Police Bhavan Kalaburagi

Police Bhavan Kalaburagi

Saturday, July 23, 2016

BIDAR DISTRICT DAILY CRIME UPDATE 23-07-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-07-2016

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 96/2016, PÀ®A 279, 337, 338 L¦¹ ªÀÄvÀÄÛ 304(J) L¦¹ :-
ದಿನಾಂಕ 22-07-2016 ರಂದು ಫಿರ್ಯಾದಿ ಪವನಕುಮಾರ ಬಾವಗಿ ಸಾ: ಗಾದಾಗಲ್ಲಿ ಹುಮನಾಬಾದ ರವರು ಹಾಗೂ ಇತರರು ಕಾರ ನಂ. ಕೆಎ-39/ಎಮ್-1061 ನೇದರಲ್ಲಿ ಹುಮನಾಬಾದಗೆ ಬರುವಾಗ ಫಿರ್ಯಾದಿಯ ಅಣ್ಣನಾದ ಆರೋಪಿ ಪ್ರಶಾಂತ ತಂದೆ ವಿಶ್ವನಾಥ ಉದಗಿರೆ ವಯ: 30 ವರ್ಷ, ಸಾ: ಹುಮನಾಬಾದ ಇತನು ಸದರಿ ಕಾರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ರಾ.ಹೆ ನಂ. 50 ಧುಮ್ಮನಸೂರ ಬ್ರೀಜಿಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿ, ಅವರ ಅಜ್ಜಿ ಚಂದ್ರಕಲಾ, ಮುತ್ತಜ್ಜಿ ಸುಭದ್ರಾಬಾಯಿ ರವರಿಗೆ ಸಾದಾ ಹಾಗು ಭಾರಿ ರಕ್ತಗಾಯ ಹಾಗು ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸುಭದ್ರಾಬಾಯಿ ಗಂಡ ಈರಣ್ಣಾ ಬಾವಗೆ ವಯ: 80 ವರ್ಷ, ಸಾ: ಚಿಮ್ಮಣಗೇರಾ, ತಾ: ಅಫಜಲಪೂರ, ಜ: ಕಲಬುರ್ಗಿ ರವರಿಗೆ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹುಮನಾಬಾದನಿಂದ ಉಮರಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 108/2016, PÀ®A 279, 337, 338 L¦¹ :-
ದಿನಾಂಕ 22-07-2016 ರಂದು ಫಿರ್ಯಾದಿ ಅವಿನಾಶ ತಂದೆ ಶ್ರಾವಣ ಮಾರ್ತಂಡ ವಯ: 29 ವರ್ಷ, ಸಾ: ಡಿಗ್ಗಿ ರವರು ಬೀದರ-ಉದಗೀರ ರಸ್ತೆಯ ಬದಿಯಲ್ಲಿ ಡಿಗ್ಗಿ-ಹೋಳಸಮುದ್ರ ಮಧ್ಯ ಇದ್ದ ರವರ ಮಾಲಿಕರ ಹೊಲಕ್ಕೆ ಬಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಮಲನಗರ ಕಡೆಯಿಂದ ಮೋಟಾರ ಸೈಕಲ ನಂ. ಎಂ.ಹೆಚ್-24/ಜಿ-9521 ನೇದರ ಸವಾರನು ತನ್ನ ಮೋಟಾರ ಸೈಕಲ ಮೇಲೆ ಮತ್ತೋಬ್ಬ ವ್ಯಕ್ತಿಗೆ ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಫಿರ್ಯಾದಿ ಕೆಲಸ ಮಾಡುತ್ತಿದ್ದ ಹೊಲದ ಹತ್ತಿರ ಬಂದಾಗ ಒಮ್ಮೆಲೆ ಮೋಟಾರ ಸೈಕಲಗೆ ಬ್ರೇಕ್ ಹಾಕಿದ್ದರಿಂದ ಹಿಡಿತ ತಪ್ಪಿ ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಾಗ ಫಿರ್ಯಾದಿಯು ಕೂಡಲೇ ಹೋಗಿ ನೋಡಲು ಮೋಟಾರ ಸೈಕಲ ಹಿಂದುಗಡೆ ಕುಳಿತು ಬರುತ್ತಿದ್ದ ವ್ಯಕ್ತಿಗೆ ತಲೆಯಲ್ಲಿ ಭಾರಿ ರಕ್ತ ಹಾಗೂ ಗುಪ್ತಗಾಯವಾಗಿ ಬೇಹೊಸ ಅವಸ್ಥೆಯಲ್ಲಿದ್ದನು, ಮೋಟಾರ ಸೈಕಲ ಸವಾರನಿಗೆ ವಿಚಾರಿಸಲು ಅವನು ತನ್ನ ಹೆಸರು  ಹಣಮಂತ ತಂದೆ ವೆಂಕಟ ಕಾಂಬಳೆ ವಯ: 25 ವರ್ಷ, ಸಾ: ಕೋರ್ಯಾಳ ಅಂತ ತಿಳಿಸಿದಾಗ ಸದರಿಯವನಿಗೆ  ಸದರಿ ಬೆಹೊಸ ಅವಸ್ಥೆಯಲ್ಲಿದ್ದ ವ್ಯಕ್ತಿಯ ಹೆಸರು ವಿಚಾರಿಸಿದಾಗ ಸದರಿಯವನು ನನ್ನ ಮಾವನಿದ್ದು ಅವರ ಹೆಸರು ಈಶ್ವರ ಸಿಂಧೆ ಸಾ: ಹಂದಿಕೇರಾ ಅಂತ ತಿಳಿಸಿದನು, ಸದರಿ ಮೋಟಾರ ಸೈಕಲ ಸವಾರನಿಗೆ ಮುಖದ ಮೇಲೆ ಅಲ್ಲಲ್ಲಿ ತರಚೀದ ಗಾಯವಾಗಿರುತ್ತದೆ, ನಂತರ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಸದರಿ ಗಾಯಾಳುಗಳಿಗೆ ಇಲಾಜ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: