ಕಿರುಕಳ
ನೀಡಿದ್ದಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ ಹಣಮಂತರಾಯ ಕಾಮನ ಇವರ ಮಗಳಾದ ಅರ್ಚನಾ
ಇವಳಿಗೆ ಕಲಬುರಗಿಯ ಕೆ.ಹೆಚ್.,ಬಿ ಕಾಲೋನಿಯಲ್ಲಿ ವಾಸವಾಗಿರುವ ತನ್ನ ಅಕ್ಕನ ಮಗನಾದ ಸಂಜೀವಕುಮಾರ
ಈತನೊಂದಿಗೆ ಈಗ ಒಂದು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೇಲವು ದಿನಗಳ ವರೆಗೆ
ಅರ್ಚನಾ ಇವಳಿಗೆ ಆಕೆಯ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದು, ತದನಂತರ ಆಕೆಯ ಗಂಡ, ಅತ್ತೆ,
ಭಾವ, ನಾದಿನಿ ಇವರು ಅರ್ಚನಾ ಇವಳಿಗೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ನೀನು
ನೋಡಲಿಕೆ ಸರಿಯಾಗಿಲ್ಲ. ನೀನು ಸತ್ತರೆ ಸಂಜಿಕುಮಾರ ಈತನಿಗೆ ಇನ್ನೊಂದು ಮದುವೆ ಮಾಡುತ್ತೇವೆ
ಮತ್ತೆ ಹೆಚ್ಚಿನ ವರದಕ್ಷಿಣೆ ಸಿಗುತ್ತದೆ ಅಂತಾ
ಮಾನಸಿಕವಾಗಿ ಕಿರುಕುಳ ನೀಡಿದ್ದು, ಈ ವಿಷಯವನ್ನು ಅರ್ಚನಾ ಇವಳು ತನ್ನ ತಂದೆಗೆ ಪೋನಿನಲ್ಲಿ
ಹೇಳುತ್ತಿದ್ದಳು. ಫಿರ್ಯಾದಿದಾರರ ಮಗಳಾದ ಅರ್ಚನಾ ಇವಳು ತನ್ನ ಗಂಡ ಸಂಜೀವಕುಮಾರ, ಅತ್ತೆ
ಶಿವಕಾಂತಮ್ಮ, ಭಾವ ರಾಜಕುಮಾರ, ನಾದಿನಿ ಶೀಲಾ ಇವರು ಕೊಡುವ ಕಿರುಕುಳ ತಾಳಲಾರದೆ ದಿನಾಂಕ
15/05/2016 ರಂದು 5.00 ಪಿ.ಎಮ ದಿಂದ 7.00 ಪಿ.ಎಮದ ಅವಧಿಯಲ್ಲಿ ತನ್ನ ಗಂಡನ ಮನೆಯ ಹಾಲ್ ನಲ್ಲಿರುವ ಸಿಲ್ಲಿಂಗ್
ಪ್ಯಾನಿಗೆ ಓಡಣಿಯಿಂದ ನೇಣು ಹಾಕಿಕೊಂಡುಯ ಮೃತಪಟ್ಟಿರುತ್ತಾಳೆ. ಕಾರಣ ಅರ್ಚನಾ ಇವಳ ಸಾವಿಗೆ
ಕಾರಣರಾದ ಸಂಜೀವಕುಮಾರ, ಶಿವಕಾಂತಮ್ಮ, ರಾಜಕುಮಾರ, ಶೀಲಾ ಇವರುಗಳ ವಿರುದ್ದ ಸೂಕ್ತ ಕಾನೂನು ರೀತಿ
ಕ್ರಮ ಜರೂಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸುವರ್ಣ
ಗಂಡ ಸುರೇಶ ಮ್ಯಾಗೇರಿ ಸಾ : ಹರನೂರ ಜೇವರಗಿ ರವರನ್ನು ಸುರೇಶ ತಂದೆ ಚಂದಪ್ಪ ಮ್ಯಾಗೇರಿ ಸಾಃ ಹರನೂರ
ಇತನ್ನೊಂದಿಗೆ ಸುಮಾರು 5 ವರ್ಷಗಳ ಹಿಂದೆ ನನ್ನ ಮದುವೆಯಾಗಿದ್ದು ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಹರನೂರ
ಗ್ರಾಮದಲ್ಲಿ ವಾಸವಾಗಿದ್ದೆನು. ಮದುವೆಯಾದ 6 ತಿಂಗಳವರೆಗೆ ನಾನು ಮತ್ತು ನನ್ನ ಗಂಡ ಇಬ್ಬರೂ
ಅನ್ಯೋನ್ಯವಾಗಿಯೇ ಇದ್ದು ಸಂಸಾರ ಮಾಡಿಕೊಂಡು ಬಂದಿರುತ್ತೆವೆ. ನಂತರ ನನ್ನ ಗಂಡ ಮತ್ತು ಮಾವಂದಿರು
ನನಗೆ ನೀನು ಸರಿಯಾಗಿ ಇರುವುದಿಲ್ಲಾ ನಿನಗೆ ಅಡುಗೆ ಮಾಡಲು, ಹೊಲ ಮನೆ ಕೆಲಸ ಮಾಡಲು
ಬರುವುದಿಲ್ಲಾ ಮತ್ತು ನೀನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ನನಗೆ ಅವಾಚ್ಯವಾಗಿ
ಬೈಯುವುದು ಹೊಡೆಯುವುದು ಬಡೆಯುವುದು ಮಾಡಿ ನನಗೆ ಮಾನಸೀಕ ಮತ್ತು ದೈಹಿಕ ಕಿರಕುಳ ಕೊಡುತ್ತಿದ್ದಾಗ
ನಾನು ನನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ನನ್ನ ತಂದೆ ತಾಯಿಯವರು ನನ್ನ ಗಂಡನ ಮನೆಗೆ ಬಂದು
ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಬುದ್ದಿವಾದ ಹೇಳಿರುತ್ತಾರೆ. ಆದರೂ ಸಹ ಅವರು ನನಗೆ
ಅವರು ತೊಂದರೆ ಕೊಡುತ್ತಿದ್ದರು ಅದಕ್ಕೆ ನಾನು ಈಗ 4 ವರ್ಷದ ಹಿಂದೆ ನನ್ನ ತವರು ಮನೆಗೆ ಹೋಗಿ
ನನ್ನ ತಂದೆ ತಾಯಿಯವರ ಹತ್ತಿರ ವಾಸವಾಗಿದ್ದೆನು. ಇಷ್ಟು ದಿನವಾದರೂ ಅವರು ನನಗೆ ಕರೆಯಲು
ಬಂದಿರುವುದಿಲ್ಲಾ. ನಾನು ಮನೆಯ ಮರ್ಯಾದೆಗೆ ಅಂಜಿ ಸುಮ್ಮನಿದ್ದೆನು. ದಿನಾಂಕ 05.05.2016 ರಂದು
ಮುಂಜಾನೆ 9.00 ಗಂಟೆಯ ಸುಮಾರಿಗೆ ನನ್ನ ತಂದೆ ಶಿವಮಾನೇಪ್ಪ
ಮತ್ತು ಅಣ್ಣ ಯಮನಪ್ಪ ಹಾಗೂ ನನ್ನ ಚಿಕ್ಕ ಅತ್ತಿ ಮಲ್ಲಮ್ಮ ಅಮಲೇಹಾಳ, ಹಾಗೂ ಸಾಹೇಬಗೌಡ ಪೂಜಾರಿ ಇವರೆಲ್ಲರೂ ಕೂಡಿಕೊಂಡು
ನನಗೆ ನನ್ನ ಗಂಡನ ಮನೆಗೆ ಬಿಡಲು ಕರೆದುಕೊಂಡು ಹರನೂರಕ್ಕೆ ಬಂದು ನಮ್ಮ ಮನೆಯ ಎದುರು ನಿಂತಾಗ ನನ್ನ ಗಂಡ 1. ಸುರೇಶ ತಂದೆ
ಚಂದಪ್ಪ ಮ್ಯಾಗೇರಿ, ಮಾವ 2. ಚಂದಪ್ಪ ತಂದೆ ಭೀಮಪ್ಪ ಮ್ಯಾಗೇರಿ, ಬಾವಂದಿರಾದ 3. ಬಸಪ್ಪ ತಂದೆ
ಚಂದಪ್ಪ ಮ್ಯಾಗೇರಿ, 4. ಯಮನಪ್ಪ ತಂದೆ ಚಂದಪ್ಪ ಮ್ಯಾಗೇರಿ, 5. ಮಲ್ಕಪ್ಪ ತಂದೆ ಚಂದಪ್ಪ
ಮ್ಯಾಗೇರಿ, ಮತ್ತು ನನ್ನ ಚಿಕ್ಕ ಮಾವನಾದ 6. ಸಕ್ರೇಪ್ಪ ತಂದೆ ಭೀಮಪ್ಪ
ಮ್ಯಾಗೇರಿ ಹಾಗೂ ನನ್ನ ಗಂಡನ ಎರಡನೆ ಅಣತಮ್ಮಕೀಯ 7. ತಿಪ್ಪಣ್ಣಾ ತಂದೆ ಪೀರಪ್ಪ ಮ್ಯಾಗೇರಿ, ಸಾಃ ಎಲ್ಲರೂ ಹರನೂರ
ಇವರೆಲ್ಲರೂ ಕೂಡಿಕೊಂಡು ಬಂದು ನಮಗೆ ಅವಾಚ್ಯವಾಗಿ ಬೈಯಹತ್ತಿದ್ದರು. ಆಗ ನಾನು ಅವರಿಗೆ ನನಗೆ
ಗಂಡನ ಮನೆಗೆ ಬಿಡಲು ಬಂದಿರುತ್ತಾರೆ ಯಾಕೆ? ಬೈಯುತ್ತಿದ್ದಿರಿ ಅಂತಾ ನಾನು
ಕೇಳಿದಾಗ ನನ್ನ ಗಂಡ ಸುರೇಶನು ಏ ಬೊಸಡಿ ಇಷ್ಟು ದಿನ ತವರು ಮನೆಯಲ್ಲಿ ಇದ್ದು
ಇವತ್ತು ಗಂಡನ ನೇನಪು ಬಂದದೇನು. ಅಂತಾ ಅವಾಚ್ಯವಾಗಿ ಬೈಯ್ದು ಕಾಲಿನಿಂದ ನನ್ನ ಸೊಂಟದ ಮೇಲೆ
ಒದ್ದಿರುತ್ತಾನೆ, ನನ್ನ ಮಾವನು ಈ ಬೊಸಡಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ
ಮತ್ತೆ ನಮಗೆ ಎದುರು ಮಾತಾಡುತ್ತಾಳ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನನ್ನ ಬಾವಂದಿರು ಮತ್ತು
ಸಕ್ರೇಪ್ಪ ಹಾಗೂ ತಿಪ್ಪಣ್ಣ ಇವರು ನಮ್ಮೆಲ್ಲರಿಗೆ ಈ ಬೊಸಡಿ ಮಕ್ಕಳು ಎಲ್ಲರೂ ಕೂಡಿ ಬಂದಾರ ಒಂದು
ಕೈ ನೊಡಿಯೇ ಬಿಡೊಣ ಅಂತಾ ಬೇದರಿಕೆ ಹಾಕಿರುತ್ತಾರೆ. ಮತ್ತು ನನ್ನ ಗಂಡನು ನನಗೆ ಏ ಬೊಸಡಿ
ಇನ್ನೊಮ್ಮೆ ನನ್ನ ಮನೆಗೆ ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ
ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತವರ ಬಂಧನ :
ದೇವಲಗಾಣಗಾಪೂರ
ಠಾಣೆ : ದಿನಾಂಕ 16-05-2016 ರಂದು ದೇವಲಗಾಣಗಾಪೂರದ
ಚಕ್ಲೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 04
ಜನರು ದುಂಡಾಗಿ ಕುಳಿತು ಹಣ ಪಟಕ್ಕೆ ಹಚ್ಚಿ ಇಸ್ಪೇಟ ಎಲೆಗಳಿಂದ ಸಹಾಯದಿಂದ ಅಂದರ ಬಾಹರ
ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ದೇವಲ ಗಾಣಗಾಪೂರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ
ದಾಳಿ ಮಾಡಿ 4 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸು ವಿಳಾಸ ವಿಚಾರಿಸಲು 1) ಧರ್ಮಣ್ಣ ತಂದೆ
ರಾಜಾರಾಮ ಸಿದ್ನಾಳ 2) ಬಾಬು ತಂದೆ ವಿಠ್ಠಲ್ ಕಟ್ಟಮನಿ 3) ಅಮರೇಷ ತಂದೆ ಲಕ್ಷ್ಮಣ ಕಾಳೆ, 4)
ನಾಗು ತಂದೆ ಸುಬಾಸ ಕಟ್ಟಿಮನಿ,ಸಾ|| ಎಲ್ಲರು
ದೇವಲಗಾಣಗಾಪೂರ ಇವರಿಂದ ಜೂಜಾಟಕ್ಕೆ ಬಳಸಿದ ನಗದು
ಹಣ 980=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ದೇವಲ ಗಾಣಗಾಪೂರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment