ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಸಾತಮ್ಮ
ಗಂಡ ದುಂಡಪ್ಪ ಕ್ಲಲೂರ ಸಾ|| ತಾ|| ಜೇವರಗಿ ಇವರಿಗೆ ಶರಣಪ್ಪ,
ಸಿದ್ದಪ್ಪ, ಅನಸೂಬಾಯಿ, ಲಕ್ಷ್ಮೀಬಾಯಿ ಅಂತಾ 4 ಜನ ಮಕ್ಕಳಿರುತ್ತಾರೆ,ನನ್ನ ಮಗಳು ಲಕ್ಷ್ಮೀಬಾಯಿ
ಇವಳಿಗೆ ಮನ್ನಾಪೂರದ ಶಿವರಾಯ ಬಿರೆದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಲಕ್ಷ್ಮೀಬಾಯಿ ಇವಳ
ಗಂಡನ ಮನೆಯವರು ಬಾರಿ ಬಡವರಿರುತ್ತಾರೆ, ಆದ್ದರಿಂದ ನನ್ನ ಮಗ ಶರಣಪ್ಪನು 4 ಎಕರೆ ಜಮೀನು ನನ್ನ
ಮಗಳು ಲಕ್ಷ್ಮೀಬಾಯಿ ಇವಳ ಹೆಸರಿನಿಂದ ಮಾಡಿಸಿದ್ದು ಇರುತ್ತದೆ.ನನ್ನ ಉಪಜೀವನಕ್ಕಾಗಿ ನನ್ನ
ಹೆಸರಿನಿಂದ 5 ಎಕರೆ ಜಮೀನು ಮಾಡಿದ್ದು ಇರುತ್ತದೆ. ಉಳಿದ 11 ಎಕರೆ ಜಮೀನಿನಲ್ಲಿ ನನ್ನ ಮಗ
ಶರಣಪ್ಪ ಮತ್ತು ಸಿದ್ದಪ್ಪ ಹಂಚಿಕೊಂಡಿದ್ದು ಇರುತ್ತದೆ. ಆದರೆ ನನ್ನ ಮಗ ಶರಣಪ್ಪನ ಹೆಂಡತಿ ಈರಮ್ಮ
ಮತ್ತು ಮಕ್ಕಳಾದ ಪ್ರಭು, ದುಂಡಪ್ಪ ಇವರು ನಮಗೆ ಕೇಳದೆ ಲಕ್ಷ್ಮೀಬಾಯಿಗೆ ಯಾಕೆ ಆಸ್ತಿಯಲ್ಲಿ ಪಾಲು
ಕೊಟ್ಟಿದ್ದಿ ಅಂತಾ ನನ್ನೊಂದಿಗೆ ಹಾಗೂ ನನ್ನ ಮಗ ಶರಣಪ್ಪನೊಂದಿಗೆ ಜಗಳ ತಗೆಯುತ್ತಾ ಬಂದಿದ್ದು
ಇರುತ್ತದೆ. 3-4 ದಿನಗಳ ಹಿಂದೆ ನನ್ನ ಮಗ ಶರಣಪ್ಪನು ಹೊಲ ಬಿತ್ತಿಸಿ ಬರುತ್ತೇನೆ ಅಂತಾ ಹೇಳಿ
ಬಳ್ಳೂಂಡಗಿಗೆ ಹೋಗಿದ್ದನು. ದಿನಾಂಕ: 28-07-2016 ರಂದು ರಾತ್ರಿ 8-00 ಗಂಟೆಗೆ ಒಂದು
ಟಂಟಂದಲ್ಲಿ ನನ್ನ ಮಗ ಶರಣಪ್ಪನಿಗೆ ತಂದು ಮನ್ನಾಪೂರದಲ್ಲಿರುವ ನಮ್ಮ ಮನೆಯ ಹತ್ತಿರ ಬಿಟ್ಟು
ಹೋಗಿದ್ದು, ನನ್ನ ಮಗನ ಮೈ ತುಂಬೆಲ್ಲಾ ಕಂದು ಗಟ್ಟಿದ ಗಾಯಗಳಾಗಿದ್ದು ನಾನು ಮತ್ತು ನನ್ನ
ಮಗಳು ಲಕ್ಷ್ಮೀಬಾಯಿ, ನನ್ನ ಅಳಿಯ ಶಿವರಾಜ ಎಲ್ಲರೂ ಕೂಡಿ ಶರಣಪ್ಪನಿಗೆ ವಿಚಾರಿಸಲಾಗಿ ದಿನಾಂಕ:
27-07-2016 ರಂದು ರಾತ್ರಿ 6-00 ಪಿ,ಎಮ್ ಸುಮಾರಿಗೆ ನನ್ನ ಹೆಂಡತಿ ಈರಮ್ಮ ಮಕ್ಕಳಾದ ಪ್ರಭು
ಮತ್ತು ದುಂಡಪ್ಪ ಇವರೆಲ್ಲರೂ ಕೂಡಿ ನನಗೆ ಕೈ ಕಾಲು ಕಟ್ಟು ನಮ್ಮ ಮನೆಯಲ್ಲಿ ಹಾಕಿ
ಕಲ್ಲಿನಿಂದ ಮೈ ಕೈಗೆ ಹೊಟ್ಟೆಗೆ ಹೊಡೆದಿದ್ದು ಆಗ ನನ್ನ ತಮ್ಮ ಸಿದ್ದಣ್ಣ ಹಾಗೂ ಇತರರೂ ಕೂಡಿ ಜಗಳ
ಬಿಡಿಸಿದ್ದು ಇರುತ್ತದೆ ಅಂತಾ ತಿಳಿಸಿದಾಗ ನಾವು ಗಾಬರಿಯಾಗಿ ನೋಡಲಾಗಿ ಶರಣಪ್ಪನ ಮೈ ಕೈಗೆ
ಹೊಟ್ಟೆಗೆ ಕಂದುಗಟ್ಟಿದ ಗಾಯಗಳಾಗಿದ್ದವು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ:
29-07-2016 ರಂದು ನಾನು ನನ್ನ ಮಗಳು ಲಕ್ಷ್ಮೀಬಾಯಿ ಮತ್ತು ನನ್ನ ಮಗ ಶರಣಪ್ಪ ಎಲ್ಲರೂ ಕೂಡಿ
ಮನ್ನಾಪೂರದಿಂದ ನೆಲೋಗಿಗೆ ಪೊಲೀಸ ಕೇಸ ಕೊಡಲು ಬಂದಿದ್ದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ
ಸರಕಾರಿ ಆಸ್ಪತ್ರೆ ನೆಲೋಗಿಯಲ್ಲಿ ತೋರಿಸುತ್ತಿದ್ದಾಗ ನನ್ನ ಮಗ ಶರಣಪ್ಪ ಕಲ್ಲಿನಿಂದ ಹೊಟ್ಟೆಗೆ
ಹೊಡೆದಿದ್ದರ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚುಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 29/07/2016 ರಂದು ರಾತ್ರಿ ಗ್ರಾಮಿಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಆಳಂದ ಮುಖ್ಯ
ರಸ್ತೆಯ ಪಕ್ಕದಲ್ಲಿ ಇರುವ ಕೇರಿ ಭೋಸಗಾ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ
ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ
ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬೆಳಗಿನ 05:30 ಗಂಟೆಗೆ ಸುಮಾರಿಗೆ ಹುಮನಾಬಾದ ರಿಂಗ ರೋಡದಿಂದ ಮಾನ್ಯ
ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗ
ರೋಡದಿಂದ ಆಳಂದ ಚೆಕ್ಕಪೊಸ್ಟ ಮುಖಾಂತರವಾಗಿ
ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು
ನಡೆದುಕೊಂಡು ಕೇರಿ ಭೋಸಗಾ ಕ್ರಾಸನಲ್ಲಿ ಇರುವ ಬಸಸ್ಟಾಂಡದ ದಕ್ಷಿಣ ದಿಕ್ಕಿನ ಗೋಡೆಯ ಮರೆಯಲ್ಲಿ
ನಿಂತು ಸಾರ್ವಜನಿಕ ಕಂಬದ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ದೂರದಲ್ಲಿ
ಒಂದು ಮಹೇಂದ್ರಾ ಜೀಪ್ ಮತ್ತು ಒಂದು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 13 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ
ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು
ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ
ಮಾಡಿ ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಉಳಿದ 08 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ಚಾಕುಗಳನ್ನು ಹಾಗು ಮುಖಕ್ಕೆ
ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ
ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಕಮಲಾಕರ್ ತಂದೆ ಜೈಬೀಮ್ ಖಂಡೇಕರ್ ಸಾ:ಮಾಡ್ಯಾಳ ತಾ:ಆಳಂದ 2) ಹಣಮಂತ ಭಗವಂತ ಸಂಗೋಳಗಿ ಸಾ:ಮಾಡ್ಯಾಳ ತಾ:ಆಳಂದ 3) ಯಲ್ಲಾಲಿಂಗ ತಂದೆ ಪೀರಪ್ಪಾ ಕೌವಲಗಿ ಸಾ:ಮಾಡ್ಯಾಳ
ತಾ:ಆಳಂದ.4) ರವಿಕುಮಾರ ತಂದೆ ಕರಬಸಪ್ಪ ಮೇಲಿನಕೇರಿ ಸಾ:ಯಳವಂತಗಿ
(ಕೆ) ಗ್ರಾಮ 5) ಮಂಜುನಾಥ ತಂದೆ ಮಲ್ಲಿಕಾಜುನ ಜಮಾದಾರ ಸಾ:ಸಿದ್ದಾರೂಡ ಕಾಲೋನಿ ಕಪನೂರ ಅಂತಾ ತಿಳಿಸಿದರು ಓಡಿ
ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಕಮಲಾಕರ್ ಖಂಡೇಕರ್ ಇತನು ಓಡಿ ಹೋದವರ ಹೆಸರು 6) ಗುಂಡಪ್ಪ ತಂದೆ ಸಿದ್ರಾಮಪ್ಪಾ ತುಕ್ಕಾಣಿ ಸಾ:ಮಾಡ್ಯಾಳ. 7) ರವಿಕುಮಾರ ತಂದೆ ಸಿದ್ರಾಮ ಗಾಯಕವಾಡ ಸಾ:ಮಡ್ಯಾಳ 8) ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಸಾ:ಉಪಳಾಂವ
ತಾ:ಜಿ:ಕಲಬುರಗಿ 9) ಲೋಕೇಶ ತಂದೆ ಭಗವಂತ ಕೊಂಬಿನ್ ಸಾ:ಮಾಡ್ಯಾಳ ತಾ:ಆಳಂದ 10) ರಾಜು ತಂದೆ ಹೂವಣ್ಣಾ ಗೌಡಗಿ ಸಾ:ಮಾಡ್ಯಾಳ 11) ಅಶೋಕ ತಂದೆ ಬೀಮಶ್ಯಾ ಒಡ್ಡರ್ ಸಾ:ಮಾಡ್ಯಾಳ ತಾ:ಆಳಂದ 12) ಶಶಿಕಾಂತ ತಂದೆ ಬಸಣ್ಣಾ ಹುಣಸಿ ಹಡಗಿಲ ಸಾ:ಮ್ಯಾಡಾಳ
ತಾ:ಆಳಂದ 13) ಸಿದ್ದಪ್ಪ ತಂದೆ ಗುರುಲಿಂಗಪ್ಪ ಸಿಗರಾಣಿ ಸಾ:ಮಾಡ್ಯಾಳ
ತಾ:ಆಳಂದ ಅಂತಾ ತಿಳಿಸಿದ್ದು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 05 ಜನರು ಗುಂಡಪ್ಪನ ಜೀಪ ನಂ ಕೆಎ-23 ಎಂ-3368 ರಲ್ಲಿ ಮತ್ತು ಇನ್ನು 03 ಜನರು ಒಂದು ಮೋಟಾರ ಸೈಕಲ್ ನಂ ಕೆಎ-37 ಎಲ್-8801 ನೇದ್ದರ ಮೇಲೆ ಕುಳಿತುಕೊಂಡು ಕೇರಿ ಭೋಸಗಾ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ
ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ
ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್
ದರೋಡೆ ಮಾಡಿಕೊಂಡು ನಾವು ತಂದಿದ್ದ ಜೀಪು & ಮೋಟಾರ ಸೈಕಲನ ಮೇಲೆ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ
ನಿಂತಿರುವಾಗ ಒಪ್ಪಿಕೊಂಡಿದ್ದು 05 ಜನರು ಮುಖಕ್ಕೆ
ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 08 ದಸ್ತಿಗಳು ಮತ್ತು 03 ಖಾರದ ಪುಡಿ, 03 ಚಾಕುಗಳು 02 ಬಡಿಗೆ ಮತ್ತು ಕಮಲಾಕರ್ ಇತನ ಕೈಯಲ್ಲಿದ್ದ ಒಂದು ಬಡಿಗೆ, ಮತ್ತು ಹಣಮಂತ ಇತನ ಕೈಯಲ್ಲಿದ್ದ ಒಂದು ಚಾಕು, ಯಲ್ಲಾಲಿಂಗ ಇತನ ಕೈಯಲ್ಲಿದ್ದ ಒಂದು 20 ಪೀಟಿನ ಹಗ್ಗಾ, ರವಿಕುಮಾರ ಇತನ ಕೈಯಲ್ಲಿದ್ದ ಒಂದು ಚಾಕು, ಮಂಜುನಾಥ ಇತನ ಕೈಯಲ್ಲಿ ಒಂದು ಬಡಿಗೆ ದೊರೆತ್ತಿದ್ದು ಅವುಗಳನ್ನು ಜಪ್ತಿಮಾಡಿಕೊಂಡು
ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:29/07/2016 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಇಬ್ಬರೂ ಯುವಕರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ
ಪಟೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್.ಕೊತ್ವಾಲ್ ಪಿ.ಎಸ್.ಐ ರಾಘವೇಂದ್ರ
ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಯುವಕರು ರಸ್ತೆಯ ಪಕ್ಕದಲ್ಲಿ ನಿಂತ್ತು
ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90
ರೂ
ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ
ಇನ್ನೊಂದು ಚೀಟಿ ತಮ್ಮಹತ್ತಿರ ಇಟ್ಟುಕೊಳ್ಳುತ್ತಾ
ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನಿಗೆ ಹಿಡಿದಿದ್ದು ಇನ್ನೊಬ್ಬನು ಓಡಿ
ಹೋದನು ಸಿಕ್ಕಿಬಿದ್ದವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಲೀಲ ತಂದೆ ಉಸ್ಮಾನ್
ಸಾಬ ವಾಂಜಲಖೇಡ ಸಾ:ಮದೀನಾ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದನು
ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ
4390=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ ಪೆನ್ನ
ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಆತನ ಹೆಸರು
ಹಸನಶೇಖ ತಂದೆ ರುಕ್ಮೋದ್ದಿನ ಶೇಖ ಸಾ:ದೀಲದಾರ ಕಾಲೋನಿ ಎಂ.ಎಸ್.ಕೆ
ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
No comments:
Post a Comment