ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ರಾಹುಲ ತಂದೆ ರಾಮಚಂದ್ರ ಸರ್ವೋದೆ ಸಾ : ಸೋಲಾಪೂರ ಹೋಟೆಲ ಹತ್ತೀರ
ಶಹಾಬಾದ ಇವರ ಚಿಕ್ಕಪ್ಪನಾದ ಅಶೋಕ ತಂದೆ ರಾಮಚಂದ್ರ ಸರ್ವೋದೆ ಇವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಶಹಾಪೂರ ನಗರದಲ್ಲಿ
ವಾಸವಾಗಿದ್ದು ಈಗ 8 ದಿನಗಳ ಹಿಂದೆ ಶಹಾಬಾದಕ್ಕೆ ಬಂದು ನಮ್ಮ ಹತ್ತೀರ ಉಳಿದುಕೊಂಡು ಇಂದು ದಿನಾಂಕ
01/09/2016 ರಂದು ಮದ್ಯಾನ್ಹ 03 ಗಂಟೆಯ ಸುಮಾರಿಗೆ ಶಹಾಪೂರಕ್ಕೆ ಹೋಗುವದಾಗಿ ಹೇಳಿ
ಹೋಗಿರುತ್ತಾರೆ ನಂತರ ರಾತ್ರಿ 08 ಗಂಟೆಯ ಸುಮಾರಿಗೆ ಯಾರೊ ದಾರಿಗೆ ಹೋಗುವವರು ನನಗೆ ಪೋನ ಮಾಡಿ
ವಿಷಯ ತಿಳಿಸಿದ್ದೇನೆಂದರೆ ಜೇವರ್ಗಿಯಿಂದ ಕಲಬುರಗಿ ಕಡೆಗೆ ಹೋಗುವ ಎನ್.ಹೆಚ್-218 ರೋಡಿನ ಮೇಲೆ
ಹಸನಾಪೂರ ಕ್ರಾಸ್ ದಿಂದ ಸುಮಾರು ಅರ್ದ ಕಿ.ಮಿ ಅಂತರದಲ್ಲಿ ಕಲಬುರಗಿ ಕಡೆಗೆ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು
ಅತಿ ವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿ ರೋಡಿಗೆ ನಡೆದುಕೊಂಡು ಹೋಗು ತ್ತೀರುವ ಅಶೋಕ ಸರ್ವೋದೆ
ಅನ್ನುವವರೆಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯ ಮತ್ತು ಹೋಟ್ಟೆಯ ಮೇಲೆ ವಾಹನದ
ಟಾಯರ ಹಾಯಿದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಈ ಘಟನೆಯ ನಂತರ ಸದರಿ ವಾಹನದ ಚಾಲಕ
ತನ್ನ ವಾಹನ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ .ಅಂತಾ ತಿಳಿಸಿದ ಕೂಡಲೆ ನಾವು ಗಾಬರಿಯಾಗಿ ಸದರಿ
ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು. ನಾನು ನನ್ನ ಚಿಕ್ಕಪ್ಪನ ಶವ ನೋಡಿ ಗುರುತಿಸಿರುತ್ತೇನೆ.
ಕಾರಣ ಮಾನ್ಯರು ನನ್ನ ಚಿಕ್ಕಪ್ಪ ಅಶೋಕ ತಂದೆ ವಾಸುದೇವ ಸರ್ವೋದೆ ಇವರಿಗೆ ಡಿಕ್ಕಿ ಪಡಿಸಿ ಓಡಿ ಹೋದ ವಾಹನ ಚಾಲಕ ನನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು
ಪ್ರಕಾರ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಅರುಣಕುಮಾರ ತಂದೆ ಮಲ್ಲೇಶಪ್ಪಾ
ಹಾಗರಗುಂಡಗಿ ಸಾ: ಸರಸ್ವತಿ ಫಾರಂ ಕಲಬುರಗಿ ಯುನಿವರ್ಶಿಟಿ ಹಿಂದುಗಡೆ ಕಲಬುರಗಿ ರವರು ದಿನಾಂಕ: 02/09/2016 ರಂದು ಬೆಳ್ಳಿಗ್ಗೆ ನಮ್ಮ ಸಂಬಂಧಿಕರ ಜಮಖಂಡಿಯಲ್ಲಿ
ಕಾರ್ಯಕ್ರಮ ವಿದ್ದ ಪ್ರಯುಕ್ತ ಸದರಿ ಕಾರಿನಲ್ಲಿ ನಾನು, ನನ್ನ ಹೆಂಡತಿ ಸರೋಜಾ ನನ್ನ ಮಗಳಾದ
ಸುಮಾರಾಣಿ ಕೂಡಿ ಬೆಳ್ಳಿಗ್ಗೆ 5 ಎಎಮಕ್ಕೆ ಕಲಬುರಿಗಿಯ ಮನೆಯಿಂದ ಬಿಟ್ಟು ಸದರಿ ಕಾರಿನಲ್ಲಿ
ಎಲ್ಲರೂ ಕುಳಿತು ಹೋಗುವಾಗ ನಮ್ಮ
ಚಾಲಕ ಶರಣು ತಳವಾರ
ಈತನು ಸದರ ಕಾರ ಅತಿವೇಗದಿಂದ ಹಾಗೂ
ಅಲಕ್ಷತನದಿಂದ
ನಡೆಸುತ್ತಾ ಜೇವರ್ಗಿ ಕಡೆಗೆ ಹೋಗುವಾಗ ಸದರಿ ಕಾರು ಫರಹತಾಬಾದ ಇನ್ನೂ ಅಂದಾಜು
200 ಮೀಟರ
ದೂರ ಇರುವಾಗ ಕಾರಿನ ಟೈರ ಬಸ್ಟ ಆಗಿ
ಎದುರಿನಿಂದ ಬರುತ್ತಿದ್ದ ಐಶ್ಚರ ಗೂಡ್ಸ್ ವಾಹನ ನಂಬರ ಕೆಎ 36
ಎ- 7906 ನೇದ್ದಕ್ಕೆ ಹಾಯಿದ ಪರಿಣಾಮ
ಒಳಗಿದ್ದ
ನನಗೆ ಎಡಗೈ ಮಣಿಕಟ್ಟಿಗಿ
ಗುಪ್ತಪೆಟ್ಟಾಗಿದ್ದು ನನ್ನ ಹೆಂಡತಿ ಸರೋಜಾಳಿಗೆ ಹೊಟ್ಟೆಗೆ ಗುಪ್ತ ಪೆಟ್ಟಾಗಿದ್ದು ನನ್ನ
ಮಗಳಾದ ಸುಮಾ ರಾಣೀಗೆ ಎಡಗಲ್ಲಕ್ಕೆ ತರಚಿದ ಗಾಯವಾಗಿದ್ದು ಸದರ ಘಟನೆಯಾದಾಗ ಬೆಳಗಿನ ಜಾವ 5:30
ಗಂಟೆಯಾಗಿದ್ದು
ರಸ್ತೆಗೆ ಹೋಗಿ ಬರುವ ವಾಹನದವರು ನೋಡಿ ನಮಗೆ ಕಾರಿನಿಂದ ಹೊರತೆಗೆದರು
ನಂತರ ಸದರ ಘಟನೆ ಬಗ್ಗೆ ಮಾಹಿತಿ ಮನೆಗೆ
ತಿಳಿಸಿದಾಗ
ಯಾವುದೋ ಒಂದು ಕಾರ ಬಂದು ನಮ್ಮೆಲ್ಲರಿಗೆ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಮ್ಮ ಕಾರ
ಚಾಲಕ ಶರಣು ಈತನ ಹಣೆಗೆ ತರಚಿದ ರಕ್ತಗಾಯವಾಗಿದ್ದು ನಮ್ಮ ಕಾರು ಬಲಭಾಗಕ್ಕೆ ಹೆಚ್ಚಿ
ಪ್ರಮಾಣದಲ್ಲಿ ಹಾನಿಯಾಗಿರುತ್ತದೆ. ಕಾರಣ ಅತೀವೇಗದಿಂದ ಹಾಗೂ ಅಲಕ್ಷತನದಿಂದ ನಮ್ಮ ಕಾರ ನಂ ಕೆಎ 32 ಎನ್ 3011
ನೇದ್ದು ಓಡಿಸಿ ಟೈರ ಬಸ್ಟ್ ಆಗಿ ಐಚರ ವಾಹನಕ್ಕೆ ಡಿಕ್ಕಿ ಪಡಿಸಿ ಹಾಯಿಸಿದ ಸದರ ಕಾರ ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment