Police Bhavan Kalaburagi

Police Bhavan Kalaburagi

Wednesday, September 14, 2016

BIDAR DISTRICT DAILY CRIME UPDATE 14-09-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-09-2016

§UÀzÀ® ¥Éưøï oÁuÉ UÀÄ£Éß £ÀA. 119/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 13-09-2016 ರಂದು ಫಿರ್ಯಾದಿ ಎಲಿಸ್ ತಂದೆ ತುಳಜಪ್ಪಾ ಸಿಂದಬಂದಗಿ ವಯ: 32 ವರ್ಷ, ಜಾತಿ: ಕ್ರಿಶ್ಚನ, ಸಾ: ಚಟನಳ್ಳಿ ರವರ ತಮ್ಮನಾದ ದಾವಿದ ಇತನು ಫ್ಯಾಶನ ಪ್ರೊ ಮೋಟರ ಸೈಕಲನ್ನು ಚಾಲಾಯಿಸಿಕೊಂಡು ಕಾಡವಾದ ಕಡೆಯಿಂದ ಬೀದರ ಕಡೆಗೆ ಹೋಗುವಾಗ ಬೀದರ ಕಡೆಯಿಂದ ಬಂದ ಪಲ್ಸರ್ ಮೋಟರ ಸೈಕಲ ನಂ. ಕೆ.ಎ-38/ಆರ್-9599 ನೇದರ ಚಾಲಕನಾದ ಆರೋಪಿ ಮಹ್ಮದ ರಫೀ ತಂದೆ ಮಹಮ್ದ ಇಸ್ಮಾಯಿಲ್ ಸಾಬ ವಯ: 45 ವರ್ಷ, ಸಾ: ನೂರ ಅಖಾಡಾ ಹುಮನಾಬಾದ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜೀತನದಿಂದ ಓಡಿಸಿ ಎಡಗಡೆ ಹೋಗುವುದು ಬಿಟ್ಟು ಬಲಗಡೆ ಬಂದು ದಾವಿದ ಇತನ ಮೋಟರ ಸೈಕಲಗೆ ಡಿಕ್ಕಿ ಮಾಡಿ ತನ್ನ ಮೋಟರ ಸೈಕಲ ಜೊತೆ ಓಡಿ ಹೋಗಿರುತ್ತಾನೆಂದು, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಮ್ಮನಿಗೆ ಎಡ ತಲೆಯ ಮೇಲೆ ಭಾರಿ ಗುಪ್ತಗಾಯ ತರಚಿದ ಗಾಯ, ಹಣೆಯ ಮೇಲೆ, ಎಡಗಣ್ಣಿನ ಪಕ್ಕದಲ್ಲಿ ರಕ್ತಗಾಯ, ಎಡಗಾಲಿಗೆ ತರಚಿದ ಗಾಯಗಗಳಾಗಿ ಎಡಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸೊರುತ್ತಿದ್ದು ಮಾತನಾಡುತ್ತಿರಲಿಲ್ಲ, ನಂತರ ಫಿರ್ಯಾದಿಯ ತಮ್ಮನಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸನಲ್ಲಿ ಬೀದರ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 70/2016, PÀ®A 457, 380 L¦¹ :-
ದಿನಾಂಕ 13-09-2016 ರಂದು ಮಧ್ಯಾಹ್ನದ ವರೆಗೆ ಫಿರ್ಯಾದಿ ಡಾ.ರವಿಂದ್ರಕುಮಾರ ಸಾಹಾಯಕ ನಿರ್ದೇಶಕರು ಪಶು ವೈದ್ಯಕೀಯ ಆಸ್ಪತ್ರೆ ಗೋಲೆಖಾನಾ ಬೀದರ ರವರು ಕಾರ್ಯ ನಿರ್ವಹಿಸಿ ತಮ್ಮ ಸಿಬ್ಬಂದಿ ಲಕ್ಷ್ಮಿಣ ರವರು ಕಛೇರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 14-09-2016 ರಂದು 0900 ಗಂಟೆಗೆ ಫಿರ್ಯಾದಿ ಮತ್ತು ಸಿಬ್ಬಂದಿಯವರು ಪಶು ಆಸ್ಪತ್ರೆಗೆ ಬಂದು ನೋಡಲಾಗಿ ಮುಖ್ಯ ದ್ವಾರದ ಬೀಗ ಮುರಿದಿದ್ದು ಕಂಡು ಬಂದಿರುತ್ತದೆ, ಫಿರ್ಯಾದಿಯು ಕಛೇರಿಯ ಒಳಗಡೆ ಬಂದು ನೋಡಲಾಗಿ ಕಛೇರಿಯಲ್ಲಿದ್ದ ಗಣಕಯಂತ್ರದ ಒಂದು ಬ್ಯಾಟರಿ ಆಟೋಬ್ಯಾಟ ಕಂಪನಿ ಅ.ಕಿ 12,000/- ರೂ. ಹಾಗೂ ಇನ್ವರ್ಟರ್ ಸೂಕ್ಯಾಮ್ ಕಂಪನಿದು ಅ.ಕಿ 9000/- ರೂ. ಹೀಗೆ ಒಟ್ಟು 21,000/- ರೂ. ಮೌಲ್ಯದ ವಸ್ತುಗಳು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಕಛೇರಿಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಲೀಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥ÉÆð¸À oÁuÉ UÀÄ£Éß £ÀA. 169/2016, PÀ®A 3(1) (10) J¸À.¹/J¸ï.n PÁAiÉÄÝ ªÀÄvÀÄÛ PÀ®A 341, 323, 324, 504, 506, 109 eÉÆvÉ 34 L¦¹ :-
ದಿನಾಂಕ 13-09-2016 ರಂದು ಫಿರ್ಯಾದಿ ಇಮಾನವೆಲ್ @ ಬಂಟಿ ತಂದೆ ಸಂಗಪ್ಪ ದರಬಾರೆ ಸಾ: ಔರಾದ(ಬಿ) ರವರು ತನ್ನ ಇನೋವಾ ಕಾರ ನಂ. ಎಂಹೆಚ್-29/ಎಡಿ-6777 ನೇದನ್ನು ಕುಮಾರ ದೇಶಮುಖ್ ರವರಿಗೆ ಕೊಟ್ಟಿದ್ದು ಅವರು ತನ್ನ ಕೆಲಸ ಕುರಿತು ಸದರಿ ಕಾರನ್ನು ತೆಗೆದುಕೊಂಡು ಬೇರೆ ಊರಿಗೆ ಹೋಗಿದ್ದು, ಫಿರ್ಯಾದಿಯು ಅವರ ಸ್ಕಾರ್ಪಿಯೋ ನಂ. ಕೆಎ-38/ಎನ್-02 ನೇದನ್ನು ತೆಗೆದುಕೊಂಡು ಫಿರ್ಯಾದಿಯ ಹತ್ತಿರ ಇಟ್ಟುಕೊಂಡು ಸದರಿ ಕಾರನ್ನು ತೆಗೆದುಕೊಂಡು ಔರಾದ ಪಟ್ಟಣದ ಸಹಾರ ಹೋಟಲದಲ್ಲಿ ಊಟ ಮಾಡಲು ಅಂತ ಫಿರ್ಯಾದಿ ಮತ್ತು ರಾಮ ಕೋಳಿ ಇಬ್ಬರು ಹೊಗಿದ್ದು, ಇಬ್ಬರು ಊಟ ಮಾಡಿ ಮರಳಿ ಬರುವಾಗ ಎಪಿಎಂಸಿ ಕ್ರಾಸದಿಂದ ಸ್ವಲ್ಪ ದೂರದಲ್ಲಿ ನವತೇಚನ ಸ್ಕೋಲ ಹತ್ತಿರ ಇರುವ ಮುಜೀಬ ಪಾನ ಡಬ್ಬಿ ಹತ್ತಿರ ಪಾನ ತೆಗೆದುಕೊಂಡು ಮರಳಿ ಕಾರ ಕಡೆಗೆ ಹೋಗುವಾಗ ಹಿಂದಿನಿಂದ ಬಂದ ಒಂದು ಬಿಳಿ ಬಣ್ಣದ ಬೂಲೋರೆ ಜೀಪನಿಂದ ಆರೋಪಿ ನಂ. 1) ಅಪ್ಜಲ ಪಠಾಣ ಇವನು ಕೇಳಗೆ ಇಳಿದು ಫಿರ್ಯಾದಿಗೆ ಅಕ್ರಮವಾಗಿ ತಡೆದು ನೀನು ಮಿಸಲಾತಿ ಬದಲಾಯಿಸಿಕೊಂಡು ಬಂದಿದ್ದಿ ನಿಮ್ಮ ಹೊಲೆ-ಮಾದುರದು ಹೆಚ್ಚಾಗಿದೇ ಎಂದು ಬೈದು ತನ್ನ ಕೈಯಿಂದ ಮೂಗಿನ ಮೇಲೆ ಹೊಡೆದು ರಕ್ತ ಗಾಯಪಡಿಸಿ, ನಂತರ ಕಲ್ಲಿನಿಂದ ಮೈಮೇಲೆ ಮತ್ತು ತಲೆಗೆ ಹೋಡೆದು ರಕ್ತಗಾಯ ಮಾಡಿರುತ್ತಾನೆ, ಅಷ್ಟರಲ್ಲಿ ಆರೋಪಿ ನಂ. 2) ಶಿವಾಜಿ ಬೂಗಾರ ಇವನು ಕಾರಿನಿಂದ ಇಳಿದು ಅವನು ಸಹ  ಕೈಯಿಂದ ಮುಖಕ್ಕೆ ಹಾಗು ಮೈಮೇಲೆ ಹೊಡೆಯುವಾಗ ಅಪ್ಜಲ ಪಠಾಣ ಇವನು ಶಿವಾಜಿ ಇವನಿಗೆ ಹೋಗು ತಲಾವಾರ ತೆಗೆದುಕೊಂಡು ಇವನಿಗೆ ಇಂದು ಬಿಡಬಾರದು ಎಂದು ಹೇಳಿದಾಗ ಫಿರ್ಯಾದಿಯು ಇನ್ನು ಹೆಚ್ಚು ಹೊಡೆಯಬಹುದೆಂದು ಹೆದರಿ ರಾಮ ಕೋಳಿ ಇವನಿಗೆ ಕಾರ ಚಾಲು ಮಾಡು ಎಂದು ಹೇಳಿ ಫಿರ್ಯಾದಿಯು ಓಡಿ ಬಂದು ತಮ್ಮ ಕಾರಿನಲ್ಲಿ ಕುಳಿತು ಓಡಿ ಬಂದಿದ್ದು, ಫಿರ್ಯಾದಿಗೆ ಹೊಡೆಯಲು ಇದರ ಹಿಂದೆ ಆರೋಪಿ ನಂ. 3 ರಮೇಶ ದೇವಕತ್ತೆ ಇವರ ಕೈವಾಡ ಇದೇ ಎಂದು ಹೇಳಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥ÉÆð¸À oÁuÉ UÀÄ£Éß £ÀA. 170/2016, PÀ®A 3(1) (10) J¸ï.¹/J¸ï.n PÁAiÉÄÝ ªÀÄvÀÄÛ PÀ®A 341, 324, 355, 504, 506 eÉÆvÉ 34 L¦¹ :-
ದಿನಾಂಕ 13-09-2016 ರಂದು ಫಿರ್ಯಾದಿ ಸಂಜುಕುಮಾರ ತಂದೆ ಶಿವಲಿಂಗ ಸಾ: ಔರಾದ(ಬಿ) ರವರು ಔರಾದನ ಕನ್ನಡಾಂಬೆ ವೃತ್ತದಿಂದ ಬಸ್ಸ ನಿಲ್ದಾಣಕ್ಕೆ ಹೊರಡುವಾಗ ಆರೋಪಿತರಾದ 1) ಇಮಾನವೆಲ್ (ಬಂಟಿ) ದರಬಾರೆ, 2) ಸುನೀಲಕುಮಾರ ದೇಶಮುಖ, 3) ವಿಠಲ್ ಘಾಟೆ ಹಾಗೂ 4) ಶಿವಾಜಿ ರಾಮಸಿಂಗ ಚವ್ಹಾಣ ಎಲ್ಲರೂ ಸಾ: ಔರಾದ(ಬಿ) ಇವರೆಲ್ಲರೂ ಫಿರ್ಯಾದಿಯ ಬುಲೇರೋ ವಾಹನಕ್ಕೆ ಅಡ್ಡಗಟ್ಟಿ ಸದರಿ ಬಂಟಿ ಇತನು ಅಫ್ಜಲ್ ರವರಿಗೆ ಜಗಳ ಮಾಡುತ್ತಿರುವಾಗ ಫಿರ್ಯಾದಿಯು ಜಗಳವಾಡಬೇಡಿ ಅಂತ ಹೇಳುತ್ತಿದ್ದಾಗ  ಸುನೀಲಕುಮಾರ ಹಾಗೂ ವಿಠಲ್ ಘಾಟೆ ಇವರಿಬ್ಬರು ಎಲೆ ವಡ್ಡ ನೀನು ಸಹ ಜಗಳ ಮಾಡಬೇಕಾದರೆ ಬಾ ನಿನ್ನನ್ನು ಸಹ ಮುಗಿಸುತ್ತೇವೆ ಅಂತ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಸದರಿ ಅಫ್ಜಲ್ ರವರು ಬುದ್ದಿ ಮಾತು ಹೇಳಲು ಹೋದರೆ ಅವರಿಗೆ ಕಲ್ಲಿನಿಂದ ಹೊಡೆದು ಹಾಗು ಚಪ್ಪಲಿಯಿಂದ ಹೊಡೆದು ಬಾ ನಿನಗೂ ಪಟ್ಟ ಬೇಕಾಗಿದರು ಬಾ ಅಂತ ಹೇಳಿದಾಗ ಫಿರ್ಯಾದಿಯು ಸಹ ಅವರ ಹತ್ತಿರ ತೇರಳಿದಾಗ ಸದರಿ ಬಂಟಿ ಹಾಗೂ ಅವರ ಸಂಗಡಿಗರು ಫಿರ್ಯಾದಿಗೂ ಸಹ ಹೊಡೆಯಲಿಕ್ಕೆ ಬಂದಾಗ  ಫಿರ್ಯಾದಿಯು ಅಲ್ಲಿಂದ ಬಚಾವ ಆಗಲಿಕ್ಕೆ ಓಡಿ ಹೋಗಿದ್ದು ಹಾಗೂ ಫಿರ್ಯಾದಿಯ ಸಂಗಡಿಗ ಶಿವಾಜಿ ಬೂಗಾರ ರವರು ಸಹ ಓಡಿ ಹೋಗಿ ಬಚಾವ ಆಗಿರುತ್ತಾರೆ, ಒಂದು ವೇಳೆ ಫಿರ್ಯಾದಿಯು ಅಲ್ಲಿ ಅವರ ಜೊತೆ ಜಗಳಕ್ಕೆ ಇಳಿದರೆ ಅವರು ಕೊಲೆ ಮಾಡುತ್ತಿದ್ದರು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: