ನಾಡ ಪಿಸ್ತೂಲ ವಶ :
ಮಾಹಾಗಾಂವ ಠಾಣೆ : ದಿನಾಂಕ:03/07/2016 ರಂದು, ಕಲಬುರಗಿ ಹುಮನಾಬಾದ ಎನ್.ಹೆಚ್. 218 ನೇದ್ದರ ದಸ್ತಾಪೂರ ಕ್ರಾಸ ಹತ್ತಿರ ಇರುವ ರೇಲ್ವೆ ಮೇಲ್ಸೇತುವೆ ಮೇಲೆ ನಾಲ್ಕು ಜನರು ಒಂದು ಕಾರ ನಿಲ್ಲಿಸಿ ದರೋಡೆ ಅಥವಾ ಸುಲಿಗೆ ಮಾಡುವ ಉದ್ದೇಶದಿಂದ ಪಿಸ್ತೂಲ ತೋರಿಸಿ ಹೋಗಿ ಬರುವ ವಾಹನಗಳಿಗೆ ಹಾಗು ಜನರಿಗೆ ಹೆದರಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಮಾಹಾಗಾಂವ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಸ್ತಾಪೂರ ಕ್ರಾಸಿನ ರೇಲ್ವೆ ಮೇಲ್ಸೇತುವೆ ಮೇಲೆ ಒಂದು ಕಾರ ನಿಂತಿದ್ದು ಅದರ ಹತ್ತಿರ 4 ಜನ ವ್ಯಕ್ತಿಗಳು ನಿಂತುಕೊಂಡಿದ್ದು. ಅವರು ಜೀಪನ್ನು ನೋಡಿ, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು. ಕಾರ ಹತ್ತಿರ ಹೋಗಿ ನೋಡಲಾಗಿ ಒಂದು ಟಾಟಾ ಇಂಡಿಕಾ ಕಾರ ನಂ. ಎಪಿ:09 ಬಿಎಲ್:1546 ನೇದ್ದು ಇದ್ದು. ಅದರ ಅ:ಕಿ: 50000-00 ರೂ. ಕಾರಿನಲ್ಲಿ ಪರಿಶೀಲಿಸಿ ನೋಡಲಾಗಿ ಕಾರಿನ ಹಿಂದಿನ ಸೀಟಿನಲ್ಲಿ ಯಾವುದೇ ದಾಖಲಾತಿ ಇರದ 1) ಒಂದು ನಾಡ ಪಿಸ್ತೂಲ, ಅ:ಕಿ: 5000-00 ರೂ. 2) ಒಂದು ಸ್ಯಾಮಸಾಂಗ ಕಂಪನಿ ಮೊಬೈಲ, ಅ:ಕಿ: 500-00 ರೂ. 3) ಒಂದು ಲ್ಯಾಪಟ್ಯಾಪ ಹೋಲುವ ಡಿವಿಡಿ ಪ್ಲೇಯರ್ ಅ:ಕಿ: 1000-00 ರೂ. ನೇದ್ದವುಗಳು ದೊರೆತ್ತಿದ್ದು ಹೀಗೆ ಒಟ್ಟು ಅ:ಕಿ: 56500-00 ರೂ. ನೇದ್ದುವುಗಳನ್ನು ಮುಂದಿನ ಪುರಾವೆಗಾಗಿ ಜಪ್ತಿಪಡಿಸಿಕೊಂಡು ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಆಳಂದ ಠಾಣೆ : ಶ್ರೀ ರಾಜೇಂದ್ರ ತಂದೆ ಬಾಬುರಾವ ಮೂಲಗೆ ಸಾ: ಕಿಣ್ಣಿಸುಲ್ತಾನ ತಾ:ಆಳಂದ ಜಿ: ಕಲಬುರಗಿ ಇವರ ಮಗಳಾದ
ಸುಕನ್ಯಾ ಇವಳಿಗೆ ದಿನಾಂಕ; 15/05/2015 ರಂದು ಆಳಂದ ಪಟ್ಟಣದಲ್ಲಿರುವ ಎ.ವಿ ಪಾಟಿಲ್ ಮಂಗಲ ಕಾರ್ಯಾಲಯದಲ್ಲಿ
ಸಂಪ್ರದಾಯದಂತೆ ಮಟಗಿ ಗ್ರಾಮದ ಯಶವಂತರಾಯ ತಂದೆ ಮಲ್ಲಿಕಾರ್ಜುನ್ ಬಿರಾದಾರ ಇತನ ಜೊತೆ ಸುಮಾರು 12
ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟಿರುತ್ತೇನೆ. ಮದುವೆ ಕಾಲದಲ್ಲಿ 210 ಗ್ರಾಂ ಬಂಗಾರ 2
ಲಕ್ಷ ರೂ ವರದಕ್ಷಿಣೆ ಕೊಟ್ಟಿದ್ದು ನನ್ನ ಅಳಿಯನು ಝಾರ್ಕಂಡ ರಾಜ್ಯದ ಇಟಾವ ದಲ್ಲಿ ಇಂಜಿನಿಯರ್
ಅಂತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಮದುವೆಯಲ್ಲಿ
ಬೆಳ್ಳಿಯ ತಾಟು ಮತ್ತು ಬೆಳ್ಳಿಯ ಸಮಯ ಕೇಳಿದ್ದು ಕೊಟ್ಟಿರುವದಿಲ್ಲ ನನ್ನ ಅಳಿಯ ಹಾಗು ಅವನ ತಾಯಿ
ಜಗದೇವಿ ಅವನ ತಂದೆ ಮಲ್ಲಿಕಾರ್ಜುನ್ ನಮ್ಮ ಅಳಿಯನ ಅಣ್ಣ ಬಸವಂತ್ರಾಯ ಇವರುಗಳು ಯಾವಾಗಲು ನನ್ನ
ಮಗಳಿಗೆ ಬೆಳ್ಳಿ ಸಾಮಾನುಗಳು ಕೊಟ್ಟಿಲ್ಲ ಎಂದು ಬೈಯುವದು ಹೊಡೆಬಡೆ ಮಾಡುವದು ಮಾಡುತ್ತಿದ್ದರು
ಕೂಡ ಸಹಿಸಿಕೊಂಡಿರುತ್ತಾಳೆ. ಸುಮಾರು 03 ತಿಂಗಳ ಹಿಂದೆ. ತನ್ನ ಗಂಡನು ಒತ್ತಾಯ ಪೂರ್ವಕವಾಗಿ ‘ನಾನು ಸತ್ತರೆ ಯಾರು ಕಾರಣರಲ್ಲ’ ಅಂತಾ ಪತ್ರ ಬರೆದುಕೊಡು ಎಂದು
ಅವಳಿಂದ ಬರೆಯಿಸಿಕೊಂಡಿ ರುತ್ತಾನೆ. ಎಂದು ನಮಗೆ ತಿಳಿಸಿರುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಮಗಳ
ಸಮಸ್ಯಯನ್ನು ಬಗೆ ಹರಿಸಬೇಕು ಅಂತಾ ಪ್ರಯತ್ನ ಮಾಡಿದ್ದು ನಿನ್ನೆ ದಿನಾಂಕ: 03/07/2016 ರಂದು
ಮದ್ಯಾಹ್ನ ನನ್ನ ಮಗಳ ಗಂಡ, ಅತ್ತೆ, ಮಾವ , ಬಾವ ಇವರುಗಳಿಗೆ ಆಳಂದಕ್ಕೆ
ಕರೆಯಿಸಿ ಶರಣು ಹತ್ತರಕಿ ಇವರ ಕಟಗಿ ಅಡ್ಡಾದಲ್ಲಿ ಪಂಚಾಯತಿ ಮಾಡಿದ್ದು ನಾನು ಮತ್ತು ನನ್ನ
ಹೆಂಡತಿ ಉಮಾಬಾಯಿ ಹಾಗು ಪಂಚರಾದ ಶರಣಪ್ಪಾ ಹತ್ತರಕಿ ಸಾ: ಬಾಳೇನಕೇರಿ, ಪರಮೇಶ್ವರ ಮೂಲಗೆ,ಸಾ: ಕಿಣ್ಣಿಸುಲ್ತಾನ ಹಾಗು ನಮ್ಮ ಅಣ್ಣ ಮಲ್ಲಿಕಾರ್ಜುನ್ ರವರ ಸಮಕ್ಷಮದಲ್ಲಿ ಪಂಚಾಯತ ಮಾಡಿ
ಬೆಳ್ಳಿ ಸಮೆ ಹಾಗು ತಾಟಿನ ಬಗ್ಗೆ ವಿಚಾರಿಸಲಾಗಿ ಬೆಳ್ಳಿ ಸಾಮಾನುಗಳು ತಂದು ಕೊಟ್ಟರೆ ಆಕೆಯನ್ನು
ಇಟ್ಟುಕೊಳ್ಳುವದಾಗಿ ತಿಳಿಸಿರುತ್ತಾರೆ. ಹಾಗೇ ಕಳುಹಿಸಿಕೊಟ್ಟರೆ ಆಕೆಯ ಜೀವ ಸಹಿತ ಇಡುವದಿಲ್ಲ
ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಮೇಲಿನ ಎಲ್ಲವನ್ನು ನನ್ನ ಮಗಳು ಸಹಿಸದೆ ಇಂದು ದಿನಾಂಕ
04/07/2016 ರಂದು ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಮ್ಮ ಮಗಳು ಮನೆಯ ಚೆತ್ತಿಗೆ ಇರುವ
ಕೊಂಡಿಗೆ ತನ್ನ ಸಿರೆಯಿಂದ ನೇಣು ಹಾಕಿಕೊಂಡು ಜೋತಾಡುವಾಗ ನನ್ನ ಹೆಂಡತಿ ನೋಡಿ ಜನರಿಗೆ ಕರೆದು
ಜೀವ ಇರಬಹುದು ಅಂತಾ ಕೆಳಗಿಳಿಸಿದಾಗ ಜೀವ ಇರುವದು ಕಂಡು ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ
ಮದ್ಯಾಹ್ನ 12-40 ಗಂಟೆಗೆ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಕಾರಣ ಆಕೆಯ ಅತ್ತೆ, ಗಂಡ, ಮಾವ, ಭಾವ ರವರು ಕೊಟ್ಟ ವರದಕ್ಷಿಣೆ
ಕಿರುಕುಳದಿಂದ ಮನನೊಂದುಕೊಂಡು ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು
ಮೃತಪಟ್ಟಿರುತ್ತಾಳೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment