ಅಸ್ವಾಭಾವಿಕ ಸಾವು
ಪ್ರಕರಣ :
ಫರತಾಬಾದ ಠಾಣೆ : ಶ್ರೀ
ಶಿವಲಿಂಗಪ್ಪಾ ತಂದೆ ಭೀಮಶ್ಯಾ ಖ್ಯಾಡ ಸಾ: ಮೇಳಕುಂದಾ (ಕೆ) ಇವರ ಮಗಳಾದ ಶರಣಮ್ಮ ವಯ: 12 ವರ್ಷ
ಇವಳು ನಮ್ಮೂರ ಸರಕಾರಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಾಳೆ ನನ್ನ ಮಗಳ
ಸಂಗಡ ನಮ್ಮೂರ ಚೆನ್ನಮ್ಮ ತಂದೆ ಶಿವಶರಣಪ್ಪಾ ಗುತ್ತೇದಾರ
ಇವರ ಅಕ್ಕಳ ಮಗಳಾದ ಪೂಜಾ ವ: 12 ವರ್ಷ ಸಾ: ಇಜೇರಿ ತಾ: ಜೇವರ್ಗಿ ಇವಳು ತನ್ನ ಚಿಕ್ಕಮ್ಮಳ ಹತ್ತಿರ ಉಳಿದು ಸದರಿ ಸರಕಾರಿ ಶಾಲೆಯಲ್ಲಿ 6 ನೇ
ತರಗತಿಯಲ್ಲಿ ಓದುತ್ತಾಳೆ ನನ್ನ ಮಗಳ ಮತ್ತು ಪೂಜಾ ಒಬ್ಬರಿಗೊಬ್ಬರು ಸಹಪಾಟಿಗಳಿದ್ದು
ಗೆಳತಿಯರಾಗಿದ್ದಾರೆ. ದಿನಾಂಕ 30/09/16 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ನನ್ನ ಮಗಳು
ಶರಣಮ್ಮ ಇವಳು ದಸರಾ ಹಬ್ಬ ವಿದ್ದ ಪ್ರಯುಕ್ತ ಬಟ್ಟೆಗಳನ್ನು ತೊಳೆದುಕೊಂಡು ಬರುತ್ತೇನೆಂದು ತನ್ನ
ಗೆಳತಿ ಪೂಜಾಳೊಂದಿಗೆ ನಮ್ಮೂರ ಹಳ್ಳಕ್ಕೆ ಹೋದರು. ನಂತರ ಮುಂಜಾನೆ 10:45 ಗಂಟೆ ಸುಮಾರಿಗೆ ಜನರು
ಅಂದಾಡುವದರಿಂದ ಗೋತ್ತಾಗಿದೆನೆಂದರೆ. ಇಬ್ಬರು ಹುಡುಗಿಯರು ನೀರಿನಲ್ಲಿ ಮುಳಗಿದ್ದಾರೆ ಎಂದು
ಗೋತ್ತಾಗಿ ನಮ್ಮ ಮಗಳು ಪೂಜಾ ಕೂಡಿ ಬಟ್ಟೆ ತೋಲೆಯಲು ಹಳ್ಳಕ್ಕೆ ಹೋಗಿದ್ದರಿಂದ ನಾನು ಹಾಗೂ ಊರಿನವರು ಕೂಡಿ ಸದರಿ ಹಳ್ಳಕ್ಕೆ ಬಂದು ನೋಡಲಾಗಿ
ನನ್ನ ಮಗಳು ಶರಣಮ್ಮ ಮತ್ತು ಪೂಜಾ ಇವರು ಬಟ್ಟೆ ಒಗೆದು ಬೇರೆಡೆ ಸ್ವಲ್ಪ ಇಟ್ಟಿದ್ದು ಅವರಿಬ್ಬರು ಕಾಣಲಿಲ್ಲ ಘಟನೆ ತಿಳದು ಪಕ್ಕದ
ಹೊಲದವರಾದ ನಮ್ಮೂರ ಶಿವಲಿಂಗಪ್ಪಾ ತಂದೆ
ತುಳಜಪ್ಪಾ ತಳವಾರ ಬಸವರಾಜ ತಂದೆ
ಮಲ್ಲಿಕಾರ್ಜುನ ಬಿರಾದಾರ
ಬಸವರಾಜ ತಂದೆ ಮಹಿಂದ್ರಗೌಡ ಮಾಲಿಪಾಟೀಲ
ಇವರು ಸದರಿ ಹಳ್ಳದಲ್ಲಿ ಹೋಗಿ ಇಜಾಡಿ
ಶರಣಮ್ಮ ಪೂಜಾಳಿಗೆ ನೀರಿನ ತಳದಿಂದ ಹೊರತೆಗೆದು ಪಕ್ಕದ ದಡದಲ್ಲಿ ಹಾಕಿದಾಗ ಅವರಿಬ್ಬರ ಹೊಟ್ಟೆ
ಒತ್ತಿದಾಗ ನೀರು ಬಂದಿದ್ದು ಆದರೆ ಅವರಿಗೆ ಜೀವ ಇರಲಿಲ್ಲಾ. ನನ್ನ ಮಗಳು ಶರಣಮ್ಮ ಹಾಗೂ ಆಕೆಯ
ಗೆಳತಿ ಪೂಜಾ ಇವರು ಇಬ್ಬರು ಬಟ್ಟೆ ತೊಳೆಯಲು ಬಂದು ಬಟ್ಟೆ ತೊಳೆಯುವಾಗ ಈ ಮೊದಲು ಪ್ರಕೃತಿ ವಿಕೋಪದಿಂದ ಮಳೆ ಬಂದು ಹಳ್ಳ ಹರಿದು ಪೋಲ
ಬ್ರೀಡ್ಜ್‌ನ ನೀರು ಹರಿದದಕ್ಕೆ ಹಳ್ಳದಲ್ಲಿ ಹೊಂಡ
ಉಂಟಾಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದಾಗ ಒಬ್ಬರಿಗೊಬ್ಬರು ಕಾಪಾಡಲು ಹೋಗಿ ಸದರ ಹಳ್ಳದ ಹೊಂಡದ
ನೀರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದ ಹೊಂಡದಲ್ಲಿ ಬಿದ್ದು ನೀರು ಕುಡಿದು
ಮೃತಪಟ್ಟಿರುತ್ತಾರ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಸೇಡಂ ಠಾಣೆ : ಕುಮಾರಿ ಇವಳು ಎಲ.ಕೆ.ಜಿ. ಸ್ವಾಮಿ ವಿವೇಕಾನಂದ ಶಾಲೆಗೆ ಹೋಗುತ್ತಿದ್ದು ಇಂದು ಮಹಾಲಯ ಅಮವಾಸ್ಯೆ ಇದ್ದ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಇವಳು ಮನೆಯಲ್ಲಿ ಇದ್ದಳು. ಆಟ ಆಡುತ್ತಾ ಮನೆಯಲ್ಲಿ ಮತ್ತು ಹೊರಗೆ ಆಡುತ್ತಿದ್ದಳು ನಾನು ಸಹ ಅವಳಿಗೆ ನೋಡುತ್ತಲೇ ಇದ್ದೆನು. ಮಧ್ಯಾನ 1-00 ಗಂಟೆಯ ಸುಮಾರಿಗೆ ತನಗೆ ಮೂತ್ರ ಬಂದಿದೆ ಅಂತಾ ಹೇಳಿದಳು. ಆಗ ನಾನು ಅವಳಿಗೆ ನೀನು ಮನೆಯ ಹಿಂದೆ ಹೋಗಿ ಮೂತ್ರ ಮಾಡಿ ಬಾ ಅಂತಾ ಹೇಳಿದಾಗ ಅವಳು ಮನೆಯ ಹಿಂದೆ ಮೂತ್ರ ಮಾಡಲು ಹೋದಳು. ಸ್ವಲ್ಪ ಹೊತ್ತಿನ ನಂತರ ಅಳುತ್ತಾ ಮನೆಗೆ ಬಂದಳು. ನಾನು ಮತ್ತು ಅಲ್ಲೆ ಇದ್ದ ನಮ್ಮ ಪಕ್ಕದ ಮನೆಯವರಾದ ವಿಜಯಕುಮಾರ ಜಾಬಾ, ಹಾಗು ಅವರ ಹೆಂಡತಿ ಎಲ್ಲರು ಕೂಡಿ ಏನಾಯಿತು ಅಂತಾ ಕೇಳಲಾಗಿ ನಮಗೆ ಮನೆಯ ಹೊರಗೆ ಕರೆದುಕೊಂಡು ಬಂದು ಅಲ್ಲಿ ನಿಂತ ಒಬ್ಬ ವ್ಯಕ್ತಿಗೆ ತೋರಿಸಿ ಆ ಅಂಕಲ ನನಗೆ ಚಾಕಲೇಟ ಕೊಡುತ್ತೇನೆ ಬಾ ಅಂತಾ ಕರೆದು ನನ್ನ ಚೆಡ್ಡಿ ಎಳೆದು ನನ್ನ ಗುಪ್ತಾಂಗದಲ್ಲಿ ಬೆರಳು ಹಾಕಿ 4-5 ಬಾರಿ ಚುಚ್ಚಿದರು ಅಂತಾ ಹೇಳಿದಳು. ಆಗ ನನ್ನ ಮಗಳ ಗುಪ್ತಾಂಗ ನೋಡಲಾಗಿ ಅದು ಬಾತಿದ್ದು ಮತ್ತು ಬೇನೆ ಆಗುತ್ತಿದೆ ಅಂತಾ ಹೇಳಿದಳು. ಮತ್ತು ಅವಳ ಬಟ್ಟೆಗಳ ಮೇಲೆ ಹನಿ ಹನಿಯಂತಹ ಪದಾರ್ಥ ಬಿದ್ದು ಹಸಿಯಾಗಿತ್ತು. ನಂತರ ನಾವುಗಳು ಆ ಮನುಷ್ಯನಿಗೆ ನೋಡಲಾಗಿ ಅವನು ನಮ್ಮ ಮನೆಯ ಪಕ್ಕದಲ್ಲಿ ಹೋಟಲನಲ್ಲಿ ಕೆಲಸ ಮಾಡುವ ಸಂತೋಷ ಯಾಕಾಪುರ ಎಂಬುವನು ಇದ್ದನು. ನಾವುಗಳು ಅವನಿಗೆ ಕೇಳಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ಜೇವರಗಿ
ಠಾಣೆ : ದಿನಾಂಕ 28-09-2016 ರಂದು 23:00 ಗಂಟೆಯಿಂದ 29.09.2016
ರ ೦6.00 ಗಂಟೆ ಮಧ್ಯದ ಅವಧೀಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಕಂಪ್ಯೂಟರ್ ರೂಮಿನ ಬಾಗೀಲ ಕೀಲಿ
ಮುರಿದು ಕೋಣೆಯಲ್ಲಿನ ಒಟ್ಟು 16 ಬ್ಯಾಟರಿಗಳು ಅ.ಕಿ 24.500/- ಕಿಮ್ಮತ್ತಿನದ್ದವುಗಳನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸೊಮರಾಯ ಗಂಡ ತೊಟಪ್ಪಗೌಡ ಬಿರಾದಾರ ಮುಖ್ಯ
ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೋಳಕೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಚಂದ್ರಭಾಗಮ್ಮ ತಂದೆ ಶರಣಪ್ಪ ನಾಟಿಕಾರ್ ಇವರು ದಿನಾಂಕ 28.09.2016 ರಂದು ಸಂಜೆ 7:15 ಗಂಟೆಯ
ಸುಮಾರಿಗೆ ಜೇವರಗಿ ಪಟ್ಟಣದ ಗಡ್ಡಿ ಫೂಲ್ ಹತ್ತಿರ ರೋಡಿನಲ್ಲಿ ಫಿರ್ಯಾದಿದಾರಳು ತನ್ನ ಗೆಳತಿ
ಪ್ರಿಯಾ ಇವಳೊಂದಿಗೆ ಖಾಜಾ ಪಾಷಾ ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಇಎ6367 ನೇದ್ದರ
ಮೇಲೆ ಕುಳಿತುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅಲ್ಲಾಭಕ್ಷ ಈತನು ತನ್ನ ಕಾರ್ ನಂ ಕೆ.ಎ28
ಸಿ3128 ನೇದ್ದನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೊಟಾರು ಸೈಕಲ್‌ಗೆ ಗೆ
ಡಿಕ್ಕಿ ಪಡೆಸಿ ನಮಗೆ ಭಾರಿ ಗಾಯ ಗೊಳಿಸಿ ತನ್ನ ಕಾರ್ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment