ವರದಕ್ಷಿಣೆ ಕಿರುಕುಳ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ :- ದಿ:- 02.07.2016 ರಂದು ಶ್ರೀಮತಿ ಅಶ್ವ್ವಿನಿರಡ್ಡಿ ಗಂಡ ಸುರೇಶ ಬೊಮ್ಮನ ಸಾ: ಶಾಸ್ತ್ರಿ ಚೌಕ ಜೇವರಗಿರವರು ಬಂದು ನನಗೆ ಸುಮಾರು 10 ವರ್ಷಗಳ ಹಿಂದೆ ಯಾದಗಿರ ಪಟ್ಟಣದ ಸುರೇಶ ಬೊಮ್ಮನ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ಗಂಡನು ಪ್ರೌಡ ಶಾಲೆಯಲ್ಲಿ ಶಿಕ್ಷಕನಾಗಿರುತ್ತಾನೆ. ಮದೆವೆಯಾಗಿನಿಂದ ನನ್ನ ಗಂಡ ಮತ್ತು ಅವನ ಅಕ್ಕ ತಂಗಿಯಾರಾದ ಸುಜಾತ ಗಂಡ ಶರಣಪ್ಪ, ಸುಮಾಂಗಲಾ ಗಂಡ ಹಿರಗಪ್ಪ, ನಾಗಮ್ಮ ಗಂಡ ಮರೆಪ್ಪ ಅನ್ವರ, ಶಾರದ ಗಂಡ ಬಸವರಾಜ ಕರದಳ್ಳಿ, ಹಾಗೂ ಮರೆಪ್ಪ ಅನ್ವರ, ಶರಣಪ್ಪ, ಬಸವರಾಜ ಕರದಳ್ಳಿ, ಇವರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ನಿನ್ನ ಹೆಂಡತಿ ತವರು ಮನೆಯಿಂದ ಹಣ ಬಂಗಾರ ತಗೆದುಕೊಂಡು ಬಾ ಅಂತ ಮಾನಸಿಕ ದೈಹಿಕ ಕಿರುಕುಳ ಕೊಡುವದು ಮಾಡುತ್ತಾ ಬಂದಿದ್ದು. ನನ್ನ ಗಂಡನು ಅವರ ಮಾತು ಕೇಳಿ ನನಗೆ ದಿನ ನಿತ್ಯ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. 2015 ಸಾಲಿನ ಅಕ್ಟೋಬರ ತಿಂಗಳಲ್ಲಿ ಜೇವರಗಿ ಪಟ್ಟಣದಲ್ಲಿ ಮಹಾಲಕ್ಷಿ ಜಾತ್ರೆ ಇದ್ದಾಗ ನನ್ನ ಗಂಡನು ನನ್ನ ಸಂಗಡ ನನ್ನ ಮಕ್ಕಳಿಗೆ ಕಳುಹಿಸದೇ ನನ್ನೋಬ್ಬಳಿಗೆ ಕಳುಹಿಸಿದರಿಂದ ನಾನು ನನ್ನ ತವರು ಮನೆಗೆ ಬಂದಿರುತ್ತೇನೆ. ಸದ್ಯೆ ಜೇವರಗಿಯಲ್ಲಿ ನನ್ನ ತಾಯಿಯೊಂದಿಗೆ ವಾಸವಾಗಿರುತ್ತೆನೆ. ದಿನಾಂಕ 18.06.2016 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಾನು ಜೇವರಗಿಯಲ್ಲಿ ನನ್ನ ತವರು ಮನೆಯಲ್ಲಿದ್ದಾಗ ನನ್ನ ಗಂಡನಾದ 1.
ಸುರೇಶ ತಂದೆ ಶರಣಪ್ಪ ಬೊಮ್ಮನ್, ಮತ್ತು 2.
ಸುಮಂಗಲ ಗಂಡ ಹಿರಗಪ್ಪ,
3. ಸುಜಾತ ಗಂಡ ಶಿವಶರಣಪ್ಪ ಮಂಗಲೆ,
4. ನಾಗಮ್ಮ ಗಂಡ ಮರೆಪ್ಪ ಅನ್ವರ್,
5. ಮರೆಪ್ಪ ಅನ್ವರ್,
6. ಶಿವಶರಣಪ್ಪ ಮಂಗಲೆ,
7. ಶಾರದಾ ಗಂಡ ಬರಸರಾಜ ಕರದಳ್ಳಿ,
8. ಬಸವರಾಜ ಕರದಳ್ಳಿ ಇವರೆಲ್ಲರೂ ಕೂಡಿಕೊಂಡು, ನಮ್ಮ ಮನೆಗೆ ಬಂದು ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ಕೂದಲು ಹಿಡಿದು ಎಳೆದಾಡಿ ಹೊಟೆಗೆ ಒದ್ದಿರುತ್ತಾರೆ. ಎಲ್ಲರೂ ಈಕೆಗೆ ಸೊಕ್ಕು ಬಹಳ ಇದೆ ಇವತ್ತು ಜೀವಸಹಿತ ಬಿಡ್ಯಾರದು ಎಂದು ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಜೂಜುಕೋರರ ಬಂಧನ:
ನಿಂಬರ್ಗಾ ಪೊಲೀಸ ಠಾಣೆ :- ದಿನಾಂಕ 03/07/2016 ರಂದು ಶ್ರೀ ಉದಂಡಪ್ಪ ಪಿ.ಎಸ್.ಐ ನಿಂಬರ್ಗಾ ಠಾಣೆರವರು
ನಿಂಬರ್ಗಾ ಗ್ರಾಮದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು
ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಪಂಚರಾದ 1) ಬಸವರಾಜ ತಂದೆ
ನಾಗಪ್ಪ ಕೋರೆ ಸಾ: ನಿಂಬರ್ಗಾ, 2) ಈರಯ್ಯ ತಂದೆ ಶರಣಯ್ಯ ಹಿರೇಮಠ ಸಾ: ನಿಂಬರ್ಗಾ
ಇವರನ್ನು ಮತ್ತು ಸಿಬ್ಬಂದಿ 1) ವಿಧ್ಯಾಸಾಗರ ಸಿಪಿಸಿ 411, 2) ಶಿವಶರಣ ಸಿಪಿಸಿ 1153, 3) ಶಿವಪುತ್ರ ಸಿಪಿಸಿ 1139 ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ
ತೊಡಗಿದ್ದ 07 ಜನರನ್ನು ಬಂಧಿಸಿ ವಿಚಾರಿಸಲಾಗಿ ಅವರ ಹೆಸರು 01) ಮೈನೂದ್ದೀನ ತಂದೆ ನಬಿಸಾಬ ಬಡೇಗರ
02] ಮಡಿವಾಳಯ್ಯ ತಂದೆ ಶರಣಯ್ಯ ಗಣಾಚಾರಿ 03) ಚಂದ್ರಕಾಂತ ತಂದೆ ಕಲ್ಯಾಣಪ್ಪ ಮಾನೆ 04) ಶಂಕರ ತಂದೆ
ಮಾರುತಿ ಭಜಂತ್ರಿ 05) ಭೀಮಶಾ ತಂದೆ ಮಲ್ಲಪ್ಪ ಜಮಾದಾರ 06) ಅಶೋಕ ತಂದೆ ಈರಣ್ಣಾ ಜಮಾದಾರ 07) ಶರಣಪ್ಪ
ತಂದೆ ಧರ್ಮರಾಯ ಹುಗೊಂಡ ಸಾ|| ಎಲ್ಲರೂ ನಿಂಬರ್ಗಾ
ಇವರಿಂದ 52 ಇಸ್ಪಿಟ ಎಲೆಗಳು ಮತ್ತು ನಗದು ಹಣ ರೂ.
2350/- ಜಪ್ತಿಪಡಿಸಿಕೊಂಡು ಆಪಾದಿತರ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: :
ದಿನಾಂಕ 03/07/16
ರಂದು ಸೈಯ್ಯದ ಸಲೀಮ ಶಹಾ ಇತನು ಇಂಡಸ್ಟ್ರೀಯಲ ಏರಿಯಾ ಒಳಗಡೆಯಿಂದ ನಡೆದುಕೊಂಡು ಹುಮನಾಬಾದ- ಸೇಡಂ ರಿಂಗ ರೋಡಿಗೆ ಇರುವ ಇಂಡಸ್ಟ್ರೀಯಲ ಏರಿಯಾ ಕ್ರಾಸನಲ್ಲಿ ರೋಡ ದಾಟುವಾಗ ಖರ್ಗೆ ಪೆಟ್ರೋಲ ಪಂಪ ಕಡೆಯಿಂದ KA28-M4060
ಕಾರು ಚಾಲಕ ತನ್ನ ಕಾರನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಯಿಸಿಕೊಂಡು ರೋಡ ಬದಿಯಲ್ಲಿ ನಿಂತ ಸೈಯ್ಯದ ಸಲೀಮಶಹಾ ಇವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ, ಕಾರು ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ. ಇದರಿಂದಾಗಿ ಸೈಯ್ಯದ ಸಲೀಮ ಶಹಾನಿಗೆ ಹಣೆಗೆ ಮತ್ತು ಬಲಗಣ್ಣಿಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಮೂಗಿನಿಂದ ರಕ್ತ ಸೋರಿ, ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ
ಪೊಲೀಸ್ ಠಾಣೆ: ದಿನಾಂಕ 03/07/16
ರಂದು ವಿಚಯಕುಮಾರ
ಇತನು ತನ್ನ ಮೋ.ಸೈಕಲ್
ನಂ KA32-R9444 ನೇದ್ದನ್ನು ಕೇಂದ್ರ ಬಸ್ ನಿಲ್ದಾಣಕಡೆಯಿಂದ ಎಸ್.ವಿ.ಪಿ ಸರ್ಕಲ್ ಕಡೆಗೆ ಹೋಗುವಾಗ ಮೋಹನ ಲಾಡ್ಜ ಹತ್ತಿರ ಸದರಿಯವನ ಮೋಟಾರ್ ಸೈಕಲ್ ಅಡ್ಡಲಾಗಿ ಹಂದಿ ಬಂದಿದ್ದರಿಂಧ ಒಮ್ಮೆಲೆ ಕಟ್ ಮಾಡಿ ಬ್ರೆಕ್ ಹಾಕಿದಾಗ ಮೋ.ಸೈಕಲ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment