ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ
25-05-2016 ರಿಂದ ದಿನಾಂಕ 09-09-2016 ರ ಮಧ್ಯದಲ್ಲಿ ಭಾಗವಾನ ತಾಂಡಾದ ಶ್ರೀ ನೀಲಕಂಠ ತಂದೆ
ಜೇಮಲಾ ಇವರಿಗೆ ಸರ್ಕಾರಿ ಯೊಜನೆಯಡಿಯಲ್ಲಿ ಮಂಜೂರಾದ ಗಂಗಾ ಕಲ್ಯಾಣದ ಫಲಾನುಬವಿಗಳಾದ ಇವರಿಗೆ ಇವರ
ಹೊಲ ಸರ್ವೆ ನಂ 48 ರಲ್ಲಿ ಕುಡಿಸಿದ ಜೆಸ್ಕಾಂ ಕಂಪನಿಯ 25 ಕೆವಿಎ ಪರಿವರ್ತಕ
49500/-ಕಿಮ್ಮತ್ತಿನಿದ್ದು ಕಳ್ಳತನವಾಗಿದ್ದು
ಇರುತ್ತದೆ. ಅಂತಾ ಶ್ರೀಮತಿ ಅವಿತಾ ಆರ್.ಕೆ ಸಹಾಯಕ ಅಭಿಯಂತರರು ಗ್ರಾಮೀಣ ಕಲಬುರಗಿ ಇವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ
ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಲಕ್ಷ್ಮಣ ತಂದೆ ಬರಮಯ್ಯ ದಂಡಗುಲೆ ಸಾ: ಅಂಬಲಗಾ, ತಾ: ಆಳಂದ, ಇವರು ಪುನಾ ನಗರದಲ್ಲಿ ಹೆಂಡರು ಮಕ್ಕಳೊಂದಿಗೆ ಜೆಸಿಬಿ ಚಾಲಕನಾಗಿ
ಕೆಲಸಮಾಡಿಕೊಂಡು ಉಪಜೀವಿಸುತ್ತಿದ್ದೇನೆ ಮಳೆಗಾಲ ಪ್ರಾರಂಭವಾದ ಕಾರಣ ಕೆಲಸ ಇಲ್ಲದೆ ಇರುವದರಿಂದ
ಸುಮಾರು 1 ತಿಂಗಳ ಹಿಂದೆ ಹೆಂಡತಿ
ಮತ್ತು ಮಕ್ಕಳನ್ನು ಕರೆದುಕೊಂಡು ಅಂಬಲಗಾ ಗ್ರಾಮಕ್ಕೆ ಬಂದಿರುತ್ತೇನೆ ಹೀಗಿದ್ದು ಹೊದವರ್ಷ ಮೊಹರಂ
ಹಬ್ಬದ ಮೆರವಣಿಗೆಯಲ್ಲಿ ನನ್ನ ಚಿಕ್ಕಪ್ಪನ ಮಗನಾದ ಯಲ್ಲಪ್ಪ ತಂದೆ ತಿಮ್ಮಯ್ಯ ದಂಡಗುಲೆ ಇವನು
ನಮ್ಮೂರಿನ ಕುರುಬ ಜಾತಿಯ ಸುನೀಲ ತಂದೆ ಅಶೋಕ ಬಕ್ಕನ್ ಇವನ ಕಾಲನ್ನು ತುಳಿದಿದ್ದು ಅದಕ್ಕೆ
ಸುನೀಲ್ ಈತನು ತನ್ನ ಮಾವನಾದ ಬಸವರಾಜ ತಂದೆ ಸೈಬಣ್ಣ ಸರಡಗಿ ಇಬ್ಬರು ಕೂಡಿಕೊಂಡು ಯಲ್ಲಪ್ಪನಿಗೆ
ಹೊಡೆದಿದ್ದು ಆ ಜಗಳವನ್ನು ನಮ್ಮೂರಿನ ಹಿರಿಯರು ಮತ್ತು ನಮ್ಮ ಜಾತಿಯವರು ಅವರ ಜಾತಿಯವರು ಕೂಡಿ
ರಾಜಿ ಪಂಚಾಯತಿ ಮಾಡಿಸಿದ್ದು ನಾವು ಅವರ ಮೇಲೆ
ಕೇಸು ಮಾಡಿರುವುದಿಲ್ಲ ಆವಾಗಿನಿಂದ ಸುನೀಲ ಬಕ್ಕನ ಬಸವರಾಜ ಸರಡಗಿ ಮತ್ತು ಅವರ ಸಂಬಂಧಿಕರಾದ ಅಶೋಕ
ತಂದೆ ಶ್ರೀಪತಿ ನಾಗೂರ ಆಕಾಶ ತಂದೆ ಅಶೋಕ ಬಕ್ಕನ, ಜಗನ್ನಾಥ ತಂದೆ ಶ್ರೀಪತಿ @ ಶ್ರೀಮಂತ ನಾಗೂರ ಇವರೆಲ್ಲರು ನಾನು ಊರಿಗೆ ಬಂದಾಗ ನನ್ನೊಂದಿಗೆ
ಮತ್ತು ನನ್ನ ಅಣ್ಣತಮ್ಮೊಂದಿರೊಂದಿಗೆ ದ್ವೇಷ ಸಾದಿಸುತ್ತಾ ಆಗಾಗ ನನ್ನ ಜೋತೆ ವಿನಾಕಾರಣ
ಜಗಳತೆಗೆಯುತ್ತಾ ಬಂದಿದ್ದು ದಿನಾಂಕ 12/09/2016 ರಂದು ಬೆಳಿಗ್ಗೆ ಅಂಬಲಗಾದ ಬಸ್ ನಿಲ್ದಾಣದ ಹತ್ತಿರ ನಾನು ಮತ್ತು
ನಮ್ಮ ಚಿಕ್ಕಪ್ಪನ ಮಗನಾದ ತಿಮ್ಮಯ್ಯ ತಂದೆ ಬರಮಯ್ಯ ದಂಡಗುತಿ(ಇಂಗಳೇಶ್ವರ) ಕೂಡಿಕೊಂಡು
ನಿಂತಿರುವಾಗ ಸದರಿ ಬಸವರಾಜ ತಂದೆ ಸೈಬಣ್ಣ ಸರಡಗಿ, ಸುನೀಲ ತಂದೆ ಅಶೋಕ ಬಕ್ಕನ, ಆಕಾಶ ತಂದೆ ಅಶೋಕ ಬಕ್ಕನ, ಜಗನ್ನಾಥ ತಂದೆ ಶ್ರೀಪತಿ @ ಶ್ರೀಮಂತ ಮತ್ತು ಅಶೋಕ ತಂದೆ ಶ್ರೀಪತಿ ನಾಗೂರ ಎಲ್ಲರು ಗುಂಪುಗುಡಿ
ಕೈಯಲ್ಲಿ ರಾಡು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ ಏ ವಡ್ಡಜಾತಿ ಸುಳೆ ಮಕ್ಕಳೇ ನಿಮ್ಮದು ಊರಿನಲ್ಲಿ ಬಹಾಳ
ಆಗಿದೆ ಹೋದವರ್ಷ ಮೊಹರಂ ದಲ್ಲಿ ಯಲ್ಲಪ್ಪ ಇವನಿಗೆ ಹೊಡೆದಾಗ ಏನ್ ಸೆಂಟ್ ಕಿತ್ಕೊಂಡಿಲ್ಲಾ ನಿಮ್ಮ
ಹೆಂಡ್ರೀಗ್ ಹಡತೇವಿ ಸುಳೆ ಮಕ್ಕ್ಳಾ ಅಂತ ಅಂದವರೆ ಅದರಲ್ಲಿ ಅಶೋಕ ನಾಗೂರ ಈತನು ತನ್ನ
ಕೈಯಲ್ಲಿದ್ದ ರಾಡಿನಿಂದ ನನ್ನ ತಲೆಗೆ ಹೊಡೆದನು ನನ್ನ ತಲೆಯಿಂದ ರಕ್ತ ಸುರಿಯತೊಡಗಿತು ತಿಮ್ಮಯ್ಯ
ಈತನಿಗೆ ಬಸವರಾಜ ಸರಡಗಿ ಈತನು ಕಲ್ಲಿನಿಂದ ಕುತ್ತಿಗೆ ಹಿಂಬಾಗಕ್ಕೆ ಹೊಡೆದನು ಅವನು ಬೇಹೂಶ್ ಆಗಿ
ಬಿದ್ದನು ಉಳಿದವರಾದ ಸುನೀಲ್ ಬಕ್ಕನ್, ಆಕಾಶ ಬಕ್ಕನ್, ಜಗನ್ನಾಥ ನಾಗೂರ ಇವರು ಸಹ ನಮ್ಮಿಬ್ಬರಿಗೆ ಈ ವಡ್ಡಸುಳೆ ಮಕ್ಕಳಿಗೆ
ಬಿಡಬ್ಯಾಡ್ರಿ ಅಂತ ಕೈಯಿಂದ ಮೈತುಂಬಾ ಹೊಡೆದರು
ಅವರೆಲ್ಲರು ಕೂಡಿ ನಮ್ಮ ಅರ್ದ ಆಸ್ತಿ ಹೋದರು ಪರವಾಗಿಲ್ಲಾ ಈ ಮಕ್ಕಳಿಗೆ ಬಿಡಬ್ಯಾಡ್ರಿ ಅಂತ
ಅನ್ನುತ್ತಿದ್ದರು ಈ ಜಗಳ ನೋಡಿ ಅಲ್ಲಿಯೆ ಬಸ್ ನಿಲ್ದಾಣದಲ್ಲಿದ್ದ ರಂಗನಾಥ ತಂದೆ ತಿಪ್ಪಣ್ಣ
ಜಾದವ್, ಸಂಜು ತಂದೆ ಬರಮಯ್ಯ
ದಂಡಗುರೆ, ಜಿತೇಂದ್ರ ತಂದೆ ಯಾದಯ್ಯ
ಗುತ್ತೆದಾರ, ನಾಗಪ್ಪ
ಏಳವಂತಗಿ, ಲಾಲು ತಂದೆ ಮಸ್ತಾನ ಸಾಬ
ಮೀರಾ, ನಾಗಪ್ಪ ತಂದೆ ಸ್ವಯಂ
ಪ್ರಕಾಶ ಪಾಟೀಲ್ ಅವರೆಲ್ಲರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 12.09.2016 ರಂದು ಮುಂಜಾನೆ 06.30 ಗಂಟೆಯ ಸುಮಾರಿಗೆ ನನ್ನ
ಮೋಬೈಲ ಫೋನಿಗೆ ಸೇಡಂ ಶೆಟ್ಟಿ ಗ್ರಾಮದ ಭೀಮಾಶಂಕರ ಜಾಕನಳ್ಳಿ ಇತನು ಫೋನ ಮಾಡಿ ಹೇಳಿದ್ದೆನೆಂದರೆ, ಇಂದು ದಿನಾಂಕ 12.09.2016 ರಂದು ಬೆಳಿಗ್ಗೆ ನನ್ನ ಚಹಾ
ಅಂಗಡಿಗೆ ನಿಮ್ಮ ತಮ್ಮನಾದ ನಾಗಪ್ಪ ಇತನು ಚಹಾ ಕುಡಿದು ರೋಡ ಪಕ್ಕದಲ್ಲಿ ಹೋಗುತ್ತಿರುವಾಗ ಒಬ್ಬ
ಕಾರ ಚಾಲಕನು ತನ್ನ ಕಾರನ್ನು ಸೇಡಂ ಕಡೆಯಿಂದ ಅತೀವೇಗ ಮತ್ತು ಅಲಕ್ಷತನಿಂದ ನಡೆಸಿಕೊಂಡು ಬಂದು
ಸೇಡಂ ಕಲಬುರಗಿ ಮೇನ ರೋಡಿನ ಲಾರಿ ಯಾರ್ಡನಲ್ಲಿ ಬೆಳಿಗ್ಗೆ 06.15 ಗಂಟೆ ನಾಗಪ್ಪ ಇತನಿಗೆ ಅಪಘಾತ
ಪಡಿಸಿ ಸ್ವಲ್ಪ ನಿಲ್ಲಿಸಿದಂತೆ ಮಾಡಿ ಕಾರಿನೊಂದಿಗೆ ಓಡಿ ಹೋದನು. ಸದರಿ ನಾಗಪ್ಪ ಇತನು ರೋಡಿನ
ಮೇಲೆ ಬಿದ್ದು ಒದ್ದಾಡುತ್ತಿದ್ದನು. ಅವನಿಗೆ ನಾನು ಹೋಗಿ ನೋಡಲಾಗಿ ತಲೆಗೆ ಬುರುಡೆ ಒಡೆದು ಭಾರಿ ರಕ್ತ
ಗಾಯವಾಗಿ ಮತ್ತು ಕಾಲು ಮುರಿದು ಸ್ಥಳದಲ್ಲಿಯೇ ಬಿದ್ದಿದ್ದನು. ಕಾರ ನಂ ನೋಡಲಾಗಿ ಕೆಎ-51/ಎಂ-8987 ಇತ್ತು. ಅಂತಾ ನನಗೆ ಭೀಮಾಶಂಕರ ಇತನು
ತಿಳಿಸಿದ ಪ್ರಕಾರ ನಾನು ಮತ್ತು ಸಂಗಡ ನನ್ನ ಗಂಡ ನೀಲಕಂಠ ನಮ್ಮ ಸಂಭಂದಿಕರಾದ ಮಲ್ಲಪ್ಪ, ಅನುಸೂಯಾ ಎಲ್ಲರೂ ಕೂಡಿಕೊಂಡು
ಲಾರಿ ಯಾರ್ಡ ಹತ್ತಿರ ಬಂದು ನೋಡಲಾಗಿ ತನ್ನ ತಮ್ಮನಾದ ನಾಗಪ್ಪ ಇತನು ರೋಡಿನ ಮೇಲೆ ಬಿದ್ದು ತಲೆ
ಬುರುಡೆ ಒಡೆದು ಕಾಲುಗಳು ಮುರಿದು ಭಾರಿ ಗಾಯಗಳಾಗಿದ್ದನ್ನು ನೋಡಿ ಕೂಡಲೆ ಆತನನ್ನು ನಾವು
ತಂದಿದ್ದ ಜೀಪಿನಲ್ಲಿ ನಾಗಪ್ಪ ಇತನನ್ನು ಹಾಕಿಕೊಂಡು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ
ತಂದಾಗ ಆಸ್ಪತ್ರೆಯಲ್ಲಿ ಡಾಕ್ಟರರು ನೋಡಿ ನಾಗಪ್ಪನು ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರಾಜಮ್ಮ ಗಂಡ ನೀಲಕಂಠ ಕಟ್ಟಿಮನಿ ಸಾ:ನೀಲಹಳ್ಳಿ, ತಾ:ಸೇಡಂ, ಜಿಲ್ಲಾ:ಕಲಬುರಗಿ. ಇವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment