ಗಾಂಜಾ ಜಪ್ತಿ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ :
ದಿನಾಂಕ 19.09.2016
ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ರವರು ಮಧ್ಯಾಹ್ನ
02:00 ಗಂಟೆಯ ಸುಮಾರಿಗೆ ಅವರಾದ ಸಿಮಾಂತರದ ಹೊಲದಲ್ಲಿ ಹತ್ತಿ ಬೆಳೆ ಇದ್ದ ಹೊಲದಲ್ಲಿ ಯಾವುದೆ ಪರವಾನಿಗೆ ಇಲ್ಲದೆ
ಅಕ್ರಮವಾಗಿ ಗಾಂಜಾದ ಗಿಡಗಳನ್ನು ಬೆಳೆಸಿರುತ್ತಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪೊಲೀಸ್ ಉಪಾಧೀಕ್ಷಕರು
ಗ್ರಾಮೀಣ ಉಪ ವಿಭಾಗ ಕಲಬುರಗಿ ರವರಿಗೆ ದಾಳಿ ಮಾಡಲು ಪರವಾನಿಗೆ ಪಡೆದುಕೊಂಡು ಮಾನ್ಯ
ತಹಶೀಲದಾರ ರವರಿಗೆ ಮಾಹಿತಿ ತಿಳಿಸಿ ಜೇವರಗಿ ಪೊಲೀಸ್ ಠಾಣೆಗೆ ಬರಮಾಡಿಕೊಂಡು ಪಂಚರಾದ
1) ಶ್ರೀ ಕಲ್ಲಪ್ಪಗೌಡ ಮಾಲಿ ಪಾಟೀಲ ಗ್ರಾಮ ಲೇಖ ಪಾಲಕರು ಕೋಳಕೂರ ಮತ್ತು 2) ಶ್ರೀ ನಾಗಣ್ಣ ವಾಲಿಕಾರ್
ಸಾ|| ಅವರಾದ್ ಇವರಿಗೆ ಬರಮಾಡಿಕೊಂಡು ಠಾಣೆಯ ಸಿಬ್ಬಂದಿರವರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಗುರುಬಸಪ್ಪ , ಶ್ರೀ ಮಲ್ಲಿಕಾರ್ಜುನ ಭಾಸಗಿ, ಶ್ರೀ ರಾಜಕುಮಾರ, ಶ್ರೀ ಶಿವರಾಜ ರವರೊಂದಿಗೆ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ
ದಾಳಿ ಮಾಡಿ ಅಂದಾಜು 200 ಗ್ರಾಂದಷ್ಟು ಹಸಿ
ಗಾಂಜಾದ ಎಲೆಗಳು ಅಂ.ಕಿ 1000/- ರೂ ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ
ಬಂದು ಶಾಂತಪ್ಪ ತಂದೆ ಮಲ್ಲೇಶಪ್ಪ ತೆಗ್ಗಳ್ಳಿ ಸಾ|| ಚೆನ್ನೂರ ಈತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ: ದಿನಾಂಕ:20/09/2016 ರಂದು ಮಹಾಗಾಂವ ಕ್ರಾಸನಲ್ಲಿ 2 ಜನರು ಒಂದು ಹೋರಿಯನ್ನು ಹೊಡೆದು ಕೊಂಡು ಬಂದು ಜಾವಿದ್
ಕುರೇಶಿ ಸಾ: ಮಹಾಗಾಂವ ರವರಿಗೆ ಮಾರಾಟ ಮಾಡುವುದಿದೆ ಎಂದು ಹೇಳಿದಾಗ ಈ ಹೋರಿಯು ಯಾರದು ಎಂದು ಕೇಳಿದಾಗ ಅದಕ್ಕೆ ಆ ಇಬ್ಬರು ಅನುಮಾನಸ್ಪದವಾಗಿ
ಉತ್ತರಿಸಿದ್ದರಿಂದ ಸಂಶಯ ಬಂದು ಹೋರಿಗೆ ಸಂಬಂಧಿಸಿದ ದಾಖಲಾತಿ ವಿಚಾರಿಸಿದಾಗ ಅದಕ್ಕೆ ಅವರು ನಮಗೆ
ಖರ್ಚಿಗೆ ಹಣವಿಲ್ಲದ ಸಲುವಾಗಿ ಇಂದು ದಿನಾಂಕ:20/09/2016 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ
ಎದುರುಗಡೆ ಇರುವ ವಿದ್ಯಾ ನಗರದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಅವರಣದಲ್ಲಿದ್ದ ಈ ಗೂಳಿಯನ್ನು
ಕಳ್ಳತನ ಮಾಡಿಕೊಂಡು ಬಂದಿರುತ್ತೇವೆ. ಅಂತಾ ತಿಳಿಸಿದ್ದು ಸರಿದಯವರ ವಿರುದ್ದ ಕ್ರಮ
ಕೈಕೊಳ್ಳಿವಂತೆ ಪೊಲೀಸ್ ಠಾಣೆಗೆ ಹಾಜರುಪಡಿಸಿದ ಮೇರೆಗೆ ಆ ಇಬ್ಬರ ವಿರುದ್ದ ಮಹಾಗಾಂವ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment