ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸುನಿತಾ ಗಂಡ ಸಂಜುಕುಮಾರ ಹೊಸಮನಿ ಇವಳಿಗೆ ಮದುವೆಯಾಗಿ 09-10 ವರ್ಷ ಗತಿಸಿದ್ದು, ಅವಳ ಗಂಡ ಸಂಜುಕುಮಾರ ಇತನು
ಕುಡಿಯಲಿಕ್ಕೆ ಹಣ ಕೊಡದೇ ಇದುದ್ದರಿಂದ ಅವಳಿಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ
ಕೊಟ್ಟು ಹೊಡೆ ಬಡಿ ಮಾಡುತ್ತಾ ಹೊರಟಿದ್ದು, ಅಲ್ಲದೇ ದಿನಾಂಕ 22/08/16 ರಂದು ರಾತ್ರಿ 09-00 ಗಂಟೆ ಸುಮರಿಗೆ
ಕುಡಿಯಲಿಕ್ಕೆ ಹಣ ಕೊಡದೇ ಇರುವುದರಿಂದ ಅವಳ
ಮೈಮೇಲೆ ಸೀಮೆಎಣ್ಣೆ ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ
ಬಗ್ಗೆ ಗ್ರಾಶಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶ್ರೀಮತಿ ಸುನಿತಾ ಇವಳು ದಿನಾಂಕ 22/08/16 ರಂದು
ರಾತ್ರಿ 9-00 ಗಂಟೆ ಸುಮಾರಿಗೆ ಸುಟ್ಟಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು
ದಿನಾಂಕ 26/08/16 ರಂದು ಬೆಳಿಗ್ಗೆ 6-00 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಸಿದ್ಧಪ್ಪ
ತಂದೆ ಮಸ್ತಾನಪ್ಪ ವಾಗದಳ್ಳಿ ಸಾ: ಮಾಹಾಗಾಂವ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಠೋಬ ತಂದೆ
ಲಕ್ಷ್ಮಣ ಜಮಾದಾರ ಅಂಕಲಗಾ ಶಾಖೆಯ ಪ್ರಭಾರಿ ಶಾಖಾಧಿಕಾರಿ ಆಗಿದ್ದು, ನಮ್ಮ ಶಾಖೆಯಲ್ಲಿ ಬರುವ ಅಂಕಲಗಾ ಗ್ರಾಮದಿಂದ ಬೋಸಗಾ[ಕೆ]
ಹಾದು ಹೋಗಿರುವ 11 ಕೆ ವಿ ಎ ಲೈನ್ ವಾಯರ್ ಸುಮಾರು 5 ಕಂಬಗಳ ವಾಯರ್ ಮತ್ತು ಎರಡು ಕಂಬಗಳು
ಮುರಿದು ನೆಲಕ್ಕೆ ಉರಳಿಸಿ ವಾಯರ್ ಕಟ್ಟು ಮಾಡಿಕೊಂಡು ಹೋಗಿದ್ದು, ನಾನು ದಿನಾಂಕ: 10/08/2016 ರಂದು ನಾನು ಕೆಲಸದ ನಿಮಿತ್ಯವಾಗಿ
ಇಟಗಾ ಗ್ರಾಮಕ್ಕೆ ಹೋಗುವ ನಾನು ಖುದ್ದಾಗಿ ನೋಡಿದಾಗ ನನಗೆ ಸಂಶಯ ಬಂದು ನೋಡಿದಾಗ ಅಲ್ಲಿ
5[ಕಂಬಗಳ] ವಾಯರ ಮತ್ತು 2 ಕಲಂಬಗಳು ಮುರಿದಿರುವದು ಕಂಡು ಬಂದು ನಾನು ನಮ್ಮ ಸಿಬ್ಬಂದಿಗಳಿಗೆ
ಹೇಳಿದಾಗ ಅವರು ನಾವು ಕೂಡಿಕೊಂಡು ನೋಡಿದಾಗ ಅಲ್ಲಿ ನಮ್ಮ ಕಂಪನಿಯ ವಾಯರ್ ಕಂಬಗಳು ವಾಯರ್ ಮುರಿದು
ತೆಗೆದುಕೊಂಡು ಹೋಗಿದ್ದು ಅದರ ಅಂದಾಜು ಮೊತ್ತ 35000/- ರೂಪಾಯಿ ಆಗಿರುತ್ತದೆ. ದಿನಾಂಕ:
10/08/2016 ರ ಹಿಂದಿನ ಎರಡು ದಿನಗಳಲ್ಲಿ ಕಳ್ಳತನ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment