ಕಳವು ಪ್ರಕರಣ:
ಸ್ಟೇಷನ್ ಬಜಾರ ಪೊಲೀಸ್ ಠಾಣೆ : ದಿನಾಂಕ 29/09/2016 ರಂದು ಶ್ರೀಮತಿ ಚಂದ್ರಕಲಾ ಗಂಡ ಅನಿಲಕುಮಾರ
ಅಲ್ಲೂರೆ ಸಾ: ಸಿ ಪಿ.ಡಬ್ಲೂಡಿ ಕ್ವಾಟರ್ಸ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಠಾಣೆಗೆ
ಹಾಜರಾಗಿ ದಿನಾಂಕ 28/09/2016 ರಂದು ರಾತ್ರಿ 9 ಪಿ.ಎಂ.ಕ್ಕೆ ತಾವು ಮನೆಯ ಬಾಗಿಲ ಕೀಲಿ
ಹಾಕಿಕೊಂಡು ಕೊಟನೂರದ ತಮ್ಮ ತಂಗಿ ರೇಖಾ ಕನಕಗಿರಿ ರವರ ಮನೆಗೆ ಹೋಗಿ ಇಂದು ದಿನಾಂಕ 29/09/2016 ರಂದು ಬೆಳಿಗ್ಗೆ 11ಗಂಟೆಗೆ ಮರಳಿ ಬಂದು
ನೋಡಲಾಗಿ ಯಾರೂ ಮನೆಯ ಬಾಗಿಲ ಕೊಂಡಿ ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಎರಡು
ಅಲಮಾರಿಗಳನ್ನು ಮುರಿದು 1) 4 ತೊಲೆ ಬಂಗಾರದ
ಎರಡು ಬಳೆಗಳು ಅ.ಕಿ. 1,00,000/- 2) 3 ತೊಲೆ ಬಂಗಾರದ ಚೈನ್ ಅ.ಕಿ. 80,000/- 3) 1 ತೊಲೆ ನೆಕ್ಲೆಸ್ ಅ.ಕಿ. 20,000/- 4) 10 ತೊಲೆ ಬಂಗಾರದ ಎರಡು ಪಾಟಲಿ ನಾಲ್ಕು
ಬಿಲ್ಲವಾರಗಳು ಅ.ಕಿ. 2,50,000/- ಮತ್ತು ನಗದು ಹಣ 60,000/- ಹೀಗೆ ಒಟ್ಟು 5,10,000/- ರೂ ಬೇಲೆ ಬಾಳುವ ಬಂಗಾರದ ಒಡವೆಗಳು ಹಾಗು ನಗದು ಹಣ ಯಾರೋ
ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕೊಡುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಕಮಲಾಪೂರ ಪೊಲೀಸ ಠಾಣೆ: ದಿನಾಂಕ 28-09-2016 ರಂದು ಶ್ರೀ ಮಹಾದೇವ ತಂ ಮಲ್ಲಪ್ಪ ಸಾ: ಮರಗುತ್ತಿ ಇವರು
ಠಾಣೆಗೆ ಹಾಜರಾಗಿ ದಿ: 27-09-2016 ರಂದು ರಾತ್ರಿ 10 ಗಂಟೆ ಸುಮಾರಿ ತಮ್ಮ ಮನೆಗೆ ಅಡುಗೆ ಕೋಣೆ
ಮತ್ತು ಪಕ್ಕದ ಇನ್ನೊಂದು ಕೋಣೆಗೆ ಕೀಲಿ ಹಾಕಿಕೊಂಡು ಅದರ ಪಕ್ಕದಲ್ಲಿರುವ ರೂಮಿನಲ್ಲಿ ತಾನು
ಮತ್ತು ತನ್ನ ಕುಟುಂಬದವರು ಮಲಗಿಕೊಂಡಿದ್ದು ದಿ: 28-09-2016 ರಂದು ಬೆಳಿಗ್ಗೆ 4-00 ಗಂಟೆಗೆ
ಎದ್ದು ನೋಡಲಾಗಿ ತಾವು ಮಲಗಿದ್ದ ರೂಮಿಗೆ ಯಾರೊ ಹೊರಗಡೆಯಿಂದ ಕೊಂಡಿ ಹಾಕಿದ್ದು ನಾನು ಚೀರಾಡಿದಾಗ
ಪಕ್ಕದ ಮನೆಯವರು ಬಂದಿ ಹೊರಗಡೆಯ ಕೊಂಡಿ ತೆಗೆದಾಗ ನೋಡಲಾಗಿ ನಾನು ರಾತ್ತರ ಕೀಲಿ ಹಾಕಿದ್ದ
ಕೋಣೆಗಳ ಕೀಲಿಗಳನ್ನು ಯಾರೊ ಮುರಿದಿದ್ದು ನಾನು ಘಾಬರಿಗೊಂಡು ಕೀಲಿ ಮುರಿದ ಮನೆಗಳ ಒಳಗೆ ಹೋಗಿ
ನೋಡಲಾಗಿ ಎಲ್ಲಾ ಸಾಮನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನೋಡಲಾಗಿ ಮನೆಯ ಸಂದೂಕಿನಲ್ಲಿ
ಇಟ್ಟಿದ್ದ 1) ಎರಡು ತೊಲೆಯ ಬಂಗಾರದ ಚೈನ್ ಅಂ.ಕಿ. 60,000/-, 2) ಒಂದು ತೊಲೆಯ ಬಂಗಾರದ ಭೋರಮಳ
ಸರ, ಅಂ.ಕಿ. 30,000/- 3) ಒಂದು ತೊಲೆ ಬಂಗಾರದ ಸುತ್ತುಂಗುರ ಅಂ.ಕಿ 15,000/- 4) ಒಂದುವರೆ
ತೊಲೆಯ ಬಂಗಾರದ 2 ಪಾಟ್ಲಿಗಳು 5) ಬೆಳ್ಳಿಯ ಸಾಮಾನುಗಳು ಒಟ್ಟು 5 ತೊಲೆ ಅಂ.ಕಿ 4,000/- ಹೀಗೆ ಒಟ್ಟು 2,24,000/-
ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಮತ್ತು ನಗದು ಕಳ್ಳತನವಾಗಿದ್ದು ಕಳ್ಳತನವಾದ ತಮ್ಮ
ಸಾಮಾನುಗಳನ್ನ ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಲಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment