ದರೋಡೆ ಮಾಡು ಪ್ರಯತ್ನ ಮಾಡುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ
03.08.2016 ರಂದು ಅಮವಾಸೆ ಇದ್ದ ಪ್ರಯುಕ್ತ ಠಾಣೆ ವ್ಯಾಪ್ತಿಯಲ್ಲಿ ವಿಶೇಷ
ಪ್ರೇಟ್ರೊಲಿಂಗ್ ಕರ್ತವ್ಯ ನಿರ್ವಹಿಸುವ ಕುರಿತು ಬೆಳ್ಳಿಗ್ಗೆ 00:10 ಗಂಟೆಗೆ ನಾನು ಠಾಣೆಗೆ ಬಂದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಮರಗುತ್ತಿ ಕ್ರಾಸದಿಂದ ಸ್ವಲ್ಪ ಮುಂದೆ ಮರಗುತ್ತಿ ಕಡೆಗೆ ಹೋಗುವ ರೋಡಿನ
ಪಕ್ಕದಲ್ಲಿ 5 ಜನರು ತಮ್ಮ ಮುಖಕ್ಕೆ ಕಪ್ಪು
ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆ ಮಾಡಲು ಹೊಂಚ್ಚು ಹಾಕಿ
ಕುಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬಾತ್ಮಿ ಸ್ಥಳವಾದ ಮರಗುತ್ತಿ ಕ್ರಾಸದಿಂದ ಸ್ವಲ್ಪ ಹಿಂದೆ ದೂರದಲ್ಲಿ ಎಲ್ಲರೂ
ಕೂಡಿಕೊಂಡು ಯಾವುದೆ ಶಬ್ದ ಮಾಡದೆ ನಡೆದುಕೊಂಡು ಬೆಳ್ಳಿಗ್ಗೆ 1:30 ಗಂಟೆಗೆ ಮರಗುತ್ತಿ ಗ್ರಾಮದ ಕಡೆಗೆ ಹೋಗುವ ರಸ್ತೆ ಹತ್ತಿರ ಬಂದು
ನೋಡಲು ಸದರಿ ರಸ್ತೆಯ ಪಕ್ಕದಲ್ಲಿ 4 ಜನರು
ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆಯ ಪಕ್ಕದಲ್ಲಿ ಕುಳಿತ್ತಿದ್ದು ಅವರಲ್ಲಿ ಒಬ್ಬನು
ಎದ್ದು ರಸ್ತೆಯ ಮೇಲೆ ಬಂದು ಯಾವುದಾದರು ವಾಹನ ಬರುತ್ತಿದೆ ಅಂತ ರಸ್ತೆಯ ಎರಡು ಕಡೆ ನೋಡಿ ಮತ್ತೆ
ಅಲ್ಲೆ ಹೋಗಿ ಕುಳಿತ್ತಿದ್ದು. ಸದರಿಯವರು ದರೋಡೆ ಮಾಡಲು ಹೊಂಚ್ಚು ಹಾಕಿ ಕುಳಿತಿರುವದನ್ನು ಖಚಿತ
ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದರೋಡ ಮಾಡಲು ಹೊಂಚು ಹಾಕಿ ಕುಳಿತವರ
ಮೇಲೆ ಒಮ್ಮಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು. ನಂತರ ಅವರ ಹೆಸರು ವಿಳಾಸ
ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಮುಸ್ಲಿಂ ಅಲಿ ತಂದೆ
ಜೋಲಾವರ ಅಲಿ ಇರಾನಿ 2. ಲಾಲಾಬಾಬಾ ತಂದೆ ಬಾಬರ ಅಲಿ ಇರಾನಿ 3. ರಫೀಕ ಅಲಿ ತಂದೆ ಮನಸೂರ ಅಲಿ ಇರಾನಿ 4. ಗುಲಾಮ ಅಬ್ಬಾಸ ತಂದೆ
ಪ್ರೈಯಿ ಅಲಿ ಇರಾನಿ 5. ಮುಕ್ತಾರ ಅಲಿ ತಂದೆ ರಫೀಕ ಅಲಿ ಇರಾನಿ ಸಾ: ಎಲ್ಲರು ಇರಾನಿಗಲ್ಲಿ
ಬೀದರ ಅಂತಾ ತಿಳಿಸಿದ್ದು ಸದರಿಯವರ ಇರುವಿಕೆಯ ಬಗ್ಗೆ ಕೆಳಲಾಗಿ ಸದರಿಯವರು ಹೋಗಿ ಬರುವ
ವಾಹನಗಳನ್ನು ತಡೆದು ದರೋಡೆಮಾಡಲು ಹೊಂಚುಹಾಕಿ ಕುಳಿತಬಗ್ಗೆ ಹೇಳಿದ್ದು ಸದರಿಯವರಿಂದ ಕೃತ್ಯಕ್ಕೆ
ಬಳಸಿದ ಮುಖಕ್ಕೆ ಕಟ್ಟಿಕೊಳ್ಳುವ ಕಪ್ಪು ಬಟ್ಟೆಗಳು, ಚಾಕುಗಳು, ಚೂರಿ ತಲವಾರ, ಹಗ್ಗ, ಖಾರದಪುಡಿ,
ಮತ್ತು ಬ್ಯಾಟರಿಯನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಚೌಕ ಠಾಣೆ : ದಿನಾಂಕ 03.06.2016 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯ ಕಟಗರಪೂರ ಶಹಾಬಜಾರದ
ಹತ್ತೀರ ಸಾರ್ವಜನಿಕ ರಸ್ತೆಯ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ
ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ
ಮೇರೆಗೆ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಕಟಗರಪೂರ ಶಹಾಬಜಾರದ
ಹತ್ತೀರ ಇರುವ ಹನುಮಾನ ಗುಡಿಯ ಹತ್ತಿರ ಕಟಗರಪೂರ ಶಹಾಬಜಾರದ ಹನುಮಾನ ಗುಡಿ ಹತ್ತಿರ ಮರೆಯಾಗಿ
ನಿಂತು ನೋಡಲು ಸದರಿ ಹನುಮಾನ ಗುಡಿ ಹತ್ತೀರದ ಖುಲ್ಲಾ ಬಯಲು ಜಾಗೆಯ ಮೇಲೆ 13-14 ಜನರು ಗುಂಪಾಗಿ ಕುಳಿತ
ಹಣವನ್ನು ಪಣಕ್ಕೆ ಹಚ್ಚಿ ಏ ರಾಣಿ ಕೋ ಮೇರಾ ಪಾನಸೋ ರೂಪಿಯಾ, ಏ ಭಾಷಾ ಕೋ ಮೇರಾ ಹಜಾರ ರೂಪಿಯಾ
ಅಂತಾ ಹೇಳುತ್ತಾ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ
ಒಟ್ಟು 14 ಜನ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ
ವಿಚಾರಿಸಲು, 1) ಮೊದಲನೆಯವನು ತನ್ನ ಬಸವರಾಜ ತಂದೆ ಶಿವರಾಜ ಶಕಾಪೂರೆ ಸಾಃ ಮಹಾದೇವ ನಗರ ಶಹಾಬಜಾರ ಕಲಬುರಗಿ 2) ಸೈಯ್ಯದ ಸದಾðರ ತಂದೆ ಭಾಷಾಮಿಯ್ಯಾ ಸಾ: ಆದðಶ ನಗರ ಕಲಬುರಗಿ 3) ವಿಜಯಕುಮಾರ ತಂದೆ ಯುವರಾಜ ಮಿಶ್ರಾ ಸಾಃ ಬಾಲಾಜಿ ಗುಡಿ ಹತ್ತೀರ ಕಟಗರಪೂರ ಶಹಾಬಜಾರ ಕಲಬುರಗಿ 4) ಅಜಯ ತಂದೆ ಸುಭಾಷ ಠಾಕೂರ ಸಾ: ಕಟಗರಪೂರ ಶಹಾಬಜಾರ ಕಲಬುರಗಿ 5) ಅಂಬರೀಷ ತಂದೆ ಬಾಬುರಾವ ತಳವಾರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 6) ಸುನಿಲಸಿಂಗ್ ತಂದೆ ವಿಷ್ಣುಸಿಂಗ್ ಠಾಕೂರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 7) ಬಾಬುಸಿಂಗ ತಂದೆ ಮಾಣಿಕಸಿಂಗ್ ಠಾಕೂರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 8) ಬಸವರಾಜ ತಂದೆ ಅಮೃತ
ಹಾಗರಗಿ ಸಾಃ ಲಾಲ ಹನುಮಾನ ಗುಡಿ ಹತ್ತಿರ ಶಹಾಬಜಾರ ಕಲಬುರಗಿ 9) ಖಾಜಾಮೈನೋದ್ದೀನ ತಂದೆ ಅಬ್ದೂಲ ಕರಿಂ ಜಿಲ್ಲೆ ಸಾಃ ಮುಸ್ಲಿಂ ಚೌಕ ಹತ್ತಿರ ಕಲಬುರಗಿ 10) ಬಾಬುರಾವ್ ತಂದೆ
ಮಾಣಿಕರಾವ್ ಕಮಲಾಪೂರಕರ್ ಸಾಃ ಛೋಟಾ ರೋಜಾ ಕಲಬುರಗಿ
11) ಮಹ್ಮದ ಖಾಲೀದ ತಂದೆ ಮಹ್ಮದ ರಫೀಕ್ ಸಾಃ ಬಸವೇಶ್ವರ
ಕಾಲೋನಿ ಕಲಬುರಗಿ 12) ಸೋನು ದುಬೆ ತಂದೆ ಹರಿಶಂಕರ ದುಬೆ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 13) ವೆಂಕಾಟಾಚೆಲ ತಂದೆ
ಗುರುಬಸಪ್ಪಾ ಕುಂಬಾರ ಸಾಃ ಉಪಳಾಂವ 14) ಬಾಲುಸಿಂಗ್ ತಂದೆ ಲಕ್ಷಣಸಿಂಗ್ ಠಾಕೂರ ಸಾಃ ಬಾಲಾಜಿ ಗುಡಿ ಹತ್ತೀರ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 1,02,000/- ರೂ. 10 ಮೋಬೈಲಗಳ ಅಃಕಿಃ 6500/- & 04 ದ್ವಿ ಚಕ್ರ ವಾಹನಗಳು ಅಃಕಿಃ 50,000/- ಮತ್ತು 52 ಇಸ್ಪೇಟ ಎಲೆಗಳು
ದೊರೆತಿದ್ದು, ಇಲ್ಲವೂ ಸೇರಿ ಒಟ್ಟು 1,58,500/- ಕೀಮ್ಮತ್ತೀನ ಮುದ್ದೇಮಾಲುಗಳನ್ನು ಜಪ್ತಿ ಪಡಿಸಿಕೊಂಡು ಸದರಿವರೊಂದಿಗೆ
ಚೌಕ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ತೊಡಗಿದವರ ಬಂಧನ :
ಫರತಾಬಾದ ಠಾಣೆ : ಫರಹತಾಬಾದ
ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ಫರಹತಾಬಾದ ಗ್ರಾಮದ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ಮನುಷ್ಯನು ಕುಳಿತು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ
ಬಂದ ಮೇರೆಗೆ ಮಾನ್ಯ ಎಸ್ ಎಸ್ ಹುಲ್ಲೂರ ಡಿಎಸ್ ಪಿ ಸಾಹೇಬರು ಡಿಸಿಆರ್ ಬಿ ಘಟಕ ಕಲಬುರಗಿ, ಮಾನ್ಯ
ಕಪಿಲದೇವ ಪಿಐ ಡಿಸಿಬಿ ರವರ ಮಾರ್ಗದರ್ಶನದಲ್ಲಿ ಶ್ರೀ ವಿಠಲ ಗಾಜರೆ
ಪಿ.ಎಸ್.ಐ. ಡಿ.ಸಿಬಿ. ಘಟಕ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಫರಹತಾಬಾದ ಬಸ್ ನಿಲ್ದಾಣದ
ಹತ್ತಿರದ ಕಲಬುರಗಿ ಕಾಂಪ್ಲೆಕ್ಸ್ ಎದುರುಗಡೆ ನೋಡಲಾಗಿ ಒಬ್ಬ ವ್ಯಕ್ತಿ ಕುಳಿತು 1 ರೂ ಗೆ 80
ರೂಪಾಯಿ ಗೆಲ್ಲಿರಿ ಅಂತ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು
ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ
ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದು ಸದರಿ ವ್ಯಕ್ತಿಯನ್ನು ವಿಚಾರಿಸಿ ಚೆಕ್ಕ ಮಾಡಲಾಗಿ ತನ್ನ
ಹೆಸರು ಪ್ರದೀಪ ತಂದೆ ಸುರೇಶ ಕೊಟರಗಸ್ತಿ ಸಾ:ಫರಹತಾಬಾದ ಅಂತಾ ತಿಳಿಸಿದ್ದು, ಈತನ ಅಂಗ
ಶೋಧನೆ ಮಾಡಲಾಗಿ ಅವನ ಹತ್ತಿರ 1) ಎರಡು ಮಟಕಾ ನಂಬರ ಬರೆದ
ಚೀಟಿ ಅ:ಕಿ:00=00 ರೂ, 2) ಒಂದು ಬಾಲ್ ಪೆನ್ ಅ:ಕಿ:00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ
ನಗದು ಹಣ 2420=00 ರೂಪಾಯಿಗಳುನ್ನು ವಶಪಡಿಸಿಕೊಂಡು ಫರತಾಬಾದ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಭೀಮಣ್ಣ ತಂದೆ
ಅಂಬಾಜಿ ಲೋಕರೆ ಸಾ:ನಂದಿಕೂರ ದಿನಾಂಕ 02/08/2016 ರಂದು ರಾತ್ರಿ
08-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವನಾದ ಮಲ್ಲಯ್ಯ ಪಾಣೆಗಾಂವ ಇತನು ನಮ್ಮ ಮನೆಯ ಮುಂದೆ ರೋಡಿನ ಮೆಲೆ
ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ನಾನು ಅವನಿಗೆ ಇಲ್ಲಿ ಎಕಿ ಮಾಡಿದರೆ ಹೇಗೆ
ಇಲ್ಲಿ ನಮ್ಮ ಮನೆ ಇದೆ, ಹೇಣ್ಣು ಮಕ್ಕಳು ಇರುತ್ತಾರೆ ಅಂತಾ ಅಂದಿದ್ದಕ್ಕೆ ಅವನು ನನಗೆ ಎ, ರಂಡಿ ಮಗನೆ ಈ
ಜಾಗ ನಿನ್ನದಾದ ಎನು ಅಂತಾ ಅಂದವನೆ ನನ್ನೋಂದಿಗೆ
ಜಗಳಕ್ಕೆ ಬಿದ್ದು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಕೆಗೆ ಹೊಡೆದು
ರಕ್ತಗಾಯ ಮಾಡಿದನು ಆಗ ನಾನು ಚೀರಾಡುವದನ್ನು ಕೇಳಿ ಓಡಿ ನನ್ನ ಹೆಂಡತಿ ಗೀತಾ ಮತ್ತು ನಮ್ಮ ಓಣಿಯ ತುಕಾರಾಮ ಡೊರ , ಸಿದ್ದು
ಪೂಜಾರಿ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ . ಆಗ ಸದರಿ ಮಲ್ಲಯ್ಯಾ ಪಾಣೆಗಾಂವ ಅಲ್ಲಿಂದ
ಹೋಗುವಾಗ ಮಗನೆ ಇದೊಂದು ಸಲ ಉಳಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ
ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ
ಹೊಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment