ಅಪಘಾತ ಪ್ರಕರಣಗಳು :
ಕಮಾಲಾಪೂರ ಠಾಣೆ :ದಿನಾಂಕ 02-09-2016 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ನನ್ನ ಗಂಡ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ನಮ್ಮ
ತಾಂಡಾದ ಶಂಕರ ತಂದೆ ಧನಸಿಂಗ ಜಾಧವ ಇತನು ಮನೆಯ ಹತ್ತಿರ ಒಂದು ಕೆಂಪು ಬಣ್ಣದ ಮೋಟಾರ ಸೈಕಲನ್ನು
ತೆಗೆದುಕೊಂಡು ಬಂದು ನನ್ನ ಗಂಡ ಸುಭಾಷನಿಗೆ ಕಮಲಾಪೂರ ಹೋಗಿ ಕೆಲವು ಸಾಮಾನುಗಳನ್ನು ಖರೀದಿ
ಮಾಡಿಕೊಂಡು ಬರೋಣ ಎಂದು ಹೇಳಿ ಮನೆಯಿಂದ ನನ್ನ ಗಂಡನಿಗೆ ತಾನು ತಂದ ಮೋ.ಸೈಕಲದ ಹಿಂದೆ
ಕೂಡಿಸಿಕೊಂಡು ತಾಂಡಾದಿಂದ ಕಮಲಾಪೂರ ಕಡೆಗೆ ಹೋದರು ರಾತ್ರಿ 8 ಗಂಟೆ
ಸುಮಾರಿಗೆ ನನ್ನ ಮೈದುನ ಎಮನಾಥ ತಂದೆ ಗನ್ನು ಚವ್ಹಾಣ ಇತನು ಮನೆಗೆ ಬಂದು ತಿಳಿಸಿದೆನೆಂದರೆ ಈಗ
ತಾನೆ ಕಲ್ಮೂಡ ತಾಂಡಾದ ಸೋನಾಬಾಯಿ ಗಂಡ ಬಳಿರಾಮ ರಾಠೋಡ ಇವಳು ಪೊ:ನ ಮಾಡಿ ತಿಳಿಸಿದೆಂದರೆ ಕಲ್ಮೂಡ
ಮತ್ತು ಅಂತಪನಾಳ ಇಳಿಜಾರಿನ ಹತ್ತಿರ ಸುಭಾಷ ಮತ್ತು ಶಂಕರ ಜಾಧವ ಇಬ್ಬರಿಬ್ಬರು ಮೋ ಸೈಕಲದ ಮೇಲೆ
ಬಿದ್ದಿದ್ದರಿಂದ ಸುಭಾಷನಿಗೆ ಬಾಯಿಗೆ ಹಾಗೂ ಇತರ ಕಡೆಗೆ ಮತ್ತು ತೆಲೆಗೆ ರಕ್ತಗಾಯ , ಗುಪ್ತಗಾಯವಾಗಿ ಅಲ್ಲೆ ಬಿದ್ದಿರುವ ಬಗ್ಗೆ ಜನರು ಮಾತನಾಡುತ್ತಿರುತ್ತಾರೆ
ಅಂತ ತಿಳಿಸಿದ್ದು ಕೂಡಲೆ ನಾನು ತಾಂಡಾ ಚೇತನ @ ಚಿತಂಬರಾಯ ತಂದೆ ಪೋನ್ನು ರಾಠೋಡ
ಹಾಗೂ ಜೈರಾಮ ತಂದೆ ಮನ್ನು ರಾಠೋಡ ಎಲ್ಲರು ಕೂಡಿಕೊಂಡು ಘಟನೆ ಸ್ಥಳಕ್ಕೆ ರಾತ್ರಿ ಹೋಗಿ ನೋಡಲಾಗಿ
ಅಲ್ಲಿ ಬರಿ ಬಜಾಜ ಪ್ಲಾಟಿನಾ ಕೆಂಪು ಬಣ್ಣದ ಮೋಸೈಕಲ್ ನಂ ಎಮ್.ಹೆಚ್-02-ಬಿಕೆ-7066 ನೇದ್ದು ಬಿದಿದ್ದು, ನನ್ನ ಗಂಡ ಮತ್ತು ಶಂಕರನಿಗೆ 108 ಅಂಬುಲೆನ್ಸದಲ್ಲಿ ಕಲಬುರಗಿ
ಆಸ್ಪತ್ರೆ ಕಡೆಗೆ ತೆಗೆದುಕೊಂಡು ಹೋಗಿರುವ ವಿಷಯ ಗೋತ್ತಾಗಿ ನಾವು ನೇರವಾಗಿ ನನ್ನ ಗಂಡ ಸುಭಾಷ
ತಂದೆ ಗನ್ನು ಚವ್ಹಾಣ ಇವರ ಮುಖಕ್ಕೆ ಹಾಗೂ ತೆಲೆಗೆ ಮತ್ತು ಇತರ ಕಡೆಗಳಲ್ಲಿ ಗುಪ್ತಗಾಯ, ರಕ್ತಗಾಯವಾಗಿದ್ದು, ಮಾತನಾಡಿದರೆ ಮಾತನಾಡಲಿಲ್ಲ ಗಂಡನು
ಮೃತ ಪಟ್ಟಿದನು, ನಂತರ ಶಂಕರ ಜಾಧವ ಹತ್ತೀರ ಹೋಗಿ ನೋಡಿದ್ದು, ಅವನ ಎಡಗಲ್ಲಕ್ಕೆ ತರಚಿದ ಗಾಯವಾಗಿದ್ದು, ಬಲ ಕಿವಿ ಹತ್ತೀರ ತರಚಿದ ಗಾಯವಾಗಿ ರಕ್ತಬಂದ ಹಾಗೆ ಕಾಣುತಿದೆ ಆತನಿಗೆ
ನಾವೆಲ್ಲರೂ ವಿಚಾರಿಸಲಾಗಿ ಸದರಿಯವನು ತಿಳಿಸಿದೆನೆಂದರೆ ತಾನು ಮತ್ತು ಸುಭಾಷ ಇಬ್ಬರು ಕೂಡಿ
ತಾಂಡಾದಿಂದ ಮೋ.ಸೈಕಲ್ ನಂ ಎಮ್.ಹೆಚ್-02-ಬಿಕೆ-7066 ನೇದ್ದರ ಮೇಲೆ ಕಮಲಾಪೂರಕ್ಕೆ ಬಂದು ಕೆಲವು ಸಾಮುನುಗಳನ್ನು ಖರೀದಿ ಮಾಡಿ
ಮರಳಿ ತಾಂಡಕ್ಕೆ ಹೋಗುವಾಗ ಮೋ.ಸೈಕಲನ್ನು ನಾನೆ ನಡೆಸಿಕೊಂಡು ಹೋಗುವಾಗ ರಾತ್ರಿ 7 ಗಂಟೆ ಸುಮಾರಿಗೆ ಅಂತಪನಾಳ-ಕಲ್ಮೂಡ ಮಧ್ಯದಲ್ಲಿ ಇರುವ ಇಳಿಜಾರಿನಲ್ಲಿ
ವೇಗವಾಗಿ ಹೋಗುವಾಗ ಒಮ್ಮಲೆ ಬ್ರೇಕ ಹಾಕಿದಕ್ಕೆ ಮೋ.ಸೈಕಲ್ ಪಲ್ಟಿಯಾಗಿ ಬಿದಿದ್ದರಿಂದ
ನಮ್ಮಬ್ಬರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ, ಅಂತಾ
ತಿಳಿಸಿರುತ್ತಾನೆ ಅಂತಾ ಶ್ರೀಮತಿ ಶಾರದಾಬಾಯಿ @ ಸಾಂಬಾಯಿಗೆ ಗಂಡ ಸುಭಾಷ ಚವ್ಹಾಣ ಸಾ; ಅಣಕಲ ಬುಗಡಿ ತಾಂಡಾ ತಾ; ಚಿತ್ತಾಪೂರ ಜಿ ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ
ಸೈಯದ ದಸ್ತಗೀರ ತಂಧೆ ಸೈಯದ ಅಬ್ದುಲ ಹಮೀದ್ ಸಾ:ಗುಬ್ಬಿಕಾಲೂನಿ ಕಲಬುರಗಿ ತಾ:ಜಿ:ಕಲಬುರಗಿ ರವರು ದಿನಾಂಕ:02.09.2016 ರಂದು ರಾತ್ರಿ ವೇಳೆಯಲ್ಲಿ ನನ್ನ ತಮ್ಮನಾದ ಸೈಯದ
ಖ್ವಾಜಾ ಸೈಯಿದ್ ಇವರು ಬಸವಕಲ್ಯಾಣ ತಾಲೂಕಿನ ರಾಜೋಳ ಗ್ರಾಮದ ತನ್ನ ತೋಟವನ್ನು ನೋಡಿಕೊಂಡು ಬರಲು
ನನಗೆ ತಮ್ಮ ಸಂಗಡ ತನ್ನ ಸ್ವೀಫ್ಟ ಕಾರ
ನಂಬರ.ಕೆಎ.53 ಸಿ.0786 ನೇದ್ದರಲ್ಲಿ ಕರೆದುಕೊಂಡು ಹೋಗಿದ್ದು. ರಾತ್ರಿ ನಾವು ಅಲ್ಲೆ
ಉಳಿದುಕೊಂಡಿದ್ದು ದಿನಾಂಕ:03.09.2016 ರಂದು ಮುಂಜಾನೆ 08.00 ಗಂಟೆಯ ಸೂಮಾರಿಗೆ ನಾವು ವಾಪಸ್ಸ ಕಲಬುರಗಿಗೆ ಬರುವ
ಕುರಿತು ನಾನು ಮೇಲ್ಕಂಡ ಟಾಟಾ ಸ್ವಿಫ್ಟ ಕಾರ ನಂಬರ ಕೆಎ.53 ಸಿ.0786 ನೇದ್ದರಲ್ಲಿ ಹಿಂದಿನ ಶೀಟನಲ್ಲಿ ಕುಳಿತು
ಹೋರಟಿದ್ದು. ನನ್ನ ತಮ್ಮ ಸೈಯದ ಖ್ವಾಜಾ ಸೈಯಿದ್ ಇವರು ಕಾರನ್ನು ನಿಧಾನವಾಗಿ ನಡೆಸಿಕೊಂಡು
ಹೋರಟಿದ್ದು. ನಾನು ಕುಳಿತು ಹೋರಟ ಕಾರ ಹುಮನಾಬಾದ ಕಲಬುರಗಿ ಹೆದ್ದಾರಿಯ ಕಿಣ್ಣಿಸಡಕ ಗ್ರಾಮ ದಾಟಿ
ಮುಂಜಾನೆ 09.30 ಗಂಟೆ ಸೂಮಾರಿಗೆ ಬರುವಾಗ ಮಹಿಬೂಬಸುಬಾನಿ ದರ್ಗಾ
ಇನ್ನೂ 100 ಮೀಟರ ದೂರವಿದ್ದಾಗ ಅದೇ ವೇಳೆಗೆ ಕಲಬುರಗಿ
ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ
ಅಡ್ಡಾತಿಡ್ಡಿಯಾಗಿ ನಡೆಸುತ್ತ ಬಂದು ನಾನು ಕುಳಿತು ಬರುತಿದ್ದ ಕಾರಗೆ ಎದುರಿನಿಂದ ಜೋರಾಗಿ
ಡಿಕ್ಕಿ ಹೋಡೆದು ಅಪಘಾತ ಪಡಿಸಿದನು. ನಂತರ ನಾನು ಕಾರನಿಂದ ಕೆಳಗೆ ಇಳಿದು ನೋಡಲು ನನಗೆ ದವಾಖಾನೆಗೆ
ತೋರಿಸುವಂತ ಯಾವುದೇ ಗಾಯಗಳು ಆಗಿರಲಿಲ್ಲ ಕಾರ ನಡೆಸುತ್ತಿದ್ದ ನನ್ನ ತಮ್ಮನಿಗೆ ನೋಡಲು ಅವನ
ಬಲಗಡೆ ಮೇಲಕಿಗೆ ಭಾರಿ ರಕ್ತಗಾಯವಾಗಿದ್ದು. ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು. ಎಡಗೈ
ಮುಂಗೈಗೆ ಭಾರಿ ಗುಪ್ತಗಾಯವಾಗಿದ್ದು. ಸ್ವಂಟಕ್ಕೆ ಗುಪ್ತಗಾಯವಾಗಿದ್ದು. ಎಡಕಾಲ ಮೋಣಕಾಲ ಕೆಳಗೆ
ರಕ್ತಗಾಯ ಹಾಗೂ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು. ಅಲ್ಲದೆ ನಮ್ಮ ಕಾರ ಕೂಡಾ
ಜಖಂಗೊಂಡಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಲಾರಿ ನೋಡಲು ಅದರ ನಂಬರ ಯು.ಪಿ-32 ಸಿ.ಎನ್-6344 ನೇದ್ದುಇದ್ದು ಅಪಘಾತ ನಂತರ ಅದರ ಚಾಲಕನು ಲಾರಿಯನ್ನು ರೋಡಿನ ಮೇಲೆ ಬಿಟ್ಟು
ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಿರುಕಳದಿಂದ ಹತ್ಯೆ ಮಾಡಿಕೊಂಡ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀಮತಿ ಅಂಜುಮ್ ಗಂಡ ಮಹಮ್ಮದ ಜಾವೀದ್ ಸಾ : ಮಿಜಬಾ ನಗರ ಕಲಬುರಗಿ ರವರ ಮದುವೆಯು ಸುಮಾರು 5
ವರ್ಷಗಳ ಹಿಂದೆ ಮಹಮ್ಮದ ಜಾವೀದ ಇವನೊಂದಿಗೆ ನಮ್ಮ ಸಂಪ್ರದಾಯದಂತೆ ನಮ್ಮ ತಂದೆ ತಾಯಿವರು ಹಾಗು ಸಂಸಾರಕ್ಕೆ ಬೇಕಾಗುವ ಸಾಮಾನುಗಳು ಕೊಟ್ಟು ಮದುವೆ
ಮಾಡಿಕೊಟ್ಟಿದ್ದು .ನಾನು
ಮತ್ತು ನನ್ನ ಗಂಡ ಮಿಜಬಾ ನಗರದ ಮಮತಾಜ ಎಂಬುವವರ ಮನೆಯಲ್ಲಿ ಬಾಡಿಗೆಯಿಂದ ಇದ್ದೇವು. ನನ್ನ ಗಂಡ ಮಹಮ್ಮದ ಜಾವೀದ್ ಇತನು ಮದುವೆ ಆಗಿ ಕೆಲವು ತಿಂಗಳವರೆಗೆ
ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡ ಮಹಮ್ಮದ ಜಾವೀದ ಇತನು ನನಗೆ ಸರಾಯಿ ಕುಡಿಯಲು ಹಣ ಕೊಡು
ಇಲ್ಲದಿದ್ದರೇ ನೀನು ಹಣ ಕಟ್ಟಿದ ಮಹಿಳಾ ಸಂಘದಿಂದ ಸಾಲದ ರೂಪದಲ್ಲಿ ಹಣ ತಂದು ಕೊಡು ಇಲ್ಲದಿದ್ದರೇ
ನನ್ನ ಮನೆ ಬಿಟ್ಟು ಹೋಗು ಅಂತಾ ದಿನಾಲು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು
ಪ್ರಾರಂಬಿಸಿದನು. ಈ ವಿಷಯದ
ಬಗ್ಗೆ ನಮ್ಮ ಓಣಿಯಲ್ಲಿ ಇರುವ ನನ್ನ ತಾಯಿ ಜರೀನಾ ಬೇಗಂ ಇವಳಿಗೆ ತಿಳಿಸಿದಾಗ ನನ್ನ ದೊಡ್ಡಪ್ಪ
ಸೈಯ್ಯದ ಸಾಬ ಇವರು ನಮ್ಮ ಮನೆಗೆ ಬಂದು ಪಂಚಾಯತಿ ಮಾಡಿರು ಕೂಡಾ ನನ್ನ ಗಂಡ ದಿನಾಲು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ
ಕೊಡಲು ಪ್ರಾರಂಬಿಸಿದನು ದಿನಾಂಕ:-20/08/2016 ರಂದು ಬೆಳಗ್ಗೆ ನಾನು ಪ್ರತಿ ದಿವಸದಂತೆ ಎದ್ದು ಮನೆಯಲ್ಲಿ
ಕಸಾಗೂಡಿಸುತ್ತಿದ್ದಾಗ ಆಗ ನನ್ನ ಗಂಡ ಮಹಮ್ಮದ ಜಾವೀದ ಇತನು ನನಗೆ ಎದ್ದು ನನಗೆ ಏ ರಂಡಿ ನನಗೆ
ಸರಾಯಿ ಕುಡಿಯಲು ಹಣ ಕೊಡು ಅಂತಾ ಕೇಳಿದಾಗ ಆಗ ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದೇನು ಆಗ ನೀನು
ಕಟ್ಟುತ್ತಿದ್ದ ಮಹಿಳಾ ಸಂಘದಿಂದ ಸಾಲ ತೆಗೆದುಕೊಂಡು ಬಾ ಅಂತಾ ಅಂದಾಗ ಆಗ ಈ ಮೊದಲು ಸಾಲ
ತೆಗೆದುಕೊಂಡು ಹಣ ಇನ್ನು ಕಟ್ಟಿರುವುದಿಲ್ಲಾ ಅದೇ ಸಾಲ ಇನ್ನು ಬಾಕಿ ಇದೆ ಸಂಘದವರು ಸಾಲ
ಕೊಡುವುದಿಲ್ಲಾ ಅಂತಾ ಅಂದಾಗ ಏ ಬೋಸಡಿ ಹಣ ತರದೇ ಇದ್ದರೇ ಎಲ್ಲಿಯಾದರೂ ಹೋಗಿ ಸಾಯಿ ನನ್ನ
ಮನೆಯಲ್ಲಿ ಇರಬೇಡಾ ಮನೆಯಿಂದ ಹೊರಗೆ ನಡೆ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮೈಮೇಲೆ ಒಂದೆ
ಸವನೇ ಹೊಡೆಯುತ್ತಿದ್ದಾಗ ಆಗ ನಮ್ಮ ಮನೆಯ ಮಾಲಕಿ ಮಮತಾಜ, ಹಾಗು ಪರಿಚಯದ ಮೆಹಿಬೂಬಸಾಬ ಡಾಂಗೇ ಇವರು ಬಂದು ನನಗೆ
ಹೊಡೆವುದನ್ನು ಬೀಡಿಸಿ ನನ್ನ ಗಂಡನಿಗೆ ಹೊರಗೆ
ಕಳಿಸಿದರು ನಂತರ ನಾನು ನನ್ನ ಗಂಡ ದಿನಾಲು ಬೆಂಕಿ
ಹತ್ತಿದ್ದರ ತ್ರಾಸ ಕೊಡುತ್ತಿದ್ದ ತ್ರಾಸ ತಾಳಲಾರದೇ ಮನೆಯಲ್ಲಿಟ್ಟಿದ್ದ ಸೀಮೆ ಎಣ್ಣೆ ಮೇಮೈಲೆ
ಹಾಕಿಕೊಂಡು ಮೈಗೆ ಬೆಂಕಿ ತಾಳಲಾರದೆ ಒಂದೆ ಸವನೇ ಚೀರಾಡುತ್ತಿದ್ದಾಗ ಆಗ ಮನೆಯ ಮಾಲಕಿ
ಮಮತಾಜ ಹಾಗು ಮೆಹಿಬೂಬಸಾಬ ಡಾಂಗೆ ಇವರು ಬಂದು ನನ್ನ ಮೈಮೇಲೆ ನೀರು ಹಾಕಿ ಮೈಗೆ ಹತ್ತಿದ
ಬೆಂಕಿಯನ್ನು ಆರಿಸಿದ್ದು ನನ್ನ ಮೈಯ ಎಲ್ಲಾ ಕಡೆ
ಸುಟ್ಟಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ದಿನಾಂಕ: 03/09/2016 ರಂದು ಬೆಳಿಗ್ಗೆ 7-00 ಗಂಟೆಗೆ ಮೃತಳ
ತಂದೆಯಾದ ಹುಸೇನ್‌ಬಾಷಾ ತಂದೆ ಹೈದರ್‌ಸಾಬ್ ಹದರೆಸಾಬ್ ಮೊಮಿನ್ ಸಾ: ಮಿಜಬಾ ನಗರ ಕಲಬುರಗಿ ಮೃತ ಅಂಜುಮ ಗಂಡ ಮಹ್ದದ್ ಜಾವೇದ್ ಸಾ: ಮಿಜಬಾ ನಗರ
ಇವಳು ದಿನಾಂಕ: 20/08/2016 ರಿಂದ ದಿನಾಂಕ: 03/09/2016 ರ ವರೆಗೆ ಮೈಸುಟ್ಟ ಗಾಯಗಳ ಉಪಚಾರ
ಪಡೆಯುತ್ತಾ ಉಪಚಾರದಲ್ಲಿ ಗುಣಮುಖವಾಗದೇ ದಿನಾಂಕ: 03/09/2016 ರಂದು ಬೆಳಿಗ್ಗೆ 1-00 ಎಎಂ ಕ್ಕೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment