಂದ ಹೊರಗೆ ತೆಗೆದು ಉಪಚಾರ ಕುರಿತು
ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಓಗಪ್ಪನು ಹಳಯ ಬಾವಿ ಅಂತಾ ತಿಳಿದು ನಮಗೆ ದಿನಕ್ಕೆ
300/- ಕೊಡುವುದಾಗಿ ಹೇಳಿ ಕೆಲಸಕ್ಕೆ ಕರೆದು ಅವನ ಅಲಕ್ಷತನದಿಂದ ಈ ಘಟನೆ ನಡೆದಿರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 12/05/16 ರಂದು
ರಾತ್ರಿ 10-45 ಗಂಟೆ ಸುಮಾರಿಗೆ ತನ್ನ ಯಾವುದೋ
ಕೆಲಸದ ಕುರಿತು ಹಿರೋಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್
ನಂ. ಕೆಎ 32-ಇಜಿ-6300 ನೇದ್ದರ ಮೇಲೆ ಕೆರಿಭೋಸಗಾ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ
ಬರುವಾಗ ಮೃತ ಅಮರನಾಥ ಇತನು ತನ್ನ ವಶದಲ್ಲಿದ್ದ
ಮೋಟಾರ್ ಸೈಕಲನ್ನು ಅತಿವೇಗದಿಂದ ಮತ್ತು ನಿಸ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಆಳಂದ ಚೆಕಪೋಸ್ಟ
ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯದ ಎದರುಗಡೆ ರೋಡಿನ ಬದಿಗೆ ನಿಂತಿದ್ದ ಲಾರಿ ನಂ.
ಎಮ್.ಹೆಚ್-12-ಹೆಚ್.ಸಿ-2188 ನೇದ್ದಕ್ಕೆ ಹಿಂದುಗಡೆ ಅಪಘಾತ ಪಡಿಸಿದ್ದರಿಂದ ಅಮರನಾಥನ ತಲೆಗೆ, ಭಾರಿ ರಕ್ತಗಾಯ, ಎಡಗಣ್ಣಿಗೆ ಭಾರಿ
ಗುಪ್ತಗಾಯವಾಗಿ ರಕ್ತ ಸ್ರಾವವಾಗಿ , ಅಲ್ಲದೆ ಎಡಭುಜಕ್ಕೆ , ಎದೆಗೆ , ಹೊಟ್ಟೆಯ ಮೇಲ್ಭಾಗಕ್ಕೆ,
ಭಾರಿ ಕಂದುಗಟ್ಟಿದ್ದು ಗಾಯಗಳಾಗಿದ್ದು, ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ
ತಂದು ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ
ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಸದರಿ ಅಮರನಾಥನು ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುವ ಕಾಲಕ್ಕೆ
ಉಪಚಾರದಲ್ಲಿ ಗುಣಮುಖ ಹೊಂದದೆ ಮೃತಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀಮತಿ ಗೀತಾ ಗಂಡ ಸಂಜೀವಕುಮಾರ ಸಾ : ಝಳಕಿ ಕೆ ಇವರ ಗಂಡ ಈಗ ಸುಮಾರ
5 ತಿಂಗಳಿಂದ ಕಲಬುರಗಿಯ ಘಯಾಜ ಇವರ ಲಾರಿ ನಂ ಕೆಎ-32 ಎ-1811
ನೇದ್ದರ ಮೇಲೆ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿದ್ದು.
ಹೀಗಿದ್ದು ಫಿರ್ಯಾಧಿ ಗಂಡ ಇಂದು ದಿನಾಂಕ-12/05/2016 ರಂದು
ಬೆಳ್ಳಿಗೆ 10 ಗಂಟೆ ಸುಮಾರಿಗೆ ಕಲಬುರಗಿಯಿಂದ ಲಾರಿ ಲೊಡ ಮಾಡಿಕೊಂಡು
ಸೇಡಂಕ್ಕ ಹೋಗಿ ಬರುವುದಿದೆ ಅಂತಾ ಹೇಳಿ ಹೊರಟು ಮೃತನು ಕಲಬುರಗಿಯಿಂದ ತಾನು ಚಲಾಯಿಸುತ್ತಿದ್ದ
ಲಾರಿ ನಂ ಕೆಎ-32 ಎ-1811 ನೇದ್ದನ್ನು
ಚಲಾಯಿಸಿಕೊಂಡು ಸಡಂಕ್ಕೆ ಹೊರಟು ಗುಂಡಗುರ್ತಿ ತಾಂಡಾ ದಾಟಿ ಸ್ವಲ್ಪ ದೂರದಲ್ಲಿ ಕಲಬುರಗಿಯಿಂದ
ಸೇಡಂಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿರುವಾಗ ಆ ವೇಳೆಯಲ್ಲಿ ಮಳೆ ಬರುತ್ತಿದ್ದು
ಸಮಯ 5 ಪಿ.ಎಮ್ ಸುಮಾರಿಗೆ ಮೃತನು ತನ್ನ ಲಾರಿಯನ್ನು ಅತಿ ವೇಗ
ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನ ಟೈರ ಒಮ್ಮೆಲೆ ಪಂಚರ ಆದ
ಪರಿಣಾಮ ಲಾರಿ ನಿಯಂತ್ರಣ ತಪ್ಪಿದಾಗ ಮೃತನು ಒಮ್ಮೆಲೆ ಲಾರಿಯಿಂದ ಕೆಳಗೆ ಜಿಗಿಯಲು ಆಯ ತಪ್ಪಿ
ತನ್ನ ಲಾರಿಯ ಹಿಂದಿನ ಟೈರನಲ್ಲಿ ಸಿಲಿಕಿ ತೆಲೆಗೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಘಟನೆಯನ್ನು ರೊಡಿನ ಮೇಲೆ ಹೋಗಿ ಬರುವರಲ್ಲಿನ ಒಬ್ಬರನ್ನು
ನೋಡಿ ಮೃತ ಮೋಬೈಲನಿಂದ ಮೃತನ ಹೆಂಡತ್ತಿಗೆ ಘಟನೆ ಬಗ್ಗೆ ತಿಳಿಸಿ ಮತನಿಗೆ ಜಿಜಿಹೆಚ್ ಕಲಬುರಗಿಗೆ
ಅಂಬುಲೈಸ್ನನಲ್ಲಿ ಹಾಕಿ ಕಳಿಸುತ್ತಿರುವುದಾಗಿ ತಿಳಿಸಿದ ಮರಗೆ ಮೃತನ ಹೆಂಡತ್ತಿ ಹಾಗೂ ತಾಯಿ ಮೃತನ
ತಮ್ಮ ಆಸ್ಪತ್ರೆಗೆ ಬಂದು ನೋಡಲು ಮೃತನಿಗ ತೆಲ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಸದರಿ
ಫಿರ್ಯಾಧಿ ಗಂಡನ ಈ ಘಟನಯನ್ನು ತನ್ನ ನಿರ್ಲಕ್ಷತನದಿಂದ ಜರುಗಿ ಮೃತ ಪಟ್ಟಿರುತ್ತಾನ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರಗಿ ಠಾಣೆ : ಕುಮಾರಿ ನಜಮಾ ಬೇಗಂ ತಂದೆ ನಬಿ ಪಟೇಲ್ ಗುಂಜೋಟಿ ಸಾ|| ಮದರಿ ಇವರು ದಿನಾಂಕ 12.05.16 ರಂದು ಮುಂಜಾನೆ
ಟ್ಯೂಷನ್ ಸಲುವಾಗಿ ಜೇವರಗಿಗೆ ಬಂದು ಟ್ಯೂಷನ್ ಮುಗಿಸಿಕೊಂಡು ಸಾಯಂಕಾಲದ ಸಮಯದಲ್ಲಿ ನನ್ನ ಮಾವ
ಜಾನುಮೀಯಾ ಈತನ ಮೊಟಾರು ಸೈಕಲ್ ನಂ ಕೆ.ಎ32 ಇಜಿ1142
ನೇದ್ದರ ಹಿಂದಿನ ಸಿಟಿನಲ್ಲಿ ಕುಳಿತುಕೊಂಡು ನಮ್ಮೂರಿಗೆ ಹೋಗುತ್ತಿದ್ದಾಗ ಸಾಯಂಕಾಲ 4 ಗಂಟೆಯ
ಸುಮಾರಿಗೆ ಜೇವರಗಿ ಕಲಬುರಗಿ ಮೇನ್ ರೋಡ ಕೋಳಕೂರ ಕ್ರಾಸ್ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ
ನಮ್ಮ ಮಾವ ತನ್ನ ಮೋಟಾರು ಸೈಕಲ್‌ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು
ಹೋಗುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಪಲ್ಸರ್ ಮೋಟಾರು ಸೈಕಲ್ ಸವಾರನು ತನ್ನ
ಮೋಟಾರು ಸೈಕಲ್ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು
ಸೈಡ್ ಕೊಡದೆ ಮುಖಾಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಎಲ್ಲರು ಮೋಟಾರು ಸೈಕಲ್‌ದೊಂದಿಗೆ ಕೇಳಗೆ
ಬಿದ್ದೆವು. ನಾನು ಸಾವಕಾಶವಾಗಿ ಎದ್ದು ನೋಡಲಾಗಿ ನನ್ನ ಬಲಗಾಲಿಗೆಗುಪ್ತಗಾಯ ಮತ್ತುಬಲಗಾಲಿನ
ಬೆರಳಿಗೆ ರಕ್ತಗಾಯವಾಗಿದ್ದು. ನಂತರ ನಮ್ಮ ಮಾವನಿಗೆನೋಡಲಾಗಿ ಅವನ ಬಲಗಾಲ ಬೆರಳಿಗೆ
ರಕ್ತಗಾಯವಾಗಿದ್ದು ನಂತರ ಪಲ್ಸರ್ ವಾಹನ ಸವಾರನಿಗೆ ನೋಡಲಾಗಿ ಅವನ ತಲೆಗೆ ರಕ್ತ ಮತ್ತು
ಗುಪ್ತಗಾಯವಾಗಿದ್ದು ಎಡಭುಜಕ್ಕೆ ನೋಡಲಾಗಿ ಬಲಗೈಬೆರಳಿಗೆ, ಬಲಗಾಲಿನ ಬೆರಳುಗಳಿಗೆ
ಗಾಯವಾಗಿದ್ದು ಅವನ ಹೆಸರನ್ನು ವಿಚಾರಿಸಲಾಗಿ ಉದಯಕುಮಾರ ತಂದೆ ಧೂಳಪ್ಪ ಸಾ|| ಕಲಬುರಗಿ ಅಂತ ತಿಳಿಸಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀ ನಾಗಯ್ಯ ತಂದೆ ಶಿವಲಿಂಗಯ್ಯ ಮಠಪತಿ ಸಾ:ಶ್ರೀನಿವಾಸ
ಸರಡಗಿ ತಾ:ಜಿ: ಕಲಬುರಗಿ ಇವರ ಮಗಳಾದ ಶಾಂತಲಾ ಇವಳಿಗೆ ಒಂದು ವರ್ಷ 6 ತಿಂಗಳ ಹಿಂದೆ ಶಿವಲಿಂಗಯ್ಯ
ತಂದೆ ಶಿವಾನಂದ ಸ್ವಾಮಿ ಇವರ ಜೊತೆ ಮದುವೆ ಮಾಡಿಮ ಕೊಟ್ಟಿರುತ್ತೇವೆ. ಮದುವೆ ಸಮಯದಲ್ಲಿ 2 ವರೆ
ತೊಲೆ ಬಂಗಾರ 51.000/- ರೂಪಾಯಿ ಹಣ ಬಟ್ಟೆ ಮನೆಗೆ ಬೇಕಾದ ಸಾಮಾನುಗಳು ಕೊಟ್ಟಿರುತ್ತೇವೆ
ಮದುವೆಯಾದ ನಂತರ ಸುಮಾರು 2 ತಿಂಗಳು ನನ್ನ ಮಗಳು ಚೆನ್ನಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ನನ್ನ
ಮಗಳಿಗೆ ಅವಳ ಗಂಡ ಅತ್ತೆ ಮಾವ ಮತ್ತು ನಾದಿನಿ ಇವರು ಕಿರುಕುಳ ಕೊಡುತ್ತಲೇ ಇದ್ದಾರೆ. ಹಾಗೆ
ಪ್ರತಿಯೊಂದು ಕೆಲಸಕ್ಕೆ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ನಿನಗೆ ಅಡುಗೆ ಚೆನ್ನಾಗಿ
ಮಾಡಲು ಬರುವದಿಲ್ಲ, ನಿನಗೆ ಯಾವುದೇ ವಿಷಯ ಗೊತ್ತಿರುವದಿಲ್ಲ ಎನ್ನುತ್ತಾ ಕಿರುಕುಳ ಕೊಡುತ್ತಿದ್ದರು. ಹಾಗೆಯೇ
ನನ್ನ ಅಳಿಯ ಯಾವಾಗಲು ಹೊಡೆ ಬಡೆ ಮಾಡುತ್ತಿದ್ದನು. ನನ್ನ ಮಗಳು ಎಲ್ಲಾ ಕಷ್ಟ ಸಹಿಸುತ್ತಿದ್ದಳು.
ಪ್ರತಿಯೊಂದು ವಿಷಯವನ್ನು ತಂದೆ ತಾಯಿಗೆ ಹೇಳಬಾರದೆಂದು ತಾನೇ ಕೊರಗುತ್ತಿದ್ದಳು. ಒಂದು ವಾರದ
ಹಿಂದೆ ನನ್ನ ಮಗಳು ನನಗೆ ಪೋನ ಮಾಡಿ ನನ್ನ ಗಂಡನಿಗೆ ಅವನ ಮದುವೆ ಮತ್ತು ತಂಗಿಯ ಮದುವೆ ಮಾಡಲು ಹಣ
ಖರ್ಚಾಗಿದ್ದು ಅದಗೋಸ್ಕರ ತಾವುಗಳು ನನ್ನ
ಗಂಡನಿಗೆ 2 ಲಕ್ಷ ರೂಪಾಯಿಗಳು ಹಾಗೂ 3 ತೊಲೆ ಬಂಗಾರ ತರಬೇಕೆಂದು ನನ್ನ ಗಂಡನು ಮತ್ತು ನನ್ನ
ಅತ್ತೆ ಮಾವ ನನಗೆ ದಿನನಿತ್ಯ ಕಿರುಕುಳ ಕೊಡುತ್ತಿದ್ದರು. ಹಾಗೆಯೇ ನಿಮ್ಮ ಹತ್ತಿರ ಹಣವನ್ನು
ಇದ್ದಿಲ್ಲವಾದರೆ ನಿಮ್ಮ ಮನೆಯನ್ನು ಬೇರೆಯವರಿಗೆ ಒತ್ತಿಯಾಗಿ ಇಟ್ಟು ಆದರೂ ನನ್ನ ಗಂಡನು ಹಣವನ್ನು
ತೆಗೆದುಕೊಂಡು ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದನು. ನಿನ್ನೆ ದಿನಾಂಕ 12.05.2016 ರಂದು
ನನ್ನ ಮಗನಾದ ಭಾಗ್ಯವಂತ ನನ್ನ ಮಗಳ ಮನೆಗೆ ಹೋದಾಗ ಅವಳ ಅಕ್ಕಳಾದ ಮೃತ ಶಾಂತಲಾ ಇವಳು ಹಣ
ಬಂಗಾರವನ್ನು ತೆಗೆದುಕೊಂಡು ಬಾ ಎಂದು ಹೆಳಿದ್ದು ದಿನಾಂಕ 13.05.2016 ರಂದು ನಾನು ಶ್ರೀನಿವಾಸ
ಸರಡಗಿ ಗ್ರಾಮದಲ್ಲಿದ್ದಾಗ ಸುಮಾರು 12 ಗಂಟೆಯ ನನ್ನ ಮಗಳ ಮನೆಯಿಂದ ನನಗೆ ಪೋನ ಬಂದಿದ್ದು ನಿಮ್ಮ
ಮಗಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾಳೆ. ಎಂದು ತಿಳಿಸಿರುತ್ತಾರೆ.
ತಕ್ಷಣವೇ ನಾನು ನನ್ನ ಹೆಂಡತಿ ರೇಣುಕಾದೇವಿ ಇಬ್ಬರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಬಂದಾಗ
ನನ್ನ ಮಗಳು ಮೃತಪಟ್ಟಿದ್ದು ನೋಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ
ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ
No comments:
Post a Comment